Home Crime ರೌಡಿಯಾಗಿದ್ದ ಯುವಕ ಲವ್ ಬಲೆಗೆ ಬಿದ್ದ… ಕರಾವಳಿಯ ಬೆಡಗಿಯ ಮನಸ್ಸನ್ನ ಕದ್ದ…! ಪಟ್ಟದರಸಿಗಾಗಿ ನಿರ್ಮಿಸಲು ಹೊರಟಿದ್ದ...

ರೌಡಿಯಾಗಿದ್ದ ಯುವಕ ಲವ್ ಬಲೆಗೆ ಬಿದ್ದ… ಕರಾವಳಿಯ ಬೆಡಗಿಯ ಮನಸ್ಸನ್ನ ಕದ್ದ…! ಪಟ್ಟದರಸಿಗಾಗಿ ನಿರ್ಮಿಸಲು ಹೊರಟಿದ್ದ ಪ್ರೇಮಮಂದಿರ…ಸಹೋದರಿಯ ಪ್ರೀತಿಗೆ ತಡೆಗೋಡೆಯಾಗಿದ್ದ ಬ್ರದರ್..!ಮುಂದೇನಾಯ್ತು.??!

2607
0
SHARE

 

ಅವತ್ತು ರಾತ್ರಿ ಹಾಗೆ ನಿರ್ಜನ ಪ್ರದೇಶದಲ್ಲಿ ಕೊಲೆಯಾಗಿ ಹೋಗಿದ್ದ ಯುವಕ ರಾಕೇಶ್ ಅಂತ. ಆ ರಾಕೇಶ್ ಕಳೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಅಲ್ಲದೆ ಒಂದಿಷ್ಟು ಹೊಡೆದಾಟ ಬಡಿದಾಟ. ಗಾಂಜಾ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆದ್ರೆ ಇತ್ತೀಚೆಗೆ ರಾಕೇಶ್ ಎಲ್ಲವನ್ನ ಬಿಟ್ಟು ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದ. ಅಪ್ಪನ ಜೊತೆ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಹಳೆ ಹುಡುಗರ ಸಹವಾಸವನ್ನ ಅವನು ಬಿಟ್ಟಿದ್ದ.

ಇನ್ನು ಜೀವನವನ್ನ ಕಟ್ಟಿಕೊಳ್ಳೋದರ ಬಗ್ಗೆ ಮಾತ್ರ ಯೋಚನೆ ಮಾಡಬೇಕು ಅಂತ ಅವನು ತೀರ್ಮಾನಿಸಿದ್ದ. ಅಲ್ಲದೆ ಪಂಜಿಮೊಗರಿನಲ್ಲಿ ಹೊಸ ಮನೆಯಲ್ಲಿ ಕಟ್ಟಿಸುತ್ತಿದ್ದ. ಬಡ ಕುಟುಂಬ ಆದ್ರಿಂದ ಯಾವಾಗ ಕಾಸು ಸಿಗುತ್ತೋ ಆಗ ಮನೆಯನ್ನ ಸ್ವಲ್ಪ ಸ್ವಲ್ಪವೇ ಆತ ಕಟ್ಟಿಸುತ್ತಿದ್ದ.ಹೀಗಾಗಿ ರಾಕೇಶ್ ಇತ್ತೀಚೆಗೆ ಸಭ್ಯಸ್ಥನಾಗಿ ಬದುಕೋದಕ್ಕೆ ಶುರುಮಾಡಿದ್ದ. ಅವನ ಈ ಧಿಡೀರ್ ಬದಲಾವಣೆ ಕಾರಣ ಅಂದ್ರೆ ಆತ ಒಂದು ಹುಡುಗಿಯನ್ನ ಲವ್ ಮಾಡ್ತಿದ್ದ. ಇದೇ ಕಾರಣಕ್ಕೆ ಆತ ಎಲ್ಲವನ್ನ ಬಿಟ್ಟು ಕಷ್ಟಪಟ್ಟು ದುಡಿದು ಸಂಪಾದನೆ ಮಾಡೋಣ ಅಂತ ಅಂದುಕೊಂಡಿದ್ದ.

ಇವನ ಪರಿವರ್ತನೆ ಆ ಹುಡುಗಿಗು ಇಷ್ಟವಾಗಿತ್ತು. ಟೈಂ ಸಿಕ್ಕಿದಾಗಲೆಲ್ಲ ಆತ ಆ ಹುಡುಗಿಯ ಜೊತೆ ತಿರುಗಾಡಿಕೊಂಡು ಅರಾಮಾಗಿದ್ದ. ಮನ ಕಟ್ಟಿ ಮುಗಿಯುತ್ತಿದ್ದ ಹಾಗೆ ಆ ಹುಡುಗಿಯ ಜೊತೆ ಮದುವೆ ಮಾಡಿಕೊಂಡು ಆರಾಮಾಗಿ ಇರಬೇಕು ಅಂತ ಅಂದುಕೊಂಡಿದ್ದ. ಹೀಗಾಗಿ ರಾಕೇಶ್ ಪೂರ್ಣವಾಗಿ ಬದಲಾಗಿದ್ದ.ಆದ್ರೆ ಇದ್ದಕ್ಕಿದ್ದ ಹಾಗೆ ರಾಕೇಶ್ ಆ ರಾತ್ರಿ ಹೆಣವಾಗಿ ಹೋಗಿದ್ದು ಯಾಕೆ ಅನ್ನೋದು ಮಾತ್ರ ಗೊತ್ತೇ ಆಗಲಿಲ್ಲ. ಅಲ್ಲದೆ ಮಂಗಳೂರಿನ ಯಾವ ಮೂಲೆಯಲ್ಲಿ ಒಂದು ಹೆಣ ಬಿದ್ರು ಅದು ಬೇರೆಯದ್ದೇ ರೂಪವನ್ನ ಪಡೆದುಕೊಳ್ಳುತ್ತೆ ಹೀಗಾಗಿ ಪೊಲೀಸ್ರು ಈ ಕೇಸ್ ಅನ್ನ ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ರು.

ಯಾಕಂದ್ರೆ ಒಂದು ಸಾವಿನ ಹಿಂದೆ ಬೇರೆಯದ್ದೇ ಆದ ಕಾರಣಗಳಿರುತ್ತೆ. ಹೀಗಾಗಿ ಆ ಕಾರಣ ಏನಿರಬಹುದು ಅನ್ನೋದನ್ನ ಅವ್ರು ಹುಡುಕೋದಕ್ಕೆ ಶುರುಮಾಡಿದ್ರು. ಅದರ ಜೊತೆಗೆ ಆರೋಪಿಗಳನ್ನ ಹುಡುಕೋದಕ್ಕು ಪೊಲೀಸ್ರು ರೆಡಿಯಾಗಿದ್ರು. ಅಷ್ಟೊತ್ತಿಗೆ ಪೊಲೀಸ್ ಆಯುಕ್ತರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನ ರಚನೆ ಮಾಡಿದ್ರು.ಇಲ್ಲಿ ರಾಕೇಶ್ ನನ್ನ ಕೊಂದವರು ಯಾರೇ ಆಗಿರಲಿ ಅವ್ರ ಬಂಧನ ತಕ್ಷಣವೇ ಆಗಬೇಕು ಅನ್ನೋದು ಪೊಲೀಸ್ರ ಯೋಚನೆಯಾಗಿತ್ತು. ಕಾರಣ ಏನು ಅನ್ನೋದು ಆಮೇಲೆ ಗೊತ್ತಾಗುತ್ತೆ, ಆದ್ರೆ ಅದಕ್ಕೂ ಮೊದಲು ಆರೋಪಿಗಳು ಪತ್ತೆಯಾಗಬೇಕು ಅಂತ ಪೊಲೀಸ್ರು ಹೊರಟು ನಿಂತಿದ್ರು. ಇತ್ತ ಆಸ್ಪತ್ರೆಯಲ್ಲಿ ರಾಕೇಶ್ ನ ಪೋಸ್ಟ್ ಮಾರ್ಟಂ ಮುಗಿದಿತ್ತು.

ಆ ಬಾಡಿಯನ್ನ ಪೊಲೀಸ್ರು ಆತನ ಪೋಷಕರಿಗೆ ಹಸ್ತಾಂತರ ಮಾಡಿದ್ರು. ಅದೇ ದಿನ ಸಂಜೆಯ ಹೊತ್ತಿಗೆ ಪೊಲೀಸ್ರು ಮೂವರ ಸೊಂಟಕ್ಕೆ ಕೈ ಹಾಕಿ ಲಾಕ್ ಮಾಡ್ಕೊಂಡು ಎಳ್ಕೊಂಡು ಬಂದಿದ್ರು. ಅಂದ್ರೆ ಆ ಕೇಸ್ ಅಲ್ಲಿಗೆ ಮುಗಿದು ಹೋಗಿತ್ತು. ಯಾಕಂದ್ರೆ ರಾಕೇಶ್ ನ ಕೊಲೆ ಮಾಡಿದ್ದ ಆರೋಪಿಗಳನ್ನ ಮಿಂಚಿನ ವೇಗದಲ್ಲಿ ಪೊಲೀಸ್ರು ಕೆಡ್ಡಾಗೆ ಕೆಡವಿಕೊಂಡಿದ್ರು. ಜನ ನ್ಯಾಯ ಬೇಕು ಅಂತ ಕೂಗೋದಕ್ಕೂ ಮೊದಲೇ ಪೊಲೀಸ್ರು ಆ ಮೂರನ್ನ ಭೇಟೆಯಾಡಿಯಾಗಿತ್ತು. ಪೊಲೀಸ್ರು ಅವತ್ತು ಅಷ್ಟೊಂದು ತಲೆಕೆಡಿಸಿಕೊಂಡು ಈ ಪ್ರಕರಣವನ್ನ ಇನ್ವೆಸ್ಟಿಗೇಷನ್ ಮಾಡೋದಕ್ಕೂ ಒಂದು ಕಾರಣವಿತ್ತು.

ಯಾಕಂದ್ರೆ ಅಲ್ಲಿ ಒಂದು ವರ್ಷದ ಹಿಂದೆ ಕೋಮು ಗಲಾಟೆ ನಡೆದಿತ್ತು. ಆಗ ದೀಪಕ್ ರಾವ್ ಎಂಬಾತನ ಕೊಲೆ ನಡೆದಿತ್ತು. ಅದು ಈಗ ಸರಿಯಾಗಿ ಒಂದು ವರ್ಷವಾಗಿತ್ತು. ಅಲ್ಲದೆ ದೀಪಕ್ ರಾವ್ ಕೊಲೆಯ ಪ್ರತೀಕವಾಗ ಪಂಜಿಮೊಗರಿನಲ್ಲಿ ಬಶೀರ್ ಅನ್ನೋನ ಕೊಲೆಯು ಆಗಿತ್ತು. ಹೀಗಾಗಿ ಪೊಲೀಸ್ರಿಗೆ ಮತ್ತೆ ಅಂತಹದ್ದೇ ಏನಾದ್ರು ಯಡವಟ್ಟಾಗಿದೆಯ ಅಂತ ಅನುಮಾನ ಬಂದಿತ್ತು. ಅಲ್ಲದೆ ಅದಕ್ಕೆ ರಿವೇಂಜ್ ಏನಾದ್ರು ತಗೊಂಡಿದ್ದಾರಾ ಅಂತ ಅವ್ರು ಅಂದುಕೊಂಡಿದ್ರು. ಆದ್ರೆ ಯಾವಾಗ ಪೊಲೀಸ್ರು ಇನ್ವೆಸ್ಟಿಗೇಷ್ ಶುರುಮಾಡಿದ್ರೋ ಆಗ ಸ್ವಲ್ಪ ನಿರಾಳರಾಗಿದ್ರು. ಯಾಕಂದ್ರೆ ಅದಕ್ಕು ಇದಕ್ಕು ಯಾವುದೇ ಸಂಬಂಧವಿಲ್ಲ.

ಈ ಮರ್ಡರ್ ಆಗಿರೋದಕ್ಕೆ ಕಾರಣ ಲವ್ ಅನ್ನೋದು ಗೊತ್ತಾಗಿತ್ತು.ಸುನೀಲ್ ತನ್ನ ಸ್ನೇಹಿತರ ಜೊತೆ ಕುಳಿತು ಗಾಂಜಾ ಹೊಡೆಯುತ್ತಿರೋವಾಗ ಆತನ ತಲೆ ಸ್ನೇಹಿತರು ತಂಗಿಯ ಲವ್ ಮ್ಯಾಟರ್ ಅನ್ನ ತುಂಬಿದ್ರು. ಸುನಿಲ್ ಮತ್ತು ರಾಕೇಶ್ ಚೆನ್ನಾಗಿಯೇ ಇದ್ರು. ಆದ್ರೆ ಜೈಲಿಗೆ ಹೋಗಿ ಬಂದ ಮೇಲೆ ಆತ ಸುನಿಲ್ ಸಹವಾಸವನ್ನ ಬಿಟ್ಟಿದ್ದ. ಆದ್ರೆ ವಿಶ್ವಾಸದಲ್ಲಿ ಚೆನ್ನಾಗಿಯೇ ಇದ್ದ. ಅವತ್ತು ರಾತ್ರಿ ಸುನಿಲ್ ರಾಕೇಶ್ ಗೆ ಫೋನ್ ಮಾಡಿ ಏನೋ ನಿನ್ ಲವ್ ಕಥೆ ನನಗೆ ಗೊತ್ತಿಲ್ದೇ ಎಲ್ಲೆಲ್ಲೋ ಸುತ್ತಾಡ್ತಿದ್ದೀಯಲ್ಲ ನನಗೆ ಹೇಳಬಾರದ ಅಂತ ಫೋನ್ ಮಾಡಿದ್ದ. ಅಲ್ಲದೆ ಬಾ ಅದರ ಬಗ್ಗೆ ಮಾತನಾಡೋಣ ಅವನನ್ನ ಮನೆಯಿಂದ ಸ್ವಲ್ಪ ದೂರದಲ್ಲಿರೋ ನಿರ್ಜನ ಪ್ರದೇಶಕ್ಕೆ ಬರೋದಕ್ಕೆ ಹೇಳಿದ್ದ.

ಆ ಪ್ರದೇಶ ಅವನಿಗೆ ಹೊಸತೇನು ಆಗಿರಲಿಲ್ಲ. ಹೀಗಾಗಿ ಇರು ಬರ್ತೀನಿ ಅಂತ ಹೇಳಿದ್ದ.ಇತ್ತ ರಾಕೇಶ್ ಕೂಡಾ ತನ್ನ ಸ್ನೇಹಿತನ ಜೊತೆ ಸೇರಿ ಬಿಯರ್ ಕುಡಿತಾ ಇದ್ದ. ಫೋನ್ ಬರ್ತಿದ್ದ ಹಾಗೆ ಮಗ ಇರು ಬರ್ತೀನಿ ಅಂತ ಹೇಳಿ ತನ್ನ ಬೈಕ್ ಎತ್ತಿಕೊಂಡು ಹೋಗಿ ಅವನು ಹೇಳಿದ್ದ ಜಾಗಕ್ಕೆ ಹೊರಟಿದ್ದ. ಅಲ್ಲಿಗೆ ಹೋಗಿ ನೋಡಿದ್ರೆ ಅಲ್ಲಿ ಯಾರು ಕಾಣಲೇ ಇಲ್ಲ. ಅದಕ್ಕೆ ಇವನು ಹೋಗಿ ಸುನಿಲ್ ಸುನಿಲ ವೋಲ್ ಉಲ್ಲೇರ್ ಅಂತ ಕೂಗಿಕೊಂಡಿದ್ದ. ಇವನು ಬರ್ತಿರೋದು ಗೊತ್ತಾಗ್ತಿದ್ದ ಹಾಗೆ ಆ ಮೂರು ಮೂರು ಕಡೆ ಅಡಗಿ ಕುಳಿತ್ತಿದ್ರು.

ಅಂದ್ರೆ ಅವನ ಜೊತೆ ಮಾತುಕತೆ ಏನು ಬೇಡ ಡೈರೆಕ್ಟ್ ಆಗಿ ಅಟ್ಯಾಕ್ ಮಾಡೋಣ ಅಂತ ತೀರ್ಮಾನಿಸಿದ್ರು. ಇವನು ಕೂಗುತ್ತಿದ್ದ ಹಾಗೆ ಸುನಿಲ್ ಕೋಳಿಪಡೆಯಲ್ಲಿ ಬಳಸೋ ಹರಿತವಾದ ಚಾಕುವನ್ನ ಹಿಡ್ಕೊಂಡು ಒಂದೇ ಸಾರಿ ಅವನ ಮೇಲೆ ಎರಗಿದ್ದ.ಹಾಗೆ ಹಾರಿದವನೆ ಅವನ ಎದೆಗೆ ಚಾಕುವಿನಿಂದ ಚುಚ್ಚಿದ್ದ. ಆದ್ರೆ ಏಟು ಸರಿಯಾಗಿ ಬಿದ್ದಿರಲಿಲ್ಲ. ಹೀಗಾಗಿ ಆತ ಆದ ಗಾಯದಿಂದ ಬೈಕ್ ಅನ್ನ ಅಲ್ಲೇ ಬಿಟ್ಟು ಅಲ್ಲಿಂದ ಓಡೋದಕ್ಕೆ ಶುರುಮಾಡಿದ್ದ. ಅವನಿಗೆ ಅಲ್ಲಿನ ಪರಿಸ್ಥಿತಿ ಒಂದೇ ನಿಮಿಷಕ್ಕೆ ಅರಿವಾಗಿ ಹೋಗಿತ್ತು. ಆ ಕತ್ತಲೆಯಲ್ಲೆ ತಪ್ಪಿಸಿಕೊಳ್ಳೋದಕ್ಕೆ ಏನಾದ್ರು ದಾರಿ ಇದೆಯ ಅಂತ ನೋಡಿ ಅಲ್ಲಿಂದ ಓಡಿ ಹೋಗಿದ್ದ.

ಈ ಟೈಂನಲ್ಲಿ  ಅವನು ಜಾಸ್ತಿ ದೂರ ಓಡೋದಕ್ಕೆ ಆಗಲಿಲ್ಲ. ಯಾಕಂದ್ರೆ ನೆಲದ ಮೇಲೆ ಬೆಳೆದಿದ್ದ ಬಳ್ಳಿಗಳು ಅವನ ಕಾಲಿಗೆ ಸಿಕ್ಕಿಹಾಕಿಕೊಂಡಿತ್ತು. ಹೀಗಾಗಿ ಬೆನ್ನು ಹತ್ತಿರ ಆ ಮೂವರಿಂದ ಆತ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಲಿಲ್ಲ.ಕತ್ತಲ ಸಾಮ್ರಾಜ್ಯದಲ್ಲಿ ಮೂವರು ಕ್ರಿಮಿನಲ್ ಗಳು ಆತನ ಮೇಲೆ ಒಟ್ಟಿಗೆ ಎರಗಿದ್ರು. ಆಗ ಆತನಿಗೆ ಅಲ್ಲಿಂದ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಲಿಲ್ಲ. ಇವರ ಹಿಡಿತಕ್ಕೆ ಸಿಗ್ತಿದ್ದ ಹಾಗೆ ಆತನಿದೆ ಮನಸೋ ಇಚ್ಛೆ ಚುಚ್ಚಿದ್ದಾರೆ. ನೆಲದ ಮೇಲೆ ಎಳೆದಾಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳಿಂದ ಮುಖದ ಮೇಲೆ ಜಜ್ಜಿದ್ದಾರೆ.

ಚಿತ್ರವಿಚಿತ್ರವಾಗಿ ಆತನ ಮೇಲೆ ಹಲ್ಲೆ ನಡೆಸಿದ್ರು. ಇನ್ನು ಆತನ ಜೀವ ಉಳಿಯುವ ಚಾನ್ಸ್ ಇರಲೇ ಇಲ್ಲ. ಹೀಗಾಗಿ ಆ ಜೀವ ದೇಹ ಬಿಟ್ಟು ಹೋಗ್ತಿದೆ ಅನ್ನೋದು ಗೊತ್ತಾಗ್ತಿದ್ದ ಮೂವರು ಅಲ್ಲಿಂದ ಓಡಿ ಹೋಗಿದ್ರು. ಆ ಕಿರುಚಾಟ ಹೊಡೆದಾದ ಕೂಗು ದೂರದಲ್ಲಿದ್ದ ಯಾವುದೋ ಒಂದು ಮನೆಗೆ ಕೇಳಿಸಿತ್ತು. ಆದ್ರೆ ಅವರ್ಯಾರು ಹೊರಗೆ ಬರೋದಕ್ಕೆ ಮನಸ್ಸು ಮಾಡಲಿಲ್ಲ. ಯಾಕಂದ್ರೆ ಅಲ್ಲೇನು ಆಗಿರಬಹುದು ಅನ್ನೋದು ಮನೆಯಲ್ಲಿದ್ದವರಿಗೆ ಗೊತ್ತಾಗಿತ್ತು.ಹೀಗೆ ಆ ಸದ್ದನ್ನ ಕೇಳಿಸಿಕೊಂಡವರು ಪೊಲೀಸ್ರಿಗೆ ಫೋನ್ ಮಾಡಿದ್ರು. ಆದ್ರೆ ಫೋನ್ ಮಾಡಿದ್ದು ಯಾರು ಅಲ್ಲಿ ಏನಾಗಿದೆ ಅನ್ನೋದನ್ನ ಮಾತ್ರ ಹೇಳಲಿಲ್ಲ.

ಆ ಕಡೆಯಲ್ಲಿ ಗಲಾಟೆಯಾಗಿದೆ ಕೊಲೆ ಆಗಿರಬಹುದು ಅನ್ನೋ ಅನುಮಾನವಿದೆ ಅಂತ ಅಷ್ಟೇ ಹೇಳಿದ್ರು. ಯಾವಾಗ ಪೊಲೀಸ್ರು ಬಂದು ನೋಡಿದ್ರೋ ಆಗ ಆಗಿರೋ ಅನಾಹುತವೇನು ಅನ್ನೋದು ಗೊತ್ತಾಗಿತ್ತು. ಹೀಗೆ ಕೊಲೆ ಮಾಡ್ತಿದ್ದ ಹಾಗೆ ಅವ್ರಿಗೆ ತಾವೇನು ಮಾಡಿದ್ದೀವಿ ಅನ್ನೋದು ಗೊತ್ತಾಗಿತ್ತು. ಯಾಕಂದ್ರೆ ಅಷ್ಟೊತ್ತಿಗೆ ಹೊಡೆದಿದ್ದ ಗಾಂಜಾದ ಅಮುಲು ಇಳಿದ ಹೋಗಿತ್ತು. ಹೀಗಾಗಿ ಇನ್ನು ಇಲ್ಲೇ ಇದ್ರೆ ತಗಲಾಕಿಕೊಳ್ತೀವಿ ಅಂತ ಅಲ್ಲಿಂದ ಕಾಲು ಕಿತ್ತಿದ್ರು.ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಶುರುಮಾಡಿದ್ರು. ಆಗ ರಾತ್ರಿ ರಾಕೇಶ್ ಜೊತೆ ಎಣ್ಣೆ ಹೊಡೆದಿದ್ದ ಸ್ನೇಹಿತ ರಾತ್ರಿ ಸುನಿಲ್ ಫೋನ್ ಮಾಡಿ ಕರೆಸಿಕೊಂಡಿದ್ದ ಅಂತ ಹೇಳಿದ್ದ.

ಅಲ್ಲದೆ ಆತನ ತಂಗಿಯನ್ನ ಅವನು ಪ್ರೀತಿಸ್ತಿದ್ದ ಅಂತಾನು ಹೇಳಿದ್ದ. ಪೊಲೀಸ್ರಿಗೆ ಇಷ್ಟು ಸಾಕಾಗಿತ್ತು. ಅವನು ಇರೋ ಅಡ್ಡೆಯನ್ನ ಹುಡ್ಕೊಂಡು ಹೋಗಿ ಎಳ್ಕೊಂಡು ಬಂದಿದ್ರು. ಜೈಲಿಂದ ಬಂದವನಿಗೆ ಮತ್ತೆ ಅಲ್ಲಿಗೆ ಕಳುಹಿಸಿದ್ದಾರೆ. ಪಾಪ ಇವನೇನು ಅಮಲಿನಲ್ಲಿ ತನ್ನ ಭಾವಿ ಭಾವನನ್ನ ಮುಗಿಸಿದ್ದ. ಆದ್ರೆ ಆತನ ಮೇಲೆ ಜೀವವನ್ನೇ ಇಟ್ಕೊಂಡಿದ್ದ ಆ ಹುಡುಗಿಯ ಕಥೆ ಏನು ಹೇಳಿ. ಪಾಪ ಅವನ ಜೊತೆ ಸಪ್ತಪದಿ ತುಳಿದು ಅವನ ಜೊತೆಯೇ ಬದುಕು ಕಟ್ಟಿಕೊಳ್ಳಬೇಕು ಅಂತ ಅವಳು ನೂರಾರು ಕನಸುಗಳನ್ನ ಕಟ್ಟಿಕೊಂಡಿದ್ಲು. ತನ್ನ ತಂಗಿಯನ್ನ ಆಕೆ ಪ್ರೀತಿಸಿದ ಹುಡುಗನ ಜೊತೆ ಮದುವೆ ಮಾಡಿಸಿಬಿಟ್ಟಿದ್ರೆ ಅವನು ನಿಜಕ್ಕೂ ಗ್ರೇಟ್ ಆಗಿ ಬಿಡ್ತಿದ್ದ. ಆದ್ರೆ ಆತ ಹಾಗೆ ಮಾಡಲಿಲ್ಲ. ಅವನನ್ನ ಕೊಂದು ಅದೇನೋ ಸಾದಿಸ್ತೀನಿ ಅಂತ ಹೇಳಿ ತಂಗಿಯ ಬಾಳಿಗೆ ಕೊಳ್ಳಿಯಿಟ್ಟಿದ್ದಾನೆ.

LEAVE A REPLY

Please enter your comment!
Please enter your name here