Home Crime ರಾಜಾರೋಷವಾಗಿ ದರೋಡೆಗೆ ನಿಂತ ಚಿಗರು ಮೀಸೆ ಹುಡುಗರು..! ಡ್ರ್ಯಾಗರ್ ಹಿಡಿದು ಬಾಲಕನ ದರೋಡೆ ಮಾಡಿದ ಗ್ಯಾಂಗ್..!

ರಾಜಾರೋಷವಾಗಿ ದರೋಡೆಗೆ ನಿಂತ ಚಿಗರು ಮೀಸೆ ಹುಡುಗರು..! ಡ್ರ್ಯಾಗರ್ ಹಿಡಿದು ಬಾಲಕನ ದರೋಡೆ ಮಾಡಿದ ಗ್ಯಾಂಗ್..!

1493
0
SHARE

ನೀವು ನಿಮ್ಮ ಮನೆ ಮುಂದೆ ನಿಂತಿಕೊಂಡಿದ್ರು ಇಲ್ಲಿ ಸೇಪ್ ಅಲ್ಲಾ, ಯಾಕಂದ್ರೆ ಈ ದರೋಡೆಕೊರರು ಕತ್ತಿಗೆ ಚಾಕುವಿಟ್ಟು ರಾಬರಿ ಮಾಡೋಕೆ ಶುರುಮಾಡಿಕೊಂಡಿದ್ದಾರೆ.ಇನ್ನು ಮೀಸೆ ಮೂಡದ ಗ್ಯಾಂಗ್ ರಾಬರಿ ಇಡುವ ಹಾವಳಿಯ ಸಿಸಿಟಿವಿಯ ದೃಶ್ಯ ಎಂತವರಲ್ಲಿಯೂ ಭಯ ಬೀಳಿಸುವಂತಿದೆ.ಈ ಸಿಸಿಟಿವಿ ದೃಶ್ಯಗಳನ್ನ ಒಮ್ಮೆ ನೋಡಿ ವೀಕ್ಷಕರೆ , ಇನ್ನು 20 ವಯಸ್ಸು ದಾಟದ ಮೂರ್ನಾಲ್ಕು ಜನರ ಗ್ಯಾಂಗ್ ಬಳೆಪೇಟೆ ಸುತ್ತಮುತ್ತ ಹೀಗೆ ಇಳಿ ಸಂಜೆ ಹೊತ್ತಿನಲ್ಲಿ ಹಾವಳಿ ಇಡ್ತಾ ಇದೆ,

ಇಲ್ಲಿ ಆಗಿರುವುದು ಇದೆ ಮೋದಲೇನು ಅಲ್ಲಾ ಬಿಡಿ, ಯಾಕೆಂದ್ರೆ ಇಲ್ಲಿ ಕತ್ತಲು ಆಗ್ತಿದ್ದಂತೆ ಸಾರ್ವಜನಿಕರಿಗೆ ಸೇಪ್ಟಿ ಎನ್ನುವುದೇ ಇಲ್ಲ. ಮೊನ್ನೆ ರಾತ್ರಿ ಕೂಡ ಪ್ರಮೋದ್ ಎನ್ನು ಯುವಕನ ಮೇಲೆ ಕೂಡ ಅಟ್ಯಾಕ್ ಆಗಿದೆ. ಅದೃಷ್ಟವಶಾತ್ ಪಕ್ಕದ ಮನೆಯವರು ಬಂದಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ.

ಈ ಬೆಚ್ಚಿ ಬೀಳಿಸುವ ದೃಶ್ಯ ಸೆರೆಯಾಗಿರುವುದು ಬೆಂಗಳೂರಿನ ಹಾರ್ಟ್ ಆಫ್ ದಿ ಸಿಟಿ ಅಂತ ಕರೆಸಿಕೊಳ್ಳುವ ಬಳೇಪೇಟೆಯ ಏರಿಯಾದಲ್ಲಿ. ಇದೇ ತಿಂಗಳ 13 ರಂದು ಪ್ರಮೋದ್ ಎಂಬ 17 ವರ್ಷದ ಯುವಕ ರಾತ್ರಿ ಸುಮಾರು 9:30 ರ ಸುಮಾರಿಗೆ ಎಂಎಸ್ ಆರ್ ಲೇನ್ ನಲ್ಲಿ ನಡೆದು ಬರುವಾಗ ಡೆಡ್ಲಿ ರಾಬರ್ಸ್ ಅಟ್ಯಾಕ್ ಮಾಡಿದ್ದಾರೆ.

ಈ ಮೊದಲೇ ಡ್ರಾಗರ್ ಹಿಡಿದು ಹೊಂಚು ಹಾಕಿ ಕುಳಿತಿದ್ದ ಮೂವರು ದುಷ್ಕರ್ಮಿಗಳ ಗ್ಯಾಂಗ್ ಅಟ್ಟಾಡಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯರು ಯುವಕನ ಸಹಾಯಕ್ಕೆ ಧಾವಿಸಿದ್ದರೆ. ಅಷ್ಟರಾಗಲ್ಲೇ ರಾಬರ್ಸ್ ಯುವನನ್ನ ಬಿಟ್ಟು ಡ್ರಾಗರ್ ಹಿಡಿದು ಸ್ಥಳೀರತ್ತ ಗುರಾಯಿಸುತ್ತಾ ನಿಂತಿದ್ದಾರೆ. ಮೊಬೈಲ್ ಪೋಟೊ ತೆಗೆದುಕೊಳ್ಳಲು ಮುಂದಾಕ್ತಿದ್ದಂತೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ.

ಪದೇ ಪದೇ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಕತ್ತಲಾಕ್ತಿದ್ದಂತೆ ಮನೆ ಇಂದ ಹೊರ ಬರಲು ಭಯದಿಂದ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here