Home Cinema ರೆಬೆಲ್ ಸ್ಟಾರ್ ಅಂಬಿ ಸಮಾಧಿಗೆ ಶಾಸ್ತ್ರೋಕ್ತ ಪೂಜೆ..! ಕಾವೇರಿ ಒಡಲು ಸೇರಿದ ಅಂಬಿ ಅಸ್ಥಿ..! ಪುತ್ರನಿಂದ...

ರೆಬೆಲ್ ಸ್ಟಾರ್ ಅಂಬಿ ಸಮಾಧಿಗೆ ಶಾಸ್ತ್ರೋಕ್ತ ಪೂಜೆ..! ಕಾವೇರಿ ಒಡಲು ಸೇರಿದ ಅಂಬಿ ಅಸ್ಥಿ..! ಪುತ್ರನಿಂದ ಅಸ್ಥಿ ವಿಸರ್ಜನೆ..! ದರ್ಶನ್,ದೊಡ್ಡಣ್ಣ,ವೆಂಕಟೇಶ್ ಉಪಸ್ಥಿತಿ…

216
0
SHARE

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಸಮಾಧಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಸಮಾಧಿಯಲ್ಲಿದ್ದ ಚಿತಾಭಸ್ಮವನ್ನು ಸಂಗ್ರಹಿಸಿ ಉಳಿದ ವಿಧಿ-ವಿಧಾನಗಳನ್ನು ನೇರವೇರಿಸಲಾಯಿತು. ಇನ್ನೂ ಅಲ್ಲೇ ಇದ್ದ ಕಲಿಯುಗ ಕರ್ಣನ ಅಭಿಮಾನಿಗಳಿಗೆ ಅಂಬಿ ಪುತ್ರ ಅಭಿಷೇಕ್ ಚಿತಾಭಸ್ಮವನ್ನು ವಿತರಿಸಿದರು. ನೆಚ್ಚಿನ ನಟನ ಚಿತಾಭಸ್ಮವನ್ನು ಕೈಯಲ್ಲಿ ಹಿಡಿದ ಅಭಿಮಾನಿಗಳು ಕಣ್ಣೀರಿಟ್ಟರು.

ರೆಬಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇವತ್ತಿಗೆ ಐದು ದಿನ ಕಳೆದಿವೆ. ಸೋಮವಾರ ಅಂಬಿ ಅಂತ್ಯಕ್ರಿಯೆ ನಡೆದಿದ್ದು, ಮೂರನೇ ದಿನದ ಕಾರ್ಯಕ್ರಮವನ್ನು ಇಂದು ಕಂಠೀರವ ಸ್ಟುಡಿಯೋದಲ್ಲಿ ಏರ್ಪಡಿಸಲಾಗಿತ್ತು. ಅಂಬರೀಶ್ ಕುಟುಂಬ ಅವರ ಅಸ್ಥಿಗೆ ಶಾಸ್ತ್ರೋಕ್ತ ಪೂಜೆ ನೇರವೇರಿಸಿದ್ರು. ಶಾಸ್ತ್ರೋಕ್ತವಾಗಿ ಅಂಬರೀಶ್ ಪುತ್ರ ಅಭಿಷೇಕ್ ಅವರಿಂದ ವಿಧಿ ವಿಧಾನದೊಂದಿಗೆ ಅಸ್ಥಿಗೆ ಪೂಜೆ ಮಾಡಿಸಲಾಯಿತು. ಅಸ್ಥಿ ಸಂಗ್ರಹಣ ,ಚಿತಾಭಸ್ಮವನ್ನು ಸಂಗ್ರಹಿಸಿ ಉಳಿದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯ್ತು.

ಸುಮಲತಾ ಅಂಬರೀಶ್, ಅಂಬರೀಶ್ ಸಹೋದರ ಆನಂದ್, ನಿರ್ಮಾಪಕ ರಾಕ್​​​​​​​​​​​​​​​​ಲೈನ್ ವೆಂಕಟೇಶ್, ನಟ ದರ್ಶನ್, ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಗಣ್ಯರು ಅಸ್ಥಿ ಪೂಜೆಯಲ್ಲಿ ಭಾಗವಹಿಸಿದ್ದರು…
ಇನ್ನೂ ಯಜಮಾನ ಚಿತ್ರದ ಶೂಟಿಂಗ್ ಗಾಗಿ ಸ್ವೀಡನ್ ಗೆ ತೆರಳಿದ್ದ ನಟಿ ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಹಿಂತಿರುಗಿದ್ದು, ಅಂಬಿ ಸಮಾಧಿಗೆ ಬಂದು ಅಂತಿಮ ನಮನ ಸಲ್ಲಿಸಿದ್ರು….

ಇಂದೂ ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಮಂದಿ ಅಂಬರೀಶ್‌ ಅವರ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಧಾರ್ಮಿಕ ವಿಧಿಗಳು ಮುಗಿಯುವ ವರೆಗೆ ಸಮಾಧಿ ಬಳಿ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಚಿತಾಭಸ್ಮವನ್ನು ಅಭಿಷೇಕ್‌ ಅವರು ಕೆಲ ಅಭಿಮಾನಿಗಳಿಗೆ ವಿತರಿಸಿದರು. ಚಿತಾಭಸ್ಮ ಪಡೆದ ಅಭಿಮಾನಿಗಳು ಸಂಭ್ರಮದಲ್ಲಿ ತೇಲಾಡಿ ನೆಚ್ಚಿನ ನಾಯಕರನ್ನು ನೆನೆದು ಕಣ್ಣೀರಿಟ್ಟರು. ಅಭಿಷೇಕ್‌ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಇನ್ನೂ ಕಾರ್ಯ ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿಸಲಾಗಿತ್ತು.. ಹಿರಿಯ ಪೊಲೀಸ್ರು ಸ್ಥಳದಲ್ಲೇ ಇದ್ದು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಸ್ಥಳದಲ್ಲಿ ಈಗಾಗಲೇ ಬ್ಯಾರಿಕೇಡ್ ಗಳನ್ನು ಹಾಕಿ, 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here