Home District ರಾಜ್ಯದಲ್ಲಿ ಅತೃಪ್ತ ಶಾಸಕರ ವಿರುದ್ಧ ಛೀ..ಥೂ ಚಳವಳಿ..! ಅಡಿಕೆ ಎಲೆ ಜಗಿದು ಅತೃಪ್ತ ಶಾಸಕರ ಮುಖಕ್ಕೆ...

ರಾಜ್ಯದಲ್ಲಿ ಅತೃಪ್ತ ಶಾಸಕರ ವಿರುದ್ಧ ಛೀ..ಥೂ ಚಳವಳಿ..! ಅಡಿಕೆ ಎಲೆ ಜಗಿದು ಅತೃಪ್ತ ಶಾಸಕರ ಮುಖಕ್ಕೆ ಮಂಗಳಾರತಿ..!

1918
0
SHARE

ಶಾಸಕರುಗಳು ಜನರ ಹಿತ ಮರೆತು ರೆಸಾರ್ಟ್ ರಾಜಕಾರಣ ಮಾಡಿಕೊಂಡು ಚೆಲ್ಲಾಟವಾಡುತ್ತಿದ್ದಾರೆ. ಸರಿಯಾಗಿ ಮುಂಗಾರು ಮಳೆಯಾಗದೆ ರೈತ ಪರಿತಪಿಸುತ್ತಿದ್ದಾನೆ. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಇತ್ತ ಶಾಸಕರುಗಳು ರೆಸಾರ್ಟ್ ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ರೆಸಾರ್ಟ್ ರಾಜಕಾರಣಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ ಕೊಳಕು ರಾಜಕರಾಣಕ್ಕೆ ಛೀ..ಥೂ ಎಂದು ಪ್ರತಿಭಟನೆ ನಡೆಸಿದ್ರು.

ಮುಂಬೈ ರೆಸಾರ್ಟ್ ಗೆ ಹಾರಿರೋ ಜನಪ್ರತಿನಿಧಿಗಳ ನಡೆಗೆ ರೈತರು ಛೀಮಾರಿ ಹಾಕಿದ್ದಾರೆ. ಅಷ್ಟೆ ಅಲ್ಲ ಅಡಿಕೆ ಎಲೆ ಜಗಿದು ಕೊಳುಕು ರಾಜಕೀಯ ಮಾಡುತ್ತಿರುವ 16 ಮಂದಿ ಅತೃಪ್ತ ಶಾಸಕರುಗಳ ಮುಖಕ್ಕೆ ಉಗಿದು ಛೀ ಥೂ ಎಂದಿದ್ದಾರೆ. ಆ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ತುಮಕೂರಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಬಣದಲ್ಲಿ ಗುರುತಿಸಿಕೊಂಡು ರಾಜಕೀಯ ಹೈಡ್ರಾಮಗೆ ಸಾಕ್ಷಿಯಾದ ಜನಪ್ರತಿನಿಧಿಗಳ ವಿರುದ್ದ ರೈತರು ಕಿಡಿಕಾರಿದ್ದಾರೆ. ನಗರದ ಟೌನ್‌ಹಾಲ್ ವೃತ್ತದಲ್ಲಿ ಎಲೆ ಅಡಿಕೆ ಅಗೆದು ಛೀ ಥೂ ಅಂತಾ ಉಗಿಯುವ ಮೂಲಕ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿದ್ದಾರೆ.

ಇತ್ತ ಚಿಕ್ಕಬಳ್ಳಾಪುರದಲ್ಲೂ ರೈತರು ಅತೃಪ್ತ ಶಾಸಕರಿಗೆ ಹಿಡಿಶಾಪ ಹಾಕಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೆ ಸೇಲ್ ಆಗಿರೋ ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನ ವರಿಗೆ ತಕ್ಕ ಪಾಠ ಕಲಿಸಬೇಕೆಂದಿದ್ದಾರೆ.ಶಿವಮೊಗ್ಗದಲ್ಲಿ ರೈತ ಸಂಘದ ನೇತೃತ್ವದಲ್ಲಿ ಮೂರು ಪಕ್ಷಗಳಿಗೆ ಉಗಿಯುವ ಚಳವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ರೈತರು ಮೂರು ಪಕ್ಷದ ಪ್ರತಿಕೃತಿಗಳಿಗೆ ಎಲೆ ಅಡಿಕೆ ಹಾಕಿ ಉಗಿದು ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲೂ ರೈತರು ಛೀ ಥೂ ಚಳವಳಿ ಹಮ್ಮಿಕೊಂಡಿದ್ರು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು ಅಡಿಕೆ ಎಲೆ ಜಗಿದು ಅತೃಪ್ತ ಶಾಸಕರುಗಳ ಮುಖಕ್ಕೆ ಉಗಿದು ಮಂಗಳಾರತಿ ಮಾಡಿದ್ರು.ಚಾಮರಾಜನಗರದಲ್ಲೂ ರೈತ ಸಂಘಟನೆ ನೇತೃತ್ವದಲ್ಲಿ ಛೀ ಥೂ ಚಳವಳಿಯನ್ನ ಹಮ್ಮಿಕೊಂಡಿತ್ತು. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಇಂಥ ಸಂದರ್ಭದಲ್ಲಿ ಶಾಸಕರುಗಳು ರೆಸಾರ್ಟ್ ವಾಸ್ತವ್ಯ ಹೂಡಿರೋದು ಎಷ್ಟು ಸರಿ ಎಂದು ಮೂರು ಪಕ್ಷದ ಮುಖಂಡರುಗಳಿಗೆ ಪೊರಕೆ ಸೇವೆ ಮಾಡಲಾಯ್ತು.

ದಾವಣಗೆರೆ ಕೇಂದ್ರ ಬಸ್ ನಿಲ್ದಾಣದ ಎದುರು ರೈತರ ಸಂಘಟನೆ ನೇತೃತ್ವದಲ್ಲಿ ಅತೃಪ್ತ ಶಾಸಕರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ ಮಾಡಲಾಯ್ತು. ಜನರಿಂದ ಆಯ್ಕೆ ಆಗಿ ಈಗ ತಮ್ಮ ವೈಯಕ್ತಿಗ ಲಾಭಕ್ಕೆ ಮಾರಾಟವಾಗುತ್ತಿರುವ ಶಾಸಕರುಗಳಿಗೆ ಅಡಿಕೆ ಎಲೆ ಜಗಿದು ಮುಖಕ್ಕೆ ಉಗಿಯಲಾಯ್ತು. ಒಟ್ಟಾರೆ ನಾಡಿನೆಲ್ಲೆಡೆ ರೈತ ಸಂಘಟನೆ ನೇತೃತ್ವದಲ್ಲಿ ಅತೃಪ್ತ ಶಾಸಕರ ವಿರುದ್ಧ ಛೀ ಥೂ ಪ್ರತಿಭಟನೆ ನಡೆಯಿತು. ಅಲ್ಲದೇ ಅತೃಪ್ತ ಶಾಸಕರುಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಯ್ತು. ವಿಶಿಷ್ಟ ರೀತಿಯ ಪ್ರತಿಭಟನೆಯಲ್ಲಿ ನಾಡಿನ ರೈತ ಸಮೂಹ ಭಾಗಿಯಾಗಿತ್ತು.

LEAVE A REPLY

Please enter your comment!
Please enter your name here