Home Crime ಲವ್ ಮಾಡೆ ಅಂತಾ ಸತಾಯಿಸಿ ಮದ್ವೆಯಾಗಿ ಮಧುಚಂದ್ರ ತೋರಿಸಿ ಬಕ್ರಿದ್ ಗೆ ಹೋಗಿ ಬಕ್ರ ಮಾಡಿ...

ಲವ್ ಮಾಡೆ ಅಂತಾ ಸತಾಯಿಸಿ ಮದ್ವೆಯಾಗಿ ಮಧುಚಂದ್ರ ತೋರಿಸಿ ಬಕ್ರಿದ್ ಗೆ ಹೋಗಿ ಬಕ್ರ ಮಾಡಿ ಗಾಯಬ್ ಆದ ಗರೀಬ್..?!

1671
0
SHARE

ಆಕೆ ತಂದೆ ತಾಯಿ ಪ್ರೀತಿ ಸಿಗದೆ ಅನಾಥವಾಗಿ ಬೆಳೆದಿದ್ದಳು.. ಕೆಲ್ಸ ಮಾಡೋ ಜಾಗದಲ್ಲಿ ಬೆಟ್ಟದಷ್ಟು ಪ್ರೀತಿ ತೋರಿಸಿ ಪ್ರೀತ್ಸೆ ಪ್ರೀತ್ಸೆ ಹುಚ್ಚನ ರೀತಿ ಲವ್ ಮಾಡಿ ಮದುವೆಯಾಗಿದ್ದ. ಆಕೆ ಪ್ರೀತಿಗೆ ಸೋತು ಅನ್ಯ ಕೋಮಿನ ಹುಡುಗನನ್ನ ಮದುವೆಯಾದ್ದಳು.. ಆಂದ್ರೆ ಮುಂದೇ ಆಗಿದ್ದೇ ಬೇರೆ..
ಹೀಗೆ ಅಮುಲ್ ಬೇಬಿ ತರ ಕಾಣೋ ಈ ಹುಡುಗನ ಹೆಸ್ರು ಗರೀಬ್.

ಹೆಸರು ಮಾತ್ರ ಬಡವ ಅಂತ ಹಿಟ್ಕೊಂಡು ಪ್ರೀತಿ ಮಾಡೋದ್ರಲ್ಲಿ ಮಾತ್ರ ಒಂದು ಕೈ ಹೆಚ್ಚಾಗಿದ್ದಾನೆ. ಎಷ್ಟು ಪ್ರೀತಿ ಕೊಟ್ಟಿದ್ದಾನೆ ಅಂದ್ರೆ ಈ ಅನ್ಯ ಕೋಮಿನ ಯುವಕ ಶಿಲ್ಪಾ ಎಂಬಾಕೆಯನ್ನ ಮದುವೆಯಾಗಿ ಆಸೆ ತೀರಿಸಿಕೊಂಡಿದ್ದ.. ಇದೀಗ ನಾಲ್ಕು ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟು ಎಸ್ಕೇಪ್ ಆಗಿದ್ದಾನೆ.

ವರ್ಷದ ಹಿಂದೆ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಪರಿಚಯವಾಗಿರುವ ಗರೀಬ್ ಪ್ರೀತ್ಸೆ ಪ್ರೀತ್ಸೆ ಎಂದು ಶಿಲ್ಪಾಳ ಹಿಂದೆ ಬಿದ್ದು ಪ್ರಾಣ ಹಿಂಡಿದ್ದ. ತಂದೆ ತಾಯಿ ಯಾರು ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದ ಶಿಲ್ಪ, ಗರೀಬ್ ಪ್ರೀತಿಗೆ ಸೋತು ಶಿವಗಂಗೆ ದೇವಸ್ಥಾನದಲ್ಲಿ ಮದುವೆಯಾಗಿದ್ಳು. ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಕಾಲ ಸಂಸಾರ ಮಾಡಿದ್ದ ಗರೀಬ್ ಬಕ್ರೀದ್ ಹಬ್ಬಕ್ಕೆಂದು ಊರಿಗೆ ಹೋದವನು ವಾಪಸ್ಸು ಬಂದಿಲ್ಲ.

ಇನ್ನ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಶಿಲ್ಪಾ ಈಗ ದಿಕ್ಕು ತೋಚದೇ ಕಂಗಲಾಗಿದ್ದಾಳೆ.. ಊರಿಗೆ ಹೋದ ಗರೀಬ್ ತಿಂಗಳಾದ್ರು ಇನ್ನೂ ವಾಪಸ್ಸು ಬಂದಿಲ್ಲ ಅಂತಾ ಪೋನ್ ಮಾಡಿದ್ರೆ ಗರೀಬ್ ತಂದೆ ತಾಯಿ ಪೋನ್ ರಿಸೀವ್ ಮಾಡಿ ಅಬಾಷನ್ ಮಾಡ್ಸು ಅಂತಾ ಹೇಳ್ತಿದ್ದಾರಂತೆ.. ಅಲ್ದೆ, ಬೇರೆ ಹುಡುಗನನ್ನ ಮದುವೆಯಾಗು 10 ಸಾವಿರ ಹಣ ಕೊಡ್ತೀವೆ ಅಂತ ಪೋನ್ ಕಟ್ ಮಾಡ್ತಾರಂತೆ.

ಇದ್ರಿಂದ ನೊಂದು ನ್ಯಾಯ ಕೊಡ್ಸಿ ಅಂತಾ ರಾಜಗೋಪಾಲನಗರ ಪೋಲೀಸ್ ಠಾಣೆಗೆ ಹೋದ್ರೆ 10 ಸಾವಿರ ಹಣ ಲಂಚ ಕೇಳ್ತಿದ್ದಾರೆ ಅಂತಾ ಶಿಲ್ಪಾ ಆರೋಪಿಸಿದ್ದಾಳೆ. ಸದ್ಯ ಶಿಲ್ಪಾ ಉತ್ತರ ವಿಭಾಗದ ಡಿಸಿಪಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿರುವ ಡಿಸಿಪಿ ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದಾರೆ.ಲವ್, ಮದುವೆ ಅಂತಾ ಆಸೆ ತೀರಿಸಿಕೊಂಡು ಗರ್ಭಿಣಿ ಮಾಡಿ ಹೋದವನಿಗೆ ಸರಿಯಾದ ಶಿಕ್ಷೆಯಾಗಬೇಕಿದೆ.. ಪ್ರೀತಿ ಹೆಸರಲ್ಲಿ ಕಂಡ ಕಂಡ ಅಮಾಯಕ ಹೆಣ್ಣುಮಕ್ಕಳಿಗೆ ವಂಚಿಸೋ ಇಂತಹ ನೀಚರಿಗೆ ಪಾಠ ಕಲಿಸಬೇಕಿದೆ..

LEAVE A REPLY

Please enter your comment!
Please enter your name here