Home District ರಾಜ್ಯದಲ್ಲಿ ಬರ ಐತಿಹಾಸಿಕ ಹಂಪಿ ಉತ್ಸವ ರದ್ದು..! ಕಲಾವಿದರು ಹಾಗೂ ಪ್ರವಾಸಿಗರಲ್ಲಿ ಭಾರೀ ನಿರಾಸೆ..! ಟಿಪ್ಪು...

ರಾಜ್ಯದಲ್ಲಿ ಬರ ಐತಿಹಾಸಿಕ ಹಂಪಿ ಉತ್ಸವ ರದ್ದು..! ಕಲಾವಿದರು ಹಾಗೂ ಪ್ರವಾಸಿಗರಲ್ಲಿ ಭಾರೀ ನಿರಾಸೆ..! ಟಿಪ್ಪು ಸುಲ್ತಾನ್ ಜಯಂತಿ ಮಾಡುವಾಗ ಇಲ್ಲದ ಬರ ಈಗ ಬಂದಿದೆ ಎಂದ ಯತ್ನಾಳ್..!

516
0
SHARE

ಇದೊಂದು ಐತಿಹಾಸಿಕ ಉತ್ಸವ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನ ಬಿಂಬಿಸುವ ಹಬ್ಬ. ಆದ್ರೆ ಈ ಬಾರಿ ಈ ಉತ್ಸವ ರದ್ದಾಗಿದೆ. ಬರದ ಛಾಯೆ ಉತ್ಸವದ ಮೇಲೆ ಬಿದ್ದಿದೆ. ಉತ್ಸವ ರದ್ದಾಗಿದ್ದು ಕಲಾವಿದರು ಹಾಗೂ ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದೆ.ಐತಿಹಾಸಿಕ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಕಳೆದ ಮೂರು ತಿಂಗಳಿನಿಂದ ಭರ್ಜರಿ ಸಿದ್ಧತೆ ನಡೆದಿತ್ತು.

ಆಗಸ್ಟ್ 16ರಂದು ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸಭೆ ನಡೆದಿತ್ತು. ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಉತ್ಸವಕ್ಕೆ ಸರ್ಕಾರದಿಂದ ಹತ್ತು ಕೋಟಿ ಹಣ, ನೀಡಲು ಕೂಡ ಒಪ್ಪಿಗೆ ನೀಡಲಾಗಿತ್ತು. ಮಳಿಗೆಗಳ ಟೆಂಡರ್, ಕಲಾವಿದರ ಆಯ್ಕೆ ಬಹುತೇಕ ಫೈನಲ್ ಮಾಡಿ, ಆರು ವೇದಿಕೆಗಳಲ್ಲಿ ಬೃಹತ್ ಅದ್ಧೂರಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿ ಕೊಂಡಿತ್ತು.

ಅದ್ರೆ ಉಪಚುನಾವಣೆ ದಿನಾಂಕ ಘೋಷಣೆ ಯಾದ ಹಿನ್ನೆಲೆಯಲ್ಲಿ ಉತ್ಸವವನ್ನ ಮುಂದೂಡಲಾಗಿತ್ತು. ಆದ್ರೆ ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿರುವುದರಿಂದ ಉತ್ಸವವನ್ನ ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ.1988ರಲ್ಲಿ ಕನಕ ಪುರಂದರ ಉತ್ಸವ ಹೆಸರಲ್ಲಿ ಆರಂಭವಾದ ಹಂಪಿ ಉತ್ಸವ, ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಅವರ ಕನಸಾಗಿತ್ತು.

ನಂತರದ ವರ್ಷಗಳಲ್ಲಿ ಕಾರಣಾಂತರಗಳಿಂದ ರದ್ದಾದ ಉತ್ಸವ, 1995ರ ಬಳಿಕ ಹಂಪಿ ಉತ್ಸವವಾಗಿ ಮಾರ್ಪಡಾಯಿತು. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿಯೂ ಬರದ ಹಿನ್ನೆಲೆ ಒಂದೆರಡು ವರ್ಷ ಹಂಪಿ ಉತ್ಸವ ರದ್ದಾಗಿತ್ತು. ಕಲಾವಿದರ ಪ್ರಕಾರ ಇದೊಂದು ಐತಿಹಾಸಕ ಉತ್ಸವ. ಅಷ್ಟೇ ಅಲ್ಲ ಇದೊಂದು ಪರಂಪರೆ.

ಸರಳವಾಗಿಯಾದ್ರು ಉತ್ಸವ ಆಚರಿಸಬೇಕಿತ್ತು ಅಂತಾರೆ ಕಲಾವಿದರು. ಹಂಪಿ ಉತ್ಸವ ಕೇವಲ ನಮ್ಮ ನಾಡಿಗೆ ಸೀಮಿತವಾಗಿರಲಿಲ್ಲ. ಇದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಸಾಕಷ್ಟು ವಿದೇಶಿಗರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ರು. ಉತ್ತಮ ಕಾರ್ಯಕ್ರಮಗಳು ಹಾಗೂ ನಮ್ಮ ಸಂಸ್ಕೃತಿಯ ಅನಾವರಣ ಆಗುತ್ತಿತ್ತು. ಆದ್ರೆ ಉತ್ಸವ ರದ್ದಾಗಿದ್ದು ಕಲಾವಿದರು ಹಾಗೂ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಸಾಕಷ್ಟು ನಿರಾಸೆ ಮೂಡಿಸಿದೆ.

LEAVE A REPLY

Please enter your comment!
Please enter your name here