Home District ರಾಮನಗರದಲ್ಲಿ “ಅನಿತಾ”, ಶಿವಮೊಗ್ಗದಲ್ಲಿ “BSY ಪುತ್ರ”, ಬಳ್ಳಾರಿಗೆ “ಶ್ರೀರಾಮುಲು-ರೆಡ್ಡಿ”, ಬಿಟ್ರೆ ಸೋಲಿನ ಭಯ..? ಬಂಗಾರಪ್ಪ ಹೆಸರಿಲ್ಲದಿದ್ರೆ...

ರಾಮನಗರದಲ್ಲಿ “ಅನಿತಾ”, ಶಿವಮೊಗ್ಗದಲ್ಲಿ “BSY ಪುತ್ರ”, ಬಳ್ಳಾರಿಗೆ “ಶ್ರೀರಾಮುಲು-ರೆಡ್ಡಿ”, ಬಿಟ್ರೆ ಸೋಲಿನ ಭಯ..? ಬಂಗಾರಪ್ಪ ಹೆಸರಿಲ್ಲದಿದ್ರೆ ಮಧು ಗತಿ..? “ಬೈ ಎಲೆಕ್ಷನ್ ಗೂ ಫ್ಯಾಮಿಲಿ ಪಾಲಿಟಿಕ್ಸ್ ಕನೆಕ್ಷನ್”

3212
0
SHARE

ಈ ಉಪಚುನಾವಣೆಯಲ್ಲಿ ಕುಟುಂಬ ರಾಜಕಾರಣ ವಿಜೃಂಬಿಸುತ್ತಿದೆ, ಮೂರು ಪಕ್ಷಗಳು ಪಕ್ಷ ಭೇಧವಿಲ್ಲದೆ ಕುಟುಂಬ ರಾಜಕಾರಣಕ್ಕೆ ತಮ್ಮನ್ನ ತಾವು ಒಡ್ಡಿಕೊಂಡು ಬಿಟ್ಟಿದೆ, 3 ಲೋಕಸಭಾ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರೋ ಬೈ ಎಲೆಕ್ಷವನ್ 5 ಕ್ಷೇತ್ರದಲ್ಲೂ ಕುಟುಂಬ ರಾಜಕಾರಣದ್ದೆ ಹೈಲೆಟ್. ಅಷ್ಟಕ್ಕೂ ರಾಮನಗರದಲ್ಲಿ ಹೇಗಿದೆ ಕುಟುಂಬ ರಾಜಕಾರಣ. ಜೆಡಿಎಸ್ ಗೆ ಪ್ಯಾಮಿಲಿ ಪಾಲಿಟಿಕ್ಸ್ ಮಾಡದೇ ಬೇರೆ ದಾರಿ ಇಲ್ವ .ವಿರೋಧ ಪಕ್ಷ ಆಡಿಕೊಳ್ಳೋದಕ್ಕೂ ಜೆಡಿಎಸ್ ಪಕ್ಷ ಮಾಡೋದಕ್ಕೂ ಸರಿಯಾಗಿದೆ, ಎಕೆಂದ್ರೆ ಜೆಡಿಎಸ್ ಅಂದ್ರೆ ಅಪ್ಪ ಮಕ್ಕಳ ಪಕ್ಷ, ಅಪ್ಪಮಕ್ಕಳ ಪಕ್ಷ ಅಂದ್ರೆ ಅದು ಜೆಡಿಎಸ್, ಅಲ್ಲಿ ಬೇರೆ ಯಾರಿಗೂ ಬೆಳೆಯಲು ಬಿಡೋದಿಲ್ಲ…

ಬೆಳೆಯುತ್ತಾರೆ ಅನ್ನೋದ್ರಳಗೆ ಅವರನ್ನ ಹಿಂದಕ್ಕೆ ದೂಡಲಾಗುತ್ತೆ. ಅನ್ನೋದು ಪ್ರತಿಪಕ್ಷಗಳ ಆರೋಪ, ಆ ಆರೋಪಕ್ಕೆ ಸ್ವಲ್ಪವೂ ಚ್ಯುತಿ ಬರದ ರೀತಿಯಲ್ಲಿ ಕುಮಾರಸ್ವಾಮಿ ಮತ್ತು ದೇವೆಗೌಡ್ರು ನಡೆದುಕೊಳ್ಳುತ್ತಿದ್ದಾರೆ, ಅದಕ್ಕೆ ತಾಜ ಉದಾಹರಣೆಯೇ ರಾಮನಗರದ ಬೈ ಎಲೆಕ್ಷನ್ ನಲ್ಲಿ ಅನಿತಾ ಕುಮಾರಸ್ವಾಮಿಯವರನ್ನ ಅಖಾಡಕ್ಕೆ ಇಳಿಸಿರೋದು.ಎಸ್ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ದೆ ಮಾಡುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಇವೆ, ಆ ಕಾರಣಗಳು ಏನಪ್ಪ ಅಂದ್ರೆ ಯಾವುದೇ ಕಾರಣಕ್ಕೂ ಸ್ಪ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಕಡಿಮೆ ಆಗಬಾರದು ಅನ್ನೋದು ಕುಮಾರಸ್ವಾಮಿಯವರ ಅಜೆಂಡಾ, ಅದೇ ಕಾರಣಕ್ಕೆ ಇಷ್ಟು ದಿನ ಸಾಮಾನ್ಯ ಕಾರ್ಯಕರ್ತರನ್ನ ನಿಲ್ಲಿಸೋದಾಗಿ ಹೇಳುತ್ತಿದ್ದ ಕುಮಾರಸ್ವಾಮಿಯವರು ತಮ್ಮ ಪತ್ನಿಯನ್ನೇ ನಿಲ್ಲಿಸಿದ್ದಾರೆ.ಇದು ರಾಮನಗರದ ಸಂಗತಿ ಆದ್ರೆ ಇನ್ನು ಮಂಡ್ಯದಲ್ಲಿಯೂ ಕುಟುಂಬ ರಾಜಕಾರಣ ಏನು ಕಮ್ಮಿ ಇಲ್ಲ…

ಸಧ್ಯ ಮಂಡ್ಯದಲ್ಲಿ ಶಿವರಾಮೇಗೌಡ್ರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ, ಅದು ಈ 5 ತಿಂಗಳ ಅವಧಿಗೆ ಮಾತ್ರ, 5 ತಿಂಗಳು ಮುಗಿದ ಮೇಲೆ ಬೇರೆಯದ್ದೇ ಪ್ಲಾನ್ ಜೆಡಿಎಸ್ ಕುಟುಂಬದಲ್ಲಿ ಇದೆ.ಸೋ ಜೆಡಿಎಸ್ ಅಂದ್ರೆ ಕುಟುಂಬ ರಾಜಕಾರಣ ಇಲ್ಲಿ ಬೇರೆಯವರಿಗೆ ಅವಕಾಶ ಇಲ್ಲ ಅನ್ನೋದು ಸಾಬೀತ್ ಆಗಿದೆ, ಕುಟುಂಬದವರೇ ಕಟ್ಟಿದ ಪಕ್ಷದಲ್ಲಿ ಕುಟುಂಬದವರೇ ರಾಜಕಾರಣ ಮಾಡ್ತಿದ್ದಾರೆ ಅದ್ರಲ್ಲಿ ತಪ್ಪೇನು ಅನ್ನೋ ಪ್ರಶ್ನೆ ಜೆಡಿಎಸ್ ಅಭಿಮಾನಿಗಳಿಂದ ತೂರಿ ಬರುತ್ತೆ ಅದಕ್ಕೆ ಸಧ್ಯಕ್ಕೆ ಉತ್ತರವಿಲ್ಲ, ಒಟ್ಟಾರೆ ಈ ಬೈ ಎಲೆಕ್ಷನ್ ಫ್ಯಾಮಿಲಿ ಪಾಲಿಟಿಕ್ಸ್ ಗೆ ದೊಡ್ಡ ಕನೆಕ್ಷನ್ ನೀಡಿರೋದಂತು ಸುಳ್ಳಲ್ಲ.ಶಿವಮೊಗ್ಗದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ ಏನು ಕಡಿಮೆ ಇಲ್ಲ, ಇಲ್ಲಿ ಅಖಾಡಕ್ಕೆ ಇಳಿದಿರೋ ಇಬ್ಬರು ಸಹ ಪ್ರಮುಖ ಅಭ್ಯರ್ಥಿಗಳು ಪ್ರತಿಷ್ಟಿತ ರಾಜಕೀಯ ಕುಟುಂಬದ ಕುಡಿಗಳೇ ಅನ್ನೋದು ವಿಶೇಷ ಮೊದಲಿಗೆ ಬಿಜೆಪಿಯನ್ನ ನೋಡೋದ್ ಆದ್ರೆ…

ಯಡಿಯೂರಪ್ಪ ಪುತ್ರ ಬಿವೈ ರಾಘವೆಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೇಗಾದ್ರು ಮಾಡಿ ಗೆಲ್ಲಲೇ ಬೇಕು ಅಂತಾ ಅಪ್ಪನ ಹೆಸರು ಹೇಳಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಜೆಡಿಎಸ್ ನಿಂದ ಹುರಿಯಾಳಾಗಿರೋದು ಬಂಗಾರಪ್ಪನ ಪುತ್ರ ಮದು ಬಂಗಾರಪ್ಪ.ಎಸ್ ಜೆಡಿಎಸ್ ಕಾಂಗ್ರೆಸ್ ದೋಸ್ತಿಗಳು ಈ ಬಾರಿ ಪ್ಲಾನ್ ಮಾಡಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನನ್ನ ಅಖಾಡಕ್ಕೆ ಇಳಿಸಿವೆ. ಈ ಬಾರಿ ಗೆದ್ದೇ ಗೆಲ್ತೇವೆ ಅನ್ನೋ ವಿಶ್ವಾಸದಲ್ಲಿ ಇದೆ. ಇಲ್ಲಿ ಮಧುಗೆ ಅಪ್ಪನ ನಾಮ ಬಲ ಬಿಟ್ರೆ ಬೇರೆ ಯಾವ ಅಂಶವೂ ಇಲ್ಲ ಅನ್ನೋದು ಗಮನಿಸಬೇಕಾದ ಅಂಶ.ಇನ್ನು ಮಧು ಬಂಗಾರಪ್ಪಗೆ ಇಲ್ಲಿ ಗೆಲುವು ಅಷ್ಟು ಸುಲಭ ಸಾಧ್ಯವಿಲ್ಲ, ಬಂಗಾರಪ್ಪ ಅನ್ನೋ ನಾಮಬಲವಿದ್ರು ಗೆಲವು ಒಲಿಯುತ್ತೇ ಅನ್ನೋದು ಪಕ್ಕಾ ಇಲ್ಲ, ಏಕೆಂದ್ರೆ ಅವರ ಸಹೋದಾರರ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲೇ ಇದ್ದಾರೆ, ಸೋ ಮಧುಗೆ ಗೆಲುವು ಕಬ್ಬಿಣದ ಕಡಲೆ ಅಂತಾನೇ ಹೇಳಬಹುದು…

ಈ ಮಾತು ಹೇಳಲು ಒಂದು ಕಾರಣವಿದೆ ಆ ಕಾರಣ ಏನು ಗೊತ್ತೇ, ಅದು ಸೊರಬದಲ್ಲಿ ಬಂದ ವಿಧಾನಸಭಾ ಚುನಾವಣಾ ಫಲಿತಾಂಶ.ಈ ಹಿಂದೆ ಕೂಡ ಗೀತ ಶಿವರಾಜ್ ಕುಮಾರ್ ಅಬ್ಯಾರ್ಥಿಯಾಗಿದ್ದಾಗಲು, ಏನೆಲ್ಲಾ ಕಸರತ್ತು ಮಾಡಿದ್ರೂ, ಗೆಲ್ಲಲು ಸಾಧ್ಯವೇ ಆಗಲಿಲ್ಲ, ಚಿತ್ರರಂಗವನ್ನ ಕರೆದುಕೊಂಡು ಹೋಗಿ ಪ್ರಚಾರ ಮಾಡಿದ್ರು ಯಾವುದೇ ಉಪಯೋಗವಾಗಲಿಲ್ಲ, ಸೋ ಅಲ್ಲಿಗೆ ದೋಸ್ತಿಗಳು ಮೈತ್ರಿ ಮಾಡಿಕೊಂಡ್ರು ಗೆಲುವಿನ ಹಾರ ಬೀಳೋದು ಸ್ವಲ್ಪಡೌಟೇ. ಅದೇನೇ ಇರಲಿ ಇಲ್ಲಿ ಸ್ಪರ್ಧೆ ಮಾಡುತ್ತಿರೋ ಮಧು ಆಗಿರಲಿ, ರಾಘವೇಂದ್ರ ಆಗಿರಲಿ ಇಬ್ಬರದ್ದು ಕುಟುಂಬ ರಾಜಕಾರಣದ್ದೇ ಹಿನ್ನಲೆ ಅನ್ನೋದು ಗಮನಿಸಬೇಕಾದ ಅಂಶ.ಬಳ್ಳಾರಿ ಬಿಜೆಪಿಗೆ ಶ್ರೀ ರಾಮಲು , ಜನಾರ್ಧನ್ ರೆಡ್ಡಿ ಬಿಟ್ರೆ ಗತಿ ಇಲ್ಲ ಎನ್ನುವಂತಾಗಿದೆ. ಕಾಂಗ್ರೆಸ್ ಅನ್ನು ಸಮರ್ಥವಾಗಿ ಎದುರಿಸಬೇಕು ಅಂದ್ರೆ ಶ್ರೀರಾಮುಲು ಮತ್ತು ರೆಡ್ಡಿ ಫ್ಯಾಮಿಲಿಯಿಂದ ಮಾತ್ರ ಸಾಧ್ಯ ಅನ್ನೋ ನಿರ್ದಾರಕ್ಕೆ ಬಂದಂತೆ ಇದೆ, ಅದೇ ಕಾರಣಕ್ಕೆ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಶ್ರೀರಾಮುಲು ಸಹೋದರಿ ಶಾಂತ ಅವರನ್ನ ಕಣಕ್ಕೆ ಇಳಿಸಲಾಗಿದೆ…

ಸಧ್ಯ ಬಳ್ಳಾರಿ ಬಿಜೆಪಿಯಲ್ಲಿ ಶ್ರೀರಾಮುಲು ಕುಟುಂಬ ಅಖಾಡಕ್ಕೆ ಇಳಿಸಿದೆ. ಇದು ಬಳ್ಳಾರಿ ಕತೆಯಾದ್ರೆ ಬಾಗಲಕೋಟೆಯ ಜಮಖಂಡಿಯಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದೆ, ಜಮಖಂಡಿ ಕ್ಷೇತ್ರದಲ್ಲಿ ಮಾಜಿಶಾಸಕ ಸಿದ್ದು ನ್ಯಾಮೆಗೌಡರಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಆನಂದ್ ಗೌಡರಿಗೆ ಟಿಕೆಟ್ ನೀಡಲಾಗಿದೆ, ಏನಾದ್ರು ಸರಿಯೇ ಅವರನ್ನ ಗೆಲ್ಲಿಸಬೇಕು ಅಂತಾ ಇಡೀ ಕಾಂಗ್ರೆಸ್ ಘಟಾನುಘಟಿ ನಾಯಕರು ಬಾಗಲಕೋಟೆಯಲ್ಲಿ ಬೀಡು ಬಿಟ್ಟಿದ್ದಾರೆ.ಒಟ್ಟಾರೆ ಈ ಬಾರಿಯ ಉಪ ಚುನಾವಣೆ ಅಕ್ಷರಶಃ ಫ್ಯಾಮಿಲಿ ಪಾಟಿಟಿಕ್ಸ್ ಆಧಾರದ ಮೇಲೆ ನಡೆಯುತ್ತಿದೆ. ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ 3 ಲೋಕಸಭಾ ಕ್ಷೇತ್ರದಲ್ಲೂ ಕುಟುಂಬ ರಾಜಕಾರಣ ವಿಜೃಂಬಿಸುತ್ತಿದೆ. ಮೂರು ಪಕ್ಷಗಳು ಕುಟುಂಬ ರಾಜಕಾರಣದಿಂದ ಹೊರ ಹೋಗಿಲ್ಲ, ಅಪ್ಪ ಮಕ್ಕಳಲ್ಲಿ ಒಬ್ಬರು ಶಾಸಕರಾಗಿದ್ರೆ ಮತ್ತೊಬ್ಬರು ಸಂಸದ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿ ಅಣ್ಣ ತಂಗಿ ಇಬ್ಬರು ವಿಧಾನಸೌಧ ಪ್ರವೇಶಿಸಲು ತಯಾರಿ ನಡೆಯುತ್ತಿದ್ದಾರೆ…

ರಾಮ ನಗರದಲ್ಲಿ ಗಂಡ ಹೆಂಡತಿ ಇಬ್ಬರು ಏಕಕಾಲಕ್ಕೆ ವಿಧಾನಸೌಧಕ್ಕೆ ಕಾಲಿಡಲು ಮುಹೂರ್ತ ನೋಡುತ್ತಿದ್ದಾರೆ, ಅತ್ತ ಜಮಖಂಡಿಯಲ್ಲಿ ಅಪ್ಪನ ಸಾವಿನಿಂದ ತೆರವಾದ ಸ್ಥಾನಕ್ಕೆ ಮಗ ಸ್ಪರ್ಧಿಸುತ್ತಿದ್ದಾರೆ. ಈ ಎಲ್ಲವನ್ನು ನೋಡುತ್ತಿದ್ರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಿಳಿಯದೆ ಕುಟುಂಬ ವ್ಯವಸ್ಥೆ ಬೇರೂರುತ್ತಿದ್ಯಾ ಅನ್ನೋ ಅನುಮಾನವೂ ಮೂಡುತ್ತೆ. ಸಧ್ಯದ ರಾಜಕೀಯ ಪರಿಸ್ಥಿತಿ ಹೀಗೆ ಮುಂದುವರೆದ್ರೆ ನಿಜಕ್ಕೂ ಕುಟುಂಬ ರಾಜಕಾರಣವೇ ದೇಶವನ್ನ ಆಳೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಧ್ಯ ಸ್ಪರ್ಧೆಯಲ್ಲಿರೋ ಯಾವ ಕುಟುಂಬಕ್ಕೆ ಜಯ ಸಿಗುತ್ತೆ, ಅಣ್ಣ-ತಂಗಿ,  ಗಂಡ ಹೆಂಡತಿ, ಅಪ್ಪ ಮಗ ಇವರಲ್ಲಿ ಯಾರಿಗೆ ಜೈಕಾರ ಸಿಗುತ್ತೆ ಅನ್ನೋದಕ್ಕೆ ಸತ್ ಪ್ರಜೆ ಮತದಾನದ ಮೂಲಕ ಉತ್ತರಿಸಲಿದ್ದಾನೆ, ಅಲ್ಲಿವರೆಗೂ ಕಾದು ನೋಡಬೇಕು ಅಷ್ಟೆ…

LEAVE A REPLY

Please enter your comment!
Please enter your name here