Home Crime ಲವ್ ಮ್ಯಾರೇಜ್ ಆದ್‌ಮೇಲೆ ಪೋಷಕರಿಗೆ ಜಾತಿ ಅಡ್ಡಿ..?! ಒಂದೆಡೆ ಹುಡುಗ ಮನೆ ಧ್ವಂಸ, ಇನ್ನೊಂದೆಡೆ ಭಯ...

ಲವ್ ಮ್ಯಾರೇಜ್ ಆದ್‌ಮೇಲೆ ಪೋಷಕರಿಗೆ ಜಾತಿ ಅಡ್ಡಿ..?! ಒಂದೆಡೆ ಹುಡುಗ ಮನೆ ಧ್ವಂಸ, ಇನ್ನೊಂದೆಡೆ ಭಯ ಭೀತರಾಗಿ ಊರಿಗೆ ಬಾರದ ಪ್ರಣಯ ಪಕ್ಷಿಗಳು…

1500
0
SHARE

ಅವರಿಬ್ಬರದು ನಾಲ್ಕು ವರ್ಷಗಳ ಪಕ್ಕದ ಮನೆ ಕಿಟಕಿ ಪ್ರೇಮ.. ಕುರುಡು ಪ್ರೀತಿಗೆ ಜಾತಿ ಅಡ್ಡ ಬಂದ್ರು ಪ್ರೀತಿಸಿದಿಬ್ಬರು ಒಂದಾಗಿದ್ರು. ಆದ್ರೆ ಮರ್ಯಾದೆಗೆ ಅಂಜಿದ ಹುಡುಗಿಯ ಕುಟುಂಬ ಮಾತ್ರ ಅಷ್ಟಕ್ಕೆ ಸುಮ್ಮನಾಗಿಲ್ಲ, ಜಾತಿ ನೆಪ ಹೇಳಿ ಹುಡುಗನ ಮನೆ ಮೇಲೆ ದಾಳಿ ಮಾಡಿ ಧ್ವಂಸ ಮಾಡಿ ಹಲ್ಲೆ ಮಾಡಿದ್ದಾರೆ. ಇದು ಲವ್ ಅಂಡ್ ದಾಂಧಲೆ ಸ್ಟೋರಿ…

ಇದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹುರಳಗೆರೆ ಗ್ರಾಮದಲ್ಲಿ ನಡೆದಿರೋ ಲವ್ ಅಂಡ್ ದಾಂಧಲೆ ಸ್ಟೋರಿ. ನಮ್ಮ ಮನೆ ಮಗಳನ್ನ ಒತ್ಗೊಂಡು ಹೋಗಿ ಮದ್ವೆ ಆಗಿದ್ದಾನೆ ಅಂತಾ ಹುಡಿಗಿಯ ಸಂಭಂದಿಕರು ಹುಡುಗನ ಮನೆ ದ್ವಂಸ ಮಾಡಿದ್ದಾರೆ. ಯುವಕನ ಪೋಷಕರಿಗೆ ಹಿಗ್ಗಾಮುಗ್ಗಾ ಥಳಿಸಿ ಕೈಗೆ ವಸ್ತುಗಳನ್ನ ನುಚ್ಚು ನೂರು ಮಾಡಿದ್ದಾರೆ…

ಹುರಳಗೆರೆ ಗ್ರಾಮದ ಶಶಿಕುಮಾರ್ ಪಕ್ಕದ ಮನೆಯ ರಮ್ಯಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ರು.. ಇದಕ್ಕೆ ಪೋಷಕರ ವಿರೋಧವೂ ಇತ್ತು.. ಆದ್ರೆ ವಿರೋಧದ ಮಧ್ಯೆಯೂ ನಿನ್ನೆ ಶಶಿಕುಮಾರ್ ಮತ್ತು ರಮ್ಯಾ ಮದುವೆಯಾಗಿದ್ದಾರೆ. ಅಂತರ್ಜಾತಿ ಮದುವೆಗೆ ಸಿಡಿದೆದ್ದ ರಮ್ಯಾಳ ಪೋಷಕರು ಶಶಿಕುಮಾರ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ..

ಜೀವ ಭಯದಿಂದ ನವ ಜೋಡಿಗಳು ತಲೆ ಮರೆಸಿಕೊಂಡಿದ್ರೆ, ಹಲ್ಲೆಗೊಳಗಾದ ಶಶಿಕುಮಾರ್ ಪೋಷಕರು ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಂತರ್ಜಾತಿ ಪ್ರೀತಿಗೆ ವಿರೋಧಿಸಿದ್ದ ರಮ್ಯಾಳ ಪೋಷಕರು ಬೇರೋಬ್ಬನ ಜೊತೆ ಮದುವೆ ಮಾಡಲು ಮುಂದಾಗಿದ್ರು.. ವಿಷಯ ತಿಳಿದ ರಮ್ಯಾ, ಶಶಿಕುಮಾರ್ ಮೂರು ದಿನದ ಹಿಂದೆ ಮನೆ ಬಿಟ್ಟು ಹೋಗಿದ್ರು…

ನಿನ್ನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಎರಡು ಕುಟುಂಬದವರನ್ನ ಕರೆಸಿ ಮಾತುಕತೆ ಮಾಡಿ ಮುಗಿಸಿದ್ರು. ಆದ್ರೆ, ಸಂಜೆ ಯುವತಿಯ ಪೋಷಕರು ಶಶಿಕುಮಾರ್ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ.ಒಟ್ನಲ್ಲಿ ಪ್ರೀತಿಸಿ ಮದುವೆಯಾದ ಬಳಿಕ ಸುಂದರ ಬದುಕನ್ನ ಕಟ್ಟಿಕೊಳ್ಳಬೇಕಾದ ನವ ಜೋಡಿಗಳು ಜೀವ ಭಯದಿಂದ ಪರದಾಡುತ್ತಿದ್ದಾರೆ…

ಮರ್ಯಾದೆಗೆ ಅಂಜಿದ ಯುವತಿ ಪೋಷಕರು ಪ್ರೇಮಿಗಳ ಪಾಲಿಗೆ ವಿಲನ್ ಆಗಿದ್ದಾರೆ.. ಇತ್ತ ಮಗ ಮಾಡಿದ ತಪ್ಪಿಗೆ ಶಶಿಕುಮಾರ್ ಪೋಷಕರು ಆಸ್ಪತ್ರೆ ಸೇರಿದ್ದಾರೆ.. ಈ ಸಂಬಂದ ಮಾಲೂರು ಪೊಲೀಸರು ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here