Home Elections 2019 ರಾಮನಗರದಲ್ಲಿ ಕೈ ನಾಯಕರ ಸೆಳೆಯಲು BJP ತಂತ್ರ..?! ಅತೃಪ್ತ ನಾಯಕ ಲಿಂಗಪ್ಪ ಪುತ್ರನನ್ನ ಕರೆತರಲು ಸಿದ್ಧತೆ..?!

ರಾಮನಗರದಲ್ಲಿ ಕೈ ನಾಯಕರ ಸೆಳೆಯಲು BJP ತಂತ್ರ..?! ಅತೃಪ್ತ ನಾಯಕ ಲಿಂಗಪ್ಪ ಪುತ್ರನನ್ನ ಕರೆತರಲು ಸಿದ್ಧತೆ..?!

1798
0
SHARE

ಬೈ ಎಲೆಕ್ಷಲ್ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಮೂರು ಲೋಕಸಭೆ ಹಾಗೂ ಎರಡು ಅಸೆಂಬ್ಲಿ ಉಪಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಭರ್ಜರಿ ಸರ್ಕಸ್ ನಡೆಸ್ತಿದೆ. ರಾಮನಗರ ಹಾಗೂ ಜಮಖಂಡಿಯಲ್ಲಿ ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗ್ತಿದೆ.

ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ಕೂಡ ನಡೆದಿದೆ. ಸಭೆಯಲ್ಲಿ ಜಮಖಂಡಿ ಬಿಜೆಪಿ ನಾಯಕರ ಜೊತೆ ಯಡಿಯೂರಪ್ಪ ಸಮಾಲೋಚನೆಯನ್ನೂ ನಡೆಸಿದ್ದಾರೆ.

ಇನ್ನು ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಯವರನ್ನು ಸೋಲಿಸುವುದಕ್ಕೊಸ್ಕರ ಬಿಜೆಪಿ ರಣತಂತ್ರ ರಚಿಸುತ್ತಿದ್ದು ಕಾಂಗ್ರೆಸ್ ನಾಯಕರನ್ನು ಸೆಳೆಯುವುದಕ್ಕೋಸ್ಕರ ತಂತ್ರಗಳನ್ನೂ ರೂಪಿಸಲಾಗ್ತಿದೆ. ಈಗಾಗಲೇ ಹಾಲಿ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಅವರ ಪುತ್ರ ಚಂದ್ರಶೇಖರ್‌‌ಗೆ ಗಾಳ ಹಾಕಲಾಗಿದೆ.

ರಾಮನಗರದಲ್ಲಿ ಕಾಂಗ್ರೆಸ್‌ನಿಂದ ಚಂದ್ರಶೇಖರ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿಂದ ತೀವ್ರ ಅಸಮಾಧಾನಗೊಂಡ ಚಂದ್ರಶೇಖರ್ ಸಿ.ಪಿ.ಯೋಗೀಶ್ವರ್ ಹಾಗೂ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here