Home Cinema ಲಕ್ಕಿ ಮನೆ ಬಿಟ್ಟುಕೊಡಲು ಮತ್ತೆ ಹಿಂದೇಟು ಹಾಕಿದ ರಾಕಿ..! ಬಾಡಿಗೆ ಮನೆಗಾಗಿ ಯಶ್ ಖ್ಯಾತೆ ತೆಗೆದ್ರಲ್ಲ...

ಲಕ್ಕಿ ಮನೆ ಬಿಟ್ಟುಕೊಡಲು ಮತ್ತೆ ಹಿಂದೇಟು ಹಾಕಿದ ರಾಕಿ..! ಬಾಡಿಗೆ ಮನೆಗಾಗಿ ಯಶ್ ಖ್ಯಾತೆ ತೆಗೆದ್ರಲ್ಲ ಮತ್ತೆ ಏಕಾಏಕಿ..! ಅಯ್ಯೋ..! 9 ವರ್ಷ..25ಲಕ್ಷ..ಗೊತ್ತಾ ಮನೆ ಮಾಲೀಕರ ಸಂಕಟ..!

1500
0
SHARE

ಯಶ್ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್. ಕೆ.ಜಿ.ಎಫ್ ಚಿತ್ರದ ರಣಭೀಕರ ಗೆಲುವಿನ ಕೇಕೆ ಹಾಕ್ತಿರುವ ಯಶ್‌ಗೆ, ವಿವಾದಗಳೂ ಅಂದ್ರೆ ಪಂಚ ಪ್ರಾಣ. ಅದ್ರಲ್ಲೂ ಬಾಡಿಗೆ ಮನೆಯ ವಿವಾದವಿದೆಯಲ್ಲ.. ಆ ವಿವಾದಕ್ಕೆ ನಾಂದಿ ಹಾಡಲು ಖುದ್ದು ಯಶ್‌ಗೆ ಇಷ್ಟವಿದ್ದಂತಿಲ್ಲ.

ಹಾಗಾಗೇ, ಪ್ರತಿ ಮೂರು ತಿಂಗಳಿಗೊಮ್ಮೆ.. ಬಾಡಿಗೆ ಮನೆ ಎಪಿಸೋಡಿಗೆ ಸುದ್ದಿಯಾಗುವ ಯಶ್, ಇದೀಗ ಮತ್ತೆ ಅದೇ ಬಾಡಿಗೆ ಮನೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.ಹೌದು, ಬಾಡಿಗೆ ವಿವಾದಕ್ಕೆ ಮತ್ತೆ ಬೆಂಕಿ ಬಿದ್ದಿದೆ. ಅಲ್ಲಿಗೆ ಯಶ್ ರಾಕಿಂಗ್ ಸ್ಟಾರಾ.. ಬಾಡಿಗೆ ಸ್ಟಾರಾ.. ಅನ್ನುವ ಅನುಮಾನನೂ ಕತ್ರಿಗುಪ್ಪೆ ನಿವಾಸಿಗಳಿಗೆ ಕಾಡುತ್ತಿದೆ. ಕಾರಣ, ಯಶ್ ನಡೆಯೇ ಹಾಗಿದೆ. ಯಸ್, ನಿಮಗೆ ಗೊತ್ತಿರಲಿ ಯಶ್ ಹಾಗೂ ಬಾಡಿಗೆ ವಿವಾದ ಇಂದು ನಿನ್ನೆಯದಲ್ಲ.. ಬರೋಬ್ಬರಿ ಒಂಭತ್ತು ವರ್ಷಗಳ ವಿವಾದವಿದು. ಇಂಥ ವಿವಾದ ಇತ್ತೀಚಿಗೆ ಇನ್ನೇನೂ ಮುಗೀತು ಅನ್ನುವ ಹಂತಕ್ಕೆ ತಲುಪಿತ್ತು. ಆದ್ರೀಗ ಇದೇ ವಿವಾದ ಇದೀಗ ಇನ್ನೊಂದು ಮಗ್ಗುಲಿನತ್ತ ಹೊರಳಿದೆ. ಇದಕ್ಕೆ ಕಾರಣ, ಓನ್ & ಓನ್ಲೀ ಯಶ್..ಯಶ್..& ಯಶ್.

ನಿಮಗೆ ಗೊತ್ತಿರಲಿ, ಯಶ್ ಬಾಡಿಗೆ ಬಡಿದಾಟ ಕಂಡು ರಾಕಿಂಗ್ ಭಕ್ತಗಣ ಕಂಗಾಲಾಗಿದ್ದ ಹೊತ್ತಿನಲ್ಲಿ, ಬೆಂಗಳೂರಿನ ೪೨ನೇ ಸಿಟಿ ಸಿವಿಲ್ ಕೋರ್ಟ್ ಕಳೆದ ವರ್ಷ ಇನ್ನು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿ. ೯ ಲಕ್ಷ ೬೦ ಸಾವಿರ ಹಣವನ್ನ ಪಾವತಿಸಿ ಅನ್ನುವ ಫರ್ಮಾನು ಹೊರಡಿಸಿತ್ತು.ಇನ್ನೂ.. ಬೆಂಗಳೂರಿನ ೪೨ನೇ ಸಿಟಿ ಸಿವಿಲ್ ಕೋರ್ಟ್ ಯಶ್ ವಿರುದ್ಧ ಅದ್ಯಾವಾಗ ಆದೇಶ ಹೊರಡಿಸಿತೋ, ಆಗ.. ಗಜಕೇಸರಿಯ ಗರ್ವಭಂಗವಾಗಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ಅವತ್ತು.. ಸಾಮಾಜಿಕ ಜಾಲತಾಣದಲ್ಲಿ ಆಲ್ ಆಫ್ ಸಡನ್ ಪ್ರತ್ಯಕ್ಷವಾದ ಯಶ್, ನಾಲ್ಕೈದು ಪೇಪರ್‌ಗಳನ್ನೇ ದಾಖಲೆ ಎಂಬಂತೆ ತೋರಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವ ಮಾತುಗಳನ್ನಾಡಿದ್ದರು. ಆಡಿದ ಮಾತಿನಂತೆ.. ಹೈಕೋರ್ಟ್ ಮೆಟ್ಟಿಲು ಏರಿದ್ದರು ಯಶ್. ಹೈಕೋರ್ಟ್‌ನಲ್ಲಿ ತೀರ್ಪು ತನ್ನ ಪರ ಆಗುತ್ತೆ ಅಂದುಕೊಂಡಿದ್ದ ಯಶ್‌ಗೆ ಮತ್ತೊಮ್ಮೆ ಭಾರೀ ಗರ್ವಭಂಗವಾಗಿತ್ತು.

ಕಾರಣ, ಪ್ರಕರಣವನ್ನಾಲಿಸಿದ ಹೈಕೋರ್ಟ್ ಯಶ್‌ಗೆ ಛೀಮಾರಿ ಹಾಕಿತ್ತು. ಡಿಸೆಂಬರ್ ೨೩ರ ಒಳಗೆ ೨೫ ಲಕ್ಷವನ್ನ ಮನೆ ಮಾಲೀಕರಾದ ಡಾ.ಮುನಿಪ್ರಸಾದ್‌ಗೆ ನೀಡಬೇಕೆನ್ನುವ ಆದೇಶ ನೀಡಿತ್ತು. ಅಷ್ಟೇ ಅಲ್ಲ.. ಹಣ ಪಾವತಿಸಿದ ಮೂರು ತಿಂಗಳಿನೊಳಗೆ ಅಂದ್ರೆ ಮಾರ್ಚ್ ೩೦ರ ಒಳಗೆ ಮನೆ ಖಾಲಿ ಮಾಡುವಂತೆ ತಾಕಿತ್ತು ಮಾಡಿತ್ತು ಹೈಕೋರ್ಟ್.ಹೈಕೋರ್ಟ್‌ನ ಆದೇಶದ ಮೇರೆಗೆ, ಹಿಂದೆ.. ಹೈಕೋರ್ಟ್ ರೆಜಿಸ್ಟಾರ್ ಬಳಿ ಯಶ್ ಅವ್ರ ತಾಯಿ ಪುಷ್ಪಾ ೨೫ ಲಕ್ಷದ ಠೇವಣಿಯನ್ನಿರಿಸಿದ್ರು. ಹೀಗೆ ಇರಿಸಲಾದ ಡಿಡಿ ಬಿಡುಗಡೆ ಕೋರಿ, ಇತ್ತೀಚಿಗಷ್ಟೇ ಮನೆ ಮಾಲೀಕ ಡಾ.ಮುನಿಪ್ರಸಾದ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಡಿಡಿ ಬಿಡುಗಡೆ ಮಾಡಲು ರೆಜಿಸ್ಟಾರ್‌ಗೆ ಆದೇಶಿಸಿತ್ತು.ಇನ್ನೇನೂ.. ಡಿಡಿ ಹಣ ಬಿಡುಗಡೆಯಾಯ್ತು. ಹೈಕೋರ್ಟ್ ನೀಡಿದ್ದ ಗಡುವು ಕೂಡಾ ಅಂತ್ಯವಾಗಲು ಬಂತು. ಹಾಗಾಗಿ, ಮನೆ ಖಾಲಿ ಮಾಡ್ತಾರೆ ಅಂಥ ಖುದ್ದು ಮನೆ ಮಾಲೀಕ ಮುನಿಪ್ರಸಾದ್ ಅಂದುಕೊಂಡಾಗ್ಲೇ, ಇದೀಗ.. ಯಶ್ ತಾಯಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನ ಸಲ್ಲಿಸಿದ್ದಾರೆ.

ಮನೆ ಖಾಲಿ ಮಾಡಲು ಇನ್ನೂ ಆರು ತಿಂಗಳ ಕಾಲಾವಕಾಶ ಕೋರಿದ್ದಾರೆ. ಇದುವೇ ಇದೀಗ.. ಮತ್ತೊಂದು ಹಂತದ ಚರ್ಚೆಗೂ ಕಾರಣವಾಗಿದೆ. ಯಶ್ ಅಭಿಮಾನಿಗಳ ಮುಜುಗರಕ್ಕೂ ಕಾರಣವಾಗಿದೆ.ಹೌದು, ಯಶ್ ತಾಯಿ ಪುಷ್ಪಾ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಕಾಲಾವಕಾಶ ಕೋರಿದ್ದಾರೆ. ಹೀಗೆ ಕಾಲಾವಕಾಶ ಕೋರಿರುವ ಯಶ್ ತಾಯಿ, ಮನೆ ಖಾಲಿ ಮಾಡಿದ್ರೆ ಇರಲು ನಮಗೆ ಮನೆ ಇಲ್ಲ ಅನ್ನುವ ಹಾಸ್ಯಾಸ್ಪದ ಕಾರಣವನ್ನೂ ಕೊಟ್ಟಿದ್ದಾರೆ. ಯಶ್ ಅಮ್ಮ ಕೊಟ್ಟ ಇದೇ ಕಾರಣ ಇದೀಗ ಸಿಕ್ಕಾಪಟ್ಟೆ ಚರ್ಚೆಗೀಡಾಗುತ್ತಿದೆ.ಯಸ್, ಮನೆ ಖಾಲಿ ಮಾಡಿದ್ರೆ ನಮಗಿರಲು ಮನೆ ಇಲ್ಲ ಅಂದಿರುವ ಯಶ್ ತಾಯಿ ಪುಷ್ಪಾ, ಹಾಸನದಲ್ಲಿ ನೆಲೆಯೂರುವ ಬಯಕೆಯನ್ನೊಂದಿದ್ದಾರಂತೆ. ಹೌದು, ನಿಮಗೆ ಗೊತ್ತಿರಲಿ.. ಇತ್ತೀಚಿಗಷ್ಟೇ ಯಶ್, ಹಾಸನದಲ್ಲಿ ಮನೆ ಖರೀದಿ ಮಾಡಿದ್ದರು. ಅದು, ಸಾಮಾನ್ಯ ಮನೆಯಲ್ಲ. ಅದು, ಅರಮನೆನೇ ಸರಿ. ಬರೀ ಮನೆಯಷ್ಟೇ ಅಲ್ಲ ಹಾಸನದ ಅಟ್ಟಾವರ ಬಳಿ ಭರ್ತಿ ೮೦ ಎಕರೆ ಜಮೀನನ್ನೂ ಖರೀದಿಸಿದ್ದರು ಯಶ್.

ಹೀಗೆ ಕೋಟಿ ಕೋಟಿ ಖರ್ಚು ಮಾಡಿ ಮನೆ ಹಾಗೂ ಜಮೀನು ಖರೀದಿಸಿದ್ದ ಯಶ್, ಇದೀಗ ಸಿದ್ಧವಿರುವ ಮನೆಯನ್ನ.. ನೆಲಸಮಮಾಡಿ ಅದೇ ಜಾಗದಲ್ಲಿ ತಮಗೆ ಇಷ್ಟವಾದಂತೆ ಮನೆ ಕಟ್ಟಲು ಮುಂದಾಗಿದ್ದಾರಾ ಅನ್ನುವ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಕಾರಣ, ಯಶ್ ಅಮ್ಮ ಮಾಡಿಕೊಂಡ ಮನವಿನೇ ಹಂಗಿದೆ. ಹೌದು, ಯಶ್ ಅಮ್ಮ ಹೇಳುವ ಪ್ರಕಾರ ಹಾಸನದಲ್ಲಿನ ಮನೆ ನಿರ್ಮಾಣ ಕಾರ್ಯ ಈಗಷ್ಟೇ ಆರಂಭವಾಗಿದೆಯಂತೆ. ಹಾಗಾಗಿ, ಆರು ತಿಂಗಳು ಮಟ್ಟಿಗೆ ಬೆಂಗಳೂರಿನಲ್ಲಿ ಮತ್ತೊಂದು ಮನೆ ಹುಡುಕೋದ್ಯಾಕೆ, ಇದೇ ಮನೆಯಲ್ಲಿರ‍್ತೀವಿ ಅನ್ನುವ ವಾದ ಮಾಡ್ತಿದ್ದಾರೆ ಯಶ್ ತಾಯಿ ಪುಷ್ಪಾ. ಅಲ್ಲಿಗೆ, ಸಿದ್ಧವಿದ್ದ ಮನೆಯನ್ನ.. ಯಶ್ ಕೆಡವಿ ಹಾಕುತ್ತಿದ್ದಾರಾ.. ಉತ್ತರ, ಖುದ್ದು ರಾಕಿಂಗ್ ಫ್ಯಾಮಿಲಿನೇ ನೀಡಬೇಕು.ಇನ್ನೂ ಯಶ್ ಅವರ ಅಮ್ಮ ಕೊಟ್ಟ ಇದೇ ಕಾರಣ ಹಾಗೂ ವಾದ ಕೇಳಿ ಗಾಂಧಿನಗರದ ಗಲ್ಲಿಗಳಲ್ಲಿ ಅದೆಷ್ಟೋ ಜನ, ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಕಾರಣ, ಎಲ್ಲರಿಗೂ ಗೊತ್ತಿರುವಂತೆ ಯಶ್ ಕನ್ನಡ ಚಿತ್ರರಂಗದ ನಿಜವಾದ ಕುಬೇರ. ಹಾಸನವನ್ನ ಹೊರ‍್ತುಪಡಿಸಿ, ಬೆಂಗಳೂರು, ಮೈಸೂರು ಹಾಗೂ ಕೋಲಾರದಲ್ಲಿ ಯಶ್ ಸಾಮ್ರಾಜ್ಯವಿದೆ.

ಬರೀ ಬೆಂಗಳೂರಿನಲ್ಲಿ ಮೂರು ಫ್ಯ್ಲಾಟ್‌ಗಳನ್ನೊಂದಿರುವ ಯಶ್, ಇಪ್ಪತ್ತು ಕೋಟಿಯ ಪೆಂಟ್ ಹೌಸಿನ ಮಾಲೀಕನೂ ಹೌದು. ಮೈಸೂರಿನ ಬೋಗಾದಿ ಬಳಿಯೂ ಯಶ್ ಅವ್ರ ಪೆಂಟ್ ಹೌಸಿದೆ ಅನ್ನುವ ಸುದ್ದಿನೂ ಇದೆ. ಹೀಗಿದ್ದೂ ಕತ್ರಿಗುಪ್ಪೆಯ ಸದ್ಯದ ವಿವಾದಿತ ಮನೆ ಬಿಟ್ಟರೆ ಯಶ್ ಬಳಿ ಇನ್ನೇನೂ ಇಲ್ಲ ಅಂದ್ರೆ ಹೇಗೆ ನಂಬಲು ಸಾಧ್ಯ. ಬಹುಶ ಇದೇ ಕಾರಣಕ್ಕೋ ಏನೋ ಗಾಂಧಿನಗರದ ಗ್ರೀನ್ ಹೌಸ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಗಳೂ ನಡೆಯುತ್ತಿವೆ.ಹೌದು, ಗಾಂಧಿನಗರದ ಗಲ್ಲಿಗಳಲ್ಲಿ ಯಶ್ ಬಗ್ಗೆ ಪ್ರಶ್ನಾವಳಿನೇ ನಡೆಯುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಹೊಸಕೇರೆಹಳ್ಳಿಯಲ್ಲಿ ಯಶ್ ವಾಸವಿರುವ ಮನೆ ಯಾರದ್ದು, ಅದು, ಯಶ್‌ಗೆ ಸಂಬಂಧಿಸಿದ್ದಲ್ವಾ ಅನ್ನುವ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ ಅನೇಕರು. ಅಷ್ಟೇ ಅಲ್ಲ.. ಕಳೆದ ಒಂಭತ್ತು ವರ್ಷಗಳಿಂದ ರಗಳೆ, ರಂಪಾಟಕ್ಕೆ ಕಾರಣವಾಗಿರುವ ಕತ್ರಿಗುಪ್ಪೆ ಮನೆ ಖಾಲಿ ಮಾಡಿ, ಅಪ್ಪ ಹಾಗೂ ಅಮ್ಮನನ್ನ ತಮ್ಮ ಜೊತೆಯಲ್ಲೇ ಹೊಸಕೇರೆಹಳ್ಳಿಯಲ್ಲಿ ಇರಿಸಿಕೊಳ್ಳಲು ಯಶ್‌ಗೆ ಆಗಲ್ವಾ ಅನ್ನುವ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

ಹೀಗೆ ಯಶ್ ತಾಯಿ ಮನೆ ಇಲ್ಲ ಅನ್ನುವ ಮಾಡಿಕೊಂಡ ಮನವಿ ಬೆನ್ನೇಟಿಗೆ ಎದ್ದ ಇದೇ ಪ್ರಶ್ನೆಗಳಿಗುತ್ತರ ಹುಡುಕಲು ಹೊರಟ್ರೆ, ಕೆ.ಜಿ.ಎಫ್‌ನಲ್ಲಿ ಕೋಲಾರದ ಚಿನ್ನದ ಗಣಿಯನ್ನ ಯಶ್ ಹೆಕ್ಕಿ ತೆಗೆದಷ್ಟೇ ರೋಚಕವಾದ ವಿಚಾರಗಳೂ ಹೊರಬರುತ್ವೆ. ಹೌದು, ಅದು.. ೨೦೦೭ರ ಸಮಯ. ಆಗ, ಯಶ್, ಕಿರುತೆರೆನಿಂದ ಹಿರಿತೆರೆಗೆ ಶಿಫ್ಟಾಗಿದ್ದರು. ಅವಕಾಶಗಳನ್ನ ಹುಡುಕುತ್ತಿದ್ದರು. ಜಂಭದ ಹುಡುಗಿ, ಮೊಗ್ಗಿನ ಮನಸು, ರಾಕಿ. ಕಳ್ಳರ ಸಂತೆ, ಗೋಕುಲ ಸಿನಿಮಾಗಳೂ ಬಂದಿದ್ದು ಇದೇ ವೇಳೆಯಲ್ಲಿ. ಹೀಗೆ ೨೦೦೭ರಿಂದ ೨೦೦೯ರವರೆಗೆ ಭರ್ತಿ ಐದು ಚಿತ್ರಗಳನ್ನ ಯಶ್ ಮಾಡಿದ್ರೂ, ಮೊಗ್ಗಿನ ಮನಸು ಹೊರ‍್ತುಪಡಿಸಿ.. ಇನ್ಯಾವ ಸಿನಿಮಾನೂ ಅಂದುಕೊಂಡ ಯಶಸ್ಸು ಕಾಣಲಿಲ್ಲ. ಹೆಸರು ತಂದು ಕೊಡಲಿಲ್ಲ. ಇಲ್ಲೇ ಆಗಿದ್ದು ಪವಾಡ. ಹೌದು, ೨೦೧೦ರ ಹೊತ್ತಿಗೆ.. ಯಶ್ ಅದೃಷ್ಟದ ಬಾಗಿಲು ತೆರೆದಿತ್ತು. ಇದಕ್ಕೆ ಕಾರಣ.. ವಿವಾದಕ್ಕೆ ಕಾರಣವಾಗಿರುವ ಇದೇ ಮನೆ.

ಹೌದು, ನಿಮಗೆ ಗೊತ್ತಿರಲಿ ಯಶ್, ಕತ್ರಿಗುಪ್ಪೆಯ ಇದೇ ಮನೆಗೆ ಬಲಗಾಲಿಟ್ಟು ಕಾಲಿಟ್ಟಿದ್ದು ೨೦೧೦ರಲ್ಲಿ. ಅದು, ನಲವತ್ತು ಸಾವಿರ ಬಾಡಿಗೆಗೆ. ಅಂದು, ಯಶ್‌ಗೆ ಇಂದಿನ ನೇಮಾಗ್ಲಿ, ಫೇಮಾಗ್ಲಿ.. ಇರ‍್ಲಿಲ್ಲ. ಸಿಂಪಲ್ಲಾಗ್ ಹೇಳಬೇಕು ಅಂದ್ರೆ ಆಗಷ್ಟೇ ಯಶ್, ಬೆಳೆದು ನಿಲ್ಲಲು ಪರಿಶ್ರಮ ಹಾಕ್ತಿದ್ದರು. ಬಟ್, ಅದ್ಯಾವಾಗ ಯಶ್ ಸದ್ಯ ವಿವಾದಕ್ಕೆ ಕಾರಣವಾಗಿದ್ದ ಮನೆಗೆ ಕಾಲಿಟ್ಟರೋ, ಆಗ ಎಲ್ಲ ಬದಲಾಗಿತ್ತು. ಮೊದಲ ಸಲ, ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮಾ, ಹೀಗೆ ಅನೇಕ ಸಿನಿಮಾಗಳೂ ಯಶ್‌ರನ್ನ ಅರಸಿಕೊಂಡು ಹೋದ್ವು. ಗಲ್ಲಾಪೆಟ್ಟಿಗೆಯಲ್ಲೂ ಗೆದ್ವು. ಯಶ್‌ಗೆ ರಾಕಿಂಗ್ ಸ್ಟಾರ್ ಪಟ್ಟವನ್ನೂ ತಂದು ಕೊಟ್ವು. ಹೀಗೆ, ಮನೆಗೆ ಕಾಲಿಟ್ಟ ದಿನದಿಂದ ಬದಲಾದ ಗ್ರಹಗತಿಯನ್ನ ನೋಡಿ ಖುದ್ದು ಚಕಿತಗೊಂಡಿದ್ದ ಯಶ್, ಅವತ್ತೇ ನಿರ್ಧಾರ ಮಾಡಿದ್ದರು. ಯಾವ ಕಾರಣಕ್ಕೂ ಮನೆ ಬದಲಾವಣೆ ಮಾಡಬಾರದು ಎಂದು. ಅಂದು ಮಾಡಿದ ನಿರ್ಧಾರದಂತೆ ಮನೆಯನ್ನ ರಿನೋವೆಟ್ ಮಾಡಿಸಿದ್ದ ಯಶ್, ನಂತ್ರ ಮನೆಯನ್ನ ಯಶೋಮಾರ್ಗದ ಆಫೀಸನ್ನಾಗಿಯೂ ಬದಲಿಸಿಕೊಂಡಿದ್ದರು.

ಇಷ್ಟೇ ಆಗಿದ್ದರೆ, ಇಷ್ಟೆಲ್ಲಾ ವಿವಾದವಾಗ್ತಿರಲಿಲ್ಲ. ಲಕ್ಕಿ ಮನೆ ಖಾಲಿ ಮಾಡುವ ಪ್ರಮೇಯನೂ ಬರ‍್ತಿರಲಿಲ್ಲ. ಆದ್ರೆ, ನೇಮು ಹಾಗೂ ಫೇಮು ಏನ್ ಬೇಕಾದ್ರೂ ಮಾಡಿಸುತ್ತೆ. ಇದಕ್ಕೆ ಕೈಗನ್ನಡಿ ಅನ್ನುವಂತೆ.. ಯಶ್, ಬಾಡಿಗೆ ಕೊಡುವದನ್ನೇ ನಿಲ್ಲಿಸಿಬಿಟ್ಟರು. ಇದು, ಎಷ್ಟರ ಮಟ್ಟಿಗೆ ವಿವಾದಕ್ಕೆ ಇಲ್ಲಿವರೆಗೂ ಕಾರಣವಾಗಿದೆ ಅನ್ನುವದನ್ನ ಮತ್ತಿಲ್ಲಿ ಹೇಳಬೇಕಿಲ್ಲ. ಇನ್ನೂ ಆಗ್ಲೇ ಹೇಳಿದಂತೆ, ಯಶ್‌ಗಿದು ಅದೃಷ್ಟದ ಮನೆ. ಹಾಗಾಗಿ, ಮನೆ ಖಾಲಿ ಮಾಡಲು ಅಂದಿನಿಂದ ಇಂದಿನವರೆಗೂ ಯಶ್ ಹಿಂದೇಟು ಹಾಕ್ತಾನೇ ಬಂದಿದ್ದಾರೆ. ಕಾರಣ, ಮನೆ ಖಾಲಿ ಮಾಡಿದ್ರೆ ನಸೀಬು ಮತ್ತೆ ಖಾಲಿಯಾಗುತ್ತೆ ಅನ್ನುವ ನಂಬಿಕೆ. ನಂಬಿಕೆ ಅನ್ನುವದಕ್ಕಿಂತ ಹೆದರಿಕೆ. ಇದೇ ಕಾರಣದಿಂದ.. ನಾನಾ ಕಾರಣಗಳನ್ನ ಕೊಟ್ಟು, ಯಶ್.. ಕತ್ರಿಗುಪ್ಪೆಯ ಮನೆಯನ್ನ ಖಾಲಿ ಮಾಡುತ್ತಿಲ್ಲ ಅನ್ನೋ ಮಾತುಗಳನ್ನ ಖುದ್ದು ಯಶ್ ಹುಡುಗರೇ ಮಾತನಾಡಿಕೊಳ್ತಾರೆ. ಅಷ್ಟೇ ಅಲ್ಲ.. ಹೇಗಾದ್ರೂ ಮಾಡಿ ಕತ್ರಿಗುಪ್ಪೆಯ ಲಕ್ಕಿ ಮನೆಯನ್ನ ಜೀವನಪೂರ್ತಿ ತನ್ನದಾಗಿಸಿಕೊಳ್ಳಬೇಕೆಂಬ ಆಸೆಯೂ ಯಶ್‌ಗಿದೆ ಅನ್ನೋದು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರ‍್ತಿರುವ ಮಾತು. ಇದಕ್ಕೆ ತಕ್ಕಂತೆ.. ಕಾಲ ಕಾಲಕ್ಕೆ ಯಶ್ ಕಾರಣಗಳನ್ನ ಕೊಡ್ತಾ ಬರ‍್ತಿದ್ದಾರೆ. ಇನ್ನೂ ಇದೆಲ್ಲದ್ರ ನಡುವೆ, ಅಣ್ತಮ್ಮ ತಮ್ಮ ಅಭಿಮಾನಿಗಳಿಗೆ ಹಾಗೂ ಸಮಾಜಕ್ಕೆ ಕೊಡಲು ಹೊರಟಿರುವ ಸಂದೇಶವಾದ್ರೂ ಏನು ಅನ್ನುವ ಪ್ರಶ್ನೆನೂ ಮೂಡುತ್ತೆ.

ನಿಮಗೆ ಗೊತ್ತಿರಲಿ..ಅಭಿಮಾನಿಗಳಿಗೆ ತಮ್ಮಿಷ್ಟದ ಕಲಾವಿದನೇ ದೇವರು. ಪ್ರತಿ ಕ್ಷಣಕ್ಕೂ ತಮ್ಮಿಷ್ಟದ ನಾಯಕ ಹಾಗೂ ನಾಯಕಿಯನ್ನ ಅನುಸರಿಸುತ್ತಾರೆ ಅಭಿಮಾನಿಗಳು. ಇಂಥ ಸೂಕ್ಷ್ಮ ವಿಚಾರದ ಅರಿವಿದ್ದಿದ್ದಕ್ಕೆ.. ಡಾ.ರಾಜ್, ತೆರೆ ಮೇಲೆಯಾಗ್ಲಿ, ತೆರೆ ಹಿಂದೆಯಾಗ್ಲಿ.. ಎಲ್ಲೂ ತಪ್ಪು ಸಂದೇಶವನ್ನ ಕೊಟ್ಟಿಲ್ಲ. ರಾಜ್ ಅವ್ರಲ್ಲಿದ್ದ ಇದೇ ಗುಣಕ್ಕೆ.. ಇವತ್ತಿಗೂ ಅಭಿಮಾನಿಗಳೂ ಅವ್ರನ್ನ ಆರಾಧಿಸೋದು. ಇಂಥಹದ್ದೊಂದು ಸತ್ಯ ಯಶ್‌ಗೆ ಅರಿವಾಗ್ತಿಲ್ವಾ.. ಗೊತ್ತಿಲ್ಲ. ಆದ್ರೆ.. ತೆರೆ ಮೇಲೆ ಸತ್ಯ, ನ್ಯಾಯದ ಬಗ್ಗೆ ಪುಖಾಂನುಪುಂಖವಾಗಿ ಮಾತನಾಡುವ, ಡೈಲಾಗ್ ಹೊಡೆಯುವ ಯಶ್, ನಿಜ ಜೀವನದಲ್ಲಿ ಮಾತ್ರ.. ಮನೆ ಮಾಲೀಕ ಮುನಿಪ್ರಸಾದ್‌ಗೆ ಖಳನಾಯಕನಾಗಿದ್ದಾರೆ. ಈ ಮೂಲಕ.. ತಮ್ಮ ಅಭಿಮಾನಿಗಳಿಗೂ ತಪ್ಪು ಸಂದೇಶವನ್ನ ರವಾನಿಸುತ್ತಿದ್ದಾರೆ ಅನ್ನೋದು ಗಾಂಧಿನಗರದ ಪಂಡಿತರ ಒಕ್ಕೂರಿಲಿನ ಅಭಿಪ್ರಾಯ, ಯಶ್, ಕಷ್ಟಪಟ್ಟು ಮೇಲೆ ಬಂದ ನಟ. ಹಂತಹಂತವಾಗಿಯೂ ಬೆಳೆದ ನಟ. ಇವತ್ತಿಗೆ ಯಶ್ ನ್ಯಾಶನಲ್ ಸ್ಟಾರ್. ಇದೆಲ್ಲ ಒಪ್ಪುವಂತದ್ದೇ. ಆದ್ರೆ ಇದೇ ಯಶ್, ಬಾಡಿಗೆ ವಿಚಾರದಲ್ಲಿ ತಮ್ಮ ಕೈಯಾರೇ ತಾವೇ ತಮ್ಮ ಇಮೇಜ್‌ನ್ನ ಹಾಳುಗೆಡವಿಕೊಳ್ಳುತ್ತಿದ್ದಾರೆ.

ಹೌದು, ಬಾಡಿಗೆ ವಿಚಾರಕ್ಕೆ ರಗಳೆ.. ರಂಪಾಟ.. ಮಾಡ್ತಿರುವ ಯಶ್ ಅದೆಷ್ಟೇ ಅವಮಾನಗಳಾದ್ರೂ ಮನೆ ಮಾತ್ರ ಖಾಲಿ ಮಾಡುವ ಮನಸು ಮಾಡುತ್ತಿಲ್ಲ. ಇನ್ನೂ ಹೇಳಿ ಕೇಳಿ ಯಶ್ ಇದೀಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕ. ಹೀಗಿದ್ದಾಗ.. ಇಂಥಹ ವಿವಾದಗಳೂ ಯಶ್ ಅವ್ರ ಹಿನ್ನಡೆಗೆ ಹಾಗೂ ಅವ್ರ ಮನಸ್ಥಿತಿಗೆ ಕೈಗನ್ನಡಿಯಾಗಿ ನಿಲ್ಲುತ್ವೆ ಹೊರ‍್ತು, ಶೋಭೆಯಂತೂ ತಂದು ಕೋಡೋದಿಲ್ಲ ಅನ್ನೋ ಮಾತುಗಳೂ ಕತ್ರಿಗುಪ್ಪೆ ಕಾಲನಿಯಲ್ಲಿ ಕೇಳಿ ಬರ‍್ತಿವೆ. ಇನ್ನು ಯಶ್ ಪ್ರತಿಭಾವಂತ. ಪ್ರತಿಭೆಯನ್ನೇ ನಂಬ್ಕೊಂಡು ಬದುಕು ಕಟ್ಟಿಕೊಂಡ ನಟ. ಹೀಗಿದ್ದೂ, ಅದ್ಯಾಕೇ ಮನೆಗೆ ಕಾಲಿಟ್ಟ ಘಳಿಗೆನಿಂದನೇ ಅದೃಷ್ಟ ಬದಲಾಯ್ತು, ಮನೆ ಖಾಲಿ ಮಾಡಿದ್ರೆ ಅದೃಷ್ಟ ಇರಲ್ವಾ ಅನ್ನುವ ಯೋಚನೆಯನ್ನ ಯಶ್ ಮಾಡ್ತಿದ್ದಾರೆ ಅನ್ನೋದು ಇದೀಗ ಅನೇಕರಿಗೆ ಕಾಡ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅದೇನೆ ಇರ‍್ಲಿ, ಸದ್ಯ.. ಬಾಡಿಗೆ ಮನೆ ಮತ್ತೆ ಸುದ್ದಿಯಲ್ಲಿದೆ. ಮತ್ತೆ ಶುರುವಾದ ಇದೇ ಬಾಡಿಗೆ ಯುದ್ಧ, ಇನ್ನೆಲ್ಲಿ ಹೋಗಿ ಮುಟ್ಟುತ್ತೆ ಹೀಗೊಂದು ಪ್ರಶ್ನೆ ನಡುವೆ, ಯಶ್.. ಮನೆ ಖಾಲಿ ಮಾಡ್ತಾರಾ, ಅಥ್ವಾ ಹೀಗೆ ಮನೆ ಮಾಲೀಕ ಮುನಿಪ್ರಸಾದ್‌ರನ್ನ ಗೋಳೋಯ್ದುಕೊಂಡೇ ಇರ‍್ತಾರಾ, ವಿವಾದವನ್ನ ಹಾಗೇ ಮುಂದುವರೆಸಿಕೊಂಡೇ ಹೋಗ್ತಾರಾ.. ಅನ್ನುವದಕ್ಕುತ್ತರ ಕಾಲವೇ ನೀಡಲಿದೆ.

LEAVE A REPLY

Please enter your comment!
Please enter your name here