Home District ಬೆಳಗಾವಿಯಲ್ಲಿ BJP ರೈತ ಸಮಾವೇಶ ಠುಸ್..! ಸಮಾವೇಶದಲ್ಲಿ ಖಾಲಿ ಕುರ್ಚಿಗಳದ್ದೇ ದರ್ಬಾರು…”ಲಕ್ಷ ರೈತರ ಸೇರಿಸ್ತೀವಿ” ಅಂತ...

ಬೆಳಗಾವಿಯಲ್ಲಿ BJP ರೈತ ಸಮಾವೇಶ ಠುಸ್..! ಸಮಾವೇಶದಲ್ಲಿ ಖಾಲಿ ಕುರ್ಚಿಗಳದ್ದೇ ದರ್ಬಾರು…”ಲಕ್ಷ ರೈತರ ಸೇರಿಸ್ತೀವಿ” ಅಂತ ಹೇಳಿ ಮುಜುಗರಕ್ಕೀಡಾದ BJP ನಾಯಕರು..!

2189
0
SHARE

ಅಧಿವೇಶನದ ಮೊದಲ ದಿನವೇ ಬೆಳಗಾವಿಯಲ್ಲಿ ಒಂದು ಲಕ್ಷ ಜನ ರೈತರನ್ನು ಸೇರಿಸಿ ಬೃಹತ್ ರ್ಯಾಲಿ ಮಾಡಲು ಮುಂದಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಮುಖಭಂಗವಾಗಿದೆ.. ಲಕ್ಷ ಹೋಗಲಿ, 10 ಸಾವಿರ ರೈತರೂ ಬಾರದೇ ಬಿಜೆಪಿ ನಾಯಕರು ಮುಜುಗರ ಅನುಭವಿಸಿದರು.. ಖಾಲಿ ಕುರ್ಚಿಗಳೇ ಸಮಾವೇಶದಲ್ಲಿ ರಾರಾಜಿಸುತ್ತಿದ್ದುದು ಕೆಲವೇ ಹೊತ್ತಿನಲ್ಲಿ ಸಮಾವೇಶ ಬರಖಾಸ್ತಾಗಿ ಹೋಯಿತು..

ಬೆಳಗಾವಿಯಲ್ಲಿ ಲಕ್ಷ ಜನ ರೈತರನ್ನು ಸೇರಿಸಿ ಬೃಹತ್ ರ್ಯಾಲಿ ನಡೆಸುವುದಾಗಿ ಹೇಳಿಕೊಂಡಿದ್ದ ಬಿಜೆಪಿ ನಾಯಕರು ಮುಜುಗರಕ್ಕೀಡಾದರು..ಲಕ್ಷ ರೈತರು ಭಾಗವಹಿಸೋದು ಹಾಗಿರಲಿ, 10 ಸಾವಿರ ಜನರೂ ಸೇರದೇ ಖಾಲಿ ಕುರ್ಚಿಗಳೇ ಹೆಚ್ಚಾಗಿ ಕಂಡು ಬಂದವು..ಕುರ್ಚಿ ಖಾಲಿ ಇದ್ದರೂ ಭಾಷಣ ಆರಂಭಿಸಿದ ನಾಯಕರು, ಹೊಲ ಗದ್ದೆಗಳಿಗೆಲ್ಲ ಕೇಳಿಸುವಂತೆ ಭಾಷಣ ಹೊಡೆದರು..

ವಿಧಾನಮಂಡಲದ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆ ಗಡಿಬಿಡಿಯಿಂದ ಸಮಾವೇಶಕ್ಕೆ ಬಂದ ಬಿಜೆಪಿ ನಾಯಕರು ಕೊನೆಗೆ ಭಾಷಣದ ಶಾಸ್ತ್ರ ಮುಗಿಸಿ ಎದ್ದು ಹೋದರು..ಈ ರ್ಯಾಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸೋದಿರಲಿ, ಬಿಜೆಪಿಯವರಿಗೂ ಹುರುಪು ತರಲಿಲ್ಲ.. ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ,ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಅಧಿವೇಶನ ಮುಗಿದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟ ಆರಂಭಿಸಲಾಗುವುದು ಎಂದು ಪ್ರಕಟಿಸಿದರು..

ರಾಜ್ಯದಲ್ಲಿ ರೈತರ ಆತ್ಮಹತ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ, ಹೋರಾಟ ಮಾಡೋಕೆ ಹೋದ್ರೆ ಎಲ್ಲಿ ಮಲಗಿದ್ದೆ ಅಂತ ಸಿಎಂ ಕೇಳ್ತಾರೆ ಎಂದು ಕಿಡಿ ಕಾರಿದರು..ಅಧಿವೇಶನದಲ್ಲೂ ಸರ್ಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸುತ್ತೇವೆ.ಎಂದು ಯಡಿಯೂರಪ್ಪ ಗುಡುಗಿದರು.ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ,ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಶ್ರೀನಿವಾಸ್ ಪೂಜಾರಿ, ಸಂಸದರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಗೋವಿಂದ ಕಾರಜೋಳ ಸಮಾವೇಶದಲ್ಲಿ ಭಾಷಣ ಮಾಡಿದರು..

ಸಮಾವೇಶಕ್ಕೆ ನಿರೀಕ್ಷಿತ ಜನ ಬಾರದೇ ಇರೋದು ಎಲ್ಲರಲ್ಲೂ ನಿರುತ್ಸಾಹ ಮೂಡಿಸಿದ್ದು ಅವರ ಮಾತಿನ ವೇಗದಲ್ಲೇ ಗೊತ್ತಾಗುವಂತಿತ್ತು.ಮಂಗಳವಾರದಿಂದ ಅಧಿವೇಶನದಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ..ಆದ್ರೆ ಸದನದ ಹೊರಗಿನ ಇವತ್ತಿನ ಫರ್ಮಾಮೆನ್ಸ್ ನೋಡಿದ್ರೆ ಅಧಿವೇಶನದಲ್ಲಿ ಬಿಜೆಪಿ ನಾಯಕರು ಸಕ್ಸಸ್ ಆಗುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ..

 

LEAVE A REPLY

Please enter your comment!
Please enter your name here