Home District ರೆಡ್ಡಿ ಕೊಟೆ ಪುಡಿಗಟ್ಟಲು ಮತ್ತೇ ತೊಡೆ ತಟ್ಟಿ ನಿಂತ ಸಿದ್ದು ಮತ್ತು ತಂಡ..!! ಜಗಜಟ್ಟಿಗಳ ಕಾಳಗಕ್ಕೆ...

ರೆಡ್ಡಿ ಕೊಟೆ ಪುಡಿಗಟ್ಟಲು ಮತ್ತೇ ತೊಡೆ ತಟ್ಟಿ ನಿಂತ ಸಿದ್ದು ಮತ್ತು ತಂಡ..!! ಜಗಜಟ್ಟಿಗಳ ಕಾಳಗಕ್ಕೆ ಸಾಕ್ಷಿಯಾಗುತ್ತಿದೆ ಗಣಿಧೂಳಿನ ರಣಾಂಗಣ.!! ಬಳ್ಳಾರಿ ಬುಲ್ಲೋಡು v/s ಸೇನಾನಿ ಸಿದ್ದು.!

2012
0
SHARE

ಸಧ್ಯ ರಾಜ್ಯ ರಾಜಕಾರಣದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ತೊಡಗಿದೆ, ಮೂರು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನ ಸೋಲಿಸಿಯೇ ಸಿದ್ಧ ಅಂತಾ ರಣಕಹಳೆ ಮೊಳಗಿಸಿವೆ, ಈ ಮೈತ್ರಿಯಲ್ಲಿ ಗೆದ್ದು ಮೈತ್ರಿ ಸರ್ಕಾರಕ್ಕೆ ಜನಬೆಂಬಲ ಇದೆ ಅಂತಾ ಸಾಬೀತು ಪಡೆಸಲು ಹವಣಿಸುತ್ತಿದೆ. ಇದು ದೋಸ್ತಿ ಕತೆಯಾದ್ರೆ ಬಿಜೆಪಿಯಲ್ಲೂ ಪರಿಸ್ಥಿತಿ ಬಿನ್ನವಾಗಿಲ್ಲ.

ಈ ಉಪ ಚುನಾವಣೆಯಲ್ಲಿ ಗೆದ್ದು ತಮ್ಮ ಪವರ್ ಏನು ಅನ್ನೋದನ್ನ ತೋರಿಸಲು ಸಿದ್ಧವಾಗಿದೆ. ಬಳ್ಳಾರಿ ರಾಜಕಾರಣವನ್ನ ಸೂಕ್ಷ್ಮವಾಗಿ ಗಮನಿಸೋದ್ ಆದ್ರೆ. ಬಳ್ಳಾರಿಯಲ್ಲಿ ಶ್ರೀ ರಾಮುಲುರ ವರ್ಚಸ್ಸು ಜೋರಾಗಿದೆ. ಅಲ್ಲಿ ಬಿಜೆಪಿ ವರ್ಚಸ್ಸಿಗಿಂತ ಶ್ರೀರಾಮುಲು ಹೆಸರೆ ಕೆಲಸ ಮಾಡುತ್ತೆ, ಆ ಮಟ್ಟಿಗೆ ಬಳ್ಳಾರಿಯಲ್ಲಿ ಶ್ರೀರಾಮುಲು ಗಟ್ಟಿಯಾಗಿ ಬೇರೂರಿದ್ದಾರೆ… ಈ ಹಿಂದೆ ಬಳ್ಳಾರಿ ಸಂಸದರಾಗಿದ್ದ ಶ್ರೀರಾಮುಲು ತಮ್ಮ ಸೋದರಿ ಶಾಂತಾರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ.

ಶ್ರೀರಾಮುಲು ಪ್ರಭಾವ ಹಾಗೂ ವಾಲ್ಮೀಕಿ ಸಮುದಾಯ ಶಾಂತಾ ಅವರನ್ನು ಗೆಲ್ಲಿಸಬಹುದು ಎಂಬ ನಿರೀಕ್ಷೆ ಬಿಜೆಪಿಗಿದೆ. ಆದರೆ, ಕಾಂಗ್ರೆಸ್‌ ಬಳ್ಳಾರಿಯಲ್ಲಿ ಶತಾಯಗತಾಯ ಬಿಜೆಪಿಯನ್ನು ಹಣಿಯಲು ಸಜ್ಜಾಗಿ ನಿಂತಿದೆ. ಬಳ್ಳಾರಿ ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.ರಾಜ್ಯದ ದಕ್ಷಿಣ ಭಾಗದ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ.

ಬಳ್ಳಾರಿಯನ್ನು ಡಿ.ಕೆ. ಶಿವಕುಮಾರ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತೆ ಜಮಖಂಡಿ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿರುವ ಜಮಖಂಡಿ ಕ್ಷೇತ್ರದಲ್ಲಿ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್‌ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್‌ ನ್ಯಾಮಗೌಡ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಅನುಕಂಪದ ಅಲೆಯಲ್ಲಿ ಆನಂದ್‌ ಗೆದ್ದು ಬರುವುದು ಕಾಂಗ್ರೆಸ್‌ಗೆ ಸವಾಲಲ್ಲ. ಬದಲಾಗಿ ಇಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದ ಸುಶೀಲ್‌ ಕುಮಾರ್‌ ಬೆಳಗಲಿ ಅಸಮಾಧಾನ ಶಮನ ಸದ್ಯಕ್ಕೆ ಕಾಂಗ್ರೆಸ್‌ಗಿರುವ ಸವಾಲು.

ಹೊರ ನೋಟಕ್ಕೆ ಸುಶೀಲ್‌ ಕುಮಾರ್‌ ಅತೃಪ್ತಿ ಅಷ್ಟೊಂದು ಹೆಚ್ಚಾಗಿರದಂತೆ ಕಂಡರೂ ಒಳಗೆ ಅದು ಕಾಂಗ್ರೆಸ್‌ಗೆ ತಕ್ಕಮಟ್ಟಿಗಿನ ಡ್ಯಾಮೇಜ್‌ ಮಾಡುವ ಸಾಧ್ಯತೆಗಳಂತೂ ಇವೆ.ಅಂದು ಅಂದ್ರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಳ್ಳಾರಿ ರಿಪಬ್ಲಿಕ್ ಬಳ್ಳಾರಿ ಆಗಿತ್ತಂತೆ. ಅಂದು ಇಡೀ ಬಳ್ಳಾರಿಯನ್ನ ರೆಡ್ಡಿ ಆಳ್ತಾ ಇದ್ದರಂತೆ. ಅಂದು ಸಿದ್ದರಾಮಯ್ಯಗೆ ಭಾಷಣ ಮಾಡೋದಕ್ಕೆ ಒಂದು ಸ್ಥಳವನ್ನೂ ಕೊಟ್ಟಿರಲಿಲ್ಲಂತೆ. ಆದ್ರೇ ಈಗ ಹಾಗೆ ಆಗೋದಿಲ್ಲ. ಈಗ ನಾವು ಕಾಲಿಟ್ಟಿದ್ದೇವೆ. ನಿಮ್ಮನ್ನ ಓಡಿಸುತ್ತೇವೆ ಅಂತಾ ಸಿದ್ದು ಅಬ್ಬರಿಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಈ ಉಪ ಚುನಾವಣೆ ಬರಲು ಶ್ರೀರಾಮುಲೇ ಕಾರಣ ಅಂತಾ ಸಿದ್ದರಾಮಯ್ಯ ನೇರವಾಗಿ ಆರೋಪ ಮಾಡುತ್ತಿದ್ದಾರೆ, ಅಧಿಕಾರಕ್ಕಾಗಿಯೇ ರಾಮುಲು ಸಂಸದರಾಗಿದ್ದವರು ಅಸೆಂಬ್ಲಿ ಎಲೆಕ್ಷನ್ ಗೆ ನಿಂತು ಈಗ ರಾಜೀನಾಮೆ ನೀಡಿದ್ದಾರೆ, ಅವರಿಂದಲೇ ಬೇಡವಾದ ಉಪ ಚುನಾವಣೆ ಬಂದಿದೆ ಅಂತಾ ಸಿದ್ದು ರಾಮುಲು ಮೇಲೆ ಎರಗಿ ಬಿದ್ದಿದ್ದಾರೆ, ಅಷ್ಟೆ ಅಲ್ಲ ಶ್ರೀ ರಾಮುವು ಪಾರ್ಲಿಮೆಂಟ್ ನಲ್ಲಿ ಮಾಡಿರೋ ಸಾಧನೆ ಬಗ್ಗೆ ಸಿದ್ದು ಲೇವಡಿ ಮಾಡಿದ್ದು ಹೇಗೆ ಗೊತ್ತಾ.

ಇನ್ನು ಸೆಕ್ಷನ್ ವಿಚಾರದಲ್ಲಿ ಸಿದ್ದು, ರಾಮುಲು ಮತ್ತು ರೆಡ್ಡಿ ಇಬ್ಬರನ್ನು ಕೆರಳಿಸಿದ್ದು ಮಾತ್ರ ಸುಳ್ಳಲ್ಲ, ಮೊದಲೇ ಸಿದ್ದರಾಮಯ್ಯ ಮೊದಲು ಲಾಯರ್ ಆಗಿದ್ದವರು, ಸೋ ಕಾನೂನುಗಳೆಲ್ಲ ಅವರ ಬಾಯಲ್ಲೇ ಸುಲಲಿತವಾಗಿ ಹರಿದಾಡುತ್ತವೆ. ಆದೇ ಕಾರಣಕ್ಕೋ ಏನೋ ಲಾ ಪಾಯಿಂಟ್ ಹಾಕಿ ರಾಮುಲು ಕಾನೂನು ಜ್ಞಾನ ಇಲ್ಲದವರು ಅಂತಾ ಟಾಂಗ್ ಕೊಟ್ಟಿದ್ದಾರೆ.ಸಿದ್ದರಾಮಯ್ಯ ಸ್ಟೇಜ್ ಮೇಲೆ ನಿಂತಿದ್ರೆ ಅದೊಂತರ ಮಜ, ಮೇಜು ಕುಟ್ಟ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದೇ ಮರು ಪ್ರಶ್ನೆ ಮಾಡುವುದಕ್ಕೆ ಸಿದ್ದುಗೆ ಸಿದ್ದುನೇ ಸಾಟಿ. ಜಾತಿ ವಿಚಾರದಲ್ಲಿ ಸಿದ್ದು ಹೇಳಿದ್ದು ಏನು ಗೊತ್ತಾ.

ಸಧ್ಯ ರಾಜ್ಯದಲ್ಲಿ ಶ್ರೀ ರಾಮುಲು ವಾಲ್ಮಿಕಿ ಜಯಂತಿ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೆಚ್ಚಿನ ಕೊಡುಗೆ ಕೊಟ್ಟಿದ್ದೇನೆ ಅಂತಾ. ಸಿದ್ದು ತಮ್ಮ ಅಂತರಾಳದಲ್ಲಿ ಅಡಗಿದ್ದ ಜಾತಿ ಓಲೈಕೆಯನ್ನು ಮಾಡಿದ್ರು.ಒಟ್ಟಾರೆ ಬಳ್ಳಾರಿಯಲ್ಲಿ ಕಿತ್ತಾಟ ಬಲು ಜೋರಾಗಿದೆ. ಬಳ್ಳಾರಿಯನ್ನ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದಾರೆ. ಏನಾದ್ರು ಸರಿಯೇ ನಮ್ಮ ಹಳೆ ಕೋಟೆಯನ್ನ ವಶ ಪಡಿಸಿಕೊಳ್ಳ ಬೇಕು ಅಂತಾ ಕಾಂಗ್ರೆಸ್ ನಾಯಕರು ಬಳ್ಳಾರಿಯಲ್ಲಿ ಠಿಕಾಣಿ ಹೂಡಿದ್ರೆ, ನಮ್ಮ ಕೊಟೆ ವಶ ಪಡಿಸಿಕೊಳ್ಳಲು ಬಿಡಬಾರದು ಅಂತಾ ಬಿಜೆಪಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಮತದಾರ ಯಾರಿಗೆ ಜೈ ಅನ್ನುತ್ತಾನೆ. ಬಳ್ಳಾರಿಯಲ್ಲಿ ಬಾದ್ ಷಾ ಯಾರ್ ಆಗ್ತಾರೆ ಅನ್ನೋದನ್ನ ಕಾಲವೇ ನಿರ್ಣಯಿಸಲಿದೆ.

LEAVE A REPLY

Please enter your comment!
Please enter your name here