Home District ರಾಹುಲ್ ಗಾಂಧಿ ಹೇಳಿಕೆಯಿಂದ ಲೋಕಸಭಾ ಕಲಾಪದಲ್ಲಿ ಆಡಳಿತ ಪಕ್ಷದ ನಾಯಕರು ಕೆಂಡಾಮಂಡಲ..!!

ರಾಹುಲ್ ಗಾಂಧಿ ಹೇಳಿಕೆಯಿಂದ ಲೋಕಸಭಾ ಕಲಾಪದಲ್ಲಿ ಆಡಳಿತ ಪಕ್ಷದ ನಾಯಕರು ಕೆಂಡಾಮಂಡಲ..!!

266
0
SHARE

ಲೋಕಸಭೆಯಲ್ಲಿ ರಾಹುಲ್ ಗಾಂಧಿ ತಮ್ಮ ಮಾತಿನಿಂದ ರಣಕಹಳೆ ಮೊಳಗಿಸಿದ್ದಾರೆ. ಗಲ್ಲಾ ಜಯದೇವ್ ಭಾಷಣವನ್ನ ಉಲ್ಲೇಖಿಸಿ ಮಾತನಾಡುತ್ತಾ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆಂಧ್ರಪ್ರದೇಶ 21ನೇ ಶತಮಾನದ ರಾಜಕೀಯ ಬಲಿಪಶುಗಳಾಗಿದ್ದಾರೆ. ಪ್ರಧಾನಿಯವರು ತಮ್ಮ ಭಾಷಣಗಳಲ್ಲಿ ಬರೀ ಸುಳ್ಳನ್ನೇ ಹೇಳ್ತಾರೆ…

ಅವರು ಬರೀ ಸುಳ್ಳುಗಾರ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸದೇ ಪಕೋಡಾ ಮಾರಿ ಅಂತ ಹೇಳ್ತಾರೆ. ಇದೇ ವೇಳೆ ರಫೇಲ್ ಡೀಲ್ ಬಗ್ಗೆ ರಾಹುಲ್ ಪ್ರಸ್ತಾಪಿದ್ದಾರೆ. ಇನ್ನು, ಇದೇ ವೇಳೆ ರಫೇಲ್ ಒಪ್ಪಂದ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಪ್ರಧಾನಿ ಸೂಚನೆಯಂತೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಸುಳ್ಳು ಹೇಳ್ತಿದ್ದಾರೆ…

ಉದ್ಯಮಿಗಳ ಜೊತೆ ಸಂಪರ್ಕ ಹೊಂದಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ, ಕರ್ನಾಟಕದ ಹೆಚ್ಎಎಲ್‌ನಿಂದ ಗುತ್ತಿಗೆ ಕಸಿದುಕೊಂಡು ಇದರಲ್ಲಿ ಒಬ್ಬ ಉದ್ಯಮಿಗೆ 45ಸಾವಿರ ಕೋಟಿ ಲಾಭ ಮಾಡಿಕೊಡಲಾಗಿದೆ ಎಂದು ರಾಹುಲ್ ವಾಕ್ಪ್ರಹಾರ ನಡೆಸಿದ್ರು. ಇನ್ನು, ಪ್ರತೀ ಒಬ್ಬರ ಅಕೌಂಟಿಗೆ 15ಲಕ್ಷ ಹಾಕುತ್ತೇವೆಂದು ಹೇಳಿದ್ರು…

ಆದ್ರೆ, ಪ್ರಧಾನಿ ಮೋದಿ ಮಾಡಿದ ಭಾಷಣ ಯಾವುದಾದರೂ ಯೋಜನೆ ಜಾರಿಗೆ ಬಂದಿದೆಯಾ. ಬಡವರ ಹಾಗೂ ರೈತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ದೇಶದಲ್ಲಿ ರೈತರು, ಮಹಿಳೆಯರು, ಯುವ ಜನತೆ ಸಂತ್ರಸ್ಥರಾಗಿದ್ದಾರೆ ಎಂದು ಕಿಡಿಕಾರಿದ್ರು. ಇನ್ನು, ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಜಿಎಸ್ ಟಿ ವಿರೋಧಿಸಿದ್ರು. ಇದೀಗ ಪಿಎಂ ಆದ ಮೇಲೆ ಏಕರೂಪ ತೆರಿಗೆಯನ್ನ ಜಾರಿಗೆ ತಂದಿದ್ದಾರೆ ಎಂದ್ರು…

LEAVE A REPLY

Please enter your comment!
Please enter your name here