Home Crime ರಾಜೀನಾಮೆ ಕೊಟ್ಟು ವಾಪಸ್ ಬಂದಿದ್ದ ದೇಶ ಕಾಯೋ ಸೈನಿಕ ನ ಮೇಲೆ ಬಿದ್ದಿತ್ತು ಆ...

ರಾಜೀನಾಮೆ ಕೊಟ್ಟು ವಾಪಸ್ ಬಂದಿದ್ದ ದೇಶ ಕಾಯೋ ಸೈನಿಕ ನ ಮೇಲೆ ಬಿದ್ದಿತ್ತು ಆ ಕಣ್ಣು..! ಸಹೋದರ ಸಂಬಂಧ ಕೆಡಿಸಿದ್ಲು ಒಂದು ಹೆಣ್ಣು..!

2591
0
SHARE

ಹುಬ್ಬಳಿಯ ಹತ್ತಿರದ ಗೋಕುಲ್ ಗ್ರಾಮದ ನಿವಾಸಿ. ಬಸು ಬಂಗೇರಿಯ ಮೈಕಟ್ಟನ್ನ ಒಮ್ಮೆ ನೋಡಿ. ಇತನ ಹುರಿಗಟ್ಟಿದ ಮೈಯನ್ನ ನೋಡಿದ್ರೆ ಈ ದೇಹ ಎಲ್ಲೋ ಸಖತ್ ತಯಾರಿ ನಡೆಸಿ ಬಂದ ದೇಹ ಅನ್ನೋದು ಗೊತ್ತಾಗುತ್ತೆ. ಹೌದು ಈ ಬಸು ಬಂಗೇರಿ ಮಾಜಿ ಸೈನಿಕ. ಇಂಡಿಯನ್ನ ಪೌಜಿಯಲ್ಲಿ 5 ವರ್ಷ ಸೇವೆ ಸಲ್ಲಿಸಿಬಂದಿದ್ದ. ಅದು ಅದ್ಯಾವುದೋ ಸೇಫೆಸ್ಟ್ ಪ್ಲೇಸ್ ನಲ್ಲಿ ಕೂತು ಈತ ಸೇವೆಯನ್ನ ಸಲ್ಲಿಸಿಲ್ಲ. ಬದಲಾಗಿ ಬಿಎಸ್ ಎಫ್ ನಲ್ಲಿ ಸೈನಿಕನಾಗಿದ್ದ ವ್ಯಕ್ತಿ. ಬಿಎಸ್ ಎಫ್ ಅಂದ್ರೆ ಗೊತ್ತಲ್ವಾ, ಗಡಿ ಕಾಯೋ ಕೆಲಸ. ದೇಶದ ಫ್ರಂಟ್ ಫೌಜಿಯಾಗಿ ಕೆಲಸ ಮಾಡಿದ ಅನುಭವ ಇರೋ ವ್ಯಕ್ತಿ ಬಸು ಬಂಗೇರಿ. ಐದು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿ ದೇಶಕ್ಕೆ ಸೇವೆ ಸಲ್ಲಿಸಿದ್ದಾನೆ. ಹೀಗಾಗಿ ಈ ಗ್ರಾಮದಲ್ಲಿ ಬಸುನನ್ನ ಕಂಡ್ರೆ ಜನಕ್ಕೆ ಒಂದು ಗೌರವವಿತ್ತು.

ಬಸು ಸೇನೆಯಿಂದ ವಾಪಸ್ ಬರೋವರೆಗೂ ಇಬ್ಬರು ಅನ್ಯೋನ್ಯವಾಗಿದ್ರು. ಆದ್ರೆ ಅದ್ಯಾಲಾಗ ಬಸು ವಾಪಸ್ ಬಂದು ಅಣ್ಣನ ವ್ಯವಹಾರದಲ್ಲಿ ತಾನು ಭಾಗಿಯಾದನೋ ಅಲ್ಲಿಂದ ಅವರಿಬ್ಬರ ನಡುವೆ ಸಂಬಂಧ ಅಷ್ಟಕಷ್ಟೇ ಅನಿಸೋದಕ್ಕೆ ಶುರುವಾಗಿತ್ತು. ಇಬ್ಬರು ದೂರ ದೂರ ಇದ್ದಾಗ ಎಲ್ಲಾ ಚೆನ್ನಾಗಿಯೇ ಇತ್ತು. ಆದ್ರೆ ಇಬ್ಬರು ಒಂದೇ ಸೂರಿನಲ್ಲಿ ದುಡಿಯೋದಕ್ಕೆ ಶುರುಮಾಡಿದಾಗ ತಾಳ ಮೇಳ ಸರಿಯಾಗಲೇ ಇಲ್ಲ. ಮೊದಮೊದಲಿಗೆ ಇದು ಸಣ್ಣ ಮಟ್ಟಿಗೆ ಇತ್ತು.  ಅಣ್ಣ ತಮ್ಮ ಅಂದಮೇಲೆ ಇಂತಹ ವಿಷಯಗಳು ಕಾಮನ್ ಅಂತ ಎಲ್ಲಾ ಅಂದುಕೊಂಡಿದ್ರು. ಇವ್ರು ಕೂಡಾ ಕುಟುಂಬ ಅಂದ ಮೇಲೆ ಒಂದು ಮಾತು ಬರುತ್ತೆ ಒಂದು ಮಾತು ಹೋಗುತ್ತೆ ಅಂತ ಅಂದುಕೊಂಡಿದ್ರು. ಆದ್ರೆ ಇವರಿಬ್ಬರ ಮಧ್ಯೆ ಶುರುವಾದ ಸಣ್ಣ ಜಗಳ ಶಮನವಾಗಲೇ ಇಲ್ಲ.

ಅದ್ಯಾವ ಪರಿಗೆ ಹೋಯ್ತು ಅಂದ್ರೆ ಒಬ್ಬರ ಮೇಲೆ ಒಬ್ಬರು ಕತ್ತಿ ಮಸಿಯೋವರೆಗೆ ಬಂದು ನಿಂತಿತ್ತು. ಅಲ್ಲದೆ ಕೊನೆಗೊಂದು ದಿನ ತಮ್ಮ ಅಣ್ಣನನ್ನೇ ಕೊಂದು ಮುಗಿಸೋ ಹಂತಕ್ಕೆ ಇವರಿಬ್ಬರ ಜಗಳ ತಾರಕಕ್ಕೆ ಏರಿತ್ತು.ಭೀಮೇಶಿ ಬಂಗೇರಿ ಹುಬ್ಬಳಿಯ ಗೋಕುಲದಲ್ಲಿಯೇ ವಾಸವಾಗಿದ್ದು. ಅಲ್ಲದೆ ತಮ್ಮ ಬಸು ಸೈನ್ಯಕ್ಕೆ ಹೋಗಿದ್ದಾಗ ಇಡೀ ಮನೆಯ ಜವಾಬ್ದಾರಿಯನ್ನ ಇದೇ ಭೀಮೇಶಿ ಹೊತ್ತಿದ್ದ. ಇತ ತನ್ನ ಗ್ರಾಮ ಗೋಕುಲದಲ್ಲಿ ಶಾಮಿಯಾನ ಮತ್ತು ಕೇಬಲ್ ಬ್ಯುಸಿನೆಸ್ ನಡೆಸ್ತಿದ್ದ. ಮೊದ ಮೊದಲಿಗೆ ಬ್ಯುಸಿನೆಸ್ ಚೆನ್ನಾಗಿಯೇ ನಡೆಯುತ್ತಿತ್ತು. ಆಗ ಹಣಕಾಸು ಕೂಡಾ ಚೆನ್ನಾಗಿಯೇ ಇತ್ತು. ಆದ್ರೆ ಇದರ ನಡುವೆ ಕೇಬಲ್ ಬ್ಯುಸಿನೆಸ್ ಕೈ ಕೊಟ್ಟಿತ್ತು. ಯಾಕಂದ್ರೆ ಮನೆ ಮನೆಯಲ್ಲೂ ಡಿಶ್ ಬುಟ್ಟಿಗಳು ತಲೆ ಎತ್ತಿದ ನಂತ್ರ ಕೇಬಲ್ ವರ್ಕೌಟ್ ಆಗ್ತಿರಲಿಲ್ಲ. ಹೀಗಾಗಿ ಕೇಬಲ್ ವ್ಯವಹಾರ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. ಆದ್ರೂ ಹಾಗೂ ಹೀಗೂ ಅಂತ ಭೀಮೇಶಿ ಒಂದಿಷ್ಟು ಮನೆಗೆ ಕೇಬಲ್ ಎಳೆದು ವ್ಯವಹಾರ ನಡೆಸ್ತಿದ್ದ. ನಂತ್ರ ಆತ ಇದನ್ನ ನೆಚ್ಚಿಕೊಂಡ್ರೆ ಉಪ್ಪುಗಂಜಿಗೂ ಕಾಸು ಹುಟ್ಟೋದಿಲ್ಲ ಅಂತ ಶಾಮಿಯಾನ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದ.

ಹಾಗೂ ಹೀಗೂ ಅಂತ ಭೀಮೇಶಿ ತನ್ನ ಬ್ಯುಸಿನೆಸ್ ನಡೆಸಿಕೊಂಡು ಹೋಗ್ತಿದ್ದ. ಎಲ್ಲಿವರೆಗೂ ಬಸು ಸೈನ್ಯದಲ್ಲಿದ್ನೋ ಆಲ್ಲಿವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಅಲ್ಲದೆ 6ವರೆ ವರ್ಷಕ್ಕೆ ಅಂತ ಸೈನ್ಯಕ್ಕೆ ಹೋಗಿದ್ದ ಬಸು ಐದೇ ವರ್ಷಕ್ಕೆ ವಾಪಸ್ ಊರಿಗೆ ಬಂದಿದ್ದ. ಅಂದ್ರೆ ವಿಆರ್ ಎಸ್ ತಗೊಂಡು ವಾಪಸ್ ಬಂದಿದ್ದ. ಅಲ್ಲಿಗೆ ಭೀಮೇಶಿ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿತ್ತು. ಕೆಲಸ ಬಿಟ್ಟು ಬಂದಿದ್ದ ಬಸುಗೆ ಈಗ ಊರಲ್ಲಿ ಕೆಲಸ ಬೇಕಿತ್ತು. ಆಗ ಅಣ್ಣ ಮಾಡೋ ಕೆಲಸದಲ್ಲಿಯೇ ಆತನು ಕೈಸೇರಿಸಿದ್ದ. ಆದ್ರೆ ಅದರಲ್ಲಿ ಆಗೋ ವ್ಯವಹಾರ ಅಷ್ಟಕಷ್ಟೆ ಹೀಗಾಗಿ ಇಬ್ಬರ ಮಧ್ಯೆ ಈ ವ್ಯವಹಾರ ನನಗಿರಲಿ ಇದು ನನಗಿರಲಿ ಅಂತ ಮಾತುಕತೆಗಳು ಶುರುವಾಗೋದಕ್ಕೆ ಪ್ರಾರಂಭವಾಗಿತ್ತು. ಆದ್ರೆ ಇಬ್ಬರು ಇನ್ನು ಪಾಲು ಮಾಡ್ಕೊಂಡಿರಲಿಲ್ಲ.

ಭೀಮೇಶಿ ಆ ಊರಲ್ಲಿ ವ್ಯವಹಾರ ಮಾಡ್ಕೊಂಡೆ ಜೊತೆ ಇನ್ನೊಂದಿಷ್ಟು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ಅದರಲ್ಲೂ ಶ್ರೀರಾಮಸೇನೆಯ ಹುಬ್ಬಳ್ಳಿಯ ಉಪಾಧ್ಯಕ್ಷನಾಗಿದ್ದ. ಭೀಮೇಶಿ ಯಾವಾಗಲೂ ಕೇಸರಿ ವಸ್ತ್ರವನ್ನ ಹೊದ್ದುಕೊಂಡ ಕಟ್ಟಾ ಹಿಂದುತ್ವವಾದಿಯಾಗಿದ್ದ. ಹೀಗಾಗಿ ತನ್ನ ಗ್ರಾಮದಲ್ಲಷ್ಟೇ ಅಲ್ಲದೆ ಆ ಊರಿನಲ್ಲೂ ಆತನಿಗೆ ಒಂದಿಷ್ಟು ಹೆಸರು ಇತ್ತು. ಅಲ್ಲದೆ ಹಿಂದೂಪರವಾದ ಯಾವುದೇ ಕೆಲಸವಾದ್ರೂ ಅಲ್ಲಿಗೆ ಮೊದಲು ಹೋಗಿ ನಿಲ್ತಿದ್ದ. ಹೀಗಾಗಿ ಸಂಘಟನೆಯಲ್ಲಿ ಆತನಿಗೆ ಒಳ್ಳೆ ಹೆಸರಿತ್ತು. ಈ ನಡುವೆ ಆತನಿಗೆ ಕುಟುಂಬದಲ್ಲೇ ಸಮಸ್ಯೆಗಳು ಶುರುವಾಗಿತ್ತು. ತಮ್ಮ ಬಸು ಇದ್ದಕ್ಕಿದ್ದಂತೆ ಕಿರಿಕ್ ಮಾಡೋದಕ್ಕೆ ಶುರುಮಾಡಿದ್ದ. ನೀನು ನಡೆಸ್ತಿರೋ ಶಾಮಿಯಾನ ಬ್ಯುಸಿನೆಸ್ ಅನ್ನ ನನಗೆ ಬಿಟ್ಟುಕೊಡು ಅಂತ ಕೂತಿದ್ದ. ಆದ್ರೆ ಭೀಮೇಶಿ ಮಾತ್ರ ಅದಕ್ಕೆ ಒಪ್ಪಿರಲಿಲ್ಲ. ಮಾಡೋದಾದ್ರೆ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಇಲ್ಲದಿದ್ರೆ ಬೇಡ ಅಂತ ಹೇಳಿದ್ದ. ಇದು ಬಸುಗೆ ಅಣ್ಣನ ಮೇಲೆ ಸಿಟ್ಟು ತರಿಸಿತ್ತು.

ಅಲ್ಲದೆ ಅಷ್ಟೊತ್ತಿಗೆ ಬಸು ಮದುವೆಯಾಗಿದ್ದ. ಮನೆಯವರು ಆ ಮದುವೆಗೆ ವಿರೋಧಿಸಿದ್ರು ಆತ ಎಲ್ಲರ ವಿರೋಧ ಕಟ್ಟಿಕೊಂಡು ಹುಡುಗಿಯೊಬ್ಬಳನ್ನ ಮದುವೆಯಾಗಿದ್ದ. ಅಲ್ಲದೆ ಆಕೆಯೊಂದಿಗೆ ಮನೆಯಿಂದ ಹೊರಗಡೆ ಹೋಗಿ  ಸಂಸಾರ ನಡೆಸೋದಕ್ಕೆ ಶುರುಮಾಡಿದ್ದ. ಯಾವಾಗ ಮದುವೆ ಆಯ್ತೋ ಆಗ ಅಣ್ಣನೊಂದಿಗೆ ಗಲಾಟೆಯನ್ನು ಜಾಸ್ತಿ ಮಾಡೋದಕ್ಕೆ ಶುರುಮಾಡಿದ್ದ. ಯಾಕಂದ್ರೆ ಈಗ ಸಂಸಾರ ನಡೆಸಬೇಕು ಅಂದ್ರೆ ಹಣ ಬೇಕು. ಹಣ ಬೇಕು ಅಂದ್ರೆ ಅಣ್ಣ ನಡೆಸ್ತಿರೋ ಶಾಮಿಯಾನ ಬ್ಯುಸಿನೆಸ್ ಕೊಡಬೇಕು ಅಂತ. ಹೀಗಾಗಿ ಆಗಾಗ ಗಲಾಟೆ ನಡೆಸ್ತಿದ್ದ. ಅದ್ಯಾವಾಗ ಈ ಗಲಾಟೆ ಜೋರಾಯ್ತೋ ಆಗ ಮನೆಯವರೇ ಊರಿನ ದೊಡ್ಡವರನ್ನೆಲ್ಲಾ ಸೇರಿಸಿ ಒಂದು ತೀರ್ಮಾನಕ್ಕೆ ಬಂದಿದ್ರು. ಇಬ್ಬರನ್ನ ಒಟ್ಟಿಗೆ ಕೂರಿಸಿ ಒಂದು ಸಮಸ್ಯೆ ಬಗೆಹರಿಸಿದ್ರು. ಅದೇನಪ್ಪಾ ಅಂದ್ರೆ ಕೇಬಲ್ ಬ್ಯುಸಿನೆಸ್ ಅನ್ನ ಅಣ್ಣ ಭೀಮೇಶಿ ನಡೆಸೋದು. ಶಾಮಿಯಾನ ಬ್ಯುಸಿನೆಸ್ ಅನ್ನ ತಮ್ಮ ಬಸು ಗೆ ಬಿಟ್ಟುಕೊಡೋದು ಅಂತ.

ವ್ಯವಹಾರ ಇಬ್ಬರಿಗೂ ಪಾಲಾಗಿ ಹೋಗಿತ್ತು. ಅಲ್ಲಿಗೆ ಅಣ್ಣತಮ್ಮನ ನಡುವೆ ಇದ್ದ ವ್ಯಾಜ್ಯ ಬಗೆಹರಿಯಿತು ಅಂತ ಎಲ್ಲಾ ಅಂದುಕೊಂಡಿದ್ರು. ಆದ್ರೆ ಬಸು ಅಷ್ಟಕ್ಕೆ ಸುಮ್ಮನಾಗಲೇ ಇಲ್ಲ. ಅಣ್ಣನ ವಿರುದ್ಧ ಕತ್ತಿ ಮಸೆಯೋದಕ್ಕೆ ಶುರುಮಾಡಿದ್ದ. ಇಬ್ಬರ ಬ್ಯುಸಿನೆಸ್ ಎರಡು ಭಾಗವಾದ ಮೇಲೆ ಭೀಮೇಶಿ ತನ್ನ ಮನೆಯಲ್ಲೇ ಇನ್ನೊಂದು ಶಾಮಿಯಾನ ಬ್ಯುಸಿನೆಸ್ ಸ್ಟಾರ್ಟ್ ಮಾಡಿದ್ದ. ಯಾಕಂದ್ರೆ ಅದಾಗ್ಲೇ ಕೇಬಲ್ ವ್ಯವಹಾರ ನಿಂತಿದ್ರಿಂದ ಅದ್ರಿಂದ ಕಾಸು ಹುಟ್ಟುತ್ತಿರಲಿಲ್ಲ. ಹೀಗಾಗಿ ಆತ ಮತ್ತೊಂದು ಶಾಮಿಯಾನ ಅಂಗಡಿ ಓಪನ್ ಮಾಡಿದ್ದ. ಇದ್ರಿಂದ ಅಣ್ಣ ತಮ್ಮನ ನಡುವೆ ಸ್ವಲ್ಪ ಶಮನವಾಗಿದ್ದ ಜಗಳ ಮತ್ತೆ ಭುಗಿಲೆದ್ದಿತ್ತು. ಯಾಕಂದ್ರೆ ಬಸುಗೆ ಈ ವ್ಯವಹಾರದಲ್ಲಿ ಅಷ್ಟೊಂದು ಮಾಹಿತಿಯಿರಲಿಲ್ಲ. ಆದ್ರೆ ಭೀಮೇಶಿಗೆ ಕಸುಬು ಗೊತ್ತಿತ್ತು. ಅಲ್ಲದೆ ಒಂದಿಷ್ಟು ಕ್ಯಾಂಟ್ಯಾಕ್ಟ್ ಕೂಡಾ ಇತ್ತು. ಹೀಗಾಗಿ ಭೀಮೇಶಿ ಹೊಸದಾಗಿ ಶಾಮಿಯಾನ ಓಪನ್ ಮಾಡಿದ್ರು ಬ್ಯುಸಿನೆಸ್ ಗೆ ಮಾತ್ರ ಯಾವುದೇ ತೊಂದರೆಯಾಗಿರಲಿಲ್ಲ. ಅದು ಬಸುನ ಕೋಪ ಮತ್ತಷ್ಟು ಹೆಚ್ಚಾಗಲು ಕಾರಣವಾಗಿತ್ತು.

ಆಗಲೇ ನೋಡಿ ಬಸುಗೆ ಸಿಟ್ಟು ನೆತ್ತಿಗೇರಿದ್ದು. ಇನ್ನು ಮುಂದೆ ನನ್ನ ಅಣ್ಣನನ್ನ ಹೀಗೆ ಬಿಟ್ರೆ ಅವನ ವ್ಯವಹಾರ ಚೆನ್ನಾಗಿ ನಡೆಯುತ್ತೆ. ನಂತ್ರ ನಾನು ಶಾಮಿಯಾನ ಎಲ್ಲಾ ಮಾರ್ಕಂಡು ಹೆಂಡ್ತಿ ಕರ್ಕೊಂಡು ಭಿಕ್ಷೆ ಬೇಡಬೇಕಾಗುತ್ತೆ ಅಂತ ಅಂದುಕೊಂಡು ಅಣ್ಣನನ್ನ ಮುಗಿಸೋದಕ್ಕೆ ಪ್ಲಾನ್ ಮಾಡ್ತಾನೆ. ಅಣ್ಣನ ಕೊಲೆ ವಿಚಾರವಾಗಿ ಹೆಂಡ್ತಿಗೆ ಗೊತ್ತಾದಾಗ ಆಕೆಯ ಪೋಷಕರು ಬೇಷ್ ಮಗನಾ ನಿನ್ನ ಅಣ್ಣಂಗ ಒಂದು ಗತಿಕಾಣಿಸಿಬಿಡು ಅಂತ ಆತನಿಗೆ ಪ್ರೇರೇಪಿಸಿಬಿಟ್ಟಿದ್ರು. ಹೀಗಾಗಿ ಬಸು ಪ್ರತಿನಿತ್ಯ ತನ್ನ ಜೇಬಲ್ಲಿ ಚಾಕು ಇಟ್ಕೊಂಡು ಅಣ್ಣನ ಮನೆಗೆ ಹೋಗ್ತಿದ್ದ. ಆದ್ರೆ ಆತನ ಆಯಸ್ಸು ಗಟ್ಟಿ ಇತ್ತು ಅಂತ ಕಾಣುತ್ತೆ. ಇವನು ಹೋಗೋ ಸಮಯಕ್ಕೆ ಅವನು ಇರ್ತಿರಲಿಲ್ಲ. ಆದ್ರೆ ಬಸುವಿನ ಸಿಟ್ಟು ಕಡಿಮೆಯಾಗಿರಲಿಲ್ಲ, ಹೇಗಾದ್ರೂ ಮಾಡಿ ಅಣ್ಣನನ್ನ ಕೊಂದ್ರೆ ಮಾತ್ರ ನಾನು ಉದ್ದಾರ ಆಗೋದು ಅಂತ ಅಂದುಕೊಂಡು ಆತನ ಕೊಲೆ ಮಾಡೋದಕ್ಕೆ ದಿನ ಎಣಿಸತೊಡಗಿದ್ದ. ಅಲ್ಲದೆ ತನ್ನ ಪತ್ನಿ ಕಡೆಯ ನಾಲ್ಕು ಜನರನ್ನ ಆತ ಹಿಂದಕ್ಕಿಟ್ಟುಕೊಂಡು ಅಣ್ಣನ ಭೇಟೆಗೆ ನಿಂತಿದ್ದ.

ಎರಡು ದಿನಗಳ ಹಿಂದೆ ಬಸು ಇವತ್ತು ಅಣ್ಣನನ್ನ ಕೊಂದೇ ತೀರಬೇಕು ಅಂತ ತೀರ್ಮಾನಿಸಿಬಿಟ್ಟಿದ್ದ. ಮನೆಯಿಂದ ಅವತ್ತು ಬಸು ಹೊರಗೆ ಹೊರಟಾಗ ಹೊಸ್ತಿಲಲ್ಲಿ ನಿಂತು ಪತ್ನಿ ಇವತ್ತು ಹೋಗೋ ಕೆಲಸವನ್ನ ಮುಗಿಸಿಯೇ ಮನೆಗೆ ಬನ್ನಿ. ಖಾಲಿ ಕೈಯಲ್ಲಿ ಬರಬೇಡ್ರಿ ಅಂತ ಕೂಗಿ ಹೇಳಿದ್ಲು. ಅಂದ್ರೆ ಭೀಮೇಶಿ ಹೆಣ ಇವತ್ತು ಬೀಳಬೇಕು ಅನ್ನೋ ಅರ್ಥದಲ್ಲಿ ಹೇಳಿದ್ಲು. ಆತ ಕೂಡಾ ಗಟ್ಟಿ ಮನಸ್ಸು ಮಾಡಿ ತನ್ನ ಸಹಚರರನ್ನ ಕರ್ಕೊಂಡು ಅಣ್ಣನನ್ನ ಹುಡುಕಿ ಹೊರಟಿದ್ದ. ಆಗಿನ್ನು ಅಣ್ಣನ ಮನೆ ಹತ್ತಿರ ಜನಸಂದಣಿ ಕಡಿಮೆ ಇತ್ತು. ಭೀಮೇಶಿ ಮನೆಯಲ್ಲಿರೋದನ್ನ ಕನ್ಫರ್ಮ್ ಮಾಡ್ಕೊಂಡು ಆತ ಅಲ್ಲಿಗೆ ಹೋಗಿದ್ದ. ಅಣ್ಣ ಮನೆಯಿಂದ ಹೊರಗೆ ಬರ್ತಿದ್ದ ಹಾಗೆ ಅವನನ್ನ ಮುಗಿಸಬೇಕು ಅಂತ ಅಂದುಕೊಂಡಿದ್ದ. ಹೀಗೆ ಸಾಕಷ್ಟು ಹೊತ್ತು ಆ ಮನೆಯ ಹೊರಗೆ ಬಸು ಕಾದು ಕುಳಿತ್ತಿದ್ದ. ಅಷ್ಟೊತ್ತಿಗೆ ಅವನ ಬದುಕೋ ದಿನದ ಕೊನೆಯ ಕ್ಷಣಗಳು ಮುಗಿದಿತ್ತು ಅಂತ ಕಾಣಿಸುತ್ತೆ. ಅಲ್ಲದೆ ಬಸುನ ಕೆಟ್ಟ ದಿನಗಳು ಶುರುವಾಗಿತ್ತು ಇರಬೇಕು.

ಅವನು ಮನೆಯಿಂದ ಹೊರಗೆ ಬಂದಿದ್ದ.ತನ್ನ ಒಡಹುಟ್ಟಿದ ಅಣ್ಣ ಮನೆಯಿಂದ ಹೊರಗೆ ಬರ್ತಿದ್ದ ಹಾಗೆ ಬಸುಗೆ ಬ್ರಾತೃ ವಾತ್ಸಲ್ಯ ಕಾಣಲಿಲ್ಲ. ಅವನಿಗೆ ತನ್ನ ಅಣ್ಣ ಗಡಿಯಾಚೆ ನಿಂತ ಶತೃವಂತೆ ಕಂಡಿದ್ದ. ಇಬ್ಬರು ಒಂದೇ ತಾಯಿಯ ಎದೆಹಾಲನ್ನ ಕುಡಿದು ಬೆಳೆದಿದ್ದೇವೆ ಅನ್ನೋದನ್ನು ಮರೆತಿದ್ದ. ಆತ ಹೊರಗೆ ಬರ್ತಿದ್ದ ಹಾಗೆ ತನ್ನಲ್ಲಿರೋ ಎಲ್ಲಾ ಒಳ್ಳೆಯ ಗುಣಗಳು ಸತ್ತು ಹೋಗಿದೆ ಅಂತ ಅಂದುಕೊಂಡು ಅಣ್ಣನ ಎದೆಗೆ ಚೂರಿಯಿಂದ ಚುಚ್ಚಿದ್ದ. ಆತ ಕೂಗಾಡ್ತಾ ರಕ್ತ ಚಿಮ್ಮಿಕೊಂಡು ಕೆಳಗೆ ಬೀಳ್ತಿದ್ದ ಹಾಗೆ ಅವನ ಎದೆ ಮೇಲೆ ಕೂತು ಕಂಡಕಂಡಲ್ಲಿ ಚುಚ್ಚಿದ್ದ. ಅಯ್ಯೋ ನನ್ನ ಬಿಟ್ಟು ಬಿಡೋ ಅಂತ ಕೂಗ್ತಿರೋ ಬಸು ಮಾತ್ರ ಅಣ್ಣ ಪ್ರಾಣಪಕ್ಷಿ ಕಣ್ಣಲ್ಲಿ ಕೊನೆ ಕ್ಷಣದಲ್ಲಿ ಕಾಣಿಸ್ತಿರೋದನ್ನ ಬಹಳ ವಿಕೃತವಾಗಿ ನೋಡುತ್ತಾ ಕುಳಿತ್ತಿದ್ದ. ಅವನಿಗೆ ಅಣ್ಣ ಸತ್ತಮೇಲೆ ಅಲ್ಲಿಂದ ಎದ್ದು ಹೋಗಬೇಕು ಅಂತ ಅನಿಸಿತ್ತು ಅನ್ಸುತ್ತೆ.

ಭೀಮೇಶಿ ಸ್ಥಳದಲ್ಲಿಯೇ ಸತ್ತು ಹೋದ ಅನ್ನೋದು ಗೊತ್ತಾಗ್ತಿದ್ದ ಹಾಗೆ ಅಲ್ಲಿಂದ ತನ್ನ ಸಂಗಡಿಗರನ್ನ ಕರ್ಕೊಂಡು ಪರಾರಿಯಾಗಿದ್ದ. ಅಲ್ಲಿಗೆ ಅಣ್ಣ ತಮ್ಮನ ಜಗಳ ಮುಗಿದು ಹೋಗಿತ್ತು. ಬಂದೂಕು ಹಿಡ್ಕೊಂಡು ದೇಶ ಕಾದಿದ್ದ ಸೈನಿಕ ಈಗ ಕೊಲೆಗಾರನಾಗಿ ಹೋಗಿದ್ದ. ಸೈನ್ಯ ಕಲಿಸಿದ್ದ ಶಿಸ್ತು ಅವನಲ್ಲಿ ಒಂದು ಚೂರು ಉಳಿದಿರಲಿಲ್ಲ. ಆದ್ರೆ ಕಣ್ಣೆದುರಿಗೆ ಸಾವು ಸಂಭವಿಸಿದ್ರು ನಿರ್ಭಾವುಕರಾಗಿ ಇರೋದು ಮಾತ್ರ ಆತ ಚೆನ್ನಾಗಿ ಕಲಿತ್ತಿದ್ದ.ಭೀಮೇಶಿಯನ್ನ ಅಷ್ಟು ಬರ್ಬರವಾಗಿ ತಮ್ಮನೇ ಹತ್ಯೆ ಮಾಡೋದಕ್ಕೆ ಒಂದು ಕಾರಣವೂ ಇತ್ತು. ಅದು ಮತ್ತ್ಯಾರು ಅಲ್ಲ ಬಸುವಿನ ಹೆಂಡತಿ. ಆತ ಸೈನ್ಯದಿಂದ ವಾಪಸ್ ಬಂದ ಮೇಲೆ ನಾನು ಈ ಹುಡುಗಿಯನ್ನ ಮದುವೆಯಾಗ್ತೀನಿ ಅಂತ ಮನೆಯಲ್ಲಿ ಹೇಳಿರ್ತಾನೆ. ಆದ್ರೆ ಅದ್ಯಾಕೋ ಮನೆಯವರಿಗೆ ಈ ಹುಡುಗಿ ಇಷ್ಟವಿರೋದಿಲ್ಲ. ಅವ್ರು ಆಕೆಯೊಂದಿಗೆ ನಿನ್ನನ್ನ ಮದುವೆ ಮಾಡಿಕೊಡೋದಿಲ್ಲ ಅಂತ ಹೇಳಿದ್ರು. ಅವನು ಕೂಡಾ ಸಾಕಷ್ಟು ಸಾರಿ ಕೇಳಿದ್ದ. ಆದ್ರೆ ಮನೆಯವರು ಮದುವೆಗೆ ಮಾತ್ರ ಸುತಾರಾಂ ಒಪ್ಪಿರಲಿಲ್ಲ. ಅದರಲ್ಲೂ ಈ ಮದುವೆಗೆ ತೀವ್ರ ವಿರೋಧ ಬಂದಿದ್ದು ಅಣ್ಣನಿಂದಲೇ. ನೀನು ಮಾತ್ರ ಆ ಹುಡುಗಿಯನ್ನ ಮದುವೆಯಾಗೋದೆ ಬೇಡ ಅಂತ ಆತ ಹಠ ಹಿಡಿದಿದ್ದ. ಆದ್ರೆ ಕಾರಣ ಕೇಳಿದ್ರೆ ಆತ ಹೇಳಿರಲಿಲ್ಲ.

ಇನ್ನೇನು ಬಸು ಯಾರ ಮಾತನ್ನೂ ಕೇಳದೆ ಅದೇ ಹುಡುಗಿಯನ್ನ ಮದುವೆಯಾಗಬೇಕು ಅಂತ ಹಠ ಹಿಡಿದಿದ್ದ. ಆಗ ತಡೆಯಲಾಗದ ಭೀಮೇಶಿ ಆಕೆಯೊಂದಿಗೆ ನಾನು ದೈಹಿಕ ಸಂಬಂಧ ಹೊಂದಿದ್ದೆ. ನೀನು ಮಿಲಿಟರಿಯಲ್ಲಿದ್ದಾಗ ನನಗೂ ಇವಳಿಗೂ ಸಂಬಂಧ ಇತ್ತು. ಈಗ ನೀನು ಅವಳನ್ನ ಮದುವೆಯಾದ್ರೆ ಚೆನ್ನಾಗಿರೋದಿಲ್ಲ ಅಂತ ಅಣ್ಣ ಹೇಳಿದ್ದ. ಆದ್ರೆ ನಾನು ಮದುವೆಯಾಗ್ತೀನಿ ಅನ್ನೋ ಕಾರಣಕ್ಕೆ ಹೀಗೆ ಹೇಳ್ತಿದ್ದಾನೆ ಅಂತ ಆತ ಅದನ್ನ ಕೇಳಿಸಿಕೊಳ್ಳಲೇ ಇಲ್ಲ. ಅಲ್ಲದೆ ಈ ವಿಚಾರವನ್ನ ಆ ಹುಡುಗಿಗು ಹೇಳಿದ್ದ. ಅಲ್ಲದೆ ಆಕೆಯೊಂದಿಗೆ ಮದುವೆಯಾಗಿ ಮನೆಯವರ ವಿರೋಧವನ್ನ ಕಟ್ಟಿಕೊಂಡಿದ್ದ. ಅದ್ಯಾವಾಗ ಬಸು ಆಕೆಯೊಂದಿಗೆ ಮದುವೆಯಾದ್ನೋ ಆಗ ಆಕೆ ತನ್ನ ಗಂಡನ ತಲೆಯಲ್ಲಿ ಅಣ್ಣನ ಬಗ್ಗೆ ದ್ವೇಷ ತುಂಬೋದಕ್ಕೆ ಶುರುಮಾಡಿದ್ಲು. ತಾನು ಮದುವೆಯಾಗಲಿಲ್ಲ. ತಮ್ಮನನ್ನೂ ಮದುವೆಯಾಗೋದಕ್ಕೆ ಬೇರೆ ಅಡ್ಡಿ ಆಗ್ತಿದ್ದಾನೆ ಅನ್ನೋ ಸಿಟ್ಟು ಆಕೆಗಿತ್ತು. ಹೀಗಾಗಿ ಭೀಮೇಶಿ ವಿರುದ್ಧ ಆಕೆ ಕೂಡಾ ಕತ್ತಿ ಮಸೆಯೋದಕ್ಕೆ ಶುರುಮಾಡಿದ್ಲು.

ಆಸ್ತಿ ವಿಚಾರವಾಗಿ ಅದ್ಯಾವಾಗ ಗಲಾಟೆ ಶುರುವಾಯ್ತೋ ಆಗ ಆಕೆ ಅದನ್ನ ತನ್ನ ಉಪಯೋಗಕ್ಕೆ ಬಳಸಿಕೊಂಡಿದ್ಲು. ಅಲ್ಲದೆ ಅವನನ್ನ ಮುಗಿಸೋದಕ್ಕೆ ತನ್ನ ತವರು ಮನೆಯವರ ಸಹಾಯವನ್ನು ಗಂಡನಿಗೆ ಕೊಡಿಸಿದ್ಲು. ಹೀಗಾಗಿ ಹೆಂಡ್ತಿ ಮನೆಯವರು ನನ್ನ ಕಡೆಯಿದ್ದಾರೆ ಅನ್ನೋ ಹುಂಬತನದಲ್ಲಿ ಆತ ತನ್ನ ಅಣ್ಣನನ್ನೇ ಇರಿದು ಇರಿದು ಕೊಂದಿದ್ದ.ಬಸು ತನ್ನ ಪತ್ನಿ ಮತ್ತವರ ಮನೆಯವರ ಮಾತನ್ನ ಕಟ್ಕೊಂಡು ತನ್ನ ಒಡಹುಟ್ಟಿದ ಅಣ್ಣನ ಪ್ರಾಣವನ್ನ ತೆಗಿದಿದ್ದ. ಅಣ್ಣ ಹೇಳಿದ್ದು ಒಳ್ಳೆಯದಕ್ಕೆ ಅಂತ ಅಂದುಕೊಂಡು ಸುಮ್ಮನಿದ್ದಿದ್ರೆ ಇಂತಹದ್ದೊಂದು ಅನಾಹುತ ಆಗ್ತಿರಲಿಲ್ಲ. ಅಲ್ಲದೆ ತನ್ನ ಗಂಡ ಮೂರು ಹೊತ್ತು ಊಟಕ್ಕೆ ತಂದು ಹಾಕಿ ಮಕ್ಕಳನ್ನ ಚೆನ್ನಾಗಿ ನೋಡಿಕೊಂಡ್ರೆ ಸಾಕು ಅಂತ ಹೆಂಡತಿ ಬಯಸಿದ್ರೆ ಬಸುಗೆ ಜೈಲಲ್ಲಿ ಮುದ್ದೆ ಮುರಿಯೋ ಸ್ಥಿತಿ ಬರ್ತಿರಲಿಲ್ಲ. ಇದೀಗ ಅಣ್ಣನನ್ನ ಕೊಂದು ಜೈಲು ಸೇರಿದ್ದಾನೆ. ಹೆಂಡ್ತಿ ಮಕ್ಕಳೊಂದಿಗೆ ಆನಂದವಾದ ಸಮಯ ಕಳೆಯೋ ವಯಸ್ಸಲ್ಲಿ ದ್ವೇಷಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ ಹಠಕ್ಕೆ ಬಿದ್ದು ಮದುವೆ ಮಾಡಿಕೊಂಡು ಆಕೆಯನ್ನೂ ಒಂಟಿ ಮಾಡಿ ಹೋಗಿದ್ದಾನೆ.

LEAVE A REPLY

Please enter your comment!
Please enter your name here