Home District ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಅಟ್ಟಹಾಸ ಮೆರೆದ ಜವರಾಯ..!! ತುಮಕೂರಿನಲ್ಲಿ ನಾಲ್ವರ ದುರ್ಮರಣ;ಮೂವರಿಗೆ ಗಂಭೀರ..!? ಮೂವರು ವೈದ್ಯಕೀಯ ವಿದ್ಯಾರ್ಥಿಗಳ...

ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಅಟ್ಟಹಾಸ ಮೆರೆದ ಜವರಾಯ..!! ತುಮಕೂರಿನಲ್ಲಿ ನಾಲ್ವರ ದುರ್ಮರಣ;ಮೂವರಿಗೆ ಗಂಭೀರ..!? ಮೂವರು ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಸಾವು…

445
0
SHARE

ಅವರೆಲ್ಲಾ ಮುಂದೆ ವೈದ್ಯರಾಗಿ ರೋಗಿಗಳ ಸೇವೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ರು ಆದ್ರೆ ವಿಧಿ ಅವರ ಬಾಳಲ್ಲಿ ಬೇರೆಯದ್ದನ್ನೇ ಬರೆದಿತ್ತು. ಡಾಕ್ಟರ್ ಆಗಿಬೇಕಿದ್ದವರ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದ್ದಾನೆ. ಇನ್ನೊಂದೆಡೆ ಕೆಟ್ಟು ನಿಂತಿದ್ದ ಲಾರಿ ಮೂಲಕ ಬಂದ ಜವರಾಯ ನಾಲ್ವರ ಪ್ರಾಣವನ್ನು ತೆಗೆದಿದ್ದಾನೆ. ಜವರಾಯನ ಅಟ್ಟಹಾಸಕ್ಕೆ 7 ಜೀವಗಳು ಬಲಿಯಾಗಿವೆ. ಪ್ರತ್ಯೇಕವಾಗಿ ನಡೆದ ಅಪಘಾತದಲ್ಲಿ ಮೃತರಾಗಿರುವವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇಂದು ಆ 7 ಜನರ ಬಾಳಲ್ಲಿ ನಿಜಕ್ಕೂ ವಿಧಿ ಆಟವಾಡಿದೆ. ಎಲ್ಲೋ ಹೋಗುತ್ತಿದ್ದವರಿಗಾಗಿ ಕಾರಿನಲ್ಲೇ ಅವಿತು ಕುಳಿತಿದ್ದ ಜವರಾಯ ಒಟ್ಟು 7 ಮಂದಿಯನ್ನು ಬಲಿಪಡೆದು ಅಟ್ಟಹಾಸ ಮೆರೆದಿದ್ದಾನೆ. ಹೌದು ಇಂದು ಬೆಳ್ಳಂಬೆಳಗ್ಗೆ ತುಮಕೂರು ಹಾಗೂ ದೇವನಹಳ್ಳಿಯಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ನಾಲ್ಕು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ತರೂರು ಗೇಟ್ ಬಳಿ ಕೆಟ್ಟು ನಿಂತಿದ್ದ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಬೆಂಗಳೂರಿನಿಂದ ಶಿರಾ ಕಡೆಗೆ ವೇಗವಾಗಿ ಬರುತ್ತಿದ್ದ ಓಮ್ನಿ ಕಾರು ನೇರವಾಗಿ ಕ್ರೇನ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಸಹಿತ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು ಕಾರಿನಲ್ಲಿದ್ದ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆ ತರಲಾಗಿದೆ. ಇನ್ನೂ ಮೃತರನ್ನು ವೆಂಕಟೇಶ, ಶಶಿಕುಮಾರ್, ಹೇಮಂತ್, ಕಿರಣ್ ಕುಮಾರ್ ಎಂದು ಗುರುತಿಸಲಾಗಿದ್ದು ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನೂ ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ ಬಳಿ ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ದ್ವೀತಿಯ ವರ್ಷ ವ್ಯಾಸಾಂಗ ಮಾಡ್ತಿದ್ದ ವಿಶಾಲ್, ಪ್ರಜ್ವಲ್,ಭೂಷಣ್ ಮತ್ತು ಕುಮಾರ್ ರಾಜ್ ಅನ್ನೋ ನಾಲ್ವರು ವಿದ್ಯಾರ್ಥಿಗಳು ದೇವನಹಳ್ಳಿ ಬಳಿಯಿರೋ ಸ್ನೇಹಿತನ ಮನೆಗೆ ಅಂತ ಮುಂಜಾನೆ ಕಾರಿನಲ್ಲಿ ಹೊರಟಿದ್ದಾಗ ಸಣ್ಣ ಅಮಾನಿಕೆರೆ ಬಳಿ ಕಾರಿನ ಮುಂದೆ ಕಬ್ಬಿಣದ ಪೈಪ್‌ಗಳನ್ನ ತುಂಬಿಕೊಂಡು ಹೋಗ್ತಿದ್ದ ಕ್ಯಾಂಟರ್ ಗೆ ಡಿಕ್ಕಿಯಾಗಿ ಚಾಲಕನನ್ನು ಬಿಟ್ಟು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೆ ಸಾವನ್ನಪಿದ್ದಾರೆ.

ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮಟ್ಟಿತ್ತು. ಇನ್ನೂ ಬೆಂಗಳೂರು ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ 7ರ ರಸ್ತೆಯ ಬದಿಗಳಲ್ಲಿ ಯಾವುದೇ ವಿದ್ಯುತ್ ದೀಪಗಳಿಲ್ಲದ ಪರಿಣಾಮ ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೃತ್ಯು ಕೂಪವಾಗಿ ಪರಿಣಮಿಸಿದ್ದು, ಹೆದ್ದಾರಿ ಪ್ರಾಧೀಕಾರದ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಲೇ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಅಂತ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ನೇಹಿತನ ಮನೆಗೆ ಹೋಗಿ ಬರೋಣ ಅಂತ ಕಾರಿನಲ್ಲಿ ಬಂದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮನೆ ಸೇರುವ ಮುನ್ನವೆ ಮಸಣ ಸೇರಿದ್ದು, ನಿಜಕ್ಕೂ ದುರಂತವೆ ಸರಿ.

LEAVE A REPLY

Please enter your comment!
Please enter your name here