Home District ರಾಮನಗರ ಉಪಚುನಾವಣೆಗೆ ಇಡೀ ದಿನ ಅಲ್ಲೇ ಉಳಿದ ರಾಜ್ಯದ ಮುಖ್ಯಮಂತ್ರಿ..?! ಲೋಕಸಭಾ ಸ್ಪರ್ಧೆಯಲ್ಲಿ ಪ್ರಜ್ವಲ್-ನಿಖಿಲ್..?!

ರಾಮನಗರ ಉಪಚುನಾವಣೆಗೆ ಇಡೀ ದಿನ ಅಲ್ಲೇ ಉಳಿದ ರಾಜ್ಯದ ಮುಖ್ಯಮಂತ್ರಿ..?! ಲೋಕಸಭಾ ಸ್ಪರ್ಧೆಯಲ್ಲಿ ಪ್ರಜ್ವಲ್-ನಿಖಿಲ್..?!

671
0
SHARE

ಉಪಚುನಾವಣೆಗೆ ಇನ್ನೂ ಕೂಡ ದಿನಾಂಕ ಘೋಷಣೆಯಾಗಿಲ್ಲ, ಆದ್ರೆ ಆಗಲೇ ರಂಗೇರ್ತಿದೆ ನಾಡದೊರೆಯ ರಾಮನಗರ ಕ್ಷೇತ್ರ. ಸಿಎಂ ಕುಮಾರಸ್ವಾಮಿ ಗೆ ಸ್ವಕ್ಷೇತ್ರ ಉಳಿಸಿಕೊಳ್ಳುವ ತವಕವಾದ್ರೆ, ಇತ್ತ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿಸಿಕೊಳ್ಳೋ ಮೂಲಕ, ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡೋ ಕಾತರ.

ಇವತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ಇಡೀ ದಿನ ರಾಮನಗರ ಉಪಚುನಾವಣೆಗಾಗಿ ಮೀಸಲಿಟ್ಟು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.. ಇಡೀ ರಾಜ್ಯದ ಕಾರಬಾರು ನೋಡುವುದನ್ನ ಬಿಟ್ಟು ರಾಮನಗರ ಉಪಚುನಾವಣೆಯಲ್ಲಿ ಗೆಲ್ಲೋದು ಹೇಗೆ ಅನ್ನೋದ್ರ ಬಗ್ಗೆ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ್ರು…

ಬಿಡದಿ ಬಳಿಯ ಕೇತುಗಾನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಮುಖಂಡರು ಮತ್ತು ಕಾರ್ಯಕರ್ತರುಗಳನ್ನು ಆಹ್ವಾನಿಸಿ ಹೆಚ್ಡಿಕೆ ಚರ್ಚೆ ನಡೆಸಿದ್ರು.ಕುಮಾರಸ್ವಾಮಿರವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ‌ ಆಯೋಗ ಉಪಚುನಾವಣೆ ದಿನಾಂಕ ಘೋಷಣೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿತ್ತು.

ಬಹುತೇಕ ಅನಿತಾ ಕುಮಾರಸ್ವಾಮಿಯವರೇ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಅದಕ್ಕಾಗಿ ಈಗಿನಿಂದಲೇ ಗೆಲುವಿಗೆ‌ ಪೂರ್ವ ತಯಾರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.ಇನ್ನೂ ಒಂದು ವೇಳೆ ಸಭೆಯಲ್ಲಿ ಯಾರಾದ್ರೂ ವಿರೋಧ ವ್ಯಕ್ತ ಪಡಿಸಿದ್ರೆ ಅದು ಮಾದ್ಯಮಗಳಲ್ಲಿ ಸುದ್ದಿಯಾಗಬಾರದು, ಎಂಬ ಕಾರಣಕ್ಕೆ ಮಾದ್ಯಮಗಳನ್ನು ಸಭೆಯಿಂದ ದೂರ ಇಡಲಾಗಿತ್ತು.

ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇಲ್ಲ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಮನೆಯ ವಿಚಾರ ಬೀದಿಗೆ ತಂದು ಪ್ರಚಾರ ಮಾಡಲಾಗುವುದಿಲ್ಲ. ಹಾಗಾಗಿ ಮಾಧ್ಯಮದವರನ್ನು ಸಭೆಗೆ ಕರೆದಿಲ್ಲವೆಂದು ಸಮಜಾಯಿಷಿ ನೀಡಿದರು.ಮತ್ತೊಂದೆಡೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ನಿರ್ಧಾರವೇ ಅಂತಿಮ ಎಂದಿದ್ದಾರೆ.ಅವಕಾಶ ಸಿಕ್ಕರೆ ಚುನಾವಣೆಗೆ ಸ್ಪರ್ಧಿಸಿ ಜನರ ಸೇವೆ ಮಾಡುತ್ತೇನೆ.

ನಾನು ಪಕ್ಷದ ಶಿಸ್ತಿನ ಸಿಪಾಯಿ ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ಹಾಸನದಲ್ಲಿ‌ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಇದೇ ವೇಳೆ, ಹೆಚ್ಡಿಕೆ ಪುತ್ರ ನಿಖಿಲ್ ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.ಒಟ್ಟಾರೆ ದೇವೇಗೌಡ್ರ ಕುಟುಂಬ ರಾಜಕಾರಣ ವಿಸ್ತರಣೆಯಾಗಿದೆ.ಈಗಾಗಲೇ ದೊಡ್ಡಗೌಡ್ರ ಮಕ್ಕಳು, ಸೊಸೆಯಂದಿರು ರಾಜಕಾರಣದಲ್ಲಿದ್ದು, ಮೊಮ್ಮಕ್ಕಳು ಅಖಾಡಕ್ಕಿಳಿಯುವ ಕಾಲ ಬಂದಿದೆ..

 

LEAVE A REPLY

Please enter your comment!
Please enter your name here