Home District ರೇಷ್ಮೆ ಸೀರೆ ಹೆಸರಲ್ಲಿ ನಾಮ ಹಾಕಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್..!? ರಿಯಾಯ್ತಿ ದರದಲ್ಲಿ ಸೀರೆ ಕೊಡುವುದಾಗಿ...

ರೇಷ್ಮೆ ಸೀರೆ ಹೆಸರಲ್ಲಿ ನಾಮ ಹಾಕಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್..!? ರಿಯಾಯ್ತಿ ದರದಲ್ಲಿ ಸೀರೆ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸರ್ಕಾರ..!?

1999
0
SHARE

ಅಗ್ಗದ ದರದ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುತ್ತೆ ಎಂದಿದ್ದ ಸರ್ಕಾರ ಈಗ ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕಡಿಮೆ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪ್ರಕಟಿಸಿದ್ರು.

ಆದ್ರೆ, ಈವರೆಗೂ ಎಂಎಸ್ಐಎಲ್ ಮಳಿಗೆಗಳಿಗೆ ಈವರೆಗೂ ಮೈಸೂರು ಸಿಲ್ಕ್ ಸೀರೆ ಪೂರೈಕೆಯಾಗಿಲ್ಲ. ವರಮಹಾಲಕ್ಷ್ಮೀ ಹಬ್ಬಕ್ಕೆ ಬೆರಳೆಣಿಕೆಷ್ಟು ದಿನಗಳು ಮಾತ್ರ ಬಾಕಿ ಇದ್ದರೂ ಎಂಎಸ್ಐಎಲ್ ಮಳಿಗೆಗಳಲ್ಲಿ ಸೀರೆ ಸಿಗುತ್ತಿಲ್ಲ.

ಅಗ್ಗದ ದರದ ಮೈಸೂರು ಸಿಲ್ಕ್ ಸೀರೆ ಖರೀದಿಗೆ ಎಂದು ಎಂಎಸ್ಐಎಲ್ ಮಳಿಗೆಗಳಿಗೆ ತೆರಳಿದ ಮಹಿಳೆಯರಿಗೆ ನಿರಾಸೆಯಾಗಿದೆ. ಸೀರೆ ಸಿಗದೇ ನಿರಾಸೆಯಲ್ಲಿಯೇ ಮನೆಗೆ ಹಿಂತಿರುಗುತ್ತಿದ್ದಾರೆ.

ಅಲ್ಲದೇ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಗ್ಗದ ದರದ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಘೋಷಣೆ ಮಾಡಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.

ಇದೆಲ್ಲಾ ಕೇವಲ ಗಿಮಿಕ್ ಎಂದೇ ಜನರು ಹೇಳುತ್ತಿದ್ದಾರೆ. ಅಗ್ಗದ ದರದಲ್ಲಿ ಮೈಸೂರು ಸಿಲ್ಕ್ ಸೀರೆ ನೀಡಿದ್ರೆ ಸರ್ಕಾರಕ್ಕೆ ಐದರಿಂದ 6 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದೇ ಹಳಲಾಗುತ್ತಿದೆ.ಹೀಗಾಗಿಯೇ ಸರ್ಕಾರ ಮೈಸೂರು ಸಿಲ್ಕ್ ಸೀರೆಯನ್ನು ಇನ್ನು ಕೂಡ ಮಳಿಗೆಗಳಿಗೆ ಪೂರೈಕೆ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here