Home Crime ರಾತ್ರಿಯೆಲ್ಲಾ ಸರ್ಕಾರಿ ವೈದ್ಯರ ನಿದ್ರೆ, ನಕಲಿ ವೈದ್ಯರಿಂದ ಚಿಕಿತ್ಸೆ, ಬೇಕಾ ಬಿಟ್ಟಿ ಚಿಕಿತ್ಸೆ ನೀಡಿ ಬೇರೆ...

ರಾತ್ರಿಯೆಲ್ಲಾ ಸರ್ಕಾರಿ ವೈದ್ಯರ ನಿದ್ರೆ, ನಕಲಿ ವೈದ್ಯರಿಂದ ಚಿಕಿತ್ಸೆ, ಬೇಕಾ ಬಿಟ್ಟಿ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸುತ್ತಾನೆ ಫೇಕ್ ಡಾಕ್ಟರ್..!?

3833
0
SHARE

ಬಡ ಮತ್ತು ಮಧ್ಯಮ ವರ್ಗದ ಜನರು ಆರೋಗ್ಯ ಕೆಟ್ಟರೆ ಸರ್ಕಾರಿ ಜಿಲ್ಲಾಸ್ಪತ್ರೆಳಿಗೆ ಹೋಗೋದು ಸರ್ವೇ ಸಾಮಾನ್ಯ, ಯಾಕಂದ್ರೆ ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ನುರಿತ ತಜ್ಞ ವೈದ್ಯರಿರುತ್ತಾರೆ ಅನ್ನೋದು ಅವರ ನಂಬಿಕೆ, ಹೀಗಾಗಿಯೇ ಸರ್ಕಾರಿ ಜಿಲ್ಲಾಸ್ಪತ್ರೆಗಳನ್ನ ದೊಡ್ಡಾಸ್ಪತ್ರೆ ಅಂತಾನೆ ಕರೀತಾರೆ. ಆದ್ರೆ ಕೋಟೆನಾಡಿನ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಹೊತ್ತು ತುರ್ತು ಚಿಕಿತ್ಸೆಗೆ ಹೋಗೋಗೆ ಭಯ ಪಡುತ್ತಿದ್ದಾರೆ.

ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ, ಜನರು ಯಾರನ್ನು ನಂಬುತ್ತಾರೋ ಗೊತ್ತಿಲ್ಲ, ಆದ್ರೆ ತಮ್ಮ ಎಲ್ಲಾ ಖಾಯಿಲೆಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂದು ನಂಬಿ ಅವರ ಬಳಿಗೆ ಹೋಗುತ್ತಾರೆ, ಆದ್ರೆ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಬೇಕಾಬಿಟ್ಟಿ ನಡೆದುಕೊಳ್ಳುತ್ತಾರೆ, ರಾತ್ರಿ ಯಾರು ಡ್ಯೂಟಿ ಮಾಡಬೇಕು ಎಂದು ಶಿಫ್ಟ್ ಇದ್ರೂ ಕೂಡಾ ರಾತ್ರಿ ಹೋಗದೆ ಮಲಗಿಬಿಡ್ತಾರೆ, ಅಪ್ಪಿ ತಪ್ಪಿ ಅಂತಹ ಸಮಯದಲ್ಲಿ ಯಾವುದಾದ್ರು ಎಮೆರ್ಜೆನ್ಸಿ ಕೇಸ್ ಬಂದ್ರೆ ಮುಗೀತು ಸರಿಯಾದ ಟ್ರೀಟ್ ಮೆಂಟು ಇಲ್ಲ ಏನು ಇಲ್ಲ.

ಹೌದು ಕೋಟೆನಾಡು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವೇಳೆ ಡ್ಯೂಟಿ ಮಾಡಬೇಕಾದ ವೈದ್ಯರು, ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಮಾಡಿರೋ ಅನಧಿಕೃತ ವ್ಯಕ್ತಿಯೊಬ್ಬನಿಗೆ ತಮ್ಮ ಜವಬ್ದಾರಿ ಹೊರಿಸಿ, ತಮ್ಮ ಮನೆಗೆ ಹೋಗಿ ಸುಖ ನಿದ್ರೆ ಮಾಡ್ತಾರೆ. ಅವರಿಂದ ಜವಾಬ್ದಾರಿ ಪಡೆದ ಈ ನಕಲಿ ವೈದ್ಯ ದಿನೇಶ್ ಎಂಬಾತ, ವೈದ್ಯರ ಕುರ್ಚಿಯಲ್ಲಿ ಕುಳಿತು ಬಂದ ರೋಗಿಗಳಿಗೆಲ್ಲಾ ಈತನೇ ಚಿಕಿತ್ಸೆ ಕೊಡೋದ್ರ ಜೊತೆಗೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡ್ತಾನೆ ಅನ್ನೋ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಜಿಲ್ಲಾಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿ ಇದ್ದರೂ, ಯಾರೂ ತಲೆ ಕೆಡಿಸಿಕೊಳ್ತಿಲ್ಲ, ಜಿಲ್ಲಾಸ್ಪತ್ರೆಯ ಬಹುತೇಕ ವೈದ್ಯರು ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸದೆ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಮನೆಗೆ ಹೋಗ್ತಾರೆ. ಈ ವೇಳೆ ಇದೇ ನಕಲಿ ವೈದ್ಯ ಎಲ್ಲಾ ವೈದ್ಯರ ರಾತ್ರಿ ಪಾಳಿಯ ಕರ್ತವ್ಯವನ್ನ ತಾನೇ ನಿರ್ವಹಿಸುತ್ತಿದ್ದಾನೆ. ಈ ಕುರಿತು ನಿವಾಸಿ ವೈದ್ಯಾಧಿಕಾರಿ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನ ಕೇಳಿದ್ರೆ ದಿನೇಶ್ ಎಂಬ ವೈದ್ಯರು ನಮ್ಮಲ್ಲಿ ಇಲ್ಲ, ಹಾಗೊಂದು ವೇಳೆ ಸಾಕ್ಷಿ ಇದ್ದರೆ ಕೊಡಿ, ಅವನ ವಿರುದ್ದ ಕ್ರಮ ಕೈಗೊಳ್ತೇವೆ ಎಂದು ಬೇಜವ್ದಾರಿತನದ ಹೇಳಿಕೆ ನೀಡುತ್ತಿದ್ದು.

ಸಿಸಿ ಟಿವಿಯಲ್ಲಿ ನೋಡಿ ಸಾರ್ ಅಂದ್ರೆ, ನಮ್ಮಲ್ಲಿ ಸ್ಟೋರೇಜ್ ಕೆಪಾಸಿಟಿ ಕಡಿಮೆ ಇದೆ, ಹೀಗಾಗಿ ಎರಡು ದಿನಗಳ ಫುಟೇಜ್ ಮಾತ್ರ ಸಿಗುತ್ತೆ ಅಂತ ಪ್ರತಿಕ್ರಿಯೆ ನೀಡಿದ್ದಾರೆ.ಒಟ್ಟಾರೆ ಸರ್ಕಾರದಿಂದ ಲಕ್ಷಗಟ್ಟಲೇ ಸಂಬಳ ಎಣಿಸಿಕೊಳ್ಳುತ್ತಿರುವ ವೈದ್ಯರು, ಖಾಸಗಿ ಕ್ಲಿನಿಕ್‌ಗಳನ್ನು ನಡೆಸುತ್ತಾ ಮತ್ತಷ್ಟು ಹಣ ಸಂಪಾದಿಸೋ ದಂಧೆಗಿಳಿದಿದ್ದು, ವೈದ್ಯನೇ ಅಲ್ಲದ ವ್ಯಕ್ತಿಗೆ ತಮ್ಮ ಜವಬ್ದಾರಿ ಹೊರಿಸಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದ್ರೂ ಸರ್ಕಾರ ಇತ್ತ ಗಮನ ಹರಿಸಿ ತಪ್ಪಿತಸ್ತ ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here