Home Cinema ರಿಯಲ್ ಸ್ಟಾರ್ ಉಪ್ಪಿ ಹೊಸ ಅವತಾರಕ್ಕೆ ದಂಗಾದ ಸ್ಯಾಂಡಲ್‌ವುಡ್..?! ಅರೆಬೆತ್ತಲಾಗಿ ಕಾಮ, ಕ್ರೋದ, ಮಧ, ಮಾತ್ಸರ್ಯದ...

ರಿಯಲ್ ಸ್ಟಾರ್ ಉಪ್ಪಿ ಹೊಸ ಅವತಾರಕ್ಕೆ ದಂಗಾದ ಸ್ಯಾಂಡಲ್‌ವುಡ್..?! ಅರೆಬೆತ್ತಲಾಗಿ ಕಾಮ, ಕ್ರೋದ, ಮಧ, ಮಾತ್ಸರ್ಯದ ಬಗ್ಗೆ ಪಾಠ ಮಾಡಲು ಹೊರಟ್ರಾ ಉಪ್ಪಿ..?!

2037
0
SHARE

ರಿಯಲ್ ಸ್ಟಾರ್ ಉಪೇಂದ್ರ ಅವ್ರ ಹೊಚ್ಚ ಹೊಸ ಅವತಾರ ನೋಡಿದ್ರೆ ನಿಜಕ್ಕು ಶಾಕ್ ಆಗ್ತೀರಾ..ಪ್ರೀತಿ ಪ್ರೇಮ ಪುಸ್ತಕದ ಬದ್ನೇಕಾಯಿ ಅಂತಿದ್ದ ಉಪೇಂದ್ರ ಈಗ ಐ ಲವ್ ಯು, ಐ ಲವ್ ಯು ಹುಡುಗಿ ಹಿಂದೆ ಬಿದ್ದಿದ್ದಾರೆ..ಅರೆಬೆತ್ತಲಾಗಿ ಕುಳಿತು ಕಾಮ, ಕ್ರೋದ, ಮಧ, ಮಾತ್ಸರ್ಯದ ಬಗ್ಗೆ ಹೇಳ್ತಿದ್ದಾರೆ..ಮತ್ತೊಂದು ವಿಚತ್ರ, ವಿಭಿನ್ನ ಲವ್ ಸ್ಟೋರಿಯ ಮೂಲಕ ರಿಯಲ್ ಸ್ಟಾರ್ ಈ ಬ್ಯಾಕ್ ಆಗಿದ್ದಾರೆ.

ಪ್ರಜಾಕೀಯ..ಪ್ರಜಾಕೀಯ…ಅಂತಿದ್ದ ರಿಯಸ್ ಸ್ಟಾರ್ ಉಪೇಂದ್ರ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿ ತಿಂಗಳುಗಳೆ ಆಗಿವೆ…ಸದ್ಯ ಪ್ರಜಾಕೀಯದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರೊ ಉಪೇಂದ್ರ ಐ ಲವ್ ಯು..ನನ್ನೇ ಪ್ರೀತ್ಸೆ..ಅಂತ ಒಂದು ಹುಡುಗಿಯ ಹಿಂದೆ ಬಿದ್ದಿದ್ದಾರೆ..ದಶಕಗಳ ಹಿಂದೆ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯಿ ಅಂತಿದ್ದ ರಿಯಲ್ ಸ್ಟಾರ್ ಈಗ ಯು ಟರ್ನ್ ಹೊಡೆದಿದ್ದಾರೆ…ಪ್ರೀತಿ ಪ್ರೇಮನೆ ಎಲ್ಲಾ ಅಂತ ಹೇಳಿಕೊಂಡು ಓಡಾಡ್ತಿದ್ದಾರೆ..

ಇದು ರಿಯಲ್ ಸ್ಟಾರ್ ಅಭಿನಯದ ಹೊಸ ಸಿನಿಮಾದ ಕಾನ್ಸೆಪ್ಟ್….ಈಗಾಗಲೆ ಗೊತ್ತಿರೊ ಹಾಗೆ ಉಪೇಂದ್ರ ಐ ಲವ್ ಯು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಐ ಲವ್ ಯು ಚಿತ್ರದ ಇಂಟ್ರಸ್ಟಿಂಗ್ ಟೀಸರ್ ಪ್ರಜಾಟಿವಿಗೆ ಲಭ್ಯವಾಗಿದೆ..ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಐ ಲವ್ ಯು ಸಿನಿಮಾದ ಟೀಸರ್‌ನ್ನು ಅಭಿಮಾನಿಗಳಿಗೆ ಗಿಫ್ಟಾಗಿ ನೀಡಲು ಸಜ್ಜಾಗಿತ್ತು ಚಿತ್ರತಂಡ…ಆದ್ರೆ ಟೀಸರ್ ರಿಲೀಸ್‌ಗೂ ಮುನ್ನವೆ ಪ್ರಜಾಟಿವಿಗೆ ಉಪ್ಪಿಯ ಹೊಸ ಅವತಾರದ ಎಕ್ಸಕ್ಲ್ಯೂಸಿವ್ ಝಲಕ್ ಲಭ್ಯವಾಗಿದೆ…

ಥರಹೇವಾರಿ ಪಾತ್ರಗಳಲ್ಲಿ ಮಿಂಚಿರೊ ರಿಯಲ್ ಸ್ಟಾರ್ ಈಗ ಮತ್ತೊಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ… ವಿಶೇಷ ಅಂದ್ರೆ ಉಪೇಂದ್ರ ನಟನೆಯ ಸೂಪರ್ ಹಿಟ್ ಎ ಮತ್ತು ಉಪೇಂದ್ರ ಸಿನಿಮಾದ ಸ್ಟೈಲ್‌ನಲ್ಲೆ ಇದೆ..ಕನ್ನಡ ಸಿನಿಮಾಭಿಮಾನಿಗಳಿಗೆ ವಿಚಿತ್ರ ಪ್ರೀತಿಯ ಪಾಠ ಮಾಡಿ ಪರಿಚಯಿಸಿದ್ದ ಉಪೇಂದ್ರ ಈಗ ಮತ್ತದೆ ಸಿನಿಮಾ ಸ್ಟೈಲ್‌ನಲ್ಲಿ ಪ್ರೀತಿಯ ಪಾಠ ಹೇಳಲು ಬರ್ತಿದ್ದಾರೆ.ಐ ಲವ್ ಯು ಚಿತ್ರದ ಟೀಸರ್‌ ಉಪೇಂದ್ರ ನಿರ್ದೇಶನ ಮತ್ತು ನಟನೆ ಮಾಡಿರೊ ಚೊಚ್ಚಲ ಚಿತ್ರ ಎ ಮತ್ತು ಉಪೇಂದ್ರ ಸಿನಿಮಾದ ವಿವರಣೆಯಿಂದಲೆ ಪ್ರಾರಂಭಾವಾಗುತ್ತೆ…

ಅಂದ್ಮೇಲೆ ಸಿನಿಮಾ ಸಹ ಅದೆ ವಿಚಿತ್ರ ಪ್ರೀತಿಯ ಸ್ಟೈಲ್‌ನಲ್ಲೆ ಇರುವುದು ಕನ್ಫರ್ಮ್ ಅದಂತೆ.. ರಿಯಲ್ ಸ್ಟಾರ್‌ ಇದುವರೆಗೂ ಥರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..ಆದ್ರೆ ಐ ಲವ್ ಯು ಚಿತ್ರದಲ್ಲಿ ಉಪೇಂದ್ರ ಮತ್ತೊಂದು ವಿಚಿತ್ರ ಅವತಾರದೊಂದಿಗೆ ದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ..ಚಿತ್ರದಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿರುವ ರಿಯಲ್ ಸ್ಟಾರ್ ಅರೆಬೆತ್ತಲಾಗಿ ಕುಳಿತು ಕಾಮ, ಕ್ರೋದ, ಮಧ, ಮಾತ್ಸರ್ಯದ ಬಗ್ಗೆ ಹೇಳಹೊರಟಿದ್ದಾರೆ…..

ಹುಟ್ಟುಹಬ್ಬದ ಸಂದರ್ಭದಲ್ಲೆ ಹೀಗೆ ಹುಟ್ಟುಡುಗೆಯಲ್ಲೆ ಕುಳಿತಿರೊ ಉಪೇಂದ್ರ ನೋಡಿ ಚಿತ್ರಪ್ರಿಯರು ಒಮ್ಮ ದಂಗ್ ಆಗಿದ್ದಾರೆ.. ಭರಪೂರ ಮನರಂಜನೆ ತುಂಬಿರೊ ಟೀಸರ್ ಮೂಲಕ ಭರ್ಜರಿ ಗಿಫ್ಟ್ ನೀಡಿರೊ ಉಪೇಂದ್ರ ಅಭಿಮಾನಿಗಳ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.ಅಂದಹಾಗೆ ಐ ಲವ್ ಯು ಆರ್ ಚಂದ್ರ ನಿರ್ದೇಶನದಲ್ಲಿ ಮೂಡಬರುತ್ತಿರುವ ಸಿನಿಮಾ..ಈ ಹಿಂದೆ ಬ್ರಹ್ಮ ಚಿತ್ರ ಮಾಡಿದ್ದ ಈ ಜೋಡಿ ಈಗ ಎರಡನೇ ಬಾರಿ ಐ ಲವ್ ಯು ಅಂತ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿರೋದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ…

ಬ್ರಹ್ಮ ಚಿತ್ರದಲ್ಲಿ ಉಪೇಂದ್ರಾಗೆ ಮಾಸ್ ಗೆಟಪ್ ಹಾಕಿಸಿದ್ದ ನಿರ್ದೇಶಕ ಆರ್ ಚಂದ್ರು ಈಗ ರಿಯಲ್ ಸ್ಟಾರ್‌ನ್ನು ರೊಮ್ಯಾಂಟಿಕ್ ಮೂಡ್‌ಗೆ ಕರ್ಕೊಂಡು ಹೋಗ್ತಿದ್ದಾರೆ.ಇನ್ನು ಉಪೇಂದ್ರಾಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ..ಮೊದಲ ಬಾರಿಗೆ ಉಪ್ಪಿಗೆ ನಾಯಕಿಯಾಗಿ ಕಾಣಿಸಿಕೊಂಡಿರೊ ರಚಿತ ಇಲ್ಲಿ ಮತ್ತಷ್ಟು ಗ್ಲಾಮರ್ ಆಗಿ ಮಿಂಚಿದ್ದಾರಂತೆ..ಒಟ್ನಲ್ಲಿ ಜಭರ್ದಸ್ತ್ ಟೀಸರ್ ಮೂಲಕ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿರೊ ರಿಯಲ್ ಸ್ಟಾರ್ ಸದ್ಯದಲ್ಲೆ ತೆರೆಮೇಲೆ ಅಬ್ಬರಿಸಲಿದ್ದಾರೆ.

LEAVE A REPLY

Please enter your comment!
Please enter your name here