Home Cinema ರೆಬೆಲ್ ಪುತ್ರ ಅಭಿಷೇಕ್ ಬಗ್ಗೆ ಸುದೀಪ ಹೀಗಂದರು..! ಅರೇ..! ಅಭಿನಯ ಚಕ್ರವರ್ತಿಗೆ ಮತ್ತೆ ನೆನಪಾಗಿದ್ದೇಕೆ ಆ...

ರೆಬೆಲ್ ಪುತ್ರ ಅಭಿಷೇಕ್ ಬಗ್ಗೆ ಸುದೀಪ ಹೀಗಂದರು..! ಅರೇ..! ಅಭಿನಯ ಚಕ್ರವರ್ತಿಗೆ ಮತ್ತೆ ನೆನಪಾಗಿದ್ದೇಕೆ ಆ ಮಹಾಗುರು..!

597
0
SHARE

ವ್ಹಾ..ವ್ಹಾ..! ರೆಬೆಲ್ ಪುತ್ರ ಅಭಿಷೇಕ್ ಬಗ್ಗೆ ಸುದೀಪ ಹೀಗಂದರು..!ಅಭಿಷೇಕ್ ಅಂಬರೀಶ್, ಚಂದನವನಕ್ಕೆ ಅಮರ್ ರೂಪದಲ್ಲಿ ಕಾಲಿಡುತ್ತಿದ್ದಾರೆ. ಇನ್ನೇನೂ ಚಿತ್ರದ ಚಿತ್ರೀಕರಣ ಮುಗಿಯುವ ಹಂತಕ್ಕೂ ಬಂದಿದೆ.

ಹೀಗಿರುವಾಗ್ಲೇ ಅಮರ್ ಬಗ್ಗೆ ನಿರೀಕ್ಷೆಗಳೂ ಆಗ್ಲೇ ಗರಿಗೇದರಿವೆ. ಕಾರಣ. ಅಮರ್ ಚಿತ್ರದ ಟೀಸರ್ ಇದೇ ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗಲಿದೆ.ಹೌದು, ಅಮರ್.. ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ್ಲೇ ಅಭಿನಯ ಚಕ್ರವರ್ತಿ ಸುದೀಪ, ಅಮರ್ ಬಗ್ಗೆ ಮಾತನಾಡಿದ್ದಾರೆ. ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಭಿ.. ಒಳ್ಳೇಯದಾಗಲಿ ಎಂದು ಮನಪೂರ್ವಕವಾಗಿ ಹರಸಿದ್ದಾರೆ. ಟೀಸರ್ ನೋಡುವ ತಮ್ಮ ಉತ್ಸುಕತೆಯನ್ನೂ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ.ಬರೀ ಅಭಿನಯ ಚಕ್ರವರ್ತಿಯಷ್ಟೇ ಅಲ್ಲ, ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ನಟರೆಲ್ಲಾ ಅಮರ್ ಚಿತ್ರದ ಟೀಸರ್ ನೋಡಲು ಕಾತುರರಾಗಿದ್ದಾರೆ.

ಅಭಿಯ ಚೊಚ್ಚಲ ಅವತಾರ ಹೇಗಿರಲಿದೆ ಅನ್ನುವ ಕೂತುಹಲದಲ್ಲಿಯೇ ಪ್ರೇಮಿಗಳ ದಿನಕ್ಕೆ ಕಾದು ಕುಂತಿದೆ ಚಂದನವನ. ಅಂದ ಹಾಗೇ ಅಮರ್‌ಗೆ ನಾಗಶೇಖರ್ ನಿರ್ದೇಶನವಿದೆ. ಇನ್ನೂ ನಾಯಕಿಯಾಗಿ ತಾನ್ಯಾ ಹೋಫ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ, ಟೀಸರ್ ಬಿಡುಗಡೆಗೆ ಇನ್ನೂ ಕೆಲವೇ ದಿನಗಳೂ ಬಾಕಿ ಉಳಿದಿವೆ. ಅಲ್ಲಿವರೆಗೂ ಕಾಯಬೇಕಷ್ಟೇ.ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ, ಚಿತ್ರರಂಗದಲ್ಲಿ ಯಾರನ್ನಾದ್ರೂ ಗುರು ಅಂಥ ಒಪ್ಪಿಕೊಂಡು, ಅಪ್ಪಿಕೊಂಡಿದ್ದರೆ ಅದು ಸುನೀಲ್ ಕುಮಾರ್ ದೇಸಾಯಿ ಅವ್ರನ್ನ ಮಾತ್ರ. ಸುನೀಲ್ ಕುಮಾರ್ ದೇಸಾಯಿ ಬಗ್ಗೆ ವಿಪರೀತ ಪ್ರೀತಿಯನ್ನಿಟ್ಟುಕೊಂಡಿರುವ ಇದೇ ಸುದೀಪ..

ಇತ್ತೀಚಿಗೆ ಗುರುಗೆ ಕಾಣಿಕೆಯನ್ನ ನೀಡಿದ್ದಾರೆ. ಅದುವೇ ಕಂಠದಾನ ಮಾಡುವ ಮೂಲಕ. ಹೌದು, ಕನ್ನಡ ಸಿನಿ ಪ್ರೇಕ್ಷಕರಿಗೆ ಸಸ್ಪೆನ್ಸ್ ಥ್ರಿಲರ್ ಚಿತ್ರಗಳ ಹುಚ್ಚು ಹಿಡಿಸಿದ ಮಾಸ್ಟರ್ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ, ಉದ್ಘರ್ಷದ ಮೂಲಕ ಈಗ ಮತ್ತೆ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಆದ್ರೆ, ಪ್ರತಿ ಸಾರಿ ಸುನೀಲ್ ಕುಮಾರ್ ದೇಸಾಯಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಡುತ್ತಿದ್ದಂತೆ, ನೀವು ಯಾವಾಗ ಕರುನಾಡ ಕಿಚ್ಚ, ಬಾದ್‌ಷಾ ಸುದೀಪ್ ಜೊತೆ ಯಾವಾಗ ಚಿತ್ರ ಮಾಡ್ತೀರಿ? ಅಂತಾ ಪ್ರಶ್ನಿಸುವ ಅಭಿಮಾನಿಗಳ ಸಂಖ್ಯೆಗೆ ಮಿತಿಯಿಲ್ಲ.

ಆದ್ರೆ ಈ ಬಾರಿ ಮತ್ತೊಂದು ಸರ್ಪ್ರೈಸ್ ನೀಡಿರೋ ದೇಸಾಯಿ, ಕಿಚ್ಚ ಸುದೀಪರಿಂದ ಉದ್ಘರ್ಷ ಚಿತ್ರದ ಟ್ರೇಲರ್‌ಗೆ ಸೈಲಂಟ್ ಆಗಿಯೇ ಡಬ್ಬಿಂಗ್ ಮಾಡಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರ್ ಕಂಡು ಫುಲ್ ಇಂಪ್ರೆಸ್ ಆಗಿರೋ ಕಿಚ್ಚ ಸುದೀಪ್, ಅತ್ಯಂತ ಖುಷಿಯಿಂದಲೇ ಕಂಠದಾನ ಮಾಡಿದ್ದಾರೆ.ಇತ್ತೀಚಿಗಷ್ಟೇ ಹೈದರಾಬಾದ್‌ಗೆ ತೆರಳಿದ್ದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಿರ್ಮಾಪಕರಾದ ಆರ್. ದೇವರಾಜ್ ಸುದೀಪ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಜೊತೆಗೆ ಹೈದರಾಬಾದ್ನಲ್ಲಿಯೇ ಸುದೀಪರಿಂದ ಟ್ರೇಲರ್‌ಗೆ ಡಬ್ಬಿಂಗ್ ಮಾಡಿಸಿದ್ದಾರೆ. ವಿಶೇಷ ಅಂದರೆ ನಾಲ್ಕೂ ಭಾಷೆಯಲ್ಲೂ ಸುದೀಪ ಧ್ವನಿ ಕೇಳಲಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಲು ಕಾರಣವಾಗಿದೆ. ಇನ್ನೊಂದೆಡೆ ಮುಂದಿನ ಚಿತ್ರದಲ್ಲಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸುದೀಪರನ್ನು ನಿರ್ದೇಶನ ಮಾಡಲಿದ್ದಾರಾ ಅನ್ನೋ ಕುತೂಹಲವನ್ನೂ ಈ ಭೇಟಿ ಹೆಚ್ಚಿಸಿದೆ.ಇನ್ನು ಬಹುಭಾಷೆಯಲ್ಲಿ ಮೂಡಿ ಬಂದಿರೋ ಉದ್ಘರ್ಷದಲ್ಲಿ ಮಿಸ್ಟರ್ ವರ್ಲ್ಡ್ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಇನ್ನು ಮೋಸ್ಟ್ ವಾಂಟೆಡ್ ವಿಲನ್ ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ಇನ್ನೂ ಮುಂತಾದವರು ವಿಲನ್ ಆಗಿ ಅಭಿನಯಿಸಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ.ರಾಜನ್ ಛಾಯಾಗ್ರಹಣವಿದ್ದು, ಬಾಲಿವುಡ್ನ್ ಸಂಜೋಯ್ ಚೌಧುರಿ ಸಂಗೀತ ಸಂಯೋಜಿಸಿದ್ದಾರೆ. ಸುದೀಪ ಪ್ಲೇವರ್‌ನ್ನೊತ್ತ ಟ್ರೇಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here