Home Crime ರಾಜ್ಯದಲ್ಲಿ ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕರು ಬಲಿ..!? ಬ್ಯಾಟ್‌ನಿಂದ ಹೊಡೆದು ಅಮಾನುಷವಾಗಿ ಅಮಾಯಕನನ್ನು ಕೊಂದ...

ರಾಜ್ಯದಲ್ಲಿ ಮಕ್ಕಳ ಕಳ್ಳರ ಸುಳ್ಳು ವದಂತಿಗೆ ಅಮಾಯಕರು ಬಲಿ..!? ಬ್ಯಾಟ್‌ನಿಂದ ಹೊಡೆದು ಅಮಾನುಷವಾಗಿ ಅಮಾಯಕನನ್ನು ಕೊಂದ ಜನರು…

1575
0
SHARE

ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಎಲ್ಲೆಡೆ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಡದೆ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನೂ ಅದನ್ನೆ ಎನ್ ಕ್ಯಾಶ್ ಮಾಡಿಕೊಂಡಿರುವ ಹಲವರು ಅಮಾನಯಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ…

ಅನುಮಾನಸ್ಪದವಾಗಿ ಕಾಣುವ ಅಮಾನಯಕರನ್ನು ಯಾರು ಏನು ಅಂತ ಕೇಳದೇ ಬೇಕಾ ಬಿಟ್ಟಿಯಾಗಿ ಹಲ್ಲೆ ನಡೆಸುತ್ತಿದ್ದಾರೆ, ಅಂತಹದ್ದೇ ಘಟನೆ ಈಗ ಬೆಂಗಳೂರಿನಲ್ಲೂ ನಡೆಯುತ್ತಿದೆ. ನಿನ್ನೆ ಬೆಂಗಳೂರಿನಲ್ಲೇ ಒಟ್ಟು 9 ಕಡೆ ಇಂತಹ ಘಟನೆ ನಡೆದಿದೆ. ಅದೂ ನಡೆದಿರುವ ಘಟನೆಗಳು ಎಲ್ಲಿ ಎಂದ್ರೆ ಪಕ್ಕಾ ಸ್ಲಂ ಪ್ರದೇಶಗಳಲ್ಲೇ,..

ಇನ್ನೂ ಅಮಾನುಷ ಘಟನೆ ಎಂದ್ರೆ ನಿನ್ನೆ ಚಾಮರಾಜಪೇಟೆಯಲ್ಲಿ ಓರ್ವ ಅಮಾಯಕನನ್ನು ಮಕ್ಕಳ ಕಳ್ಳ ಎಂದು ಹೊಡೆದು ಸಾಯಿಸೇ ಬಿಟ್ಟಿದ್ದಾರೆ. ಈ ಪ್ರಕರಣ ಸಂಬಂಧ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ…

ಅದೇ ರೀತಿ ಚಿಕ್ಕಪೇಟೆಯಲ್ಲಿ ನೇಪಾಳ ಮೂಲದ ಓರ್ವ ರೈತ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದ ಓರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಅಮಾನುಷ ಘಟನೆಗೆ ಮುಖ್ಯ ಕಾರಣವೆಂದರೇ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಕಳ್ಳರ ವಂದಂತಿಯಾಗಿದೆ…

LEAVE A REPLY

Please enter your comment!
Please enter your name here