Home District “ರಾಜ್ಯದ ಮಂತ್ರಿಯೊಬ್ಬರು ಸತ್ತರೆ ಏನೂ ಆಗೋದಿಲ್ಲ”… – ಗೃಹ ಸಚಿವ ಪರಮೇಶ್ವರ್ ವಿರುದ್ಧ ಸಾಣೇಹಳ್ಳಿ ಶ್ರೀ...

“ರಾಜ್ಯದ ಮಂತ್ರಿಯೊಬ್ಬರು ಸತ್ತರೆ ಏನೂ ಆಗೋದಿಲ್ಲ”… – ಗೃಹ ಸಚಿವ ಪರಮೇಶ್ವರ್ ವಿರುದ್ಧ ಸಾಣೇಹಳ್ಳಿ ಶ್ರೀ ಕಿಡಿ..!!

576
0
SHARE

ಸಾಣೆ ಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಹೀಗೆ ಕಿಡಿಕಾರೋದಕ್ಕೆ ಬಲವಾದ ಒಂದು ಕಾರಣವಿತ್ತು. ಮಠದಲ್ಲಿ ತಯಾರಾದ ಪ್ರಸಾದವನ್ನ ಗೃಹ ಸಚಿವ ಪರಮೇಶ್ವರ್ ಬೆಂಗಾವಲು ಸಿಬ್ಬಂದಿ ಟೆಸ್ಟ್ ಮಾಡಲು ಮುಂದಾದಾಗ ಶ್ರೀಗಳಿಗೆ ಎಲ್ಲಿಲ್ಲದ ಕೋಪ ಬಂದು ಒಬ್ಬ ಮಂತ್ರಿ ಸತ್ರೆ ಏನೂ ಆಗೋದಿಲ್ಲ ಎಂದು ಕಿಡಿಕಾರಿದ್ದಾರೆ…

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೆ ಹಳ್ಳಿ ಮಠದಲ್ಲಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆಗೆ ಪರಮೇಶ್ವರ್ ಆಗಮಿಸಿದ್ದಾಗ ಈ ಘಟನೆ ನಡೆದಿದೆ… ಕಾರ್ಯಕ್ರಮದ ಬಳಿಕ ಮಠದಲ್ಲೇ ಪರಮೇಶ್ವರ್ ಪ್ರಸಾದ ಸ್ವೀಕರಿಸಬೇಕಿತ್ತು… ಆಗಾಗಿ ಬೆಂಗಾವಲು ಸಿಬ್ಬಂದಿ ಮಂತ್ರಿ ಸೇವಿಸುವ ಆಹಾರ ತನಿಖೆ ಮಾಡಲು ಮುಂದಾಗಿದ್ದು ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ..

ಈ ಘಟನೆ ಸಂಬಂಧ ಮಾತನಾಡಿದ ಪಂಡಿತಾರಾಧ್ಯ ಶ್ರೀಯವರು ಒಬ್ಬರು ಸೇವಿಸುವ ಆಹಾರ ಪರೀಕ್ಷೆ ಮಾಡುವುದಾದರೆ ಇಲ್ಲಿ ಸಾವಿರಾರು ಜನರು ಊಟ ಮಾಡುತ್ತಾರೆ. ನಮಗೆ ಆಶ್ಚರ್ಯ ಆಯಿತು ಇದುವರೆಗೂ ಆಹಾರ ಪರೀಕ್ಷೆ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಸಾವಿರಾರು ಜನರು ಊಟ ಮಾಡುವ ಆಹಾರವನ್ನು ಎಂದೂ ಪರೀಕ್ಷೆ ಮಾಡುವುದಿಲ್ಲ. ಮಂತ್ರಿಗಳು ಒಬ್ಬರು ಸತ್ತರೆ ಪರ್ವಾಗಿಲ್ಲ ಇಷ್ಟು ಜನ ಸತ್ತರೆ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಇನ್ನೂ ತಮ್ಮ ವಿರುದ್ಧ ಕೋಪಿಸಿಕೊಂಡಿರುವ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯನ್ನು ಸಮಾಧಾನ ಪಡಿಸಲು, ಜಿ.ಪರಮೇಶ್ವರ ಪ್ರಯತ್ನಿಸಿದ್ದಾರೆ. ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ. ಸ್ವಾಮೀಜಿ ಹೇಳಿಕೆಯನ್ನು ಧನಾತ್ಮಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಇತ್ತೀಚಿಗೆ ಪರಮೇಶ್ವರ್ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿ ಸುದ್ದಿಯಲ್ಲಿದ್ದಾರೆ…

ಮುಖ್ಯಮಂತ್ರಿಗೆ ಸಿಗೋ ಎಲ್ಲಾ ಸರ್ಕಾರಿ ಗೌರವ ಉಪಮುಖ್ಯಮಂತ್ರಿಗೂ ಸಿಗಬೇಕೆಂದು ಆದೇಶ ಹೊರಡಿಸಿ ಪರಮೇಶ್ವರ್ ಟೀಕೆಗೆ ಗುರಿಯಾಗಿದ್ದರು.. ಅಲ್ಲದೇ ಮಳೆಯಲ್ಲಿ ಜನ ನಿಂತಿದ್ದರೂ ಬೆಂಗಳೂರಿನಲ್ಲಿ ಜಿರೋ ಟ್ರಾಫಿಕ್ ಮಾಡಿಸಿಕೊಂಡು ಪರಂ ಹೋಗಿದ್ದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದರು…

 

LEAVE A REPLY

Please enter your comment!
Please enter your name here