Home Cinema ಲಕ್ಷ್ಮೀ ರೈ ಮತ್ತೆ ಝಾನ್ಸೀ ರೂಪ ತಾಳಿ ಕನ್ನಡ ಸಿನಿ ರಂಗಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟು...

ಲಕ್ಷ್ಮೀ ರೈ ಮತ್ತೆ ಝಾನ್ಸೀ ರೂಪ ತಾಳಿ ಕನ್ನಡ ಸಿನಿ ರಂಗಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟು ಹೇಳಿದ್ದು ಹೀಗೆ..?!

2185
0
SHARE

ಲಕ್ಷ್ಮೀ ರೈ, ಸೌಥ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ..ಅಭಿನಯ, ಅಂದ, ಚಂದ, ಮಾಧಕ ಮೈಮಾಟದ ಮೂಲಕ ಯುವಕರ ನಿದ್ದೆ ಗೆಡಿಸಿರೊ ಲಕ್ಷ್ಮೀ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ..ತಮಿಳು,ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿ ಯಾಗಿರೊ ಲಕ್ಷ್ಮೀ ಈಗ ಕನ್ನಡ ಸಿನರಂಗದ ಕಡೆಯು ಮುಖಮಾಡಿದ್ದಾರೆ..ಸುಮಾರು ನಾಲ್ಕು ವರ್ಷದ ಬಳಿಕಾ ಕನ್ನಡಕ್ಕೆ ಕಾಲಿಟ್ಟಿರೊ ರೈ ಝಾನ್ಸಿಯಾಗಿ ಆಳ್ವಿಕೆ ಮಾಡಲು ಸಜ್ಜಾಗಿದ್ದಾರೆ.

ಸ್ಯಾಂಡಲ್‌ವುಡ್‌ನ ಝಾನ್ಸಿಯಾಗಿ ಲಕ್ಷ್ಮೀ ತನ್ನ ಆಟ ಶುರುಮಾಡಿಕೊಂಡಿದ್ದಾರೆ..ಅಂದ್ರೆ ದಕ್ಷಿಣಭಾರತದ ಈ ರಸಪೂರಿ ಈಗ ಕನ್ನಡದ ಝಾನ್ಸಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತಿದ್ದಾರೆ..ಲಕ್ಷ್ಮೀ ಝಾನ್ಸಿಯಾಗಿರೊದು ಈಗಾಗಲೆ ಹಳೆ ಮ್ಯಾಟ್ರು..ಆದ್ರೆ ಸದ್ಯದ ವಿಶ್ಯ ಅಂದ್ರೆ ಇತ್ತಿಚಿಗೆ ಝಾನ್ಸಿ ಚಿತ್ರ ಅದ್ದೂರಿ ಮೂಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ..

ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನೆಡೆದ ಗ್ರ್ಯಾಂಡ್ ಮುಹೂರ್ತದಲ್ಲಿ ಲಕ್ಷ್ಮೀ ರೈ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು… ಮುಹೂರ್ತ ನೆರವೇರಿಸುವ ಮೂಲಕ ಝಾನ್ಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು.ಅಂದಹಾಗೆ ಝಾನ್ಸಿ ಸಿನಿಮಾ ಪಿವಿಎಸ್ ಗುರುಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ..

ಈ ಹಿಂದೆ ಕೋಮಲ್ ಅಭಿನಯದ ಮರ್ಯಾದೆ ರಾಮಣ್ಣ ಚಿತ್ರ ನಿರ್ದೇಶನ ಮಾಡಿದ್ದ ಗುರುಪ್ರಸಾಧ್ ಈಗ ಝಾನ್ಸಿ ಮೂಲಕ ಮತ್ತೆ ವಾಪಸ್ ಆಗಿದ್ದಾರೆ..ಝಾನ್ಸಿ ಅಂದಾಕ್ಷಣ ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬಗ್ಗೆ ಇರೊ ಸಿನಿಮಾ ಅಂತ ಅಂದ್ಕೋಬೇಡಿ..ಇದು ಪಕ್ಕಾ ಕಮರ್ಷಿಯಲ್ ಎಂಟಟೈನ್ ಮೆಂಟ್ ಸಿನಿಮಾ..ಇಲ್ಲಿ ಭೂ ಮಾಫಿಯಾ, ಡ್ರಗ್ ಮಾಫಿಯಾ ಸೇರಿದಂತೆ ಹಲವಾರು ಸಮಸ್ಯೆಗಳ ಅನಾವಣ ಝಾನ್ಸಿ ಚಿತ್ರದ ಮೂಲಕ ಆಗಲಿದ್ಯಂತೆ…

ಝಾನ್ಸಿ ಒಂದು ಮಹಿಳಾ ಪ್ರಧಾನ ಸಿನಿಮಾ…ಇಲ್ಲಿ ಲಕ್ಷ್ಮೀ ರೈ ಖಾಕಿ ತೊಟ್ಟು ಖದರ್ ತೊರಿಸಲಿದ್ದಾರೆ..ಸಾಕಷ್ಟು ಭಿನ್ನಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರೊ ಲಕ್ಷ್ಮೀ ಈಗ ಝಾನ್ಸಿ ಮೂಲಕ ಪೊಲೀಸ್ ಅಧಿಕಾರಿಯಾಗಿ ಮಿಂಚ್ತಿದ್ದಾರೆ..ಹೆಚ್ಚಾಗಿ ರೊಮ್ಯಾಂಟಿಕ್ ಪಾತ್ರಗಳ ಮೂಲಕವೆ ಚಿತ್ರಾಭಿಮಾನಿಗಳಿಗೆ ಬರಪೂರ ಮನರಂಜನೆ ನೀಡ್ತಿದ್ದ ರೈ, ಈಗ ಮೊದಲ ಬಾರಿಗೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ…

ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿರೊ ಲಕ್ಷ್ಮೀ ಇಲ್ಲಿ ನಾಲ್ಕು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತಿದ್ದಾರಂತೆ..  ಆದ್ರೆ ಇದೆ ಪಾತ್ರ ಮಾಡ್ತಿದ್ದೀನಿ ಅನ್ನೋದನ್ನ ಮಾತ್ರ ರಿವೀಲ್ ಮಾಡ್ಲಿಲ್ಲ ಈ ಹಿಂದೆ ಸ್ನೇಹಾನ ಪ್ರೀತಿನಾ, ಕಲ್ಪನಾ ಸೇರಿದಂತೆ ಕನ್ನಡದ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರಾಭಿಮಾನಿಗಳಿಗೂ ಮನರಂಜನೆ ನೀಡಿ ಕನ್ನಡಗರ ಮನಗೆದ್ದಿದ್ದ ಲಕ್ಷ್ಮೀ ಮತ್ತೆ ವಾಪಸ್ ಬಂದಿರೊದು ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ..

ಕನ್ನಡ ಹುಡುಗಿಯಾದ್ರು ರೈ ಹೆಚ್ಚು ಖ್ಯಾತಿಗಳಿಸಿದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ… ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾ ಮಾಡಿ ತಾನು ಕನ್ನಡದವಳೆ ಅಂತ ಪ್ರೋ ಮಾಡ್ತಿದ್ರು ಲಕ್ಷ್ಮೀ..ಸದ್ಯ ಭರ್ಜರಿ ಆಕ್ಷನ್ ಚಿತ್ರದ ಮೂಲಕ ಮತ್ತೆ ವಾಪಸ್ ಆಗಿರೋದು ಕನ್ನಡ ಚಿತ್ರಾಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರಕ್ಕೆ ಮುಂಬೈ ಮೂಲಕ ನಿರ್ಮಾಪಕ ರಾಜೇಶ್ ಕುಮಾರ್ ಬಂಡವಾಳ ಹೂಡುತಿದ್ದಾರೆ… ಕೃಪಾಕರ್ ಸಂಗೀತ ಸಂಯೋನೆ ಚಿತ್ರಕ್ಕಿರಲಿದೆ..ಪ್ರಮುಕ ಪಾತ್ರದಲ್ಲಿ ಖಳನಟನಾಗಿ ಡ್ಯಾನಿ ಕಪುಟ್ಟಪ್ಪ ಕಾಣಿಸಿಕೊಳ್ಳುತಿದ್ದಾರೆ.. ಸದ್ಯ ಅದ್ದೂರಿ ಮುಹೂರ್ತ ಮಾಡಿಕೊಂಡು ಅಕಾಡಕ್ಕೆ ಇಳಿದಿರೋ ಝಾನ್ಸಿಯಲ್ಲಿ ಯಾವೆಲ್ಲ ಅಂಶಗಳು ಇರಲಿವೆ ಅನ್ನೋದೇ ಕುತೂಹಲಕಾರಿ ಸಂಘತಿ..

LEAVE A REPLY

Please enter your comment!
Please enter your name here