Home District ರಾಜ್ಯದಲ್ಲಿ ಗೌರಿಗಣೇಶ ಹಬ್ಬ ಹೇಗಿದೆ ಗೊತ್ತಾ..?! ಅದರ ಒಂದು ಝಲಕ್ | ಪರಿಸರ ಸ್ನೇಹಿ ಗಣೇಶನನ್ನು...

ರಾಜ್ಯದಲ್ಲಿ ಗೌರಿಗಣೇಶ ಹಬ್ಬ ಹೇಗಿದೆ ಗೊತ್ತಾ..?! ಅದರ ಒಂದು ಝಲಕ್ | ಪರಿಸರ ಸ್ನೇಹಿ ಗಣೇಶನನ್ನು ನೋಡಲು ಹರಿದು ಬಂದ ಜನಸಾಗರ..!! “ಗಣೇಶ ಖರೀಸಿದವರಿಗೆ ಒಂದೊಂದು ಸಸಿ” |

266
0
SHARE

ಪರಿಸರ ಸ್ನೇಹಿ ಗಣೇಶನನ್ನು ಸ್ಥಾಪಿಸಬೇಕು ಇದರಿಂದ ಪರಿಸರ ನಾಶವಾಗುವುದನ್ನು ತಡೆಯಬಹುದಾಗಿದೆ ಎನ್ನುವ ನಿಟ್ಟಿಯನಲ್ಲಿ ಬಳ್ಳಾರಿಯ ವಾಯ್ಸ್ ಎನ್ನುವ ಸಂಘಟನೆ ಅರಣ್ಯ ಇಲಾಖೆ ಜೊತೆಗೂಡಿ ಗಣೇಶನಿಗೊಂದು ಸಸಿ ನೀಡುವ ಕೆಲಸವನ್ನು ಮಾಡುತ್ತಿದೆ.

ಸಂಘಟನೆ ಸದಸ್ಯರೇ, ಮಣ್ಣಿನ ಗಣಪತಿಯನ್ನು ತಯಾರಿಸಿ, ಅವುಗಳನ್ನು ಕಡಿಮೆ ಬೆಲೆ ನೀಡುವುದಲ್ಲದೇ ಗಣೇಶ ಖರೀದಿ ಮಾಡಿದವರಿಗೆ ಉಚಿತವಾಗಿ ಸಸಿಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಇದರಿಂದ ಪರಿಸರ ನಾಶವಾಗುವ ದನ್ನು ತಡೆಬಹುದಾಗಿದೆ ಎನ್ನುವುದು ಸಂಘಟನೆ ಐಡಿಯಾ ಆಗಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ,ಇದೊಂದು ವಿನೂತನ ಕಾನ್ಸೇಪ್ಟ್ ಆಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪತಿ ಸ್ಥಾಪನೆ ಮಾಡದೇ ಪ್ರತಿಯೊಬ್ಬರುಮಣ್ಣಿನ ಗಣಪತಿ ಸ್ಥಾಪನೆ ಮಾಡಿ ಸಸಿಯನ್ನು ಬೆಳಸಿರಿ ಎಂದು ಸಲಹೆ ನೀಡಿದರು.

ರಾಜ್ಯದ ಜನತೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ್ದು, ಪರಿಸರ ಉಳಿಸಿ ಎಂದು ಮನವಿ ಮಾಡಿದ್ದಾರೆ.ಪಿಒಪಿ ಗಣೇಶ ತಯಾರಿಕೆ ಮತ್ತು ಪ್ರತಿಷ್ಠಾಪನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮನೆಗಳಲ್ಲಿ ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಡಿ…

ಮಣ್ಣಿನ ಗಣೇಶ ಮಾಡಿ ಕೂರಿಸಿ ಪರಿಸರ ಉಳಿಸಿ ಎಂದು ನಾಡಿನ ಜನತೆಗೆ ಸಿಎಂ ಮನವಿ ಮಾಡಿದ್ದಾರೆ.ಗಣೇಶ ಮೂರ್ತಿ ವಿಸರ್ಜನೆಯನ್ನು ತಮ್ಮ ಮನೆಗಳಲ್ಲೇ ನೀರು ತುಂಬಿದ ಬಕೇಟ್ ಗಳಲ್ಲೇ ಮಾಡಿ, ಆ ನೀರನ್ನು ನಿಮ್ಮ ಮನೆಯ ಸುತ್ತಿನ ಗಿಡಗಳಿಗೆ ಹಾಕಿ, ಆಗ ಪರಿಸರ ಉಳಿಸಬಹುದು ಮತ್ತು ಕೆರೆಗಳ ನೈರ್ಮಲ್ಯ ಕಾಪಾಡಬಹುದು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here