Home Cinema ರಿಷಬ್ ಶೆಟ್ಟಿ ಸಿನಿರಂಗದ ಮೊದಲ ಚಿತ್ರದಲ್ಲಿ ಕಿಚ್ಚ ಸುದೀಪ್-ಅಮಿತಾಬ್ ಬಚ್ಚನ್..!? ರಿಷಬ್ ಶೆಟ್ಟಿ ಮೊದಲ ಚಿತ್ರಹೇಗೆ..??!...

ರಿಷಬ್ ಶೆಟ್ಟಿ ಸಿನಿರಂಗದ ಮೊದಲ ಚಿತ್ರದಲ್ಲಿ ಕಿಚ್ಚ ಸುದೀಪ್-ಅಮಿತಾಬ್ ಬಚ್ಚನ್..!? ರಿಷಬ್ ಶೆಟ್ಟಿ ಮೊದಲ ಚಿತ್ರಹೇಗೆ..??! ಅದು ಕಿಚ್ಚ-ಬಚ್ಚನ್ ಒಟ್ಟಿಗೇನಾ..??? ಸ್ಟೋರಿ ಓದಿ…

421
0
SHARE

ಅಭಿನಯ ಚಕ್ರವರ್ತಿ ಸುದೀಪ ತಮ್ಮ ಕೀರ್ತಿ ಪತಾಕೆಯನ್ನು ಕೇವಲ ಚಂದನವನದಲ್ಲಿ ಮಾತ್ರ ಅಲ್ಲ ಟಾಲಿವುಡ್, ಬಾಲಿವುಡ್ ಅಷ್ಟೇ ಏಕೆ ಹಾಲಿವುಡ್ ನಲ್ಲೀ ಹಾರಿಸಿದವ್ರು.ಬಿಗ್ ಬಿ ಅಮಿತಾಭ್ ಜೊತೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡ ಖ್ಯಾತಿ ಕಿಚ್ಚ ಸುದೀಪನದ್ದು..ಈಗ ಮತ್ತೊಂದು ಸಂತಸದ ಸುದ್ದಿ ಸುದೀಪಿಯನ್ಸ್ ಗೆ ಕಾದಿದೆ.. ಆ  ಲೇಟೆಸ್ಟ್ ನ್ಯೂಸ್ ಏನಪ್ಪಾ ಅಂದ್ರೆ ಮತ್ತೊಮ್ಮೆ ಬಿಗ್ ಬಿ ಎಂಡ್ ಸುದೀಪನನ್ನು ಬೆಳ್ಳಿ ತೆರೆ ಮೇಲೆ ನೋಡೋ ಸದಾವಕಾಶ.ಸುದೀಪ ಮತ್ತು ಅಮಿತಾಬ್ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ..

ಈ ಮಹಾ ಮೈತ್ರಿಗೆ ಕಾರಣವಾಗ್ತಿರೋದು ಬೇರ್ಯಾರು ಅಲ್ಲ ಕಿರಿಕ್ ಪಾರ್ಟಿಯ ರುವಾರಿ ರಿಷಭ್ ಶೆಟ್ಟಿ..ಎಸ್,,ಕಿರಿಕ್ ಪಾರ್ಟಿಯ ಮೂಲಕ ಅದೃಷ್ಟ ಖುಲಾಯಿಸಿಕೊಂಡಿರೋ ಶೆಟ್ರು.ಈಗ ಸ್ಯಾಂಡಲ್ ವುಡ್ ನಲ್ಲಿ ಫುಲ್ ಬ್ಯುಸಿ..ತಮ್ಮ ಪ್ರತಿಭೆಯಿಂದ ಒಂದೊಂದೆ ಗೆಲುವಿನ ಸಿಹಿಯನ್ನ ಸವಿಯುತ್ತಿರೋ ರಿಷಭ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಪ್ರಚಾರ ಎಂಡ್ ರಿಲೀಸ್ ಕೆಲಸದಲ್ಲಿ ಬ್ಯುಸಿ ಇರೋ ರಿಷಭ್ ಬಿಗ್  ಬಿ ಹಾಗು ಕಿಚ್ಚನನ್ನು ಒಂದುಗೂಡಿಸೋ ಸಾಹಸಕ್ಕೆ ಕೈ ಹಾಕಿರೋ ಸುದ್ದಿಯನ್ನು ಹೊರಹಾಕಿದ್ದಾರೆ.

ರಿಷಭ್ ಒಂದು ಕಥೆ ಮಾಡಿದ್ದಾರೆ..ಬಿಗ್ ಬಿ ಅಮಿತಾಭ್ ಹಾಗೂ ಸುದೀಪಗೆಂದೇ ಹೆಣೆಯಲಾದ  ಈ ಕಥೆಯಲ್ಲಿ ಈ ಇಬ್ಬರನ್ನು ತೆರೆ ಮೇಲೆ ತರೋ ಆಸೆ ರಿಷಭ್ ರದ್ದು , ಇದಕ್ಕಾಗಿ ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಎಸ್,, ಈಗಾಗಲೇ ರಿಷಭ್  ಬಿಗ್ ಬಿ ಕಥೆಯ ಎಳೆಯನ್ನು ಹೇಳಿಯೂ ಆಗಿದೆ. ..ರಿಷಬ್ ಹೇಳಿರುವ ಸ್ಟೋರಿ ಎಳೆಗೆ ಬಿಗ್ ಬಿ ಫುಲ್ ಖುಷ್ ಆಗಿದ್ದು ಚಿತ್ರಕ್ಕೆ  ಒಕೆ ಹೇಳಿದ್ದಾರಂತೆ…ಇಂಟ್ರಸ್ಟಿಂಗ್ ಅಂದ್ರೆ ಇದು ರಿಷಭ್ ಸಿನಿ ದುನಿಯಾಗೆ ಕಾಲಿಟ್ಟಾಗ ಮಾಡಿದ ಮೊದಲ ಕಥೆ..ಇನ್ನು ಅಮಿತಾಬ್ ಮುಂದೆ ಕಥೆ ಹೇಳಿದ್ದು ಒಂದು ರೋಚಕ ಸಂಗತಿ ಎನ್ನೋ ರಿಷಭ್ ಇನ್ನು ಕಿಚ್ಚ ಸುದೀಪನಿಗೆ ಸ್ಟೋರಿ ಹೇಳಿಲ್ಲ..

ಸದ್ಯದಲ್ಲಿ ಸುದೀಪನಿಗೂ  ಕಥೆ ಎಳೆಯನ್ನು ಹೇಳಲಿರುವ ರಿಷಭ್..ಸುದೀಪ ಒಕೆ ಅಂದ್ರೆ  ಸಿನಿಮಾ ಕೆಲಸಗಳು ಆರಂಭವಾಗಲಿದ್ದು, ಡಿಸೆಂಬರ್ ಅಥವಾ ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ವಿಷಯವನ್ನು ಹೇಳೀದ್ದಾರೆ.ಹಾಗಂತ ಇದೇ ಮೊದಲೇನಲ್ಲ ಅಭಿನಯ ಚರ್ಕವರ್ತಿ ಬಿಗ್ ಬಿ ತೆರೆ ಹಂಚಿಕೊಳ್ತಿರೋದು.. 2010ರಲ್ಲಿ ತೆರೆಕಂಡ ರಣ್ ಚಿತ್ರದಲ್ಲಿ ಅಮಿತಾಭ್ ಮಗನಾಗಿ ಸುದೀಪ್ ಸ್ಕ್ರೀನ್  ಶೇರ್ ಮಾಡಿದ್ದಾರೆ…

ಇನ್ನು ಮೆಘಾ ಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲೂ ಅಮಿತಾಭ್, ಸುದೀಪ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ..ಒಂದ್ ವೇಳೆ ರಿಷಭ್ ಶೆಟ್ಟಿ ಚಿತ್ರಕ್ಕೆ ಕಿಚ್ಚ ಗ್ರೀನ್ ಸಿಗ್ನಲ್ ಕೋಟ್ರೆ  ಇಬ್ಬರು ದಿಗ್ಗಜರನ್ನು ಮತ್ತೊಮ್ಮೆ ಬೆಳ್ಳೆತೆರೆ ಮೇಲೆ ಕಣ್ತುಂಬಿಕೊಳ್ಳೊ ಅವಕಾಶ ಸದ್ಯದಲ್ಲೆ ಸಿಗಲಿದೆ..ಸ್ಕ್ರಿಪ್ಟ್ ಒಕೆ ಆಗಿದ್ದು, ಅಫೀಶಿಯಲ್ ಆಗಿ ಅನೌನ್ಸ್ ಆಗಿಲ್ಲ…ಚಿತ್ರವನ್ನ ಹಿಂದಿಯಲ್ಲಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ..

ಹಿಂದಿ, ಕನ್ನಡ  ಎರಡೂ ಭಾಷೆಯಲ್ಲೂ ಸಿನಿಮಾ ಮಾಡಬೇಕಾ ಅನ್ನೋದು ಕೂಡ ಡಿಸೈಡ್ ಆಗಿಲ್ಲ ಅನ್ನೋದು ರಿಷಭ್ ಮಾತುಗಳು,,,.ಒಂದ್ ವೇಳೇ ಇಬ್ಬರು ಕಥೆ ಓಕೆ ಮಾಡಿ ಗ್ರೀನ್ ಸಿಗ್ನಲ್ ಕೊಟ್ರೆ ರಿಷಭ್ ಬಾಲಿವುಡ್ ಡೆಬ್ಯು ಚಿತ್ರ ಸಿನಿ ದಿಗ್ಗಜ  ಬಿಗ್ ಬಿ ಜೊತೆ ಮಾಡಿದ ಕೀರ್ತಿ ಒಲಿದು ಬರಲಿದೆ..ಅದೇನೇ ಇರ್ಲಿ ಸುದೀಪ- ಬಿಗ್ ಬಿ ಒಟ್ಟಿಗೆ  ಸ್ಕ್ರೀನ್ ಶೇರ್ ಮಾಡ್ತಾರೆ ಅಂದ್ರೆ  ಅದಕ್ಕಿಂತ ಖುಷಿಯ ವಿಚಾರ ಮಗದೊಂದಿಲ್ಲ..ಆದಷ್ಟು ಬೇಗ ಈ ಜೋಡಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂಬುದೇ ಎಲ್ಲರ ಕೋರಿಕೆ.

LEAVE A REPLY

Please enter your comment!
Please enter your name here