Home Crime ರಿಯಲ್ ಆಗಿ “ಟಗರು- ಡಾಲಿ, ಚಿಟ್ಟೆ ಆಗಬೇಕೆಂದು ಹೋದವರ ಕಥೆ ಏನಾಯ್ತು ಗೊತ್ತಾ..? ಪ್ಲಾನ್ ಕೊಟ್ಟವನೇ...

ರಿಯಲ್ ಆಗಿ “ಟಗರು- ಡಾಲಿ, ಚಿಟ್ಟೆ ಆಗಬೇಕೆಂದು ಹೋದವರ ಕಥೆ ಏನಾಯ್ತು ಗೊತ್ತಾ..? ಪ್ಲಾನ್ ಕೊಟ್ಟವನೇ ಕೊಂದಿದ್ರು ರೀಲ್‌ಗಿಂತಲೂ ಭೀಕರವಾಗಿ ಈ ರೀಲ್ ಡಾಲಿ-ಚಿಟ್ಟೆ..!?

1459
0
SHARE

ಸಿನಿಮಾ ಒಂದು ಸಮೂಹ ಮಾಧ್ಯಮ. ಸಿನಿಮಾದಲ್ಲಿ ತೋರಿಸೋದನ್ನೆಲ್ಲಾ ಜನ ನಂಬ್ತಾರೆ. ಸಿನಿಮಾ ಅದೆಷ್ಟು ಪ್ರಭಾವಿ ಅಂದ್ರೆ ಸಿನಿಮಾ ನೋಡಿದವರೆಲ್ಲಾ ನಾನು ಸಿನಿಮಾದ ಹೀರೋ ತರಹ ಆಗಬೇಕು. ಹೀರೋಯಿನ್ ತರಹ ಆಗಬೇಕು ಅಂತ ಕನಸು ಕಟ್ಟಿಕೊಳ್ತಾರೆ. ಸಿನಿಮಾದಲ್ಲಿ ಬರೋ ಸಂದೇಶಗಳು ಕೂಡಾ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತೆ. ಒಂದೇ ಬಾರಿಗೆ ಮಾಸ್ ಅಟ್ರಾಕ್ಷನ್ ಮಾಡುವ ತಂತ್ರಗಾರಿಕೆ ಇರೋ ಸಿನಿಮಾಗೆ ಮಾತ್ರ. ಒಂದು ಸಿನಿಮಾ ಸಮಾಜವನ್ನ ಎರಡು ರೀತಿಯಲ್ಲಿ ಬದಲಾಯಿಸಬಲ್ಲದು. ಒಂದು ಪಾಸಿಟಿವ್ ಆಗಿ ಇನ್ನೊಂದು ನೆಗೆಟಿವ್ ಆಗಿ. ಅದರಲ್ಲಿ ಚಿತ್ರಕಥೆ, ಸಂಭಾಷಣೆಗಳೇ ಜನರ ಮೇಲೆ ಅತಿದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತೆ. ಹೀಗಾಗಿ ಸಿನಿಮಾದಲ್ಲೂ ಸಾಕಷ್ಟು ವಿಧಗಳಿವೆ.

ಸಾಮಾಜಿಕ, ಪೌರಾಣಿಕ ಹಿನ್ನಲೆಯಲ್ಲಿ ಸಿನಿಮಾಗಳು ಒಂದು ಬಗೆಯ ಪರಿಣಾಮವನ್ನ ಬೀರಿದ್ರೆ, ಪಕ್ಕಾ ಕಮರ್ಷಿಯಲ್ ಮೂವಿಗಳು ನೆಗೆಟಿವ್ ಥಾಟ್ಸ್ ಹುಟ್ಟೋದಕ್ಕೆ ಕಾರಣವಾಗುತ್ತೆ. ಹೀಗಾಗಿ ಸಿನಿಮಾ ಕೆಲವೇ ಗಂಟೆಗಳಲ್ಲಿ ಒಬ್ಬ ಮನುಷ್ಯನ ಆಲೋಚನೆಯನ್ನೇ ಬದಲಾಯಿಸಿಬಿಡುತ್ತೆ. ಅದೊಂದು ಡ್ರಾಮ ಆದ್ರೂ ನೋಡೋ ಜನ ಅದನ್ನ ತುಂಬಾ ಸೀರಿಯಸ್ ಆಗಿ ಇಂಪ್ಲಿಮೆಂಟ್ ಮಾಡೋದಕ್ಕೆ ಶುರುಮಾಡ್ತಾರೆ.ಇವನು ಪ್ರಸನ್ನ ಆಲಿಯಾಸ್ ಡಾಲಿ. ಇನ್ನೊಬ್ಬ ಪ್ರಶಾಂತ್ ಅಲಿಯಾಸ್ ಪಚ್ಚಿ. ಇನ್ನೊಬ್ಬ ಅಪ್ರಾಪ್ತ ಆಗಿರೋದ್ರಿಂದ ಅವನನ್ನ ನಾವು ತೋರಿಸ್ತಿಲ್ಲ. ಇಲ್ಲ ಅಂದಿದ್ರೆ ಆ ಕ್ರಿಮಿಯ ಜನ್ಮವನ್ನೂ ಜಾಲಾಡಿಬಿಡ್ತಿವಿ. ನೋಡೋದಕ್ಕೆ ಹ್ಯಾಗಿದ್ದಾರೆ ನೋಡಿ. ನಿಯತ್ತಾಗಿ ದುಡಿದು ತಿಂದಿದ್ರೆ ಇವ್ರು ಹೀಗೆ ಪೊಲೀಸ್ರ ಬೆಂಗಾವಲಿನಲ್ಲಿ ತಲೆ ಬಗ್ಗಿಸಿ ನಿಲ್ಲೋ ತರಹ ಆಗ್ತಿಲ್ಲ. ಆದ್ರೆ ಈ ಕಿತ್ತೋದೋರು ಹೆಸರು ಮಾಡಬೇಕು ಅನ್ನೋ ಹಠರಕ್ಕೆ ಬಿದ್ದು ಈಗ ತಲೆ ತಗ್ಗಿಸಿ ನಿಂತ್ಕೊಡಿದ್ದಾರೆ.

ಈಗ ಎಲ್ಲರಿಗೂ ತಾವು ಪ್ರಚಾರಕ್ಕೆ ಬರಬೇಕು ಅಂತ ಹುಚ್ಚು ಹತ್ತಿಸಿಕೊಂಡಿದ್ದಾರೆ. ಹೆಣ್ಣು ಮಣ್ಣಿನ ಹುಚ್ಚು ಒಂಥರಾ ಆದ್ರೆ ಈ ಪ್ರಚಾರ, ಫೇಮಸ್ ಆಗೋ ಹುಚ್ಚು ಇನ್ನೊಂದು ತರಹ. ಇದು ಅದಕ್ಕಿಂತ ಹೆಚ್ಚು ಡೇಂಜರಸ್ ಕೂಡಾ ಹೌದು. ಆದ್ರೆ ಒಳ್ಳೇ ರೀತಿಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳೋದಕ್ಕೆ ಹೋದ್ರೆ ಅದು ಅಷ್ಟು ಸುಲಭವಾಗಿ ದಕ್ಕೋದಿಲ್ಲ. ಆದ್ರೆ ನೆಗೆಟಿವ್ ಆಗಿ ಪ್ರಚಾರ ಗಿಟ್ಟಿಸಿಕೊಳ್ಳಬೇಕು ಅಂದ್ರೆ ನಿಮಿಷಗಳು ಸಾಕು. ಹೀಗಾಗಿ ಪ್ರಚಾರದ ಹುಚ್ಚಿಗೆ ಬಿದ್ದವರು ನೆಗೆಟಿವ್ ಆಗಿಯೇ ಯೋಚನೆ ಮಾಡೋದು.ಈ ಕಂಟ್ರಿ ಸಾರಾಯಿ ಕುಡಿಯೋ ಕಂತ್ರಿಗಳು ಅದೇ ಯೋಚನೆ ಬಂದಿತ್ತು. ಈ ಹಿಂದೆ ಬಂಗಾರದ ಮನುಷ್ಯನಂತಹ ಅದ್ಭುತ ಸಿನಿಮಾ ನೋಡಿದಾಗ ಇವ್ರಿಗೆ ನಿಯತ್ತಾಗಿ ಬೆವರು ಸುರಿಸಿ ತಿನ್ನಬೇಕು ಅನ್ನೋ ಮನಸ್ಸು ಬರಲಿಲ್ಲ. ಆದ್ರೆ ಟಗರು ಸಿನಿಮಾ ನೋಡ್ತಿದ್ದ ಹಾಗೆ ನಾವು ಅದೇ ರೀತಿ ವಿಲನ್ ಆಗಬೇಕು ಅಂತ ಹುಚ್ಚು ಹತ್ತಿತ್ತು.

ಅಲ್ಲಿಗೆ ಇವರ ಹಣೆಬರಹ ಖರಾಬ್ ಆಗಿದೆ ಅನ್ನೋದನ್ನಾದ್ರೂ ಅವ್ರು ತಿಳ್ಕೋಬೇಕಿತ್ತು. ಆದ್ರೆ ಇವರು ಮನಸ್ಸಿಗೆ ಬಂದ ರೀತಿ ಮಾಡೋದಕ್ಕೆ ಹೊರಟಿದ್ರು. ಒಬ್ಬ ಹರಿಹರದ ಬನ್ನಿಕೋಡು ಗ್ರಾಮದವನು. ಇನ್ನೊಬ್ಬ ಇಂದಿರಾ ನಗರದವನು. ನೋಡೋದಕ್ಕೆ ಒಳ್ಳೇ ಬಟ್ಟೆ ಹಾಕ್ಕೊಂಡಿದ್ದಾರೆ ಅಂತ ಇವ್ರೇನು ಒಳ್ಳೇ ಕೆಲಸವೇನು ಮಾಡ್ತಿರಲಿಲ್ಲ. ಒಬ್ಬ ಕೂಲಿ ಕೆಲಸ ಮಾಡಿದ್ರೆ, ಇನ್ನೊಬ್ಬ ಸಣ್ಣಪುಟ್ಟ ದಂಧೆ ಮಾಡ್ಕೊಂಡಿದ್ದ. ಅದನ್ನೇ ಮಾಡ್ಕೊಂಡಿದ್ದಿದ್ರೆ ಮೂರು ಹೊತ್ತು ಊಟವನ್ನ ನೆಮ್ಮದಿಯಾಗಿ ಮಾಡಬಹುದಿತ್ತು. ಆದ್ರೆ ಅದನ್ನ ಬಿಟ್ಟು ಕೊಲೆ ಮಾಡುವಂತಹ ಕೆಲಸಕ್ಕೆ ಇವ್ರು ಕೈ ಹಾಕಿದ್ರು. ಹೀಗಾಗಿ ಈಗ ಪೊಲೀಸ್ರ ಅತಿಥಿಯಾಗಿದ್ದಾರೆ.ಈ ಪ್ರಸನ್ನ ಆಲಿಯಾಸ್ ಡಾಲಿ ಇದ್ದಾನಲ್ಲ. ಅವನು ಟಗರು ಸಿನಿಮಾ ನೋಡ್ತಿದ್ದವನೇ ತನ್ನ ಹೆಸರಿನ ಮುಂದೆ ಡಾಲಿ ಅಂತ ಹೆಸುರ ಸೇರಿಸಿಕೊಂಡಿದ್ದ. ತನ್ನ ಸ್ನೇಹಿತರು ಅಕ್ಕಪಕ್ಕದವರೆಲ್ಲಾ ಡಾಲಿ ಅಂತಾನೆ ಕರಿಬೇಕು ಅಂತ ತಾಕಿತು ಮಾಡಿದ್ದ. ಜನ ಎಲ್ಲಾ ಅವತ್ತಿನಿಂದ ಇವನನ್ನ ಡಾಲಿ ಅಂತಾನೆ ಕರೆಯೋದಕ್ಕೆ ಶುರುಮಾಡಿದ್ರು.

ಸುಮ್ಮನೆ ಹೆಸರು ಚೇಂಜ್ ಮಾಡ್ಕೊಂಡ್ರೆ ಸಾಕಾಗುತ್ತ. ಅವನ ರೀತಿಯೇ ಏನಾದ್ರೂ ಹರಾಮಿ ಕೆಲಸ ಮಾಡಬೇಕಲ್ಲ ಅಂತ ಯೋಚನೆ ಮಾಡೋದಕ್ಕೆ ಶುರುಮಾಡಿದ್ದ. ಆಗ ಜೊತೆಗಿದ್ದ ಇನ್ನೊಬ್ಬ ಚಪ್ಪರ ಸ್ನೇಹಿತ ಮಗಾ ನಾನೊಂದು ಐಡಿಯಾ ಕೊಡ್ತೀನಿ ಹಾಗೆ ಮಾಡೋಣ ಅಂತ ಹೇಳಿದ್ದ. ಗೆಳೆಯ ನಾವು ಮೂರು ಜನ ಸೇರಿ ಏರಿಯಾದಲ್ಲಿ ನಡ್ಕೊಂಡು ಹೋಗ್ತಿದ್ರೆ ಜನ ಭಯದಿಂದ ಗಢಗಢ ಅಂತ ನಡಗಬೇಕು ಹಾಗೆ ನಾವು ಹವಾ ಕ್ರಿಯೆಟ್ ಮಾಡಬೇಕು. ಜನ ನಮ್ಮನ್ನ ನೋಡೋಕೆ ಹೆದರಿಕೊಳ್ಳಬೇಕು. ಆಗ ನಾವು ಫೇಮಸ್ ಆಗ್ತೀವಿ. ಹೆಸರು ಮಾಡಿದ್ರೆ ಹಾಗೆ ಮಾಡಬೇಕು ಅಂತ ಅವನು ಹೇಳಿದ್ದ. ಅದ್ರಲ್ಲು ಡಾಲಿ ಅಂತ ಹೆಸರು ಬದಲಾಯಿಸಿಕೊಂಡಿದ್ದವನಿಗೆ ಆ ವಿಲನ್ ಪಾತ್ರ ಮೈಮೇಲೆ ಬಂದಿತ್ತು.

ಹೀಗೆ ಮೂವರು ಸೇರಿ ದೊಡ್ಡ ಹೆಸರು ಮಾಡೋದಕ್ಕೆ ಸ್ಕೆಚ್ ಹಾಕಿದ್ರು. ಅದು ಅಂತಿತಹ ಸ್ಕೆಚ್ ಅಲ್ಲ. ಕೊಲೆ ಮಾಡಬೇಕು ಅನ್ನೋ ಪ್ಲಾನ್ ಮಾಡ್ಕೊಂಡಿದ್ರು. ಆದ್ರೆ ಯಾರ ಕೊಲೆ ಮಾಡಬೇಕು ಅನ್ನೋದು ಅವರಿಗೆ ಗೊತ್ತಿರಲಿಲ್ಲ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದ್ರೆ ಇವ್ರು ಕೊಲೆ ಮಾಡಬೇಕು ಅನ್ನೋ ಪ್ಲಾನ್ ಹಾಕ್ತಿದ್ದಾಗ ಜೊತೆಗೆದಿದ್ದ ಸ್ನೇಹಿತನು ಹೌದೌದು ಅಂದಿದ್ದ. ಆದ್ರೆ ಅವನೇ ಇವರ ಮೊದಲ ಬಲಿಯಾಗ್ತಾನೆ ಅನ್ನೋದು ಅವ್ರಿಗೂ ಗೊತ್ತಿರಲಿಲ್ಲ. ಸಾಯೋದಕ್ಕೆ ಸಮಯದ ಲೆಕ್ಕ ಹಾಕ್ತಾ ಕೂತಿದ್ದವನಿಗೂ ಗೊತ್ತಿರಲಿಲ್ಲ. ಒಟ್ನಲ್ಲಿ ಅವ್ರು ಕೊಲ್ಲಬೇಕು ಅನ್ನೋ ತೀರ್ಮಾನಕ್ಕೆ ಬಂದಾಗಿತ್ತು. ಹೀಗಾಗಿ ಪ್ರತಿನಿತ್ಯ ಇರ್ತಿದ್ದ ಇವರ ವರ್ತನೆ ಅವತ್ತಿನಿಂದ ಬದಲಾಗಿ ಹೋಗಿತ್ತು. ಹೋದಕಡೆಯೆಲ್ಲಾ ಹೆದರಿಸಿ ಮಾತನಾಡೋದು ಗಲಾಟೆ ಮಾಡೋದು ಸರ್ವೇ ಸಾಮಾನ್ಯವಾಗಿ ಹೋಗಿತ್ತು. ಅದ್ರೆ ಡಾಲಿ ಅನ್ನೋ ಕ್ಯಾರೆಕ್ಟರ್ ಆತ್ಮ ಇವರಲ್ಲಿ ಸೇರ್ಕೊಂಡು ಹೋಗಿತ್ತು. ಇನ್ನು ಅನಾಹುತ ನಡೆಯೋದೊಂದೇ ಬಾಕಿಯಿತ್ತು.

ಅವತ್ತು ಇವರ ಜೊತೆ ಇದ್ದು ಇವ್ರು ಹೆಳಿದ್ದಕ್ಕೆಲ್ಲಾ ಕೇಕೆ ಹಾಕ್ಕೊಂಡು ನಕ್ಕವನು ಕಾಂತರಾಜ್ ಅಂತ. ಇವರ ಸ್ನೇಹಿತ. ಸ್ನೇಹಿತ ಅನ್ನೋದಕ್ಕಿಂತ ಹೆಚ್ಚಾಗಿ ಆತ ಇವ್ರ ಬಾಸ್ ಇದ್ದ ಹಾಗೆ ಇದ್ದ. ಇವನಿಗೂ ನಾಲ್ಕು ಜನ ನನ್ನ ಹಿಂದೆ ಓಡಾಡಬೇಕು. ಅವ್ರು ನಾನು ಹೇಳಿದ ಹಾಗೆ ಕೇಳಬೇಕು ಅನ್ನೋ ಚಪಲ. ಅಲ್ಲದೆ ಬಾಸಿಸಂ ಮಾಡಿದ್ರೆ ನಾನು ದೊಡ್ಡ ಲೀಡರ್ ಅಂತ ಜನ ತಿಳ್ಕೋತ್ತಾರೆ ಅಂತ ಅಂದುಕೊಂಡಿದ್ದ. ಅದಕ್ಕಾಗಿ ಈ ಮೂವರನ್ನ ಯಾವಾಗಲೂ ಜೊತೆಗೆ ಹಾಕ್ಕೊಂಡು ತಿರುಗಾಡ್ತಿದ್ದ. ಆದ್ರೆ ಈ ಮೂವರಿಂದಲೇ ನನಗೆ ಮುಕ್ತಿ ಸಿಗುತ್ತೆ ಅನ್ನೋದು ಮಾತ್ರ ಆತನಿಗೆ ಗೊತ್ತೇ ಇರಲಿಲ್ಲ. ಎಲ್ಲದಕ್ಕೂ ಈ ಮೂವರನ್ನ ಹೆದರಿಸಿ ಮಾತನಾಡಿಸೋದು, ತಾನು ಹೇಳಿದ ಹಾಗೆ ಕೇಳೋ ಹಾಗೆ ನಡೆಸಿಕೊಳ್ಳೋದನ್ನ ಮಾಡ್ತಿತ್ತು. ಸಿನಿಮಾ ನೋಡಿ ಬದಲಾದವರು ತನ್ನನ್ನ ಮುಗಿಸ್ತಾರೆ ಅನ್ನೋ ಸಣ್ಣ ಅನುಮಾನವೂ ಆತನಿಗಿರಲಿಲ್ಲ.

ಅಥವಾ ಅದನ್ನ ಸೀರಿಯಸ್ ಆಗಿ ತೆಗೆದುಕೊಂಡಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ ಡಾಲಿ ಅಂಡ್ ಟೀಂನ ಮೊದಲ ಭೇಟೆಯೇ ಇತನದಾಗಿತ್ತು. ಅದು ಕೊಲೆ ಮಾಡೋರಿಗೂ ಮೊದಲೇ ಗೊತ್ತಿರಲಿಲ್ಲ ಅನ್ಸುತ್ತೆ.ಈ ನಡುವೆ ಕಾಂತರಾಜ್ ಒಂದು ಮೊಬೈಲ್ ಅನ್ನ ಪರ್ಚೇಸ್ ಮಾಡಿದ್ದ. ಈ ಮೊಬೈಲ್ ವಿಚಾರವಾಗಿ ನಾಲ್ವರ ನಡುವೆ ಸಣ್ಣದಾಗಿ ಗಲಾಟೆಯಾಗಿತ್ತು. ಆದ್ರೆ ಸಂಜೆ ಕಾಂತರಾಜ್ ಎಲ್ಲರನ್ನ ಕರೆದು ಮೊಬೈಲ್ ತೆಗೆದುಕೊಂಡಿದ್ದಕ್ಕೆ ಪಾರ್ಟಿ ಕೊಡಿಸ್ತೀನಿ ಅಂತ  ಹೇಳಿದ್ದಾನೆ. ಅದಕ್ಕೆ ಅವರು ಆಗಿರೋ ಜಗಳವನ್ನ ಮರೆತು ಸರಿ ನಾವು ಬರ್ತೀವಿ ಪಾರ್ಟಿ ಮಾಡೋದಕ್ಕೆ ಅಂತ ಹೊರಟಿದ್ದಾರೆ. ಅಕ್ಟೋಬರ್ 26ರ ರಾತ್ರಿ ಇಂದಿರಾನಗರದ ಖಾಲಿ ನಿವೇಶನವವೊಂದರಲ್ಲಿ ಪಾರ್ಟಿ ಮಾಡೋದಕ್ಕೆ ತೀರ್ಮಾನ ಮಾಡಿದ್ದಾರೆ. ಅಲ್ಲಿಗೆ ಕಾಂತರಾಜ್ ಯಾರ್ಯಾರಿಗೆ ಯಾವ್ಯಾವ ಬ್ರಾಂಡ್ ಎಣ್ಣೆ ಬೇಕು ಅದನ್ನ ತರಿಸಿದ್ದಾನೆ. ಅಲ್ಲದೆ ಅವರಿಗೆ ಬೇಕಾದ ಸ್ನ್ಯಾಕ್ಸ್ ಅನ್ನ ಕೂಡಾ ತರಿಸಿದ್ದಾನೆ. ಎಲ್ಲರೂ ಸೇರಿ ಆ ರಾತ್ರಿ ಅಲ್ಲಿ ಚೆನ್ನಾಗಿ ಕುಡಿದು ಪಾರ್ಟಿ ಮಾಡಿದ್ದಾರೆ.

ಆದ್ರೆ ಕುಡಿದ ಮೇಲೆ ಅದರಲ್ಲೂ ನಶೆ ಏರಿದ ಮೇಲೆ ಒಬ್ಬರ ಮಾತನ್ನ ಒಬ್ಬರು ಕೇಳೋ ಮನಸ್ಥಿತಿಯಲ್ಲಿರಲಿಲ್ಲ. ಈ ವೇಳೆ ಮತ್ತೆ ನಾಲ್ವರ ಮಧ್ಯೆ ಜಗಳ ಶುರುವಾಗಿತ್ತು. ಅದರಲ್ಲೂ ಮೂವರು ಕಾಂತರಾಜ್ ಮೇಲೆ ತಿರುಗಿಬಿದ್ದಿದ್ದಾರೆ. ಅವನು ಕೂಡ ನೀವೆಲ್ಲಾ ನನಗೆ ಯಾವುದಕ್ಕೂ ಸಮ ಇಲ್ಲ. ನೀವ್ಯಾಲ್ಲ ನನ್ನ ಹತ್ತಿರ ನಖರ ಇಟ್ಕೋಬೇಡಿ ಅಂತ ಅವಾಜ್ ಹಾಕಿದ್ದಾನೆ.ಜಗಳ ಅಷ್ಟಕ್ಕೆ ನಿಂತಿದ್ರೆ ಕಾಂತರಾಜ್ ಬದುಕ್ತಿದ್ದ ಆದ್ರೆ ಅವರು ಅದನ್ನ ಅಲ್ಲಿಗೆ ನಿಲ್ಲಿಸಲಿಲ್ಲ. ಇವನ್ಯಾಕೋ ಬೇಜಾನ್ ನಿಗರಾಡ್ತಾ ಇದ್ದಾನೆ ಅಂತ ಪ್ರಸನ್ನ ತನ್ನ ಬಳಿಯಿದ್ದ ಚಾಕುವಿನಿಂತ ಆತನ ಕುತ್ತಿಗೆ ಕೊಯ್ದಿದ್ದಾನೆ. ತಕ್ಷಣವೇ ಆತನ ಜೊತೆಗಿದ್ದವರು ಕುಡಿದ ಬಾಟಲಿಯನ್ನೇ ಒಡೆದು ಆತನ ಹೊಟ್ಟೆಗೆ ಚುಚ್ಚಿದ್ದಾರೆ. ಅಷ್ಟೊಂದು ಕ್ರೂರವಾಗಿ ಸಾಯಿಸಿದ್ರು ಅಂದ್ರೆ ಆತನ ಹೊಟ್ಟೆಯೊಳಗಿರೋ ಎಲ್ಲಾ ಐಟಂಗಳನ್ನ ಹೊರಗೆ ತೆಗೆದಿದ್ರು. ಅಲ್ಲಿಗೆ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನ ಮೂವರು ಕೊಲೆ ಮಾಡಿಬಿಟ್ಟಿದ್ರು. ಅಷ್ಟೇ ಅಲ್ಲ ಟಗರು ಸಿನಿಮಾದಲ್ಲಿ ಡಾಲಿ ಕೊಲೆ ಮಾಡುವಂತೆ ಇಲ್ಲಿ ಅವ್ರು ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿದ್ರು.

ಕೊಲೆ ಮಾಡಿದ ನಂತ್ರ ಆ ಬಾಡಿಯನ್ನ ಅಲ್ಲೇ ಬಿಟ್ಟು ಮೂವರು ಪರಾರಿಯಾಗಿದ್ದಾರೆ.ಬೆಳಗ್ಗೆ ಜನ ಅಲ್ಲಿಗೆ ವಾಕಿಂಗ್ ಅಂತ ಮನೆಯಿಂದ ಹೊರಗೆ ಬಂದು ನೋಡ್ತಾರೆ. ಅಲ್ಲಿ ಕೊಲೆಯಾಗಿ ಹೋಗಿದೆ. ಇದನ್ನ ನೋಡ್ತಿದ್ದ ಹಾಗೆ ಎಲ್ಲಾ ಬೆಚ್ಚಿಬಿದ್ದಿದ್ರು. ತಕ್ಷಣವೇ ಅದನ್ನ ಸ್ಥಳೀಯರು ಹರಿಹರದ ಪೊಲೀಸ್ರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿತಾ ಇದ್ದ ಹಾಗೆ ಖಾಕಿ ಪಡೆ ಅಲ್ಲಿಗೆ ಬಂದಿತ್ತು. ಘಟನೆ ನಡೆದ ಸ್ಥಳವನ್ನ ನೋಡ್ತಿದ್ದ ಹಾಗೆ ಇದು ಕುಡಿದ ಮತ್ತಿನಲ್ಲಿ ಆದ ಗಲಾಟೆ ಅಂತ ಗೊತ್ತಾಗಿತ್ತು. ತಕ್ಷಣವೇ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸೋದಕ್ಕೆ ಶುರಮಾಡಿದ್ರು. ಈ ವೇಳೆ ಆತನ ಸ್ನೇಹಿತರು ಯಾರು, ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಅಂತ ತನಿಖೆ ನಡೆಸಿದ್ರು. ಆಗ ಈ ಮೂವರು ಆತನ ಸ್ನೇಹಿತರು ಹಾಗೆ ರಾತ್ರಿ ಎಲ್ಲಾ ಎಣ್ಣೆ ಪಾರ್ಟಿ ಮಾಡೋದಕ್ಕೆ ಹೋಗಿದ್ರು ಅನ್ನೋ ಸುಳಿವು ಸಿಕ್ಕಿತ್ತು.ಇಷ್ಟು ವಿಷಯ ಗೊತ್ತಾಗ್ತಿದ್ದ ಹಾಗೆ ಪೊಲೀಸ್ರು ಈ ಮೂವರನ್ನ ಭೇಟೆಯಾಡಿದ್ದಾರೆ. ಆಗ ಸರ್ ಇವನು ಸಖತ್ ನಿಗರಾಡ್ತಿದ್ದ ಅದಕ್ಕೆ ಕೊಲೆ ಮಾಡಿದ್ವಿ ಅಂತ ಹೇಳಿದ್ದಾರೆ. ಅಲ್ಲದೆ ನಾನು ಕೂಡಾ ಡಾಲಿಯ ಹಾಗೆ ಫೇಮಸ್ ಆಗೋದಕ್ಕೆ ಯಾರನ್ನಾದ್ರೂ ಕೊಲ್ಲೋದಕ್ಕೆ ಹುಡುಕ್ತಿದ್ದೆ.

ಆ ಟೈಂನಲ್ಲಿ ಇವನು ನಖರ ಮಾಡಿ ನಮ್ಮ ಹತ್ತಿರ ಮಟಾಷ್ ಆಗಿದ್ದಾನೆ ಅಂತ ಪೊಲೀಸ್ರ ಹತ್ತಿರ ಹೇಳಿದ್ರು. ಪೊಲೀಸ್ರಿಗು ಅವರು ಹೇಳಿದ ಮಾಹಿತಿಯನ್ನ ಕೇಳಿ ಶಾಕ್ ಆಗಿತ್ತು.ನಂತ್ರ ಪೊಲೀಸ್ರು ಮೂವರನ್ನ ಮುದ್ದೆ ಮುರಿಯೋದಕ್ಕೆ ಜೈಲಿಗೆ ಕಳುಹಿಸಿದ್ದಾರೆ.ಕೊಟ್ಟಿರೋ 50 ರೂಪಾಯಿಗೆ ಸಿನಿಮಾ ನೋಡ್ಕೊಂಡು ಮಜಾ ಮಾಡ್ಕೊಂಡು ಬಂದಿದ್ರೆ ಇವತ್ತು ಕಾಂತರಾಜ್ ನ ಜೀವ ಉಳಿಯುತ್ತಾ ಇತ್ತು. ಅಲ್ಲದೆ ಮೂವರು ಜೈಲು ಸೇರಿ ಜೀವನ ಹಾಳು ಮಾಡಿಕೊಳ್ಳುವ ಪ್ರಸಂಗ ಎದುರಾಗ್ತಿರಲಿಲ್ಲ. ಆದ್ರೆ ಈ ಮೂವರಿಗೆ ಹಾಳಾಗೋದು ಕೇಡು ಬುದ್ದಿ ಬಂದಿತ್ತು ಅಂತ ಅನಿಸುತ್ತೆ.  ಹೀಗಾಗಿ ರೌಡಿಯಾಗ್ತೀನಿ, ಹೆಸರು ಮಾಡ್ತೀನಿ ಅಂತ ಹೇಳಿ ಈಗ ಜೈಲಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಿದ್ದಾರೆ.

 

LEAVE A REPLY

Please enter your comment!
Please enter your name here