Home District ರಾಹುಲ್ ಗಾಂಧಿ ವಿರುದ್ದ ಎಸ್.ಎಂ.ಕೃಷ್ಣ ಕಣಕ್ಕೆ..? ಬೆಂಗಳೂರು ಗ್ರಾಮಾಂತರದಲ್ಲಿ ದಿಗ್ಗಜರ ಸೆಣಸು..! ಎಸ್.ಎಂ.ಕೃಷ್ಣರನ್ನು ಮನವೊಲಿಸಲು ಯಡಿಯೂರಪ್ಪ...

ರಾಹುಲ್ ಗಾಂಧಿ ವಿರುದ್ದ ಎಸ್.ಎಂ.ಕೃಷ್ಣ ಕಣಕ್ಕೆ..? ಬೆಂಗಳೂರು ಗ್ರಾಮಾಂತರದಲ್ಲಿ ದಿಗ್ಗಜರ ಸೆಣಸು..! ಎಸ್.ಎಂ.ಕೃಷ್ಣರನ್ನು ಮನವೊಲಿಸಲು ಯಡಿಯೂರಪ್ಪ ಸಜ್ಜು..!

883
0
SHARE

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಹೌದು ರಾಹುಲ್ ಗಾಂಧಿಯವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.

ರಾಹುಲ್ ಗಾಂಧಿಯವರನ್ನು ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಿದ್ದೂ ಆಗಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರ ಪ್ರಸ್ತಾವಕ್ಕೆ ಇನ್ನೂ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕ.

ಬೆಂಗಳೂರು ಗ್ರಾಮಾಂತರದಲ್ಲಿ ರಾಹುಲ್ ಗಾಂಧಿ ಇರಲಿ, ಹಾಲಿ ಸಂಸದ ಡಿ.ಕೆ.ಸುರೇಶ್ ರನ್ನು ಸಮರ್ಥವಾಗಿ ಎದುರಿಸಬಲ್ಲ ಅಭ್ಯರ್ಥಿಯೇ ಬಿಜೆಪಿಯಲ್ಲಿ ಇಲ್ಲ.ಈಗ ಬೆಂಗಳೂರು ಗ್ರಾಮಾಂತರದ ಟಿಕೆಟ್ ಆಕಾಂಕ್ಷಿಗಳಾಗಿರುವ ತುಳಸಿ ಮುನಿರಾಜು,ಅಶ್ವಥ್ ನಾರಾಯಣ ಸೇರಿದಂತೆ ಯಾರಿಂದಲೂ ರಾಹುಲ್ ಗಾಂಧಿ ಅಥವಾ ಡಿ.ಕೆ.ಸುರೇಶ್ ಗೆ ಪ್ರತಿಸ್ಪರ್ಧಿಗಳಾಗುವ ಸಾಮರ್ಥ್ಯ ಇಲ್ಲ.

ಹಾಗಾಗಿಯೇ ರಾಹುಲ್ ಗಾಂಧಿ ವಿರುದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣರನ್ನು ಕಣಕ್ಕಿಳಿಸುವುದು ಸೂಕ್ತ ಎಂಬುದು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈಗಲೂ ಎಸ್.ಎಂ.ಕೃಷ್ಣ ಪ್ರಭಾವಿ.

ಈಗಲೂ ಸಾಕಷ್ಟು ಮತಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕಾಗಿಯೇ ಎಸ್.ಎಂ.ಕೃಷ್ಣರ ಮನವೊಲಿಸಿ, ಚುನಾವಣೆ ಸ್ಪರ್ಧೆಗೆ ಒಪ್ಪಿಸುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಹೊತ್ತಿದ್ದಾರೆ. ಇಂದು ಸಂಜೆ,ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here