Home Crime ಲವ್ ಮಾಡಿ ಪ್ರೇಮಿಗಳೇನೋ ಎಸ್ಕೇಪ್..!! ಓಡಿಹೋಗಿ ಹೆತ್ತವರಿಗೆ ತಂದಿಟ್ಟರು ಪಜೀತಿ..?!

ಲವ್ ಮಾಡಿ ಪ್ರೇಮಿಗಳೇನೋ ಎಸ್ಕೇಪ್..!! ಓಡಿಹೋಗಿ ಹೆತ್ತವರಿಗೆ ತಂದಿಟ್ಟರು ಪಜೀತಿ..?!

881
0
SHARE

ಅವರಿಬ್ಬರು ಪರಸ್ಪರ ಮನೆಸಾರೆ ಒಪ್ಪಿ ಪ್ರೀತಿ ಮಾಡಿದ್ರೂ. ಆದ್ರೆ ಮದುವೆಗೆ ಹುಡುಗಿಯ ಮನೆಯವರು ಒಪ್ಪದ ಪರಿಣಾಮ ಆ ಪ್ರೇಮಿಗಳಿಬ್ಬರು ಮನೆಬಿಟ್ಟು ಓಡಿ ಹೋಗಿದ್ದಾರೆ, ಹೀಗಾಗಿ ಹುಡುಗಿಯ ಮನೆಯವರು ಹುಡುಗನ ಮನೆಗೆ ನುಗ್ಗಿ ನಿನ್ನೆ ರಾತ್ರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನು ಈ ಪ್ರೇಮ ಯುದ್ದ ನಡೆದದ್ದು ಪೊಲೀಸರ ಬಂದೋಬಸ್ತನಲ್ಲಿಯೇ, ಘಟನೆಯಿಂದ ಬೆಚ್ಚಿ ಬಿದ್ದ ಹುಡುಗನ ಮನೆಯವರು ಪೊಲೀಸ್ ಠಾಣೆಯ ಮುಂದೆ ಧರಣಿಗೆ ಕುಳಿತು ತಮಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದ್ರು.

ಪ್ರೀತಿ ಪ್ರೇಮ ಅಂತ ಮನೆಯವರಿಗೆ ಫಜೀತಿ ತಂದಿಡೋ ಘಟನೆಗಳು ಮರುಕಳಿಸುತ್ತವೇ ಇರುತ್ತವೆ. ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಅಂತರ್ ಜಾತಿ ಎಂಬ ಕಾರಣಕ್ಕೆ ಮದುವೆಗೆ ವಿರೋಧಿಸಿದ್ದ ಪೋಷಕರಿಗೆ ಪಾಠ ಕಲಿಸಲು ಪ್ರೇಮಿಗಳು ಓಡಿಹೋಗಿದ್ದಾರೆ. ಆದ್ರೆ ಯುವಕ-ಯುವತಿ ಮನೆಯವರ ಮಧ್ಯೆ ಮಿನಿ ಮಹಾಯುದ್ದ ನಡೆದಿಹೋಗಿದೆ.ಹೌದು ಪ್ರೀತಿಯ ಸುಳಿಗೆ ಸಿಲುಕಿದ ಯುವ ಜೋಡಿಗಳು ಊರು ಬಿಟ್ಟು ಹೋಡಿ ಹೋದ ಪರಿಣಾಮ ಜೋಡಿಗಳ ಸಂಭಂದಿಗಳು ಪರಸ್ಪರ ಬಡಿದಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.

ಗಣಿನಾಡು ಬಳ್ಳಾರಿ ಜಿಲ್ಲೆ ಹೂವ್ವಿನಹಡಗಲಿ ತಾಲೂಕಿನ ಹರವಿ ಗ್ರಾಮದಲ್ಲಿ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಹುಡುಗನ ಮನೆಯವರಿಗೆ ಹೆಚ್ಚಿನ ಗಾಯಗಳಾಗಿದ್ದು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ನಂಜಪ್ಪ ಎಂಬಾತನ್ನು ನಹೊಳಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಇನ್ನು ಗ್ರಾಮದ ಲಿಂಗಾಯತ ಸಮಾಜದ ಯಲ್ಲಪ್ಪ, ಕುರುಬ ಸಮಾಜದ ಶಿಲ್ಪ ಎನ್ನುವ ಯುವತಿಯನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ…

ಇವರಿಬ್ಬರ ಮದುವೆಗೆ ಹುಡುಗಿಯ ಮನೆಯವರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳು ಪರಾರಿ ಯಾಗಿದ್ದು, ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.ಇನ್ನು ಪ್ರೇಮಿಗಳು ಪರಾರಿಯಾದ ನಂತರ ಪೊಲೀಸ ಠಾಣೆಯಲ್ಲಿ ಈ ಹಿಂದೆ ಸಹ ರಾಜಿ ಪಂಚಾಯತಿ ನಡೆದಿತ್ತು. ರಾಜಿ ನಂತರ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿಯಿದ್ದ ಪರಿಣಾಮ ಪೊಲೀಸ್ ಬಂದೋಬಸ್ತ ಸಹ ಎರ್ಪಡಿಸಲಾಗಿತ್ತು. ಆದ್ರೆ ಹುಡುಗಿಯ ಮನೆಯವರು ರಾಜಕೀಯ ಬೆಂಬಲದಿಂದ ಪೊಲೀಸರ ಬಂದೋಬಸ್ತ್ ಮಧ್ಯೆಯೂ ಹುಡುಗನ ಮನೆಯವರನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ…

ಇದಕ್ಕೆ ರಾಜಕೀಯ ನಾಯಕರು ಸಹಕರಿಸಿದ್ದಾರೆ ಅಂತ ಹುಡುಗನ ಮನೆಯವರು ಆರೋಪಿಸಿದ್ದಾರೆ. ಅಲ್ಲದೆ ಹುಡುಗಿಯ ಮನೆಯವರನ್ನ ತಕ್ಷಣವೇ ಬಂಧಿಸುವಂತೆ ಹಿರೇಹಡಗಲಿ ಪೊಲೀಸ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ರು.ಇನ್ನು ಗ್ರಾಮದಿಂದ ಹೋಗಿರುವ ಜೋಡಿಗಳು ಎಲ್ಲಿದ್ದಾರೆ ಎನ್ನುವುದುಈವರೆಗೂ ಪತ್ತೆಯಾಗಿಲ್ಲ, ಆದ್ರೆ ಮನೆಯವರು ಮಾತ್ರ ಪ್ರತಿಷ್ಠೆಯನ್ನ ಇಟ್ಟುಕೊಂಡು ಒಬ್ಬರಿಗೊಬ್ಬರು ಬಡಿದಾಡಿಕೊಂಡು ತೊಂದರೆ ತಂದುಕೊಳ್ಳುತ್ತಿದ್ದಾರೆ…

LEAVE A REPLY

Please enter your comment!
Please enter your name here