Home KARNATAKA ರಾಜೀನಾಮೆ ನೀಡಿರೋ ಶಾಸಕರ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ..! ಹಣದ ಹೊಳೆ ಹರಿದಿದ್ರೂ ರಾಜೀನಾಮೆ ನೀಡಿರೋ ಹಿಂದಿದೆ...

ರಾಜೀನಾಮೆ ನೀಡಿರೋ ಶಾಸಕರ ಕ್ಷೇತ್ರಕ್ಕೆ ಕೋಟಿಗಟ್ಟಲೆ ಅನುದಾನ..! ಹಣದ ಹೊಳೆ ಹರಿದಿದ್ರೂ ರಾಜೀನಾಮೆ ನೀಡಿರೋ ಹಿಂದಿದೆ ಅನುಮಾನ..!

3574
0
SHARE

ತಮ್ಮ ಕ್ಷೇತ್ರಗಳಿಗೆ ಅನುದಾನವೇ ನೀಡಿಲ್ಲ.. ಹೀಗಾಗಿ ರಾಜೀನಾಮೆ ನೀಡ್ತಿದ್ದೀವಿ ಅಂತ, ಬೆಂಗಳೂರಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಹೇಳ್ತಿದ್ದಾರೆ.. ಆದ್ರೆ, ಪಾಲಿಕೆಯಿಂದ ಇಡೀ ಕ್ಷೇತ್ರಕ್ಕೆ ಕೋಟ್ಯಾಂತರ ರೂ ಹಣದ ಹೊಳೆಯನ್ನೇ ಹರಿಸಲಾಗಿದೆ.. ಹೀಗಾಗಿ ರಾಜೀನಾಮೆ ನೀಡಿರೋ ಶಾಸಕರ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ.. ತಮ್ಮ ಕ್ಷೇತ್ರಗಳಿಗೆ ನಯಾಪೈಸೆ ಅನುದಾನ ಬಂದಿಲ್ಲ, ಕ್ಷೇತ್ರ ಅಭಿವೃದ್ಧಿಗೆ ಹಣವಿಲ್ಲ ಅಂತ ಹೇಳಿ.. ಬೆಂಗಳೂರಿನ ಶಾಸಕರು ರಾಜೀನಾಮೆ ನೀಡಿದ್ದಾರೆ..

ಆದ್ರೆ ರಾಜರಾಜೇಶ್ವರಿ ನಗರ, ಕೆ.ಆರ್ ಪುರಂ, ಯಶವಂತಪುರ ಹಾಗೂ ಮಹಾಲಕ್ಷ್ಮಿ ಲೇಔಟಿಗೆ ಕೋಟಿಗಟ್ಟಲೆ ಅನುದಾನ ಹರಿದು ಬಂದಿದೆ.. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರೋತ್ಥಾನ, 110 ಹಳ್ಳಿ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ಹರಿದು ಬಂದಿದೆ. ಬಿಬಿಎಂಪಿ ಹಾಗೂ ನಗರೋತ್ಥಾನ ಅಡಿಯಲ್ಲಿ ನಾಲ್ಕೂ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಹಣ ಹರಿದುಬಂದಿದೆ.. ಬಿಬಿಎಂಪಿಯಿಂದ 2010ರಿಂದ 2020ರವರೆಗೂ ಸಾವಿರಾರು ಕೋಟಿ ಅನುಧಾನವನ್ನ ಈ ಕ್ಷೇತ್ರಗಳಿಗೆ ನೀಡಲಾಗಿದೆ.. ಅಂದ್ರೆ ಕಳೆದ ಎರಡು ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಜೆಡಿಎಸ್ ಶಾಸಕ ಗೋಪಾಲಯ್ಯ ಪ್ರತಿನಿಧಿಸಿರೋ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ 1ಸಾವಿರದ 97ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿದೆ.. ಇನ್ನು ಬೈರತಿ ಬಸವರಾಜ್ ಪ್ರತಿನಿಧಿಸೋ ಕೆ.ಆರ್ ಪುರಂ ಕ್ಷೇತ್ರಕ್ಕೆ, 1ಸಾವಿರದ 301ಕೋಟಿ ಅನುಧಾನ ಬಿಡುಗಡೆಯಾಗಿದೆ.. ಎಸ್.ಟಿ ಸೋಮಶೇಖರ್ ಪ್ರತಿನಿಧಿಸೋ ಕ್ಷೇತ್ರವಾದ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ, 1ಸಾವಿರದ 403 ಕೋಟಿ ಹಣವನ್ನ ಮೀಸಲಿಡಲಾಗಿದೆ..

ಹಾಗೆ ಮುನಿರತ್ನ ಅವರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಲವು ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದು.. ಇದೊಂದೇ ಕ್ಷೇತ್ರಕ್ಕೆ 1ಸಾವಿರದ 214 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು, ಅತ್ಯಂತ ಹೆಚ್ಚು ಅನುದಾನ ಪಡೆದಿರೋ ಮೊದಲ ಕ್ಷೇತ್ರ ಇದಾಗಿದೆ.. ಬಿಬಿಎಂಪಿ ಅಷ್ಟೇ ಅಲ್ಲದೆ ಬಿಡಿಎ ಇಂದಲೂ ಕೂಡ ನೂರಾರು ಕೋಟಿ ಹಣವನ್ನ ಪಡೆದಿರೋದಾಗಿ, ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸ್ಪಷ್ಟಪಡಿಸಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಅಂತ ಹೇಳೋ ಮೂಲಕ, ಬೆಂಗಳೂರಿನ ಈ ನಾಲ್ಕು ಕ್ಷೇತ್ರದ ಶಾಸಕರು ರಾಜೀನಾಮೆ ನೀಡ್ತಿರೋದಾಗಿ ಹೇಳಿದ್ದಾರೆ.. ಸಾವಿರಾರು ಕೋಟಿ ಅನುದಾನ ಪಡೆದಿದ್ರೂ, ತಮ್ಮ ಕ್ಷೇತ್ರ ಅಭಿವೃದ್ದಿಗೆ ಹಣ ಬಿಡುಗಡೆಯಾಗಿಲ್ಲ ಅಂತ ಹೇಳೋ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.

ಕ್ಷೇತ್ರಕ್ಕೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ರೂ, ಅದನ್ನ ಲೂಟಿ ಹೊಡೆಯುತ್ತಿರೋ ಇಂತ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.. ಹಣ ಬಿಡುಗಡೆ ಮಾಡಿಲ್ಲ ಅನ್ನೋ ತಪ್ಪು ಮಾಹಿತಿ ನೀಡಲಾಗ್ತಿದೆ ಅಂತ ಆರೋಪಿಸಿದ್ದಾರೆ.ನಾಲ್ಕು ಕ್ಷೇತ್ರಗಳಿಗೆ ಬಿಡುಗಡೆಯಾಗಿರೋ ಹಣದ ಅಂಕಿ ಅಂಶಗಳು ದೊರೆತಿದ್ದು, ಇದರಲ್ಲಿ ಸಾವಿರಾರು ಕೋಟಿ ಹಣ ಬಿಡುಗಡೆಯಾಗಿರೋದು ದಾಖಲಾಗಿದೆ.. ಎರಡು, ಮೂರು ಬಾರಿ ಕ್ಷೇತ್ರದ ಶಾಸಕರಾಗಿರೋ ಇವರು, ಹಣ ಬಿಡುಗಡೆಯಾಗಿದ್ರೂ ಕೆಲಸ ಮಾಡಿಲ್ಲವಾ ಅನ್ನೋ ಪ್ರಶ್ನೆಗಳು ಉದ್ಭವವಾಗ್ತಿವೆ.

LEAVE A REPLY

Please enter your comment!
Please enter your name here