Home District ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದ್ಯಾ BJP..?! BSY ಮೈತ್ರಿ ಸರ್ಕಾರ ಉರುಳಿಸಲು ಪಟ್ಟು..?!...

ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದ್ಯಾ BJP..?! BSY ಮೈತ್ರಿ ಸರ್ಕಾರ ಉರುಳಿಸಲು ಪಟ್ಟು..?! ದೆಹಲಿಯಿಂದ BSY ಮುನಿಸಿಕೊಂಡು ಬಂದಿದ್ದರ ರಹಸ್ಯ ಪ್ರಜಾ ಟಿವಿಯಲ್ಲಿ ಬಹಿರಂಗ…

2459
0
SHARE

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರ್ಧಕ್ಕೆ ಎದ್ದು ಬಂದಿದ್ದರ ಹಿಂದಿನ ಕಾರಣ, ಈಗ ಬಹಿರಂಗವಾಗಿದೆ. ತಮಗೆ ಕಾಂಗ್ರೆಸ್ ನ 20 ಶಾಸಕರ ಬೆಂಬಲವಿದೆ.ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಮತ್ತು ಬಳ್ಳಾರಿ ಭಾಗದ ಶಾಸಕರು ಆಪರೇಷನ್ ಕಮಲಕ್ಕೆ ಸಜ್ಜಾಗಿದ್ದಾರೆ.

ಹಾಗಾಗಿ ತಕ್ಷಣವೇ ರಾಜ್ಯದ ಮೈತ್ರಿ ಸರ್ಕಾರವನ್ನು ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗಲು ಅವಕಾಶಕೊಡುವಂತೆ ಬಿ.ಎಸ್.ಯಡಿಯೂರಪ್ಪ ಮಾಡಿದ ಮನವಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿರಸ್ಕರಿಸಿದ್ದಾರೆ.ಯಡಿಯೂರಪ್ಪ ಅವರು ಕೊಟ್ಟ 20 ಕಾಂಗ್ರೆಸ್ ಶಾಸಕರ ಪಟ್ಟಿಯಲ್ಲಿ ಕನಿಷ್ಟ 5-6 ಮಂದಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವ ಪರಿಸ್ಥಿತಿ ಇಲ್ಲ ಎಂದು ಅಮಿತ್ ಷಾ ಅವರಿಗೆ ತಮ್ಮ ಆಂತರಿಕ ಸಮೀಕ್ಷೆಯಿಂದ ಗೊತ್ತಾಗಿದೆಯಂತೆ.

ಹಾಗಾಗಿ ಯಡಿಯೂರಪ್ಪ ಮನವಿಗೆ ಅಮಿತ್ ಷಾ ಸೊಪ್ಪು ಹಾಕಿಲ್ಲ.2019ರ ಲೋಕಸಭಾ ಚುನಾವಣೆ ಮುಗಿಯುವವರೆಗೆ ಕಾಯುವಂತೆ ಯಡಿಯೂರಪ್ಪ ಅವರಿಗೆ ಅಮಿತ್ ಷಾ ಸಲಹೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ನಂತರ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೂ, ಅಥವಾ ಬರದೇ ಇದ್ದರೂ, ತಾವು ಮೂಲೆಗುಂಪಾಗುವುದು ಖಚಿತ ಎಂದು ಯಡಿಯೂರಪ್ಪ ಭಾವಿಸಿದ್ದಾರಂತೆ.

ಅದಕ್ಕಾಗಿಯೇ ಅಷ್ಟರೊಳಗಾಗಿ ತಾವು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾದರೆ, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಾತ್ರ ಲೋಕಸಭಾ ಚುನಾವಣೆಯಲ್ಲೂ ಕರ್ನಾಟಕದಿಂದ ಹೆಚ್ಚಿನ ಸಂಸದರನ್ನು ಗೆಲ್ಲಿಸಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಅಮಿತ್ ಷಾ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಹಾಗಾಗಿಯೇ ಯಡಿಯೂರಪ್ಪ ಕೋಪಿಸಿಕೊಂಡು ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಮಧ್ಯದಲ್ಲೇ ಎದ್ದು ಬಂದ್ರು ಎನ್ನಲಾಗಿದೆ.

LEAVE A REPLY

Please enter your comment!
Please enter your name here