Home Elections 2019 ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ “ಕರ್ನಾಟಕ ಬಂದ್” ಎಚ್ಚರಿಕೆ ನೀಡಿ 24 ಗಂಟೆಗಳಲ್ಲಿ ಉಲ್ಟಾ ಹೊಡೆದ...

ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ “ಕರ್ನಾಟಕ ಬಂದ್” ಎಚ್ಚರಿಕೆ ನೀಡಿ 24 ಗಂಟೆಗಳಲ್ಲಿ ಉಲ್ಟಾ ಹೊಡೆದ ಬಿಎಸ್ವೈ…

4605
0
SHARE

ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಸಾಲ ಮನ್ನಾ ಮಾಡದಿದ್ದಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪ ಸಾಲ ಮನ್ನಾ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೂ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದ್ದ ಯಡಿಯೂರಪ್ಪ ಈಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡೆದಿದ್ದಾರೆ.

ನಿನ್ನೆ ಬಿಜೆಪಿಯಿಂದ ಬಂದ್ ಮಾಡುತ್ತೇವೆ ಎಂದು ಹೇಳಿದ್ದ ಬಿಎಸ್ವೈ ಇಂದು ರೈತರು ಬಂದ್‌ಗೆ ಕರೆ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ರೈತರ 53 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಸುಮ್ಮನೆ ಬಿಡುವುದಿಲ್ಲ.

ಭಾನುವಾರದೊಳಗೆ ಸಾಲ ಮನ್ನಾ ಆಗದಿದ್ದರೆ ಕರ್ನಾಟಕ ಬಂದ್​​ಗೆ ಕರೆ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವಿಪಕ್ಷ ನಾಯಕ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು. ಆದ್ರೆ ಬಂದ್ ಗೆ ಕರೆ ನೀಡಿದ 24 ಗಂಟೆಗಳಲ್ಲಿ ಯಡಿಯೂರಪ್ಪ ಯೂ ಟರ್ನ್ ಹೊಡೆದಿದ್ದಾರೆ…

ಬೆಂಗಳೂರು ಆರ್ ಆರ್ ನಗರ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಯಡಿಯೂರಪ್ಪ, ಕರ್ನಾಟಕ ಬಂದ್ ಗೆ ಬಿಜೆಪಿ ಕರೆ ನೀಡಿಲ್ಲ… ಸಾಲಮನ್ನಾ ಮಾಡುವಂತೆ ರೈತರು ಬಂದ್ ನಡೆಸಲು ನಿರ್ಧರಿಸಿದ್ದಾರೆ. ಅವರಿಗೆ ಪಕ್ಷದ ಬೆಂಬಲವಿದೆ ಎಂದಷ್ಟೇ ಹೇಳಿದ್ದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಉಲ್ಟಾ ಹೊಡೆದಿದ್ದಾರೆ…

ಸೋಮವಾರ ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಅವರ ಬೆದರಿಕೆಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ… ಅವರಿವರ ಮನೆ ಒಡೆಯೋದು ಯಡಿಯೂರಪ್ಪ ಕೆಲಸ. ನಾವೊಬ್ಬರೇ ದೇಶ ಉದ್ದಾರ ಮಾಡೋರು ಅಂತ ಅವರು ತಿಳಿದುಕೊಂಡಿದ್ದಾರೆ…

ಇಂತವರಿಗೆ ಜನ ಪ್ರಾಮಖ್ಯತೆ ಕೊಡೋದಿಲ್ಲ ಎಂದು ಹೆಚ್ಡಿಕೆ ತಿರುಗೇಟು ನೀಡಿದ್ದಾರೆ… ಇನ್ನೂ ರೈತರ ಸಾಲಮನ್ನಾ ನಿರ್ಧಾರದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್, ಸಚಿವ ಸಂಪುಟ ರಚನೆಯಾಗಿಲ್ಲ. ಆದರೆ ಅದಕ್ಕೆ ಮೊದಲೇ ಸಾಲಮನ್ನಾ ಮಾಡಿ ಎಂದು ಹೇಳಿ ಪ್ರತಿಭಟನೆಗೆ ಕರೆ ನೀಡುತ್ತಾರೆ…

ಆದರೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದ್ದರೂ ಅದರ ಬಗ್ಗೆ ಪ್ರತಿಭಟನೆ ಮಾಡಲು ಅವರಿಗೆ ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಏತನ್ಮಧ್ಯೆ ಸೋಮವಾರ ಕರ್ನಾಟಕ ಬಂದ್ ಗೆ ಯಾವುದೇ ರೈತ ಸಂಘಟನೆ ಕರೆ ನೀಡಿಲ್ಲ… ಆದ್ರೂ ಬಿಜೆಪಿ ನಾಯಕರು ಬಂದ್ ಗೆ ಬೆಂಬಲ ನೀಡಿರೋದು ಅಚ್ಚರಿಯ ಬೆಳವಣಿಗೆ.. ಒಟ್ಟಾರೆ ಸಾಲಮನ್ನಾ ವಿಚಾರದಲ್ಲಿ ರಾಜಕೀಯ ಶುರುವಾಗಿದೆ…

LEAVE A REPLY

Please enter your comment!
Please enter your name here