Home Elections 2019 ರೈತರ ಸಾಲ ಮನ್ನಾಗೆ ಬ್ಲೂ ಪ್ರಿಂಟ್ ರೆಡಿ ಇದೆ ಅಂದ್ರು ಎಚ್ಡಿಕೆ..!ಮಹದಾಯಿ ವಿಚಾರದಲ್ಲಿ ಮೋದಿಗೆ HDK...

ರೈತರ ಸಾಲ ಮನ್ನಾಗೆ ಬ್ಲೂ ಪ್ರಿಂಟ್ ರೆಡಿ ಇದೆ ಅಂದ್ರು ಎಚ್ಡಿಕೆ..!ಮಹದಾಯಿ ವಿಚಾರದಲ್ಲಿ ಮೋದಿಗೆ HDK ಸವಾಲು…

2332
0
SHARE

ನೂತನ ಮುಖ್ಯಮಂತ್ರಿಗಳಾಗಿ ಮೊದಲ ಸುದ್ದಿಗೋಷ್ಟಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ಹತ್ತು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು..ಪ್ರಮುಖವಾಗಿ ಸಾಲ ಮನ್ನಾ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಲ ಮನ್ನಾ ಮಾಡುವ ಬಗ್ಗೆ ತಮ್ಮ ಬಳಿ ಬ್ಲೂ ಪ್ರಿಂಟ್ ರೆಡಿ ಇದೆ ಎಂದು ಭರವಸೆ ಮೂಡಿಸಿದ್ದಾರೆ.. ಆದ್ರೆ ಸಮ್ಮಿಶ್ರ ಸರ್ಕಾರವಾಗಿದ್ದರಿಂದ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಚುನಾವಣೆ ಪ್ರಚಾರಕ್ಕೆ ಬಂದಾಗ ಭಾಷಣ ಮಾಡಿ ಹೋಗಿದ್ದಾರಲ್ಲ, ಸರಿಪಡಿಸಿ ನೋಡೋಣ ಅಂತ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ..ಟ್ರಿಬನಲ್ ತೀರ್ಪು ಬಂದ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ವೀರಶೈವ-ಲಿಂಗಾಯತ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ನಮಗೆ ಬೇಕಾದಷ್ಟು ಸಮಸ್ಯೆಗಳಿದ್ದಾವೆ,ಮೊದಲು ಅದಕ್ಕೆ ಆದ್ಯತೆ ಎಂದು ಹೇಳಿದ್ದಾರೆ..ಯಾವ ಸಂಘಟನೆಗಳೇ ಆಗಲಿ ಬೀದಿಗಳಿಯುವ ವಾತಾವರಣ ನಿರ್ಮಾಣವಾಗಲು ಬಿಡುವುದಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು..

ಇನ್ನು ಕೆಲ ಮಠಾಧೀಶರು ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಿರುವ ಬಗ್ಗೆ ಕಟು ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿ, ಮಠಾಧೀಶರು, ತಮ್ಮ ಜವಾಬ್ದಾರಿ ಏನು ಮೊದಲು ಅರಿಯಿರಿ ,ಸರ್ಕಾರವನ್ನು ರಾಜಕೀಯವಾಗಿ ಟೀಕೆ ಮಾಡೋದು ಸ್ವಾಮೀಜಿಗಳ ಕರ್ತವ್ಯ ಅಲ್ಲ ಎಂದು ಚಾಟಿ ಬೀಸಿದ್ದಾರೆ. ಸರ್ಕಾರ ದಾರಿ ತಪ್ಪಿದಾಗ ಉಪದೇಶ ಮಾಡ್ಬೇಕು-ಅವರೇ ದಾರಿ ತಪ್ಪಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ತಮಗೆ ಬೆಂಬಲ ಕೊಟ್ಟಿರುವ ಕಾಂಗ್ರೆಸ್ ಎಲ್ಲಾ ನಾಯಕರಿಗೂ ಕುಮಾರಸ್ವಾಮಿ ತಮ್ಮ ಮೊದಲ ಸುದ್ದಿಗೋಷ್ಟಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ..ಮೈತ್ರಿ ಸರ್ಕಾರ ಅತ್ಯಂತ ಸುಭದ್ರವಾಗಿ ಮುನ್ನಡೆಯುತ್ತದೆ ಎಂದು ಅವರು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here