Home Elections 2019 ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವುದು ಬಹುತೇಕ ಖಚಿತ..! ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಸಂಭವ..!

ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವುದು ಬಹುತೇಕ ಖಚಿತ..! ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಸಂಭವ..!

3232
0
SHARE

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ರಾಹುಲ್ ಗಾಂಧಿ ಕೂಡ ಅಜ್ಜಿ ಹಾಗೂ ಅಮ್ಮ ತೆಗೆದುಕೊಂಡ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಕರಾಹುಲ್ ಥಿಂಕ್ ಟ್ಯಾಂಕ್ ಬೆಂಗಳೂರಿಗೆ ಬಂದಿಳಿದಿದೆ.

ಎಐಸಿಸಿ ಟೀಂ ಗ್ರೌಂಡ್ ವರ್ಕ್ ಜೊತೆಗೆ ಅನಾಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ರಾಹುಲ್‌ಗೆ ಯಾವ ಕ್ಷೇತ್ರ ಸೇಫ್ ಎಂಬುದರ ಬಗ್ಗೆ ಥಿಂಕ್ ಟ್ಯಾಂಗ್ ಟೀಂ ಸಮೀಕ್ಷೆ ನಡೆಸುತ್ತಿರುವುದಲ್ಲದೆ ರಾಜ್ಯ ನಾಯಕರ ಜೊತೆಯೂ ಚರ್ಚಿಸುತ್ತಿದ್ದಾರೆ.

ರಾಹುಲ್ ಗಾಂಧಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಸಂಭವ ಹೆಚ್ಚಿದ್ದು ಅದೇ ಕ್ಷೇತ್ರ ಸೇಫ್ ಎಂಬ ಬಗ್ಗೆ ರಾಜ್ಯ ನಾಯಕರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಚಿವ ಡಿ.ಕೆ.ಶಿವಕುಮಾರ್ ಅವರ ಭದ್ರಕೋಟೆಯಾಗಿದೆ. ಹೀಗಾಗಿ ಅಲ್ಲಿಯೇ ಸ್ಪರ್ಧಿಸಲು ರಾಹುಲ್ ಗಾಂಧಿ ಒಲವು ತೋರಿದ್ದಾರೆ.

ಅಲ್ಲದೆ ಜೆಡಿಎಸ್ ಜೊತೆಗೆ ಮೈತ್ರಿ ಇರುವುದರಿಂದ ರಾಹುಲ್ ಗಾಂಧಿ ವಿರುದ್ಧ ಯಾವ ಪ್ರಬಲ ಅಭ್ಯರ್ಥಿಯೂ ಕಣಕ್ಕಿಳಿಯಲ್ಲ ಇದು ಕೂಡ ಒಂದು ಪ್ಲಸ್ ಪಾಯಿಂಟ್ ಆಗಿದೆ. ಡಿಕೆಶಿ ಸಹೋದರರಿಗೆ ಜವಾಬ್ದಾರಿ ವಹಿಸಿ ರಾಹುಲ್ ಗಾಂಧಿ ದೇಶದ ರಾಜಕೀಯದತ್ತ ಗಮನ ಹರಿಸಬಹುದು. ಕೇವಲ ನಾಮಪತ್ರ ಸಲ್ಲಿಸಿ ಹೋದ್ರೆ ಗೆಲುವು ನಿಶ್ಚಿತ ಎಂದು ಖಾತ್ರಿಯಾಗಿದೆ.

ಅಲ್ಲದೆ ರಾಹುಲ್ ಗಾಂಧಿ ರಾಜ್ಯದಲ್ಲಿ ಸ್ಪರ್ಧಿಸಿದ್ರೆ ಕಾಂಗ್ರೆಸ್‌ಗೆ ಪ್ಲಸ್ ಆಗಲಿದೆ. ರಾಗಾ ಅಲೆ ರಾಜ್ಯದಲ್ಲಿ ಹರಡಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲವಾಗಲಿದ್ದು, ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಲೆಕ್ಕಾಚಾರ ಕೂಡ ಇದೆ. ಹೀಗಾಗಿ ರಾಗಾ ನಿರ್ಧಾರದಿಂದ ರಾಜ್ಯ ನಾಯಕರೂ ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಇನ್ನೆರೆಡು ದಿನದಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

LEAVE A REPLY

Please enter your comment!
Please enter your name here