Home District ರಾಮನಗರ ಬೈ ಎಲೆಕ್ಷನ್ ಅಖಾಡಕ್ಕೆ ಅನಿತಾ ಕುಮಾರಸ್ವಾಮಿ! ಮಂಡ್ಯ ಜಿಲ್ಲಾ ಉಸ್ತುವಾರಿ ಡಿ.ಸಿ.ತಮ್ಮಣ್ಣಗೆ ಫಿಕ್ಸ್

ರಾಮನಗರ ಬೈ ಎಲೆಕ್ಷನ್ ಅಖಾಡಕ್ಕೆ ಅನಿತಾ ಕುಮಾರಸ್ವಾಮಿ! ಮಂಡ್ಯ ಜಿಲ್ಲಾ ಉಸ್ತುವಾರಿ ಡಿ.ಸಿ.ತಮ್ಮಣ್ಣಗೆ ಫಿಕ್ಸ್

1717
0
SHARE

ಖಾತೆ ಹಂಚಿಕೆಯಾದ ಬಳಿಕ ಜೆಡಿಎಸ್ ನ ಇಬ್ಬರು ಸಚಿವರಲ್ಲಿ ಉಂಟಾಗಿದ್ದ ಅಸಮಾಧಾನ ಶಮನವಾಗಿದೆ.. ಉನ್ನತ ಶಿಕ್ಷಣ ಖಾತೆ ಕೊಟ್ಟಿದ್ದರಿಂದ ಅಸಮಾಧಾನಗೊಂಡಿದ್ದ ಜಿ.ಟಿ.ದೇವೇಗೌಡರ ಖಾತೆ ಬದಲಾವಣೆಗೆ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ.. ನಿನ್ನೆ ರಾತ್ರಿ ಮೈಸೂರಿನಲ್ಲಿ ಜಿಟಿಡಿ ಜೊತೆ ಮಾತುಕತೆ ನಡೆಸಿದ್ದ ಹೆಚ್ಡಿಕೆ ಖಾತೆ ಬದಲಾವಣೆಗೆ ಒಪ್ಪಿದ್ದರು.

ಇಂದು ಬೆಳಿಗ್ಗೆ ದೇವೇಗೌಡ್ರ ಭೇಟಿ ಮಾಡಿದ ಹೆಚ್ಡಿಕೆ ಮತ್ತು ಜಿಟಿಡಿ ಖಾತೆ ಬದಲಾವಣೆ ವಿಚಾರವನ್ನ ಗಮನಕ್ಕೆ ತಂದರು.. ಆಗ ದೇವೇಗೌಡ್ರು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜಿಟಿಡಿ ರೈತರಿಗೆ ಹತ್ತಿರವಿರುವ ಖಾತೆ ಸಿಗುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಅಬಕಾರಿ ಖಾತೆ ಆಫರ್ ಕೊಟ್ಟರು ಜಿಟಿಡಿ ಒಪ್ಪದೇ ಬೇರೆ ಖಾತೆಯ ನೀರಿಕ್ಷೆಯಲ್ಲಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ದೇವೇಗೌಡ್ರ ಬೀಗರಾದ ಡಿಸಿ ತಮ್ಮಣ್ಣ ಮತ್ತು ಮೇಲುಕೋಟೆ ಶಾಸಕರಾದ ಪುಟ್ಟರಾಜು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದ್ರೆ ಜಿಲ್ಲೆಯಲ್ಲಿ ಜನ ಪುಟ್ಟರಾಜುಗಿಂತ ಹಿರಿಯರಾದ ತಮ್ಮಣ್ಣ ಉಸ್ತುವಾರಿ ಸಚಿವರಾದ್ರೆ ಜಿಲ್ಲೆಗೆ ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ… ಕಾರಣ ಅಧಿಕಾರಿಯಾಗಿ ಅನುಭವದ ಜೊತೆಗೆ ಮೂರು ಬಾರಿ ತಮ್ಮಣ್ಣ ಶಾಸಕರಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ನೀಲನಕ್ಷೆ ರೆಡಿ ಮಾಡಿಕೊಂಡಿದ್ದಾರೆ.

ಪುಟ್ಟರಾಜು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮತವಾಗಿದ್ದು, ವಿಧಾನಸಭಾ ಚುನಾವಣೆಯಲ್ಲೂ ಅವರಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗಿಲ್ಲ… ಆದ್ರೆ ತಮ್ಮಣ್ಣ ಪ್ರಭಾವ ಕೇವಲ ಮದ್ದೂರಿಗೆ ಸೀಮಿತವಾಗದೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಅವರು ಜೆಡಿಎಸ್ ಪರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಳವಳ್ಳಿಯಲ್ಲಿ ಅನ್ನದಾನಿ ಗೆಲುವಿಗೆ ಮತ್ತು ನಾಗಮಂಗಲದಲ್ಲಿ ಸುರೇಶ್ ಗೌಡ್ ಅತಿ ಹೆಚ್ಚು ಅಂತರದಲ್ಲಿ ಚೆಲುವರಾಯಸ್ವಾಮಿ ವಿರುದ್ಧ ಗೆಲ್ಲಲು ತಮ್ಮಣ್ಣ ಕಾರಣಕರ್ತರಾಗಿದ್ದಾರೆ… ಹೀಗಾಗಿ ತಮ್ಮಣ್ಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ರೆ ಮಂಡ್ಯ ಅಭಿವೃದ್ಧಿ ಮತ್ತು ಪಕ್ಷಕ್ಕೆ ಒಳ್ಳೆಯಾದಾಗಲಿದೆ ಎಂಬ ಅಭಿಪ್ರಾಯವನ್ನ ಜಿಲ್ಲೆಯ ಜನ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅನಿತಾಕುಮಾರಸ್ವಾಮಿಯವರಿಗೆ ಟಿಕೆಟ್ ಕೊಡುವುದು ಬಹುತೇಕ ಖಚಿತವಾಗಿದೆ.. ಹೆಚ್ಡಿಕೆ ರಾಜೀನಾಮೆಯಿಂದ ತೆರವಾಗಿರೋ ರಾಮನಗರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ.. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿಯೂ ಈಗಾಗಲೇ ಚರ್ಚಿಸಲಾಗಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕಿ, ಹೆಚ್ಡಿಕೆ ಪತ್ನಿ ಅನಿತಾಕುಮಾರಸ್ವಾಮಿ, ರಾಮನಗರ ಕ್ಷೇತ್ರಕ್ಕೆ ತಮ್ಮ ಹೆಸರೂ ಇದೆ, ಕಾರ್ಯಕರ್ತರೂ ಕೂಡ ನನ್ನ ಹೆಸರನ್ನು ಹೇಳುತ್ತಿದ್ದಾರೆ ಎಂದು ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ತೋರಿದ್ದಾರೆ.ಇನ್ನು ನಿಗಮ ಮಂಡಳಿ ಸ್ಥಾನಕ್ಕಾಗಿ ಜೆಡಿಎಸ್ ನ ಹಲವು ಮುಖಂಡರು ಉತ್ಸಾಹ ತೋರುತ್ತಿದ್ದಾರೆ.. ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದು, ಸದ್ಯದಲ್ಲಿಯೇ ಪಟ್ಟಿ ಸಿದ್ಧವಾಗಲಿದೆ…

LEAVE A REPLY

Please enter your comment!
Please enter your name here