Home Cinema ರಾಮ..ರಾವಣ..ಶಬರಿ.. ರಾಬರ್ಟ್ ಹಬ್ಬ ಶುರು..! ಹೇಗೆ ಕಾಣ್ತಾನೆ ರಾಬರ್ಟ್..? ದರ್ಶನ್ ಏನಂದರು..? ಮಂಡ್ಯ ಫಲಿತಾಂಶ ಏನಾಗುತ್ತೆ...

ರಾಮ..ರಾವಣ..ಶಬರಿ.. ರಾಬರ್ಟ್ ಹಬ್ಬ ಶುರು..! ಹೇಗೆ ಕಾಣ್ತಾನೆ ರಾಬರ್ಟ್..? ದರ್ಶನ್ ಏನಂದರು..? ಮಂಡ್ಯ ಫಲಿತಾಂಶ ಏನಾಗುತ್ತೆ ದರ್ಶನ್ ಕಂಡಂತೆ..?

2207
0
SHARE

ದರ್ಶನ್.. ಸ್ಯಾಂಡಲ್‌ವುಡ್‌ನ ಮಾಸ್ ಮಹಾರಾಜ.. ಭರ್ತಿ ಹದಿನೈದು ದಿನಗಳ ಕಾಲ ಸುಮಲತಾ ಅಂಬರೀಷ್ ಪರ ಅಬ್ಬರದ ಪ್ರಚಾರ ಮಾಡಿ. ಮಂಡ್ಯದ ರಣಕಣದ ಲೋಕಸಭಾ ಚುನಾವಣಾ ಸಮರ ಮುಗಿಸಿರುವ ದಚ್ಚು, ಚುನಾವಣಾ ಪೂರ್ಣಗೊಂಡ ನಂತರ ರಿಲ್ಯಾಕ್ಸ್ ಮೂಡಿಗಾಗಿ ಕಾಡಿನಲ್ಲಿ ಸಫಾರಿ ಮಾಡಿ ಬಂದಿದ್ದಾರೆ.

ಇದೀಗ ಮತ್ತದೇ ಜೋಷ್‌ನಲ್ಲೇ ಚಿತ್ರಗಳತ್ತ ಚಾಲೆಂಜಿಂಗ್ ಸ್ಟಾರ್ ಮುಖ ಮಾಡಿದ್ದು. ಇಂದಿನಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿನೇ ಇಂದು ದರ್ಶನ್ ಅಭಿನಯದ ೫೩ನೇ ಮೋಸ್ಟ್ ಎಕ್ಸ್‌ಫೆಕ್ಟೆಡ್ ರಾರ್ಬಟ್ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದ್ದು.. ರಾಮ ..ರಾವಣ. ರಾಬರ್ಟ್ ಸಂಭ್ರಮ ಡಿ- ಫ್ಯಾನ್ಸ್‌ಗಳಲ್ಲಿ ಹಬ್ಬದ ಸಂಭ್ರಮವನ್ನು ಉಂಟುಮಾಡಿದೆ. ಇಂದು ಚಿತ್ರದ ಮುಹೂರ್ತ ನಗರದ ಬನಶಂಕರಿ ದೇವಸ್ಥಾನದಲ್ಲಿ ನೆರವೇರಿದ್ದು. ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಚಿತ್ರತಂಡ ಅದ್ಧೂರಿಯಾಗಿ ಮಾಡಿಮುಗಿಸಿದೆ. ಈ ವೇಳೆ ದರ್ಶನ್ ಮಾಧ್ಯಮಗೊಳೊಂದಿಗೆ ಮಾತನಾಡಿದ್ದು. ಮಂಡ್ಯ ಫಲಿತಾಂಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದ್ಲಿಗೆ ಇವತ್ತಿನಿಂದ ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿ ಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇವತ್ತಿನಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳೂತ್ತಿದ್ದೇನೆ. ಚಿತ್ರದ ಫೋಟೋ ಶೂಟ್ ಕೂಡ ಇಂದೇ ನಡೆಯಲಿದ್ದು, ಅನ್ನದಾತರು ಅನ್ನ ಕೊಡ್ತಿದ್ದಾರೆ. ಹೊಟ್ಟೆ ಪಾಡಿಗೆ ಏನಾದರೂ ಮಾಡಬೇಕಲ್ಲ ಎಂದಿದ್ದಾರೆ.ಇತ್ತೀಚೆಗೆ ದರ್ಶನ್ ಗಡ್ಡಬಿಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ರಾಬರ್ಟ್ ಚಿತ್ರದಲ್ಲಿ ಕೂಡ ದಚ್ಚು ಗಡ್ಡಾಧಾರಿಯಾಗಿ ಕಾಣಸಿಗ್ತಾರೆ ಅನ್ನುವ ಟಾಕ್ ಕೂಡ ಚಿತ್ರರಂಗದಲ್ಲಿ ಜೋರಾಗಿ ಕೇಳಿಬಂದಿತ್ತು. ಆದ್ರೆ ಅದಕ್ಕೆಲ್ಲಾ ತೆರೆ ಎಳೆದಿರುವ ದರ್ಶನ್. ಚೌಕ ಸಿನಿಮಾದಲ್ಲಿ ರಾಬರ್ಟ್ ಆಗಿ ನೋಡಿದ್ದೀರಾ.. ಅದು ಬಿಟ್ಟು ಬೇರೆ ರೀತಿಯಲ್ಲೇ ಇರುತ್ತೆ. ಆದ್ರೆ ಬೀಯರ್ಡ್ ಬಿಟ್ಟಿದ್ದಿನಿ ಅಸಲಿ ಲುಕ್ಕೇ ಬೇರೆ ಇರುತ್ತೆ. ಗಡ್ಡ ಬಿಟ್ರೆ ನಮ್ಮನ್ಯಾರ್ ನೋಡ್ತಾರೆ ಎಂದಿರುವ ದಚ್ಚು. ಇವತ್ತಿನಿಂದ ನಿರ್ದೇಶಕರು ರೈಸ್ ಬಿಡೋಕೆ ಹೇಳಿದ್ದಾರೆ ಅಂದರು.

ಇನ್ನು ಚಿತ್ರಕ್ಕೆ ಐಶ್ವರ್ಯಾ ರೈ ನಾಯಕಿಯಾಗಿ ಬರ್ತಾರೆನ್ನುವ ಮಾತುಗಳೇಲ್ಲಾ ಸತ್ಯಕ್ಕೆ ದೂರವಾದುದ್ದು. ಇನ್ನು ರಾಮ ಆಗಿರ್ತಾರಾ.. ರಾವಣ ಆಗಿರ್ತಾನಾ. ಶಬರಿ ಆಗಿರ್ತಾನಾ ಅನ್ನೊದು ಇನ್ನೊಂದು ವರ್ಷದಲ್ಲಿ ಬಂದಿಬಿಡ್ತೀವಿ ಅವತ್ತು ಗೊತ್ತಾಗುತ್ತೆ ಎಂದಿದ್ದಾರೆ. ಈ ಮೂಲಕ ರಾಬರ್ಟ್ ಚಿತ್ರದಲ್ಲಿ ತಮ್ಮ ಲುಕ್ ತುಂಬಾ ವಿಶೇಷವಾಗಿರಲಿದೆ ಎನ್ನುವ ಹಿಂಟ್ ನೀಡಿದ್ದಾರೆ. ತರುಣ್ ಸುಧೀರ್ ನಿರ್ದೇಶಕ. ಚೌಕಾ ಚಿತ್ರದಲ್ಲಿ ದಚ್ಚು ಗೆಸ್ಟ್ ರೋಲ್‌ನಲ್ಲಿ ನಟಿಸಿದ್ರು. ಸಿಕ್ಕಾಪಟ್ಟೆ ಯಶಸ್ಸು ಕೂಡ ಚಿತ್ರಕ್ಕೆ ಸಿಕ್ಕಿತ್ತು. ಅಲ್ಲದೆ ತುರುಣ್ ಮತ್ತು ದರ್ಶನ್ ಕಾಂಬಿನೇಷನ್ ಸಖತ್ತಾಗೆ ವರ್ಕೌಟ್ ಆಗಿತ್ತು. ರಾರ್ಬಟ್ ಪಾತ್ರದ ಮೂಲಕ ದಚ್ಚು ಎಲ್ಲರು ಉಬ್ಬೇರಿಸಂತೆ ನಟಿಸಿದ್ರು. ಅದೇ ಟೈಟಲ್ ಇಟ್ಟುಕೊಂಡು ಚಿತ್ರ ನಿರ್ದೇಶನ ಮಾಡ್ತಿರುವ ತರುಣ್. ರಾರ್ಬಟ್ ಚಿತ್ರಕ್ಕಾಗಿ ಒಂದು ವರ್ಷ ಶ್ರಮ ಹಾಕಿದ್ದು. ಚಿತ್ರದಲ್ಲಿ ಇಂದೆಂದು ನೋಡಿರದ ದರ್ಶನ್‌ರನ್ನು ತೆರೆಮೇಲೆ ತರುವ ಪ್ಲಾನ್ ಮಾಡಿಕೊಂಡಿದ್ದು.

ಸದ್ಯದಲ್ಲೇ ಮತ್ತೊಂದು ಪೋಸ್ಟರ್ ರಿಲೀಸ್ ಮಾಡುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಚಿತ್ರ ಮುಯೂರ್ತ ಸಮಾರಂಭವಾದ ಖುಷಿಯಲ್ಲಿ ಚಿತ್ರದ ಬಗ್ಗೆ ತರುಣ್ ಮಾತನಾಡೋದು ಹೀಗೆ.ಇನ್ನು ಹೆಬ್ಬುಲಿ ಖ್ಯಾತಿಯ ಡಿ.ಉಮಾಪತಿ ಅದ್ಧೂರಿ ನಿರ್ಮಾಣ ಚಿತ್ರಕ್ಕಿದೆ. ೨೦೧೬ರಲ್ಲೇ ದರ್ಶನ್ ಡೇಟ್ ಪಡೆದು ಉತ್ತಮ ಚಿತ್ರ ಮಾಡಲು ಕಾತುರರಾಗಿರುವ ಡಿ.ಉಮಾಪತಿ ಸದ್ಯ ಸಿನಿಮಾ ಸೆಟ್ಟೇರಿರುವ ಖುಷಿಯಲ್ಲಿದ್ದಾರೆ. ತಮ್ಮ ಬಹುದಿನಗಳ ಆಸೆ ಈಡೇರಿರುವ ಸಂತಸದಲ್ಲಿ ನಿರ್ಮಾಪಕರು ಚಿತ್ರದ ಬಗ್ಗೆ ಮತ್ತು ದರ್ಶನ್ ಅವರ ಇಷ್ಟ ಮತ್ತು ಕಷ್ಟಗಳ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಈಗಾಲ್ಲೇ ಸುದೀಪ್ ಜೊತೆಗೆ ಹೆಬ್ಬುಲಿ ಸಿನಿಮಾ ಮಾಡಿ. ನಿರ್ಮಾಣದಲ್ಲಿ ಸೈ ಎನ್ನಿಸಿಕೊಂಡಿರುವ ನಿರ್ಮಾಪಕ ಉಮಾಪತಿ. ಸುದೀಪ್‌ಗೂ ಮೊದಲೇ ದರ್ಶನ್ ಚಿತ್ರಕ್ಕೆ ಬಂಡವಾಳ ಹೂಡುವ ಪ್ಲಾನ್ ಮಾಡಿಕೊಂಡಿದ್ರಂತೆ.

ಈ ಒಂದು ವಿಷಯವನ್ನು ಉಮಾಪತಿ ಖುದ್ದು ಸುದೀಪ್‌ಗೂ ತಿಳಿಸಿದ್ದು. ದರ್ಶನ್‌ಗೆ ಸಿನಿಮಾ ಮಾಡ್ತಿದ್ದೀನಿ ಅಂತ ಗೊತ್ತಾಗಿದ್ದಕ್ಕೆ ಸುದೀಪ್ ಸಂತಸಗೊಂಡಿದ್ರು ಅಂತಾ ಹೇಳುವುದನ್ನು ಸುಸಂದರ್ಭದಲ್ಲಿ ಮರೆಯಲಿಲ್ಲ.. ಇನ್ನು ಈ ‘ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋಕು ಗೊತ್ತು ಎನ್ನುವ ಟ್ಯಾಗ್‌ಲೈನ್ ಇರುವ ಪೋಸ್ಟರ್‌ಗಳು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಅಲ್ಲಿ ರಾವಣ ಮತ್ತು ರಾಮನ ನಡುವೆ ರಾರ್ಬಟ್ ಮೂವರ ನಡುವಿನ ಸಂಬಂಧವಿರುವ ಚಿತ್ರದಲ್ಲಿ ಏನಿರಬಹುದೆಂದು ಪ್ರಶ್ನೆಗೆ ಅಭಿಮಾನಿಗಳು ಉತ್ತರ ಹುಡುಕುವಂತಾಗಿದೆ. ಸದ್ಯ ರಾಬರ್ಟ್ ರಾಣಿಯ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದ್ದು. ನಾಯಕಿ ಇಲ್ಲದೆ ಚಿತ್ರ ಮುಹೂರ್ತ ನಡೆದಿದ್ದು. ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಅನುಷ್ಕಾ ಶೆಟ್ಟಿ, ಕಾಜಲ್, ಪ್ರಣಿತಾ, ಐಶ್ವರ್ಯ ಹೆಸರುಗಳು ಕೇಳಿಬರ‍್ತಿವೆ. ಹಾಗಾಗಿ ಸೌತ್‌ನ ಯಾವ ಬೆಡಗಿ ಚಿತ್ರಕ್ಕೆ ಫೈನಲ್ ಆಗ್ತಾರೆ ಎನ್ನುವ ಕುತೂಹಲ ಸಹಜವಾಗಿ ಹೆಜ್ಜಾಗುವಂತೆ ಮಾಡ್ತಿದೆ.

ಸೆಕೆಂಡ್ ಶೆಡ್ಯೂಲ್ ವೇಳೆಗೆ ಚಿತ್ರತಂಡ ನಾಯಕಿಯನ್ನು ಫೈನಲ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ೫೦ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಯಲಿದ್ದು. ಮೊದಲ ಹಂತದ ಚಿತ್ರಿಕರಣ ಬೆಂಗಳೂರು ಮತ್ತು ಚನ್ನೈನಲ್ಲಿ ನಡೆಯಲಿದೆ. ಅದೇನೇ ಇದ್ರು.. ರಾಜಕೀಯದ ಬಿಸಿಯಿಂದ ಹೊರಬಂದು ಕೂಲಾಗಿ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದಚ್ಚು ರಾಬರ್ಟ್ ಆಗಿ ಅಖಾಡಕ್ಕಿಳಿದಿದ್ದು. ಅಸಲಿಗೆ ಯಾವ ಲುಕ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಕಮಾಲ್ ಮಾಡ್ತಾರೆ ಎಂದು ಕಾದು ನೋಡಬೇಕಿದೆ.

 

LEAVE A REPLY

Please enter your comment!
Please enter your name here