Home District ರೋಡ್ ಸರಿ ಮಾಡ್ಲಿಲ್ಲಾ ಅಂದ್ರೆ ಸುಟ್ಟಾಕ್ತಾನಂತೆ..!! ಮಾಧ್ಯಮಗಳಿಂದ ದೇಶ ಹಾಳಾಗ್ತಿದೆಯಂತೆ..!! ಹೀನಾಯವಾಗಿ ಸೋತು ಸುಣ್ಣವಾದರೂ ನಿಲ್ಲದ...

ರೋಡ್ ಸರಿ ಮಾಡ್ಲಿಲ್ಲಾ ಅಂದ್ರೆ ಸುಟ್ಟಾಕ್ತಾನಂತೆ..!! ಮಾಧ್ಯಮಗಳಿಂದ ದೇಶ ಹಾಳಾಗ್ತಿದೆಯಂತೆ..!! ಹೀನಾಯವಾಗಿ ಸೋತು ಸುಣ್ಣವಾದರೂ ನಿಲ್ಲದ ಕಾಂಗ್ರೆಸ್ ನಾಯಕನ ದರ್ಪ…

1674
0
SHARE

ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಬಂಗೇರ ಅಧಿಕಾರಿಗಳನ್ನು ಹೀನವಾಗಿ ನಡೆಸಿಕೊಳ್ಳೋದರ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.ನಿನ್ನೆ ಚಾರ್ಮಾಡಿ ಘಾಟ್ ವೀಕ್ಷಣೆಗೆ ತೆರಳಿದ್ದ ವಸಂತ ಬಂಗೇರ ತನ್ನ ಬೆಂಬಲಿಗರ ಎದುರಲ್ಲಿ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ… ಕೆಲಸ ಮಾಡದಿದ್ರೆ ಸುಮ್ಮನೆ ಬಿಡೋದಿಲ್ಲ,ಮಾನ ಮರ್ಯಾದೆ ಇಲ್ವಾ ಅಂತಾ ಜೋರು ಧ್ವನಿಯಲ್ಲೇ ಗದರಿಸಿದ್ದಾರೆ. ಇನ್ನು ಮಾಧ್ಯಮಗಳ ಮೇಲೂ ದರ್ಪ ತೋರಿಸಿದ ವಸಂತ ಬಂಗೇರ ಮಾಧ್ಯಮಗಳಿಗೆ ಗೌರವ ಕೊಟ್ರೇ ನನ್ನಷ್ಟು ನೀಚ ಬೇರೆ ಯಾರೂ ಇಲ್ಲ. ಮಾಧ್ಯಮದಿಂದ ದೇಶ ಹಾಳಾಗುತ್ತಿದೆ…ಮಾಧ್ಯಮಗಳು ಮೋದಿ ಪರವಾಗಿ ಕೆಲಸ ಮಾಡುತ್ತಿದ್ದು ತಮ್ಮನ್ನು ಮೋದಿಗೆ ಮಾರಿಕೊಂಡಿದ್ದಾರೆ, ಪ್ರಜಾಪ್ರಭುತ್ವ ಕೊಲೆ ಮಾಡುವ ಮೋದಿಯೂ, ಮಾಧ್ಯಮದವರೂ ಬದುಕಿರಬಾರದು ಅಂತಾ ದರ್ಪದ ಹೇಳಿಕೆ ನೀಡಿದ್ದಾರೆ… ಸತತ ಗೆಲುವಿನ ಬಳಿಕ ಸೋಲು ಕಂಡ ಹತಾಶೆಯಲ್ಲಿ ಇಂಥ ಮಾತನ್ನಾಡಿದ್ದಾರೆ ಎನ್ನಲಾಗುತ್ತಿದೆ. ವಸಂತ ಬಂಗೇರ ಅಧಿಕಾರದಲ್ಲಿ ಇರುವಾಗಲೂ ದರ್ಪದಿಂದಲೇ ಕುಖ್ಯಾತಿ ಪಡೆದಿದ್ದು, ಸೋಲಿನ ಬಳಿಕವೂ ದರ್ಪ ಮುಂದುವರಿಸಿರೋದು ಚರ್ಚೆಗೆ ಗ್ರಾಸವಾಗಿದೆ…

LEAVE A REPLY

Please enter your comment!
Please enter your name here