Home Cinema ಲಕ್ಷಣನ ಅಕ್ರಮ ಸಂಬಂಧ ಗೊತ್ತಿದ್ರೂ ಹೆಂಡ್ತಿ ಸೈಲೆಂಟ್..! ಕರೆನ್ಸಿ ಕೊಟ್ಟು ಮೋಹದಾಟಕ್ಕೆ ಡಾನ್ ಲೈಸೆನ್ಸ್..! ಲಂಡನ್...

ಲಕ್ಷಣನ ಅಕ್ರಮ ಸಂಬಂಧ ಗೊತ್ತಿದ್ರೂ ಹೆಂಡ್ತಿ ಸೈಲೆಂಟ್..! ಕರೆನ್ಸಿ ಕೊಟ್ಟು ಮೋಹದಾಟಕ್ಕೆ ಡಾನ್ ಲೈಸೆನ್ಸ್..! ಲಂಡನ್ ನಲ್ಲೆ ಕೂತು ಲಕ್ಷ್ಮಣನ ಚಟ್ಟ ಕಟ್ಟಿದ್ಳು ಮಾಯಾಂಗಿ..! ಪ್ರೇಮಿಗಳ ಪ್ಲಾನ್ ಗೆ ಬಳಿಕಾ ಬಕ್ರ ಆದ ಪಾತಕಿ.!

4292
0
SHARE

ರೌಡಿ ಲಕ್ಷ್ಮಣ ಸತ್ತು ಹೋಗಿದ್ದಾನೆ. ಲಕ್ಷ್ಮಣನೆಂಬ ರೌಡಿಯೊಬ್ಬನಿದ್ದ ಅನ್ನೋದು ಕೇವಲ ನೆನಪಷ್ಟೆ. ಆದ್ರೆ ಬೆಂಗಳೂರಿನ ಅಂಡರ್ ವರ್ಲ್ಡ್ ನೋಡಿರೋ ಕೆಲವೇ ಕೆಲವು ಪ್ರೀಪ್ಲಾನ್ಡ್ ಮರ್ಡರ್ ಗಳಲ್ಲಿ ಇದು ಒಂದು ಅನ್ಸುತ್ತೆ. ಇಲ್ಲಿ ದೊಡ್ಡ ವಿಕೆಟ್ ಹೊಡೆಬೇಕು ಅಂದಾಗೆ ತುಂಬಾ ಚೆನ್ನಾಗಿ ಪ್ಲಾನ್ ಮಾಡ್ತಾರೆ.

ಎಲ್ಲೋ ಸಿಕ್ತಾನೆ ಕೊಚ್ಚಿ ಹಾಕೋಣ ಅನ್ನೋ ಮರ್ಡರ್ ಗಳಿಗಿಂತ ಇಂತಹ ಪ್ರಿ ಪ್ಲಾನ್ ಮರ್ಡರ್ ಗಳಿಗೆ ತುಂಬಾನೆ ಟೈಂ ಮತ್ತು ತಾಳ್ಮೆ ಬೇಕಾಗುತ್ತೆ. ಇವತ್ತೊಂದು ವಿಷಯ ಹೇಳಿಬಿಡ್ತೀವಿ ಕೇಳಿ. ಈ ಲಕ್ಷ್ಮಣನನ್ನ ಹೊಡಿಯೋದಕ್ಕೆ ವರ್ಷಿಣಿ ಅನ್ನೋ ಸುಂದರಿಯ ಸಾಥ್ ಇರಲಿಲ್ಲ ಅಂದಿದ್ರೆ ಖಂಡಿತವಾಗಿಯು ಆತನನ್ನ ಮುಟ್ಟೋದಕ್ಕೆ ಯಾರಿಗೂ ಆಗ್ತಿರಲಿಲ್ಲ. ಯಾಕಂದ್ರೆ ಅವನಿಗೆ ಫಿಲ್ಡ್ ಏನು ಅನ್ನೋದು ಚೆನ್ನಾಗಿಯೇ ಗೊತ್ತಿತ್ತು. ಅವನಿಗೆ ಯಾವಾಗ ಎಲ್ಲಿ ಯಾರನ್ನ ಇಟ್ಕೊಂಡು ಓಡಾಡಬೇಕು ಅನ್ನೋದು ಗೊತ್ತಿತ್ತು. ಹೀಗಾಗಿ ಅವನನ್ನ ಇಲ್ಲಿವರೆಗೂ ಯಾರು ಮುಟ್ಟೋದಕ್ಕೆ ಆಗಿರಲಿಲ್ಲ. ಇಲ್ಲಿದ್ದ ಅವನ ವೀಕ್ನೆಸ್ ಅವನ ಮನೆ ಮುಂದೆ ಹೊಗೆ ಹಾಕುವ ಹಾಗೆ ಮಾಡಿತ್ತು.

ಲಕ್ಷ್ಮಣನ ಸಾವಿಗೆ ಒಂದೆರಡು ದಿನಗಳ ಹಿಂದೆ ಪ್ಲಾನ್ ಮಾಡಿರಲಿಲ್ಲ. ಅವನಿಗಾಗಿ ತಿಂಗಳುಗಟ್ಟಲೆ ಪ್ಲಾನ್ ಮಾಡಲಾಗಿತ್ತು. ಅದಕ್ಕಾಗಿ ಬ್ಲೂ ಪ್ರಿಂಟ್ ಕೂಡಾ ರೆಡಿ ಮಾಡ್ಕೊಂಡಿದ್ರು. ಅವನನ್ನ ಹೊಡೆಯೋದು ಈಸಿ ಆದ್ರೆ ಆದ್ರೆ ಅವನು ಸಿಂಗಲ್ ಆಗಿರ್ಬೇಕು ಅನ್ನೋದು ಹಂತಕರ ಟೀಂನ ಬಯಕೆಯಾಗಿತ್ತು. ಅವನು ಸಿಂಗಲ್ ಆಗಿ ಇರದೇ ಇದ್ದಿದ್ರೆ ಖಂಡಿತ ಅವನನ್ನ ಟಚ್ ಮಾಡೋದಕ್ಕೆ ಆಗ್ತಿರಲಿಲ್ಲ. ಅಲ್ಲದೆ ಅವಳೊಬ್ಬಳು ಲಕ್ಷ್ಮಣನಿಗೆ ಕಟಾಯಿಸದೇ ಇದ್ದಿದ್ರು ಕೂಡಾ ಅವನು ಜೀವಂತವಾಗಿರ್ತಿದ್ದ. ಹೆಣ್ಣು ಯಾವಾಗ್ಲೂ ಹಾಗೆ ಚೆನ್ನಾಗಿದ್ದ ಚೆನ್ನಾಗೇ ಇರ್ತಾಳೆ. ಒಂದು ಸಾರಿ ದ್ವೇಷ ಬೆಳೆಸಿಕೊಂಡು ಬಿಟ್ರೆ ಖಂಡಿತವಾಗಿಯು ಆಕೆ ತನ್ನ ಗುರಿ ಸಾಧಿಸಿಯೇ ತೀರ್ತಾಳೆ. ಅದ್ರಲ್ಲು ತನ್ನ ಎದುರಾಳಿಗೆ ತಾನೇ ದೊಡ್ಡ ವೀಕ್ನೆಸ್ ಅನ್ನೋದು ಗೊತ್ತಾಗಿ ಬಿಟ್ರಂತು ಮಾಡೋ ಕೆಲಸ ತುಂಬಾನೇ ಈಸಿಯಾಗಿ ಹೋಗುತ್ತೆ.

ಇಲ್ಲಿ ಆಗಿದ್ದು ಕೂಡಾ ಅದೇ. ಅವನಿಗೆ ಎಳೆ ನಿಂಬೆಕಾಯಿ ಸಿಗುತ್ತಲ್ಲ ಅನ್ನೋ ಆಸೆ. ಆದ್ರೆ ಅವಳಿಗೆ ತನ್ನ ಸೌಂದರ್ಯವೇ ಅವನ ಸಾವು ಅನ್ನೋದು ಗೊತ್ತಿತ್ತು.ಲಕ್ಷ್ಮಣ ಸಾವಿನ ಕೊನೆಯ ಕ್ಷಣದ ತಯಾರಿಗಳನ್ನ ಆಮೇಲೆ ಹೇಳ್ತೀನಿ ಅದಕ್ಕೂ ಮೊದಲು ಅವರಿಬ್ಬರ ಸಂಬಂಧ ಹೇಗಿತ್ತು ಅನ್ನೋದನ್ನ ಹೇಳ್ತೀನಿ. ಲಕ್ಷ್ಮಣನಿಗೆ ಇವಳು ಹೊಸ ಪರಿಚಯವೇನಲ್ಲ. ವರ್ಷಿಣಿ ಹುಟ್ಟಿದಾಗ ಅವಳನ್ನ ನೋಡಿದ ಕೆಲವೇ ಕೆಲವರಲ್ಲಿ ಇವನು ಒಬ್ಬನಾಗಿದ್ದ. ಆತನ ಎದುರಿಗೆ ಆಕೆ ಬೆಳೆದು ದೊಡ್ಡವಳಾಗಿದ್ಲು. ಅವಳು ಕೂಡಾ ಮನೆಗೆ ಬಂದು ಹೋಗ್ತಿದ್ದ ಲಕ್ಷ್ಮಣನನ್ನ ಅಂಕಲ್ ಅಂಕಲ್ ಅಂತಾನೆ ಕರಿತಾ ಇದ್ಲು. ಅದ್ಯಾವಾಗ ಕಣ್ಣೆದುರಿಗೆ ಕಣ್ಣು ಕುಕ್ಕುವ ಹಾಗೆ ಅವಳು ಬೆಳೆದು ಸೌಂದರ್ಯವತಿಯಾದ್ಲೋ ಆಗ ಅವನಿಗೆ ಅವಳ ಮೇಲೆ ಕಣ್ಣು ಬಿದ್ದಿತ್ತು.

ಅಷ್ಟೊತ್ತಿಗಾಗ್ಲೇ ಅವಳು ಪಿಯುಸಿ ಮುಗಿಸಿ ಡಿಗ್ರಿಗೆ ಅಂತ ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿದ್ಲು. ಆಗಿನಿಂದಲೇ ಇವನು ಆಕೆಯ ಸಂಪೂರ್ಣ ಜವಾಬ್ಜಾರಿಯನ್ನ ತೆಗೆದುಕೊಂಡಿದ್ದ. ಅಲ್ಲದೆ  ಇವಳು ಬಿಎಸ್ ಸಿ ಮಾಡುವಾಗ ಇವಳು ಕಾಲೇಜಿಗೆ ಹೋಗಿ ಬರೋದಕ್ಕೆ ಅಂತಾನೆ ಒಂದು ಕಾರ್ ಮತ್ತು ಅದಕ್ಕೆ ಡ್ರೈವರ್ ಅನ್ನ ನೇಮಕ ಮಾಡಿದ್ದ. ಅಲ್ಲದೆ ತಾನೇ ಖುದ್ದು ಹೋಗಿ ಅವಳನ್ನ ಪಿಕ್ ಅಪ್ ಅಂಡ್ ಡ್ರಾಪ್ ಮಾಡ್ತಿದ್ದ.ಈ ವೇಳೆ ಲಕ್ಷ್ಮಣನ ಜೊತೆ ಓಡಾಡ್ತಿದ್ದ ವರ್ಷಿಣಿಯನ್ನ ನೋಡಿ ಯಾರು ಕ್ಯಾತೆ ತೆಗಿತಾ ಇರಲಿಲ್ಲ. ಅವಳ ಸುದ್ದಿಗು ಹೋಗ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇವನ ಹೆಸರು ಹೇಳಿ ಕಾಲೇಜಿನಲ್ಲಿ ಹವಾ ಮೆಂಟೇನ್ ಮಾಡಿದ್ಲು.

ಆಗಲೇ ನೋಡಿ ಅವಳಿಗು ಲಕ್ಷ್ಮಣ ಸಹವಾಸ ಹತ್ತಿತ್ತು. ಸಣ್ಣ ಏಜಿಗೆ ಅವನು ಇವಳನ್ನ ಕರ್ಕೊಂಡು ಹೋಗಬಾರದ ಜಾಗಕ್ಕೆಲ್ಲಾ ಕರ್ಕೊಂಡು ಹೋಗ್ತಿದ್ದ. ತಾನು ಕುಡಿಯೋ ಎಣ್ಣೆಯನ್ನ ಮೊದಲಿಗೆ ಪಲ್ಸ್ ಪೊಲಿಯೋ ಡ್ರಾಪ್ ತರಹ ಕುಡಿಸೋದಕ್ಕೆ ಶುರುಮಾಡಿದವನು ನಂತ್ರ ಬಾಟಲ್ ಗಟ್ಟಲೆ ಕುಡಿಸೋದಕ್ಕೆ ಶುರುಮಾಡಿದ್ದ. ಅದ್ಯಾವಾಗ ಹುಡುಗಿಗೆ ಕುಡಿತ ರುಚಿ ಹತ್ತಿತೋ ಆಗ ಅವಳು ಇವನ ಹಿಂದೆ ಖಾಯಂ ಆಗಿ ಇರೋದಕ್ಕೆ ಶುರುಮಾಡಿದ್ಲು. ಕಣ್ಣೆದುರಿಗೆ ಚೆಂದುಳ್ಳಿ ಚೆಲುವೆ ಇರುವಾಗ ಯಾರು ತಾನೇ ಸುಮ್ಮನಿರ್ತಾರೆ. ಅದ್ರಲ್ಲೂ ಲಕ್ಷ್ಮಣನಂತಹವರು ಸುಮ್ಮನಿರ್ತಾರಾ ಹೇಳಿ. ಅವನು ಆಕೆಯೊಂದಿಗೆ ಮಜಾ ಮಾಡಬೇಕು ಅಂತ ತೀರ್ಮಾನಿಸ್ತಾನೆ.

ಅಲ್ಲದೆ ಅದಕ್ಕೆ ಏನು ಮಾಡಬೇಕು ಅಂತ ಪ್ಲಾನ್ ಮಾಡಿದ್ದ.ಯಾವಾಗ್ಲೂ ಜೊತೆಯಲ್ಲಿ ಇರ್ತಿದ್ದ ಇವಳಿಗೆ ಒಮ್ಮೆ ಚೆನ್ನಾಗಿ ಕುಡಿಸಿ ಅವಳ ಮೇಲೆ ರೇಪ್ ಮಾಡಿಬಿಟ್ಟಿದ್ದ. ಅಷ್ಟಕ್ಕೆ ಸುಮ್ಮನಾಗಿದ್ರೆ ಅವಳು ಆಗಿದ್ದೆಲ್ಲಾ ಆಗೋಯ್ತು ಅಂತ ಬಟ್ಟೆ ಹಾಕ್ಕೊಂಡು ಹೋಗ್ತಿದ್ಲು ಅನ್ಸುತ್ತೆ. ಆದ್ರೆ ಅವನು ಹಾಗೆ ಮಾಡಲಿಲ್ಲ. ತಾನು ಆಕೆಯೊಂದಿಗೆ ಮಾಡಿದ್ದ ಸೆಕ್ಸ್ ಅನ್ನ ವೀಡಿಯೋ ಮಾಡ್ಕೊಂಡು ಮತ್ತೆ ಮತ್ತೆ ಅವಳನ್ನ ಹೀರೋದಕ್ಕೆ ಶುರುಮಾಡಿದ್ದ. ಇವಳು ಯಾವತ್ತು ಯಾರ ಪಾಲಾಗಬಾರದು ಇವಳು ನನ್ನ ಪ್ರಾಪರ್ಟಿ ಅನ್ನೋ ರೀತಿ ವರ್ತಿಸೋದಕ್ಕೆ ಶುರುಮಾಡಿದ. ಇಲ್ಲೇ ನೋಡಿ ಹೆಣ್ಣೊಳಗೆ ಅಡಗಿದ್ದ ಪ್ರೀತಿ ದ್ವೇಷವಾಗಿ ಬದಲಾಗಿತ್ತು. ಆಗಿನಿಂದಲೇ ಅವನ ಜೊತೆಗಿದ್ದುಕೊಂಡೆ ಅವನನ್ನ ಹಣಿಯೋದಕ್ಕೆ ಪ್ಲಾನ್ ಮಾಡಿದ್ಲು.ಒಂದು ಸಾರಿ ವರ್ಷಿಣಿಯನ್ನ ಖೆಡ್ಡಾಗೆ ಬೀಳಿಸಿದ್ದ ಆತ ಮತ್ತೆ ಮತ್ತೆ ಆಕೆಯಿಂದ ಅದನ್ನೇ ಬಯಸ್ತಿದ್ದ.

ಅಲ್ಲದೆ ಆಕೆಯನ್ನ ಬಳಸಿಕೊಂಡ ಮೇಲೂ ಆಕೆ ಕೇಳಿದ್ದೆಲ್ಲವನ್ನ ಕೊಡ್ತಿದ್ದ. ಅದಕ್ಕಾಗಿ ಅವಳನ್ನ ಲಂಡನ್ ಗೆ ಕಳುಹಿಸಿ ಓದಿಸ್ತಿದ್ದ. ಅವಳು ಕೇಳಿದ್ದೆಲ್ಲವನ್ನ ಕೊಡಿಸ್ತಿದ್ದ. ಅದ್ಯಾವಾಗ ಇವರಿಬ್ಬರ ಸಂಬಂಧ ಬೇರೆ ದಿಕ್ಕೆಗೆ ಹೋಯ್ತೋ ಆಗ ಈ ವಿಚಾರ ಲಕ್ಷ್ಮಣನ ಪತ್ನಿಗೆ ಕೂಡಾ ತಿಳಿದು ಹೋಗಿತ್ತು. ಈ ವೇಳೆ ಆಕೆ ಇವಳನ್ನ ಕೇಳಿದ್ದಾಳೆ. ಆದ್ರೆ ಆಕೆ ಆ ರೀತಿ ಏನು ಇಲ್ಲ ಅಂತ ಹೇಳಿದ್ಲು. ಆದ್ರೆ ಅವಳಿಗೆ ಎಲ್ಲಾ ಗೊತ್ತಿದ್ರು ಅದನ್ನ ಡೈರೆಕ್ಟ್ ಆಗಿ ಕೇಳುವ ಧೈರ್ಯವಿರಲಿಲ್ಲ. ಇಲ್ಲಿ ಲಕ್ಷ್ಮಣನ ಪತ್ನಿ ಮತ್ತು ವರ್ಷಿಣಿ ವಾಟ್ಸಾಪ್ ನಲ್ಲಿ ಮೆಸೆಜ್ ಮಾಡಿರೋದು ಇದೆಲ್ಲಾ ನೂರಕ್ಕೆ ನೂರರಷ್ಟು ಸತ್ಯ ಅನ್ನೋದನ್ನ ಹೇಳ್ತಿತ್ತು. ಹೀಗೆ ನಯವಾಗಿ ಮಾತನಾಡುತ್ತಲೇ ಆಕೆ ತನಗೆ ಬೇಕಾದ ಎಲ್ಲವನ್ನ ಅವನಿಂದ ಪಡ್ಕೊಂಡಿದ್ಲು. ಅದ್ರಲ್ಲೂ ಹೊರಗಡೆ ಫಿಲ್ಡ್ ನಲ್ಲಿ ಇವನ ಎದುರಿಗೆ ಹುಡುಗರು ನಿಂತುಕೊಳ್ಳೋದಕ್ಕೂ ಹೆದರ್ತಿದ್ರು.

ಆದ್ರೆ ಇವಳು ಮಾತ್ರ ಅವನನ್ನ ಕರಡಿ ಕುಣಿಸಿದ ಹಾಗೆ ಕುಣಿಸ್ತಿದ್ಲು. ರೂಪೇಶ್ ಕೇಳಿದ ಹಣವನ್ನ ಹೀಗೆ ಅವಳು ಅರೆಂಜ್ ಮಾಡಿಕೊಟ್ಟಿದ್ಲು. ಒಂದು ಲಕ್ಷ ಹಣವನ್ನ ಲಕ್ಷ್ಮಣನಿಂದ ಪಡೆದು ರೂಪೇಶ್ ಗೆ ಟ್ರಾನ್ಸ್ ಫರ್ ಮಾಡಿದ್ಲು. ಅದ್ರಲ್ಲಿ ರೂಪೇಶ 50ಸಾವಿರ ಹಣವನ್ನ ಕ್ಯಾಟ್ ರಾಜುಗೆ ಕೊಟ್ಟು ಫೈನಲ್ ಪ್ರಿಪರೇಷನ್  ಮಾಡಿಕೊಳ್ಳೋದಕ್ಕೆ ಹೇಳಿದ್ದ. ಇನ್ನು 50 ಸಾವಿರ ರೂಪಾಯಿಯನ್ನ ತನ್ನ ಹುಡುಗರಿಗೆ ಎಣ್ಣೆ ಹೊಡಿಸೋದಕ್ಕೆ ಖರ್ಚು ಮಾಡಿದ್ದ.ಲಂಡನ್ ನಲ್ಲಿ ರಾಣಿಯಂತೆ ಬದುಕ್ತಿದ್ದ ಹೆಣ್ಣಿನಲ್ಲಿ ಈಗ ದ್ವೇಷ ಮಾತ್ರವೇ ಕಾಣಿಸ್ತಿತ್ತು. ಅಲ್ಲದೆ ಪ್ರೇಮಿಗಳಿಬ್ಬರು ಒಂದಾಗೋದಕ್ಕೆ ಅಂತಿಮ ಹಂತದ ಸಿದ್ದತೆ ಮಾಡಿಕೊಳ್ತಿದ್ರು. ಅವರಿಬ್ಬರು ಒಂದಾಗಬೇಕು ಅಂದ್ರೆ ಅಲ್ಲೊಂದು ಬಲಿಯಾಗಲೇಬೇಕಿತ್ತು. ಆ ಬಲಿಯನ್ನ ಪಡೆಯೋದಕ್ಕೆ ಪ್ರೇಮಿಗಳಿಬ್ಬರು ತಯಾರಿ ನಡೆಸಿದ್ರು.

ಅದಕ್ಕೆ ಲಕ್ಷ್ಮಣನಿಂದ ಹಣವನ್ನ ಪಡೆದು ಅವನನ್ನ ಕೊಲ್ಲೋದಕ್ಕೆ ಸುಪಾರಿ ಕೊಟ್ಟಿದ್ರು. ಒಂದು ಕಡೆ ಬೆಂಗಳೂರಲ್ಲಿ ರೂಪೇಶ್ ಪ್ಲಾನ್ ಮಾಡ್ಕೊಂಡು ಹುಡುಗರನ್ನ ಬ್ಯಾಟಿಂಗ್ ಗೆ ಕಳಿಸೋದಕ್ಕೆ ರೆಡಿಯಾಗಿದ್ದ. ಅತ್ತ ವರ್ಷಿಣಿ ಲಕ್ಷ್ಮಣನನ್ನ ನಯವಾಗಿ ಫಿಲ್ಡ್ ಗೆ ಇಳಿಸೋದಕ್ಕೆ ರೆಡಿ ಮಾಡ್ತಿದ್ಲು.ಅವತ್ತೊಂದಿನ ಲಕ್ಷ್ಮಣನಿಗೆ ಫೋನ್ ಮಾಡಿದ ಆಕೆ ನಾನು ಬೆಂಗಳೂರಿಗೆ ಬರ್ತಿದ್ದೀನಿ. ಇನ್ನೇರಡು ದಿನ ಆದ ಮೇಲೆ ಅಪ್ಪ ಅಮ್ಮನ ಆನಿವರ್ಸರಿ ಇದೆ. ಎರಡು ದಿನ ಮೊದಲೇ ನಾನು ಬಂದು ನಿನ್ನ ಜೊತೆ ಇರ್ತೀನಿ. ನಂತ್ರ ಮನೆಗೆ ಹೋಗಿ ಅವರಿಗೆ ಸರ್ ಪ್ರೈಸ್ ಕೊಡ್ತೀನಿ ಅಂತ ಹೇಳಿದ್ಲು. ಅಲ್ಲದೆ ಎರಡು ದಿನ ನಾವಿಬ್ಬರೇ ಇರೋಣ ಅದಕ್ಕೆ ರೂಂ ಬುಕ್ ಮಾಡು ಅಂತ ಹೇಳ್ತಾಳೆ. ಅಲ್ಲದೆ ರಾಜರಾಜೇಶ್ವರಿ ನಗರದ ಔಟ್ ಸ್ಕರ್ಟ್ ನಲ್ಲಿ ರೂಂ ಬುಕ್ ಮಾಡೋದಕ್ಕೆ ಹೇಳ್ತಾಳೆ.

ಆದ್ರೆ ಆತನಿಗೆ ಅಲ್ಲಿ ಪರಿಚಯದವರು ಜಾಸ್ತಿ ಇರೋ ಕಾರಣ ಅಲ್ಲಿ ಬೇಡ ಅಂತ ಹೇಳ್ತಾನೆ. ನಂತ್ರ ಇಸ್ಕಾನ್ ಬಳಿ ಆರ್ ಜಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡ್ತೀನಿ ಅಂತ ಹೇಳಿ ಎಂಎಲ್ ಎ ಹೆಸರಲ್ಲಿ ರೂಂ ಬುಕ್ ಮಾಡಿದ್ದ.ಲಕ್ಷ್ಮಣ  ಅವಳು ನಿಜವಾಗ್ಲೂ ಬೆಂಗಳೂರಿಗೆ ಬರ್ತಾಳೆ ಅಂತ ಅಂದುಕೊಂಡಿದ್ದ. ಆದ್ರೆ ಅವಳು ಇದನ್ನೆಲ್ಲಾ ಲಂಡನ್ ನಲ್ಲಿ ಇದ್ದುಕೊಂಡೆ ಪ್ಲಾನ್ ಮಾಡಿದ್ಲು. ಅಲ್ಲದೆ ಲಕ್ಷ್ಮಣ ಮನೆಯಲ್ಲಿ ಇನ್ನೆರಡು ದಿನ ನಾನು ಬರೋದಿಲ್ಲ ಅಂತ ಹೇಳಿ ಬಟ್ಟೆ ಸಮೇತ ಹೊರಟು ಬಂದಿದ್ದ. ಅಲ್ಲದೆ ಒಂದಿಷ್ಟು ಖರ್ಚಿಗೆ ಅಂತ ಕಾಸನ್ನ ಕೂಡಾ ಇಟ್ಕೊಂಡಿದ್ದ. ನಂತ್ರ ಆಕೆಗಾಗಿ ರೂಂ ಮಾಡಿ ಕಾಯ್ತಿದ್ದ. ನಾನು ಇಲ್ಲೇ ಟೊಯೋಟಾ ಶೋರೂಂ ಬಳಿ ಇದ್ದೀನಿ ಬೇಗ ಬಂದು ಕರ್ಕೊಂಡು ಹೋಗು ಅಂತ ಆತನಿಗೆ ವಾಟ್ಸಾಪ್ ನಲ್ಲಿ ಒಂದು ಫೋಟೋ ಕಳಿಸಿದ್ಲು.

ಅಲ್ಲದೆ ನೀನೊಬ್ಬನೇ ಬಾ ಅಂತಾನು ಹೇಳಿದ್ಲು. ಆ ಫೋಟೋವನ್ನ ಆಕೆಗೆ ಇದೇ ರೂಪೇಶ ಕಳುಹಿಸಿದ್ದ. ಅವಳು ನಿಜವಾಗಿಯು ಬಂದಿದ್ದಾಳೆ ಅಂತ ಅಂದುಕೊಂಡು ಲಕ್ಷ್ಮಣ ಒಬ್ಬನೇ ಕಾರಿನಲ್ಲಿ ಹೋಗಿದ್ದ.ಇದೇ ಸರಿಯಾದ ಸಮಯ ಅಂತ ಕಾದುಕೂತಿದ್ದವರು ಲಕ್ಷ್ಮಣನ ಮೇಲೆ ಅಟ್ಯಾಕ್ ಮಾಡಿದ್ರು. ಅವನು ಇನ್ನೇನು ಕೆಲವೇ ಹೊತ್ತಿನಲ್ಲಿ ಮಂಚ ಹತ್ತಿ ಶೃಂಗಾರ ಕಾವ್ಯ ಹಾಡೋಣ ಅಂತ ಕಲರ್ ಕಲರ್ ಕನಸು ಕಂಡಿದ್ದ. ಆದ್ರೆ ಮಂಚ ಹತ್ತಬೇಕಾದವನು ಚಟ್ಟವೇರಿದ್ದ. ಅಲ್ಲಿಗೆ ಅವರಿಬ್ಬರು ಮಾಡಿದ್ದ ಪ್ಲಾನ್ ವರ್ಕೌಟ್ ಆಗಿತ್ತು. ನಂತ್ರ ರೂಪಿ ಅವಳಿಗೆ ಫೋನ್ ಮಾಡಿ ಇನ್ನು ನಮ್ಮ ಲೈನ್ ಕ್ಲಿಯರ್ ಆಯ್ತು ಅಂತ ಹೇಳಿದ್ದ. ಆದಾದ ನಂತ್ರ ಆಕೆ ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ಲು. ಅಲ್ಲದೆ ಮಾರನೇ ದಿನವೆ ಫ್ಲೈಟ್ ಹತ್ತಿ ಬೆಂಗಳೂರಿಗೆ ಬಂದಿದ್ಲು. ಅಷ್ಟೇ ಅಲ್ಲದೆ ಕಣ್ಣೀರು ಹಾಕುತ್ತ ಆತನ ಶವಸಂಸ್ಕಾರದಲ್ಲಿ ಭಾಗಿಯಾಗಿದ್ಲು.

ಹೊರಗೆ ಕಣ್ಣೀರು ಬರ್ತಾ ಇದ್ರು ಒಳಗೆ ಮಾತ್ರ ಅವಳಿಗೆ ಇನ್ನಿಲ್ಲದ ಖುಷಿಯಾಗಿತ್ತು.ಆದ್ರೆ ಅಲ್ಲಿವರೆಗೂ ಅವರ ಪ್ಲಾನ್ ಚೆನ್ನಾಗಿಯೇ ಇತ್ತು. ಅವತ್ತು ಮರ್ಡರ್ ಮಾಡಿದವರೆಲ್ಲಾ ಸರಿಯಾದ ಸಮಯಕ್ಕೆ ಪೊಲೀಸ್ರಿಗೆ ಸೆರೆಂಡರ್ ಆಗಿದ್ರೆ ಇವಳ ಹೆಸರು ಕೇಸ್ ನಲ್ಲಿ ಕಾಣಿಸಿಕೊಳ್ತಿರಲಿಲ್ಲ ಅಂತ ಅನ್ಸುತ್ತೆ. ಅಲ್ಲದೆ ಇದು ಹಳೆ ಮರ್ಡರ್ ಕೇಸ್ ಗೆ ರಿವೇಂಜ್ ಅಂತ ಅಂದುಕೊಂಡು ನಾರ್ಮಲ್ ಮರ್ಡರ್ ಕೇಸ್ ರೀತಿಯಲ್ಲಿ ಮುಗಿದು ಹೋಗ್ತಿತ್ತು. ಆದ್ರೆ ಅಲ್ಲಿ ಹಾಗೆ ಆಗಲಿಲ್ಲ. ಮರ್ಡರ್ ಮಾಡಿದವರು ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ರು.

ಕೊಲೆ ಮಾಡೋದಕ್ಕೆ ಸಖತ್ತಾಗಿ ಪ್ಲಾನ್ ಮಾಡಿದವರು ಅದಾದ ನಂತ್ರ ಹೇಗೆ ಕೇಸ್ ಅನ್ನ ಹ್ಯಾಂಡಲ್ ಮಾಡಬೇಕು ಅನ್ನೋದ್ರಲ್ಲಿ ಯಡವಟ್ಟು ಮಾಡಿಕೊಂಡಿದ್ರು. ಇದೇ ಕಾರಣಕ್ಕೆ ಇಡೀ ಟೀಂ ಸಿಕ್ಕಿಬಿದ್ದಿತ್ತು. ಯಾರ್ಯಾರು ಸಿಕ್ಕಿಬೀಳಬಾರದು ಅಂತ ಅಂದುಕೊಂಡಿದ್ರೋ ಅವರೆಲ್ಲಾ ಇಲ್ಲಿ ತಗಲಾಕಿಕೊಂಡಿದ್ರು. ಅಲ್ಲಿಗೆ ಲಕ್ಷ್ಮಣನನ್ನ ಕೊಲ್ಲೋ ಗಡಿಬಿಡಿಯಲ್ಲಿ ಫೈನಲ್ ಪ್ಲಾನ್ ಹಾಳು ಮಾಡ್ಕೊಂಡು ತಮ್ಮ ಇನ್ ಸೈಡ್ ಸ್ಟೋರಿಯನ್ನ ಬಿದಿಯಲ್ಲಿ ಬಿಚ್ಚಿಟ್ಟಿದ್ರು. ಇಲ್ಲಿಗೆ ಲಕ್ಷ್ಮಣನ ಕಥೆಯೇನೋ ಮುಗಿಯಿತು. ಆದ್ರೆ ಮುಂದೆ ಈ ಕೇಸ್ ನಲ್ಲಿ ತಗಲಾಕಿಕೊಂಡವರು ಎಷ್ಟು ಜನ ಬದುಕ್ತಾರೆ ಅನ್ನೋದು ಸದ್ಯಕ್ಕೆ ಇರೋ ಕುತೂಹಲವಾಗಿದೆ.

LEAVE A REPLY

Please enter your comment!
Please enter your name here