Home District ರಾಹುಲ್ ಗಾಂಧಿಯವರನ್ನ ಪಾಪ ಪಾಂಡು ಅಂತ ಕುಮಾರಸ್ವಾಮಿ ವ್ಯಂಗ್ಯ..! ಇನ್ನು ಮುಂದೆ ಸಿದ್ದರಾಮಯ್ಯ ಜೆಡಿಎಸ್‌ಅನ್ನು ಅಪ್ಪ...

ರಾಹುಲ್ ಗಾಂಧಿಯವರನ್ನ ಪಾಪ ಪಾಂಡು ಅಂತ ಕುಮಾರಸ್ವಾಮಿ ವ್ಯಂಗ್ಯ..! ಇನ್ನು ಮುಂದೆ ಸಿದ್ದರಾಮಯ್ಯ ಜೆಡಿಎಸ್‌ಅನ್ನು ಅಪ್ಪ ಮಕ್ಕಳ ಪಕ್ಷ ಅಂತ ಹೇಳುವಂತಿಲ್ಲ-HDK

1153
0
SHARE

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಈಬಾರಿ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಜಿ.ಡಿ ದೇವೇಗೌಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗಿನ ವಿರಾಜಪೇಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಿರಂತರ ಪ್ರವಾಸದಿಂದ ತಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದರು. ಅಲ್ಲದೇ ನಾಳೆ ಬೆಂಗಳೂರಿನಲ್ಲಿ ಜೆಡಿಎಸ್‌ನ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ರು.

ಇನ್ನು ಅಸ್ಸಾವುದ್ದೀನ್ ಓವೈಸಿ ಬೆಂಬಲದ ಬಗ್ಗೆ ಜೆಡಿಎಸ್ ಕೋಮುವಾದಿಗಳ ಬೆಂಬಲ ಪಡೆದಿದೆ ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಓವೈಸಿ ತಮ್ಮ ಪಕ್ಷದ ಬೆಂಬಲವನ್ನ ಜೆಡಿಎಸ್‌ಗೆ ನೀಡಿದ್ದಾರೆ. ಓವೈಸಿ ಕೋಮುವಾಗಿ ಅಂತ ನಾವು ಹೇಳೋಕಾಗಲ್ಲ, ಅದನ್ನ ಹೇಳಿರುವ ಸಿದ್ದರಾಮಯ್ಯನವರೇ ಮೊದಲು ಕೋಮುವಾದಿ ಅಂತ ಹೇಳಿದ್ರು.

ಇನ್ನು ಇದೇ ಸಂದರ್ಭ ರಾಹುಲ್ ಗಾಂಧಿಯವರನ್ನ ಪಾಪ ಪಾಂಡು ಅಂತ ಕುಮಾರಸ್ವಾಮಿ ವ್ಯಂಗ್ಯವಾಗಿದ್ದಾರೆ. ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದೆ.. ಜೆಡಿಎಸ್‌ಗೆ ಓಟು ಹಾಕಿದ್ರೆ ಬಿಜೆಪಿ ಗೆಲ್ಲುತ್ತೆ ಅಂತ ಸಿದ್ದರಾಮಯ್ಯ ಹಾಗೂ ಅವರ ಪಕ್ಷದ ಪಾಪ ಪಾಂಡು ಹೇಳಿದ್ದಾರೆ ಅನ್ನೋಮೂಲಕ ರಾಹುಲ್ ಗಾಂಧಿ ಅವರನ್ನ ಹೆಚ್‌ಡಿಕೆ ವ್ಯಂಗ್ಯವಾಡಿದ್ದಾರೆ.

ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಅನ್ನುತ್ತಿದ್ದ ಸಿದ್ದರಾಮಯ್ಯ ಅವರು ವೈದ್ಯ ವೃತ್ತಿಯಲ್ಲಿದ್ದ ತಮ್ಮ ಮಗನನ್ನ ರಾಜಕೀಯಕ್ಕೆ ಎಳೆದುತಂದಿದ್ದಾರೆ. ಇನ್ನು ಮುಂದೆ ಎಂದೂ ಸಿದ್ದರಾಮಯ್ಯ ಜೆಡಿಎಸ್‌ ಅನ್ನು ಅಪ್ಪ ಮಕ್ಕಳ ಪಕ್ಷ ಅಥವಾ ಕುಟುಂಬರಾಜಕಾರಣ ಅಂತ ಹೇಳುವಂತಿಲ್ಲ ಅಂತ ಹೆಚ್‌ಡಿಕೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here