Home District ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗ್ತಿದೆ H.D.ದೇವೇಗೌಡರ ಕಂಚಿನ ಪ್ರತಿಮೆ..! 6.9 ಅಡಿ ಎತ್ತರದ ಪುತ್ಥಳಿಗೆ 475 ಕೆಜಿ...

ರಾಮನಗರ ಜಿಲ್ಲೆಯಲ್ಲಿ ನಿರ್ಮಾಣವಾಗ್ತಿದೆ H.D.ದೇವೇಗೌಡರ ಕಂಚಿನ ಪ್ರತಿಮೆ..! 6.9 ಅಡಿ ಎತ್ತರದ ಪುತ್ಥಳಿಗೆ 475 ಕೆಜಿ ಲೋಹ ಬಳಕೆ..! ನವೆಂಬರ್ 24ರಂದು ದೇವೇಗೌಡರಿಂದ ಪುತ್ಥಳಿ ಲೋಕಾರ್ಪಣೆ..!

2286
0
SHARE

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮುಖ್ಯಮಂತ್ರಿ ಅಲ್ಲದೇ ಪ್ರಧಾನಮಂತ್ರಿ ಆಗಿದ್ದು ರಾಮನಗರ ಜಿಲ್ಲೆಯಿಂದ. ರಾಜಕೀಯವಾಗಿ ದೇವೇಗೌಡರಿಗೆ ಪುನರ್ಜನ್ಮ ನೀಡಿದ್ದೂ ಕೂಡಾ ಇದೇ ರಾಮನಗರ. ಹೀಗಾಗಿ ಎಚ್.ಡಿ ದೇವೇಗೌಡರಿಗೆ ಹಾಗೂ ರಾಮನಗರ ಜಿಲ್ಲೆಗೆ ಬಿಡಿಸಲಾಗದ ರಾಜಕೀಯ ನಂಟಿದೆ. ತಮ್ಮ ಕೈ ಹಿಡಿದ ಜಿಲ್ಲೆ ಬೊಂಬೆನಗರಿಯಲ್ಲಿ ಇಗ್ಗಲೂರು ಬ್ಯಾರೇಜ್ ಕಟ್ಟಿಸಿದ್ರು. ಇದೇ ಹಿನ್ನೆಲೆಯಲ್ಲಿ ಎಚ್‌ಡಿಡಿಯವರ ಅವರ ಪ್ರತಿಮೆ ನಿರ್ಮಾಣಕ್ಕೆ ಅವರ ಅಭಿಮಾನಿಗಳು ಮುಂದಾಗಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾಮಂದಿಪುರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪ್ರತಿಮೆ ನಿರ್ಮಾಣಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಇಗ್ಗಲೂರು ಬ್ಯಾರೇಜ್ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಹೆಚ್.‌ಡಿ. ದೇವೇಗೌಡರ ಪ್ರತಿಮೆಯನ್ನ ನಿರ್ಮಾಣ ಮಾಡಲಾಗ್ತಿದೆ. ಚನ್ನಪಟ್ಟಣದ ಜೆಡಿಎಸ್ ಮುಖಂಡರು ಹಾಗೂ ದೇವೇಗೌಡರ ಅಭಿಮಾನಿಗಳು ದೇವೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಕೈಜೋಡಿಸಿದ್ದು ಪ್ರತಿಮೆ ಈಗಾಗಲೇ ನಿರ್ಮಾಣವಾಗಿದೆ.

ಬಿಡದಿಯ ಲೋಹ ಶಿಲ್ಪಿ ಸುನೀಲ್ ಹಾಗೂ ಅನಿಲ್ ತಂಡ ದೇವೇಗೌಡರ ಪ್ರತಿಮೆಯನ್ನು ತಯಾರು ಮಾಡಿದ್ದಾರೆ. ಇನ್ನು ತಯಾರಾಗಿರುವ ದೇವೇಗೌಡರ ಪ್ರತಿಮೆಯನ್ನ ಇಂದು ಬಿಡದಿಯಿಂದ ಮೆರವಣಿಗೆ ಮೂಲಕ ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗಲಾಯಿತು.ಅಂದಹಾಗೇ 1983 ರಲ್ಲಿ ನೀರಾವರಿ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ ದೇವೇಗೌಡರವರು, ಇಗ್ಗಲೂರು ಏತ ನೀರಾವರಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಆ ಮೂಲಕ ನಿರ್ಮಾಣವಾದ ಇಗ್ಗಲೂರು ಡ್ಯಾಂನಿಂದ ಚನ್ನಪಟ್ಟಣದಲ್ಲಿ ನೀರಾವರಿಗೆ ಅನುಕೂಲ ವಾಗುವಂತಾಗಿದೆ.

ಅಲ್ಲದೇ ಇತ್ತೀಚಿಗೆ ರಾಜ್ಯದಾದ್ಯಂತ ಸುದ್ದಿಯಾದ ಏತ ನೀರಾವರಿ ಮೂಲಕ ಕೆರೆಗಳ ತುಂಬಿಸುವ ಕೆಲಸಕ್ಕೆ ಈ ಡ್ಯಾಂ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ 6.9 ಅಡಿ ಎತ್ತರದ 480 ಕೆಜಿ ತೂಕದ ಕಂಚಿನ ಪಂಚಲೋಹದ ಪ್ರತಿಮೆಯನ್ನ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಚನ್ನಪಟ್ಟಣ ಹಾಗೂ ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿನ ಸಾವಂದಿಪುರ ಅವಳಿ ಗ್ರಾಮಗಳ ಹೆಬ್ಬಾಗಿಲಿನಲ್ಲಿ ಈ ಪ್ರತಿಮೆಯನ್ನು ಅನಾವರಣ ಮಾಡಲಾಗ್ತಿದೆ.

ಅದು ಕೂಡಾ ಇಗ್ಗಲೂರು ಡ್ಯಾಂಗೆ ಮುಖ ಮಾಡಿ ಪ್ರತಿಮೆಯನ್ನ ನಿಲ್ಲಿಸಲು ಮುಖಂಡರು ತೀರ್ಮಾನಿಸಿದ್ದಾರೆ.ಹೆಚ್‌.ಡಿ. ದೇವೇಗೌಡ್ರು ಚನ್ನಪಟ್ಟಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಪಂಚ ಲೋಹದ ಪ್ರತಿಮೆಯನ್ನ ನಿರ್ಮಾಣ ಮಾಡ್ತಿರೋದು ವಿಶೇಷವಾಗಿದೆ. ಇನ್ನೂ ಇದೇ ತಿಂಗಳ 24 ರಂದು ಬೃಹತ್ ಕಾರ್ಯಕ್ರಮದ ಮೂಲಕ ಎಚ್‌ಡಿಡಿ ಹಾಗೂ ಸಿಎಂ ಕುಮಾರಸ್ವಾಮಿಯವರು ಖುದ್ದು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

LEAVE A REPLY

Please enter your comment!
Please enter your name here