Home District ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು…ರೈತರ ಪರವಾಗಿ ಕೆಲಸ ಮಾಡುತ್ತಾರೆ HDK..ಪ್ರಜ್ವಲ್ ರೇವಣ್ಣ ತಿರುಗೇಟು..

ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು…ರೈತರ ಪರವಾಗಿ ಕೆಲಸ ಮಾಡುತ್ತಾರೆ HDK..ಪ್ರಜ್ವಲ್ ರೇವಣ್ಣ ತಿರುಗೇಟು..

1079
0
SHARE

ರೈತರ ಪರವಾಗಿ ಕೆಲಸ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಜೆಡಿಎಸ್ ಪ್ರಧಾನಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ.ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಮಾತನಾಡಿದ ಅವರು,..

ಇದು ಸಮ್ಮಿಶ್ರ ಸರ್ಕಾರ. ಸಿಎಂ ಎಲ್ಲರ ಜೊತೆ ಚರ್ಚೆ ನಡೆಸಿ ಒಳ್ಳೆಯ ನಿರ್ಧಾರಕ್ಕೆ ಬರ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷ ಸಂಘಟನೆ ಮಾಡ್ತೀವಿ. ರೈತರ ಸಾಲಮನ್ನಾದಲ್ಲಿ ಎಂದೂ ಹಿಂದೆ ಸರಿಯೋಲ್ಲ.ಬಹುಮತ ಕೊಟ್ಟಿದ್ರೆ ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡೋರು…

ಆದ್ರೆ, ಈಗ ಇರೋದು ಸಮ್ಮಿಶ್ರ ಸರ್ಕಾರ ಹಾಗಾಗಿ, ಎರಡು ಪಕ್ಷದ ಮುಖಂಡರು ಕುಳಿತು ಡಿಸೈಡ್ ಮಾಡ್ತಾರೆ ಎಂದ್ರು.ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಪ್ರಜ್ವಲ್ ರೇವಣ್ಣ ,ಮಠಾಧೀಶರ ಹೇಳಿಕೆ ವಿಚಾರ ಕುಮಾರಸ್ವಾಮಿಯವರೇ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ್ದಾರೆ…

ಇದೇ ವೇಳೆ ಇಂದು ನೂತನ ಸಿಎಂ ಕುಮಾರಸ್ವಾಮಿ ಸಿದ್ದಗಂಗ ಮಠಕ್ಕೆ ಭೇಟಿ ನೀಡಲಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಶ್ರೀಗಳ ಜೊತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.ಹೊಸಮಠದಲ್ಲಿ ಶ್ರೀಗಳನ್ನು ಕುಮಾರಸ್ವಾಮಿ ಭೇಟಿಯಾಗಲಿದ್ದು, ಹೊಸಮಠದ ಆವರಣದಲ್ಲೂ ಭದ್ರತೆ ನಿಯೋಜಿಸಲಾಗಿದೆ. ವಿವಿ ಹೆಲಿಪ್ಯಾಡ್ ಮೂಲಕನಿಂದ ರಸ್ತೆ ಮೂಲಕ ಮಠಕ್ಕೆ ಆಗಮಿಸಲಿದ್ದಾರೆ…

LEAVE A REPLY

Please enter your comment!
Please enter your name here