Home Crime ರಾಜ್ಯದಲ್ಲಿ ನಡೀತಿರೋ ಎಲೆಕ್ಷನ್ ಕರ್ನಾಟಕ ಅಸಂಬ್ಲಿಗಾ ಅಥವಾ ತಮಿಳುನಾಡಿಗಾ..? ಮೂರೂ ಪಕ್ಷಗಳು ಮಾಡ್ತಿವೆ ನಾಡದ್ರೋಹ..!?

ರಾಜ್ಯದಲ್ಲಿ ನಡೀತಿರೋ ಎಲೆಕ್ಷನ್ ಕರ್ನಾಟಕ ಅಸಂಬ್ಲಿಗಾ ಅಥವಾ ತಮಿಳುನಾಡಿಗಾ..? ಮೂರೂ ಪಕ್ಷಗಳು ಮಾಡ್ತಿವೆ ನಾಡದ್ರೋಹ..!?

540
0
SHARE

ರಾಜ್ಯದಲ್ಲಿ ನಡೆತಿರೋ ಎಲೆಕ್ಷನ್ ಕರ್ನಾಟಕ ಅಸಂಬ್ಲಿಗಾ ಅಥವಾ ತಮಿಳುನಾಡು ಅಸಂಬ್ಲಿಗಾ ಅನ್ನೋ ಅನುಮಾನ ಇದೀಗ ಕನ್ನಡಿಗರಿಗೆ ಕಾಡುತ್ತಿದೆ.. ಇವತ್ತು ಬೆಂಗಳೂರಿನಲ್ಲಿ ಸ್ಪರ್ಧೆಗೆ ಇಳಿದಿರೋ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನ ಮೂರು ಪಕ್ಷದ ಅಭ್ಯರ್ಥಿಗಳು ನಾಡದ್ರೋಹಿ ಕೆಲಸವನ್ನು ಮಾಡುತ್ತಿದ್ದಾರೆ…

ಈ ಮೂಲಕ ವಿಧಾನಸೌಧವನ್ನೂ ತಮಿಳುನಾಡು ಅಸಂಬ್ಲಿ ಮಾಡೋಕೆ ಮುಂದಾಗಿದ್ದಾರೆ..ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು.. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಂದ ಸ್ಪರ್ಧಿಸಿರೋ ಅಭ್ಯರ್ಥಿಗಳು ಕರ್ನಾಟಕ ಅಸಂಬ್ಲಿಗೆ ಎಂಟ್ರಿ ಕೋಡ್ತಾ ಇದಾರೋ ಅಥಾವ ತಮಿಳುನಾಡು ಅಸಂಬ್ಲಿಗೆ ಹೋಗೋಕೆ ಕಸರತ್ತು ನಡೆಸಿದ್ದಾರೋ, ಅನ್ನೋ ಅನುಮಾನಗಳು ಮೂಡಿವೆ…

ಹೌದು, ದೇಶದ ಪ್ರಧಾನಿ ನರೇಂದ್ರ ಮೋದಿನೇ ರಾಜ್ಯದಲ್ಲಿ ಚುನಾವಣೆ ಗೆಲ್ಲಬೇಕು ಅಂತಾ ಕನ್ನಡದಲ್ಲಿ ಭಾಷಣ ಮಾಡಿ ಕನ್ನಡಿಗರನ್ನ ಸೆಳೆಯೋ ಪ್ರಯತ್ನ ಮಾಡ್ತಿದ್ರೆ.. ಇಲ್ಲಿಯೇ ಅನ್ನ ತಿಂದು, ಕನ್ನಡಿಗರಿಂದನೇ ಮತ ಪಡೆದು ಎಂಎಲ್ಎ ಆದವರು ಇವತ್ತು ತಮಿಳಿನಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ…

ಬೆಂಗಳೂರಿನ ಸಿ.ವಿ.ರಾಮನ್ ನಗರ, ಶಿವಾಜಿ ನಗರ, ಪುಲಿಕೇಶಿ ನಗರ ಹಾಗೂ ಬ್ಯಾಟರಾಯನಪುರ ಸೇರಿದಂತೆ ನಗರದ ಬಹುತೇಕ ಕ್ಷೇತ್ರಗಳಲ್ಲಿ ತಮಿಳು ಭಾಷಣ ಹಾಗೂ ತಮಿಳು ಪೋಸ್ಟರ್ ಮೂಲಕ ಪ್ರಚಾರ ಮಾಡುತ್ತಿದ್ದಾರೆ..ಇನ್ನು, ಇವತ್ತು ಚುನಾವಣೆ ಗೆಲವಿಗಾಗಿ ಒಂದು ಕಡೆ ಬೆಳಗಾವಿಯಲ್ಲಿ ಮರಾಠಿಗರಿಗೆ ಮಣೆ ಹಾಕ್ತಾ ಇದ್ರೆ, ಇತ್ತ ಬೆಂಗಳೂರಿನಲ್ಲಿ ಕಾಂಗ್ರೆಸ್ ನವರು, ತಮಿಳಿಗರನ್ನು ಮೇಯರ್ ಮಾಡಿದ್ದು ಅಲ್ಲದೇ ತಮಿಳು ಮತಗಳ ಒಲೈಕೆಗೆ ಮುಂದಾಗಿದೆ…

ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ತಮಿಳು ಮತಗಳೇ ನಿರ್ಣಾಯಕ ಅನ್ನೋ ರೀತಿ ಅಭ್ಯರ್ಥಿಗಳು ನಾಡದ್ರೋಹಿ ಕೆಲಸವನ್ನು ಮಾಡುತ್ತಿದ್ದಾರೆ.. ಇದರಲ್ಲಿ ತಮಿಳು ಪೋಸ್ಟರ್ ಮೂಲಕ ಹೆಚ್ಚು ಪ್ರಚಾರ ಮಾಡ್ತಿರೋರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚಾಗಿದ್ದಾರೆ..

ಬ್ಯಾಟರಾಯನಪುರ ಕ್ಷೇತ್ರದ ಅಭ್ಯರ್ಥಿ ಕೃಷ್ಣೆಭೈರೇಗೌಡ, ಸಿವಿರಾಮನ್ ನಗರದ ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಸಂಪತ್ ರಾಜ್, ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್, ಪುಲಿಕೇಶಿನಗರ ಕಾಂಗ್ರೆಸ್ ಅಭ್ಯರ್ಥಿ ಅಖಂಡ ಶ್ರೀನಿವಾಸ್,ಶಿವಾಜಿ ನಗರದ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ತಮಿಳು ಪೊಸ್ಟರ್ ಮೂಲಕ ಪ್ರಚಾರ ಮಾಡಿದ್ದಾರೆ…

ಜೊತಗೆ ಅಭ್ಯರ್ಥಿಗಳ ಪರ ಜೆಡಿಎಸ್ ಬಿಜೆಪಿಯವರು ಕೂಡ ಏರಿಯಾಗಳಲ್ಲಿ ತಮಿಳು ಭಾಷಣದ ಮೂಲಕ ಮತಭೇಟಿಯಾಡುತ್ತಿದ್ದಾರೆ..ಒಟ್ಟಾರೆ ನಮ್ಮವರೇ ನಮ್ಮ ನಾಡದ್ರೋಹಿ ಕೆಲಸ ಮಾಡುತ್ತಿದ್ದು, ವಿಧಾನಸೌಧವನ್ನು ತಮಿಳುನಾಡು ಅಸಂಬ್ಲಿಯಾಗದಂತೆ, ಕನ್ನಡಿಗ ಮತದಾರರೇ ತಮ್ಮ ಹಕ್ಕು ಚಲಾಯಿಸೋ ಮೂಲಕ ತೆಡೆಯಬೇಕಿದೆ…

LEAVE A REPLY

Please enter your comment!
Please enter your name here