Home Cinema ರಿಲೀಸ್ ಆಯ್ತು ಗಾಳಿಪಟ್-2 ಚಿತ್ರದ ಪೋಸ್ಟರ್…! ಸಿನಿರಸಿಕರಿಗೆ ಹಬ್ಬದೂಟ ಬಡಿಸಿದ ಯೋಗರಾಜ್ ಭಟ್ರು…!

ರಿಲೀಸ್ ಆಯ್ತು ಗಾಳಿಪಟ್-2 ಚಿತ್ರದ ಪೋಸ್ಟರ್…! ಸಿನಿರಸಿಕರಿಗೆ ಹಬ್ಬದೂಟ ಬಡಿಸಿದ ಯೋಗರಾಜ್ ಭಟ್ರು…!

447
0
SHARE

ಭಟ್ಟರ ಸಿನಿಮಾ ಅಂದ್ರೆನೇ ಅಲ್ಲಿ ಸಖತ್ ಮಜಾ ಇರುತ್ತೆ. ೧೧ ವರ್ಷಗಳ ಹಿಂದೆ ಡಿಫ್ರೆಂಟ್ ಥಿಕಿಂಗ್ ಡೈರೆಕ್ಟರ್‌ಗಳಲ್ಲಿ ಒಬ್ಬರಾದ ನಿರ್ದೇಶಕ ಯೋಗರಾಜ್ ಭಟ್ರು ಗಾಳಿಪಟ ಹಾರಿಸಿದ್ರು, ಈಗ ಮತ್ತೆ ಮೂವರು ಜಾಲಿ ಹುಡುಗರ ಕಥೆ ಹೇಳುವ ಮೂಲಕ ಮತ್ತೆ ಗಾಳಿಪಟ ಹಾರಿಸೋಕ್ಕೆ ಸಜ್ಜಾಗಿದ್ದಾರೆ. ಡಿಫ್ರೆಂಟ್ ಥಿಕಿಂಗ್ ಡೈರಕ್ಟರ್‌ಗಳಲ್ಲಿ ಒಬ್ಬರಾದ ನಿರ್ದೇಶಕ ಯೋಗರಾಜ್ ಭಟ್ ಈಗಾಗಲೇ ಪಂಚತಂತ್ರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇದರ ಜೊತೆಗೆ ಭಟ್ಟರ ಮುಂದಿನ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ೨೦೦೮ರಲ್ಲಿ ರಿಲೀಸ್ ಆದ ಗಾಳಿಪಟ ಚಿತ್ರದ ಸ್ವೀಕೇಲ್ ಇದಾಗಿದ್ದು, ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡಾ ದಿಗಂತ್, ರಾಜೇಶ್ ಕೃಷ್ಣ ಅಭಿನಯಿಸಿದ್ರು. ಈಗ ಗಾಳಿಪಟ ೨ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಚಿತ್ರದಲ್ಲಿ ಮತ್ತೊಮ್ಮೆ ಮೂವರು ಜಾಲಿ ಹುಡುಗರು ಟ್ಯಾವೆಲ್ ಸ್ಟೋರಿಯನ್ನ ಹೇಳೊಕ್ಕೆ ಹೊರಟಿದ್ದಾರೆ ಯೋಗರಾಜ್ ಭಟ್ರು.

ಇನ್ನು ಹಿರಿಯ ನಟ ಅನಂತ್ ನಾಗ್ ೧೧ ವರ್ಷಗಳ ಹಿಂದೆ ಈ ಸಿನಿಮಾದಲ್ಲಿ ನಟಿಸಿ ಈಗ ಮತ್ತೆ ಗಾಳಿಪಟ ೨ ಚಿತ್ರದಲ್ಲಿ ಮತ್ತೆ ನಟಿಸಲಿದ್ದೇನೆ. ತುಂಬಾ ಖುಷಿಯಾಗ್ತಿದೆ. ಜೊತೆಗೆ ಮಹೇಶ್ ಚಿತ್ರದ ನಿರ್ಮಾಪಕರು. ಹಾಗೇ ಯೋಗರಾಜ್ ಭಟ್ರು ಜೊತೆ ಕೆಲಸ ಮಾಡ್ಬೇಕು ಅಂದ್ರೆ ಅಲ್ಲಿ ಹಬ್ಬದ ವಾತಾವರಣ ಹಾಗೇ ಸಂಭ್ರಮ ಕೂಡ ಇರುತ್ತೆ. ಹೊಸಚಿತ್ರ ಗಾಳಿಪಟ ೨ ಚಿತ್ರ ಹಿಟ್ ಆಗಲಿ ಅಂದರು..

ಹೊಸ ಗಾಳಿಪಟ ೨ ಚಿತ್ರದಲ್ಲಿ ಕಾಮಿಡಿ ಕಿಂಗ್ ಶರಣ್, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ. ಲೂಸಿಯಾ ಪವನ್ ಲೀಡ್‌ನಲ್ಲಿದ್ರೆ, ಇವರಿಗೆ ಚಿತ್ರದಲ್ಲಿ ಜೋಡಿಯಾಗಿ ಸೋನಲ್ ಮಾಂತೇರಿಯೋ, ಶರ್ಮಿಳಾ ಮಾಂಡ್ರೆ ಹಾಗೂ ಒಬ್ಬರು ಚೈನಾ ಮಾಡೆಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಯೋಗರಾಜ್ ಭಟ್ ಅವರ ಸಿನಿಮಾ ಅಂದ್ರೆ ಅಲ್ಲಿ ಕಾಮಿಡಿ ಹಾಗೂ ಎಮೋಷನಲ್ ಇರುತ್ತೆ. ಚಿತ್ರದಲ್ಲಿ ಶರಣ್ ಪಾತ್ರ ಉತ್ತರ ಕರ್ನಾಟಕ ಭಾಷೆಯಲ್ಲೇ ಮಾತಾನಾಡುತ್ತಾ ಸಖತ್ ಕಾಮಿಡಿ ಮಾಡ್ತಾರಂತೆ.

ಶರಣ್ ಹಾಗೂ ಯೋಗರಾಜ್ ಭಟ್ಟರ ಮೊದಲ ಕಾಂಬಿನೇಷನ್‌ನಲ್ಲಿ ಬರ‍್ತಿರೋ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಲವ್, ಕಾಮಿಡಿ ಇದೆಯಂತೆ. ಚಿತ್ರದ ಮತ್ತೊಬ್ಬ ನಾಯಕ ರಿಷಿ ಕೂಡ ಇದ್ದು, ಚಿತ್ರದಲ್ಲಿ ರಿಷಿ ತುಂಬಾ ಫ್ಲಟ್ ಹೇಳೋ ಪಾತ್ರವಂತೆ. ಇನ್ನು ಅನಂತ್ ನಾಗ್ ಅವರ ಜೊತೆ ನನ್ನ ೨ನೇ ಸಿನಿಮಾ. ಯೋಗರಾಜ್ ಭಟ್ಟರ ಸಿನಿಮಾ ಹಾಗೂ ಅವರ ಲಿರೀಕ್ಗಳು ತುಂಬಾ ಚೆನ್ನಾಗಿರುತ್ತೆ ಅಂದರು.ಗಾಳಿಪಟ್ ೨ ಯೋಗರಾಜ್ ಭಟ್ ಜೊತೆ ನನ್ನ ಮೊದಲ ಸಿನಿಮಾ,

ಮಹೇಶ್ ಅವರು ಈ ಚಿತ್ರದ ಮೂಲಕ ಇದೇ ಫಸ್ಟ್ ಟೈಮ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ನನ್ನದು ಮಾಡೆಲ್ ಪಾತ್ರ ತುಂಬಾ ಚೆನ್ನಾಗಿದೆ ನನ್ನ ಪಾತ್ರ. ಗಾಳಿಪಟ ಟೀಮ್ ತುಂಬಾ ಚೆನ್ನಾಗಿದೆ. ಯೋಗರಾಜ್ ಭಟ್ ಜೊತೆ ಕೆಲಸ ಮಾಡ್ಬೇಕು ಅಂತಾ ತುಂಬಾ ದಿನಗಳ ಹಿಂದೆ ಕೆಲಸ ಮಾಡ್ಬೇಕು ಅಂತಾ ಆಸೆ ಇತ್ತು ಅಂದರು.

ಇನ್ನು ಹಳೇ ತಂಡದ ಜೊತೆ ಹೊಸಬರನ್ನ ಜಗ್ಗೂಡಿಸಿ ಗಾಳಿಪಟ ೨ ಹಾರ್ಸೋಕ್ಕೆ ಯೋಗರಾಜ್ ಭಟ್ ಸಜ್ಜಾಗಿದ್ದು,ಯೂರೋಪ್, ಅಮೇರಿಕಾ, ಮಲೇಷಿಯಾದಲ್ಲಿ ಶೂಟಿಂಗ್ ಮಾಡೋ ಪ್ಲಾನ್ ಮಾಡಿದ್ದಾರಂತೆ. ಮಾರ್ಚ್ ೨೩ ರಿಂದ ಗಾಳಿಪಟ ೨ ಚಿತ್ರದ ಶೂಟಿಂಗ್ ಶುರು ಆಗಲಿದೆಯಂತೆ. ಚಿತ್ರಕ್ಕೆ ಯೋಗರಾಜ್ ಭಟ್ಟರು ಆಕ್ಷನ್ ಕಟ್ ಹೇಳಲಿದ್ದು, ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಇದೆ. ಗಾಳಿಪಟ ೨ ಚಿತ್ರ ಮತ್ತೆ ಭಟ್ರುಗೆ ಹೊಸ ಅಲೆ ಸೃಷ್ಟಿಸುತ್ತಾ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here