Home Cinema ಲೈಂಗಿಕ ಕಿರುಕುಳದ ಬಗ್ಗೆ ತನುಶ್ರೀ ದತ್ತಾ ಮಾತನಾಡಿದ್ದೇ ತಪ್ಪಾ..! ನಾನಾ ಅವತಾರದ ಬಗ್ಗೆ ಮಾತನಾಡಲು ಬಿಗ್...

ಲೈಂಗಿಕ ಕಿರುಕುಳದ ಬಗ್ಗೆ ತನುಶ್ರೀ ದತ್ತಾ ಮಾತನಾಡಿದ್ದೇ ತಪ್ಪಾ..! ನಾನಾ ಅವತಾರದ ಬಗ್ಗೆ ಮಾತನಾಡಲು ಬಿಗ್ ಬಿ ಹಾಕಿದ್ದೇಕೆ ಹಿಂದೇಟು..! ಹೃತಿಕ್ ಮಾಜಿ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು ನಿಜಾನಾ..!

685
0
SHARE

ಬಣ್ಣದ ಲೋಕದಲ್ಲಿ ಏನೇ ಆದ್ರೂ.. ಯಾರು ಮಾತನಾಡಲ್ಲ. ಸಹಾಯಕ್ಕೆ ಮುಂದೆ ಬರಲ್ಲ. ಬೆಂಬಲಕ್ಕೆ ನಿಲ್ಲಲ್ಲ. ಅದ್ರಲ್ಲೂ ಲೈಂಗಿಕ ದೌರ್ಜನ್ಯದ ವಿಚಾರದಲ್ಲಂತೂ, ಎಲ್ಲ ಗಪ್ ಚುಪ್ ಆಗಿ ಬಿಡ್ತಾರೆ. ಸದ್ಯ ತನುಶ್ರೀ ದತ್ತಾ ವಿಚಾರದಲ್ಲೂ ಆಗ್ತಿರೋದು ಇದೆ. ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿ ಹೋತ್ರಿಯ ವಿರುದ್ಧ ಸಮರ ಸಾರಿರುವ ತನುಶ್ರೀ ಇದೀಗ ಅಕ್ಷರಶ ಏಕಾಂಗಿಯಾಗಿದ್ದಾರೆ.ತನುಶ್ರೀ ದತ್ತಾ. ಒಂದ್ಕಾಲದ ಮಿಸ್ ಯೂನಿವರ್ಸ

ತನ್ನ ಅಂದ ಚೆಂದ ಹಾಗೂ ಬೋಲ್ಡ್ ಅಭಿನಯದಿಂದ ಈಕೆ ದಶಕದ ಕೆಳಗೆ ಮಾಡಿದ್ದ ಮೋಡಿ ಇದೆಯಲ್ಲ ಅದು ಅಂತಿಂಥದ್ದಲ್ಲ.ಹಿಂದಿ ಸಿನಿರಂಗದಲ್ಲೇ ಅಂದು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಆಶಿಕ್ ಬನಾಯಾ ಆಪ್ನೇಯ ಲಡ್ಕೀ, ಇತ್ತೀಚಿಗೆ ನಾನಾ ಪಾಟೇಕರ್ ನಾನಾ ಅವತಾರಗಳ ಬಗ್ಗೆ ಮಾತನಾಡಿದ್ದರು. ಹಾರ್ನ್ ಓಕೆ ಪ್ಲೀಸ್ ಹಾಡಿನ ಚಿತ್ರೀಕರಣದ ವೇಳೆ ತನಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದರು.ನಾನಾ ಪಾಟೇಕರ್ ಎಂಥಹ ವ್ಯಕ್ತಿ, ಮಹಿಳೆಯರಿಗೆ ಆತ ಕೊಡುವ ಗೌರವ ಎಂಥಹದ್ದು ಅನ್ನೋದು ಚಿತ್ರರಂಗಕ್ಕೆ ಗೊತ್ತು ಅಂದಿದ್ದರು.

ಹಾಡಿನ ಚಿತ್ರೀಕರಣದ ವೇಳೆ, ನಾನಾ ಪಾಟೇಕರ್ ಮಾಡಿದ ಕೀಳು ಮಟ್ಟದ ಕೆಲ್ಸದ ಬಗ್ಗೆ ತನುಶ್ರೀ ಮಾತನಾಡಿದ ಬೆನ್ನಲ್ಲೇ, ಹಿಂದಿ ಸಿನಿರಂಗದಲ್ಲೊಂದು ಕ್ರಾಂತಿ ಆಗುತ್ತೆ.. ತನುಶ್ರೀ ಪರವಾಗಿ ಬಿಟೌನ್ ನಿಲ್ಲುತ್ತೆ ಅಂಥನೇ ಎಲ್ಲ ಭಾವಿಸಿದ್ದರು. ಆದ್ರೆ ಅದೇನೋ ಅಂತಾರಲ್ಲ.. ಹಣ, ಪಾಪ್ಯುಲಾರಿಟಿ.. ಮುಂದೆ ಎಲ್ಲ ನಗಣ್ಯ. ಅದು ನಾಯಕಿಯ ಮೇಲಾದ ದೌರ್ಜನ್ಯವೇ ಇರ‍್ಲಿ, ಅಥ್ವಾ.. ಸಾಮಾನ್ಯ ಮಹಿಳೆಯ ಮೇಲಿನ ದೌರ್ಜನ್ಯವೇ ಆಗಿರ‍್ಲಿ. ಬಹುಶ, ಇದೇ ಕಾರಣಕ್ಕೋ ಏನೋ ಹಿಂದಿ ಚಿತ್ರರಂಗ ನಾಯಕಿಯ ಪರವಾಗಿ ನಿಲ್ಲುವದಕ್ಕಿಂತ, ನಾನಾಪಾಟೇಕರ್ ಪರವಾಗಿ ನಿಲ್ಲುವುದೇ ಲೇಸು ಅನ್ನುವ ತೀರ್ಮಾನಕ್ಕೆ ಬಂದಿದ್ದು.

ಕೆಲವರು ಮೌನಕ್ಕೆ ಶರಣಾಗಿದ್ದು.ಹಾಗಂತ, ತನುಶ್ರೀ ಪರವಾಗಿ ಯಾರು ಧ್ವನಿ ಎತ್ತಲೇ ಇಲ್ಲ. ಮಾತನಾಡಲೇ ಇಲ್ಲ ಅಂಥೇನೂ ಇಲ್ಲ. ಅನುಷ್ಕಾ ಶರ್ಮಾ, ಟ್ವಿಂಕಲ್ ಖನ್ನಾ, ಕಾಜೋಲ್, ಸ್ವರಾ ಭಾಸ್ಕರ್, ಸೋನಂ ಕಪೂರ್, ಹೀಗೆ ಅನೇಕ ನಾಯಕಿಯರು ತನುಶ್ರೀ ಪರ ಮಾತನಾಡಿದ್ದಾರೆ. ಬರೀ ನಾಯಕಿಯರಷ್ಟೇ ಅಲ್ಲ ಫರ‍್ಹಾನ್ ಅಖ್ತರ್, ವರುಣ್ ದೇವನ್ ಸೇರಿ ಅನೇಕ ನಟರು ತನುಶ್ರೀ ಮೇಲಾದ ದೌರ್ಜನ್ಯಕ್ಕೆ ಮರುಗಿದ್ದಾರೆ. ಬಟ್, ದುರಂತ ಅಂದ್ರೆ ಇವರ‍್ಯಾರು ನಾನಾ ಪಾಟೇಕರ್ ವಿರುದ್ಧ ಧೈರ್ಯ ಮಾಡಿಲ್ಲ. ಹಾಗಾಗೇ, ಇವರದ್ದು ಬರೀ ಅಡ್ಡ ಗೋಡೆಯ ಮೇಲೆ ದೀಪವಿಡುವದಷ್ಟೇ ಕೆಲ್ಸ ಅನ್ನುವ ಮಾತುಗಳನ್ನ ಅನೇಕರು ಇದೀಗ ಆಡಲು ಶುರುವಿಟ್ಟುಕೊಂಡಿದ್ದಾರೆ.

ನಾನಾ ಅವತಾರದ ಬಗ್ಗೆ ಮಾತನಾಡಲು ಬಿಗ್ ಬಿ ಹಾಕಿದ್ದೇಕೆ ಹಿಂದೇಟು..!:ಇನ್ನೂ, ಇಲ್ಲಿ ಇನ್ನೊಂದು ದುಖದ ಸಂಗತಿ ಅಂದ್ರೆ ಅದು ಬಿಟೌನ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ವಹಿಸಿರುವ ದಿವ್ಯ ಮೌನ. ಹಾಗೂ ಆಡಿದ ಮಾತು. ಹೌದು. ತಮ್ಮ ಸಿನಿಮಾದಲ್ಲಿ ನೋ ಮೀನ್ಸ್ ನೋ ಅಂತೇಳುತ್ತಾನೇ, ಅನ್ಯಾಯಕ್ಕೊಳಗಾದ ಹುಡುಗಿಯರ ಪರ ನಿಂತು ವಾದ ಮಂಡಿಸುವ ಅಮಿತಾಭ್ ಬಚ್ಚನ್, ನಾನಾ ಪಾಟೇಕರ್ ಹಾಗೂ ತನುಶ್ರೀ ದತ್ತಾರ ವಿವಾದದ ಬಗ್ಗೆ ಮಾತನಾಡಿದ್ದಾರೆ. ಹಾಗಂತ, ಅಮಿತಾಭ್ ಘಟನೆಯನ್ನ ಖಂಡಿಸಿದ್ದಾರೆ, ನಾನಾ ಪಾಟೇಕರ್ ಮೇಲೆ ಕೆಂಡ ಕಾರಿದ್ದಾರೆ ಅಂಥ ಅನ್ನುವಂಗಿಲ್ಲ.

ಕಾರಣ.. ಅಮಿತಾಭ್ ಬಚ್ಚನ್ ಕೂಡಾ ತನ್ನ ಇನ್ನುಳಿದ ಸಹದ್ಯೋಗಿಗಳಂತೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.ಹೌದು, ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಅಮಿತಾಭ್ ಬಚ್ಚನ್, ಇದಕ್ಕೆ ನಾನೇನಂಥ ಪ್ರತಿಕ್ರಿಯೆ ನೀಡಲಿ ಅಂದಿದ್ದಾರೆ. ನಾನು, ನಾನಾ ಪಾಟೇಕರ್ ಕೂಡಾ ಅಲ್ಲ, ತನುಶ್ರೀ ದತ್ತಾನೂ ಅಲ್ಲ.. ಹಾಗಾಗಿ, ಮಾತನಾಡುವ ಹಕ್ಕು ನನಗಿಲ್ಲ ಅನ್ನುವ ಮೂಲಕ, ವಿವಾದದಿಂದ ದೂರವಾಗಿದ್ದಾರೆ. ನನಗ್ಯಾಕೆ ಊರ ಉಸಾಬರಿ ಅನ್ನುವಂತೆ ಸುಮ್ಮನಾಗಿದ್ದಾರೆ. ತಮ್ಮ, ಚಿತ್ರಗಳ ಚಿತ್ರೀಕರಣದಲ್ಲಿ ನೆಮ್ಮದಿಯಾಗಿ ಭಾಗಿಯಾಗಿದ್ದಾರೆ. ಇದು, ತನುಶ್ರೀ ದತ್ತಾಗೆ ಇನ್ನಿಲ್ಲದ ಅಚ್ಚರಿಗೆ ಕಾರಣವಾಗಿದೆ.

ಯಾಕಂದ್ರೆ, ಅಮಿತಾಭ್ ಚಿತ್ರರಂಗದ ಹಿರಿಯ. ಅನ್ಯಾಯದ ಬಗ್ಗೆ ಮಾತನಾಡಬೇಕಿದ್ದ ಮನೆಯ ಹಿರಿಯನ ಇಂಥಹ ಮಾತುಗಳನ್ನಾಡಿದ್ಮೇಲೆ.. ನ್ಯಾಯ ಎಲ್ಲಿ ಸಿಗುತ್ತೆ ಅನ್ನೋದು ತನುಶ್ರೀಯ ಅಳಲು.ಇನ್ನೂ, ಖಾನ್‌ಗಳಾದ್ರೂ ತನುಶ್ರೀಯ ಬೆಂಬಲಕ್ಕೆ ನಿಂತಿದ್ದಾರಾ, ಅಂಥ ನೋಡಲು ಹೊರಟ್ರೆ ಅಲ್ಲೂ ತನುಶ್ರೀಗೆ ನಿರಾಸೆನೇ ಕಾಣುತ್ತೆ. ಹೌದು, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಇವರೆಲ್ಲ.. ನಮಗೂ, ತನುಶ್ರೀಯ ಪ್ರಕರಣಕ್ಕೂ ಸಂಬಂಧನೇ ಇಲ್ಲ ಅನ್ನುವಂತೆ ದೂರವಿದ್ದಾರೆ.ಅಂದ ಹಾಗೇ, ಇತ್ತೀಚಿಗೆ ನಾನಾಪಾಟೇಕರ್ ಮೇಲೆ ಆರೋಪ ಮಾಡಿದ್ದ ತನುಶ್ರೀ ದತ್ತಾ, ಅವತ್ತೇ..

ಅಕ್ಷಯ್ ಕುಮಾರ್ ಹಾಗೂ ರಜಿನಿಕಾಂತ್‌ಗೂ ಛೀಮಾರಿ ಹಾಕಿದ್ದರು. ಕಾರಣ, ನಾನಾ ಪಾಟೇಕರ್ ನಾನಾ ಅವತಾರಗಳ ಬಗ್ಗೆ ಅರಿವಿದ್ದರು, ಧ್ವನಿ ಎತ್ತದೇ ಇರುವದು ಹಾಗೂ ಪದೇ ಪದೇ ನಾನಾ ಪಾಟೇಕರ್‌ನೊಂದಿಗೆ ಸಿನಿಮಾ ಮಾಡೋದು. ಹಾಗಾಗೇ, ಕೀಳು ಮನಸ್ಥಿತಿಯ ನಟನೊಟ್ಟಿಗೆ ಸೇರಿ ಕೆಲ್ಸ ಮಾಡುವ ಅಕ್ಷಯ್ ಹಾಗೂ ರಜಿನಿಯ ಭಾಷಣ ಬರೀ ಸಿನಿಮಾಗಳಿಗಷ್ಟೇ ಸೀಮಿತ ಅಂದಿದ್ದರು ತನುಶ್ರೀ ದತ್ತಾ. ಹೀಗಿದ್ದರೂ.. ತನುಶ್ರೀ ಇಷ್ಟೆಲ್ಲಾ ಹೇಳಿದ್ಮೇಲೂ ಅಕ್ಷಯ್ ಆಗ್ಲಿ, ರಜಿನಿಯಾಗ್ಲಿ.. ತನುಶ್ರೀಯ ಬೆನ್ನಿಗೆ ನಿಲ್ಲದೇ ಇರೋದು ಇಲ್ಲಿನ ಇನ್ನೊಂದು ದೊಡ್ಡ ದುರಂತ
ಅದೇನೆ ಇರ‍್ಲಿ, ಸದ್ಯ ಆದ ಅನ್ಯಾಯದ ವಿರುದ್ಧ ಮಾತನಾಡಿದ ತಪ್ಪಿಗೆ..

ತನುಶ್ರೀ ಇದೀಗ ಮತ್ತೊಮ್ಮೆ ನರಳುತ್ತಿದ್ದಾರೆ. ಅವತ್ತು ಏನೇನಾಯ್ತು.. ಹೇಗಾಯ್ತು.. ಅನ್ನುವದಕ್ಕೆ ವಿಡಿಯೋ ಸಾಕ್ಷಿ ಇದ್ದರೂ.. ಹಿಂದಿ ಚಿತ್ರರಂಗ ತನುಶ್ರೀಯನ್ನ ನಡು ನೀರಿನಲ್ಲಿ ಕೈ ಬಿಟ್ಟಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.ಲೈಂಗಿಕ ಕಿರುಕುಳದ ಬಗ್ಗೆ ತನುಶ್ರೀ ದತ್ತಾ ಮಾತನಾಡಿದ್ದೇ ತಪ್ಪಾ..!
ಕರಾಳ ಸತ್ಯವನ್ನ ಬಿಚ್ಚಿಟ್ಟ ತಪ್ಪಿಗೆ ತನುಶ್ರೀಗೆ ಎರಡೆರಡು ನೋಟಿಸಿನ ಪೆಟ್ಟು..!
ತನುಶ್ರೀ ದತ್ತಾ, ನಾನಾ ಪಾಟೇಕರ್‌ನ ನಾನಾ ರಂಗೀನ ಆಟಗಳನ್ನ ಬಿಚ್ಚಿಟ್ಮೇಲೆ, ಚಿತ್ರರಂಗ ತನುಶ್ರೀಯ ಬೆನ್ನಿಗೆ ನಿಲ್ಲಲಿಲ್ಲ. ಹಿಂದಿ ಸಿನಿರಂಗದ ನಾಯಕಿಯರ ಮೀ ಟು ಮೂವ್ಮೆಂಟ್ ಬಹಿರಂಗವಾಗಲಿಲ್ಲ.

ಕ್ರಾಂತಿವೀರನ ವಿರುದ್ಧ ಯಾರು ತಿರುಗಿ ಬೀಳಲಿಲ್ಲ. ಇದೆಲ್ಲದ್ರ ಪರಿಣಾಮ ಇದೀಗ ತನುಶ್ರೀ ಏಕಾಂಗಿಯಾಗಿದ್ದಾರೆ. ಒಬ್ಬರೇ ಹೋರಾಟ ಮಾಡಲು ಮುಂದಾಗಿದ್ದಾರೆ. ಕಾರಣ.. ತನುಶ್ರೀ ದತ್ತಾಗೆ, ಆ ಕರಾಳ ಸತ್ಯವನ್ನ ಬಯಲು ಮಾಡಿದ್ದಕ್ಕೆ ಎರಡೆರಡು ನೋಟಿಸಿನ ಪೆಟ್ಟು ನೀಡಲಾಗಿದೆ.ಹೌದು, ನಿಮಗೆ ಗೊತ್ತಿರಲಿ ದಶಕದ ಹಿಂದೆ ಘಟನೆ ನಡೆದಾಗ್ಲೂ.. ತನುಶ್ರೀ ಅವತ್ತೇ ಆರೋಪ ಮಾಡಿದಾಗ್ಲೂ ನಾನಾ ಪಾಟೇಕರ್ ಇದೆಲ್ಲಾ ಸುಳ್ಳೇ ಸುಳ್ಳು ಅಂದಿದ್ದರು. ನಾನವನಲ್ಲ ಅಂದಿದ್ದರು. ಅಷ್ಟೇ ಅಲ್ಲ, ಸೆಟ್‌ನಲ್ಲಿ ಇನ್ನೂರು ಜನ ಇರ‍್ತಾರೆ, ಅವರ ಮುಂದೆ ಹಾಗೆಲ್ಲಾ ಮಾಡಲು ಸಾಧ್ಯವಾ ಅಂದಿದ್ದರು.

ಇದೀಗ ದಶಕದ ಬಳಿಕ ಅವತ್ತೂ ಹೇಳಿದ್ದ ಮಾತುಗಳನ್ನೇ ಪುನರುಚ್ಚಿಸುತ್ತಿರುವ ನಾನಾ ಪಾಟೇಕರ್ ಇದೀಗ ತನುಶ್ರೀ ವಿರುದ್ಧ ಕಾನೂನು ಸಮರ ಸಾರಿದ್ದಾರೆ.ಬರೀ ನಾನಾ ಪಾಟೇಕರ್ ಅಷ್ಟೇ ಅಲ್ಲ, ವಿವೇಕ್ ಅಗ್ನೀಹೋತ್ರಿ ಕೂಡಾ ತನುಶ್ರೀ ದತ್ತಾ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಹೌದು, ನಿಮಗೆ ಗೊತ್ತಿರಲಿ.. ನಾನಾ ಪಾಟೇಕರ್ ನಾನಾ ಅವತಾರವನ್ನ ಬಿಚ್ಚಿಟ್ಟ ಬಳಿಕ, ತನುಶ್ರೀ.. ನಿರ್ದೇಶಕ ವಿವೇಕ ಅಗ್ನಿಹೋತ್ರಿಯ ಪುರಾಣವನ್ನೂ ಬಯಲಿಗೆ ತಂದಿದ್ದರು. ೨೦೦೫ರಲ್ಲಿ ಚಾಕಲೇಟ್ ಚಿತ್ರದ ಚಿತ್ರೀಕರಣದ ಸಂಧರ್ಭದಲ್ಲಿ ವಿವೇಕ್ ತನಗೆ ಬಟ್ಟೆ ತೆಗೆದು ಕುಣಿಯುವಂತೆ ಹೇಳಿದ್ದ ಅನ್ನುವ ಸಂಗತಿಯನ್ನೂ ಹಂಚಿಕೊಂಡಿದ್ದರು.

ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡಿದ್ದಕ್ಕೆ, ಧ್ವನಿ ಎತ್ತಿದ್ದಕ್ಕೆ ಎರಡು ನೋಟಿಸುಗಳನ್ನ ನನ್ನ ಕಪಾಳಕ್ಕೆ ಹೊಡೆಯಲಾಗಿದೆ. ಒಂದು ನಾನಾಪಾಟೇಕರ್ ಕಡೆಯಿಂದ, ಇನ್ನೊಂದು ವಿವೇಕ್ ಅಗ್ನಿಹೋತ್ರಿ ಕಡೆಯಿಂದ. ಇದೇನಾ ಸತ್ಯ ಮಾತನಾಡಿದರೆ ಸಿಗುವ ಬೆಲೆ.
ಇನ್ನು ಇದೆಲ್ಲದರ ನಡುವೆ ಇನ್ನೊಂದು ನಾಚಿಕೆ ಪಡಬೇಕಾದ ಸಂಗತಿಯನ್ನೂ, ಇದೇ ದೌರ್ಜನ್ಯ ನಡೆಯುತ್ತಿದ್ದಾಗ, ಕಣ್ಮುಚ್ಚಿಕೊಂಡು ಕುಳಿತಿದ್ದ, ಸಹಕರಿಸುವಂತೆ ಕೇಳಿದ್ದ ಹಾರ್ನ್ ಓಕೆ ಪ್ಲೀಸ್ ಚಿತ್ರದ ನಿರ್ದೇಶಕ ರಾಕೇಶ್ ಸಾರಂಗ ಹಾಗೂ ನಿರ್ಮಾಪಕ ಸಿಮಿ ಸಿದ್ದಿಕಿ ಮಾತನಾಡಿದ್ದಾರೆ.

ಹೌದು, ದಶಖದ ಬಳಿಕ ಭುಗಿಲೆದ್ದ ವಿವಾದದ ಬಗ್ಗೆ ಮಾತನಾಡಿರುವ ನಿರ್ದೇಶಕ ರಾಕೇಶ್ ಸಾರಂಗ, ತನುಶ್ರೀ ಇದೆಲ್ಲಾ ಮಾಡ್ತಿರೋದು ಜಸ್ಟ್ ಪಬ್ಲಿಸಿಟಿಗಾಗಿ. ಕಾರಣ, ತನುಶ್ರೀಗೆ ಬಿಗ್ ಬಾಸ್ ಮನೆಗೆ ಹೋಗುವ ಬಯಕೆಯಂತೆ. ಇಷ್ಟೇ ಅಲ್ಲ ಇತ್ತಿಚಿಗೆ ಹುಡುಗಿಯರು ತಮ್ಮ ಬೆಡ್‌ರೂಂ ವಿಡಿಯೋಗಳನ್ನೆಲ್ಲಾ ಇಂಟರ್‌ನೆಟ್‌ಗೆ ಹಾಕ್ತಾರೆ, ಇಂಡಸ್ಟ್ರೀಯಲ್ಲಿ ಇದೆಲ್ಲಾ ಕಾಮನ್ ಕೆಲವರು ಪಬ್ಲಿಸಿಟಿಗಾಗಿ ಬಟ್ಟೆ ಬಿಚ್ಚುತ್ತಾರೆ ಅಂತಾರೆ.

ದಕ್ಷಿಣ ಭಾರತೀಯ ಚಿತ್ರರಂದಲ್ಲಿ ಶ್ರೀರೆಡ್ಡಿ ಸಂಚಲನ ಮೂಡಿಸಿದ್ರು. ಉತ್ತರದಲ್ಲಿ ಇದೀಗ ತನುಶ್ರೀ ದಂಗೆ ಎದ್ದಿದ್ದಾರೆ. ಇದ್ರ ಬೆನ್ನಲ್ಲೇ ಇದೀಗ ಹಿಂದಿ ಚಿತ್ರರಂಗದ ಕ್ವೀನ್ ಕಂಗನಾ ಕೂಡಾ ಮೀ ಟು ಮೂವ್ಮೆಂಟ್‌ನ್ನ ಶೇರ್ ಮಾಡಿಕೊಂಡಿದ್ದಾರೆ. ವಿಶೇಷ ಅಂದ್ರೆ ಕಂಗನಾ ಆರೋಪ ಮಾಡಿರುವ ವ್ಯಕ್ತಿಯೇ, ಕಂಗನಾ ವೃತ್ತಿಯ ಸ್ಪೆಷಲ್ ಸಿನಿಮಾ ಕೊಟ್ಟಿದ್ದು. ಹಾಗಿದ್ದರೆ ಕಂಗನಾ ಮಾಡಿದ ಆರೋಪವೇನು.

LEAVE A REPLY

Please enter your comment!
Please enter your name here