Home KARNATAKA ರಾಹುಲ್ ದ್ರಾವಿಡ್ ಹೆಗ್ಗಳಿಕೆಗೆ ಮತ್ತೊಂದು ಗರಿ..!? ICC “ಆಲ್ ಆಫ್ ಫೇಮ್‌”ಗೆ ಸೇರ್ಪಡೆ | ಭಾರತದ...

ರಾಹುಲ್ ದ್ರಾವಿಡ್ ಹೆಗ್ಗಳಿಕೆಗೆ ಮತ್ತೊಂದು ಗರಿ..!? ICC “ಆಲ್ ಆಫ್ ಫೇಮ್‌”ಗೆ ಸೇರ್ಪಡೆ | ಭಾರತದ ಐದನೇ ಮಾಜಿ ಆಟಗಾರ ಎಂಬ ಹಿರಿಮೆಗೆ ಕನ್ನಡಿಗ ಪಾತ್ರ…

251
0
SHARE

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೆಗ್ಗಳಿಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಐಸಿಸಿ ಹಾಲ್ ಆಫ್ ಫೇಮ್ ಗೆ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ.ಐಸಿಸಿ ಹಾಲ್ ಆಫ್ ಫೇಮ್ ಗೆ ಪಾತ್ರರಾದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕನ್ನಡಿಗ ಪಾತ್ರರಾಗಿದ್ದಾರೆ…

2009 ರಲ್ಲಿ ಬಿಶನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, 2015 ರಲ್ಲಿ ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದರು. 164 ಟೆಸ್ಟ್ ಪಂದ್ಯಗಳನ್ನಾಡಿದ್ದ ರಾಹುಲ್ ದ್ರಾವಿಡ್ 36 ಶತಕಗಳ ಜೊತೆಗೆ 13,288 ರನ್‌ಗಳನ್ನು ಗಳಿಸಿದ್ದಾರೆ. 344 ಏಕದಿನ ಪಂದ್ಯಗಳಲ್ಲಿ 12 ಶತಕಗಳ ಮೂಲಕ 10,344 ರನ್ ಪೇರಿಸಿದ್ದಾರೆ…

ಇನ್ನು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಕ್ಲೇರ್ ಟೈಲರ್ ಕೂಡ ಐಸಿಸಿ ಹಾಲ್ ಆಫ್ ಫೇಮ್‌ಗೆ ಪಾತ್ರರಾಗಿದ್ದಾರೆ. ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿರೋದಕ್ಕೆ ರಾಹುಲ್ ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ…

ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಗುರುತಿಸಲ್ಪಡುವ ಐಸಿಸಿ ಹಾಲ್ ಆಫ್ ಫೇಮ್ ನಲ್ಲಿ ಸೇರ್ಪಡೆಗೊಳ್ಳುವುದು ಕ್ರಿಕೆಟ್ ವೃತ್ತಿ ಜೀವನ ಪ್ರಾರಂಭಿಸಿದಾಗಿನ ಕನಸಾಗಿರುತ್ತದೆ.ನನ್ನ ಕ್ರಿಕೆಟ್ ಜೀವನದ ಪ್ರತಿ ಕ್ಷಣವನ್ನೂ ನಾನು ಪ್ರೀತಿಸಿದ್ದೇನೆ. ತಂಡ ಹಾಗೂ ನನ್ನ ವೈಯಕ್ತಿಕ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ದ್ರಾವಿಡ್ ಸಂತಸ ಹಂಚಿಕೊಂಡಿದ್ದಾರೆ…

LEAVE A REPLY

Please enter your comment!
Please enter your name here