Home Crime ಲೈಂಗಿಕ ಕ್ರಿಯೆ ವಿಡಿಯೋ ಚಿತ್ರಿಸಿ ವೈರಲ್..! ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ 9 ಮಕ್ಕಳ ತಂದೆ..!ಹಣ ವಸೂಲಿಗೆ...

ಲೈಂಗಿಕ ಕ್ರಿಯೆ ವಿಡಿಯೋ ಚಿತ್ರಿಸಿ ವೈರಲ್..! ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ 9 ಮಕ್ಕಳ ತಂದೆ..!ಹಣ ವಸೂಲಿಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ಲು ವಿದ್ಯಾರ್ಥಿನಿ..!?

4496
0
SHARE

ಆತ 45 ವರ್ಷದ ಮಧ್ಯವಯಸ್ಕ ವ್ಯಕ್ತಿ. ಮೇಲಾಗಿ ಎರಡು ಪತ್ನಿಯರು ಮತ್ತು ಒಂಬತ್ತು ಮಕ್ಕಳ ತುಂಬು ಸಂಸಾರ ಹೊಂದಿದ್ದ ಗೃಹಸ್ಥ. ಇಷ್ಟಾದರೂ ಚಪಲ ತೀರದ ಕಾಮುಕ ವ್ಯಕ್ತಿ, ತನಗೆ ಪರಿಚಯ ಆಗಿದ್ದ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ. ಇದೇ ಸಂಬಂಧ ಆತನ ಪಾಲಿಗೆ ತಿರುಗುಬಾಣವಾಗಿದ್ದು ಯುವತಿಯೇ ವಿಲನ್ ಆಗಿದ್ದಾಳೆ.

ಹೌದು…. ಅದು ಚಪಲ ತೀರದ ವ್ಯಕ್ತಿಯೊಬ್ಬರನ್ನು ಯುವತಿಯೇ ಖೆಡ್ಡಾಕ್ಕೆ ಬೀಳಿಸಿದ ಪರಿ.. ಆತನ ಹೆಸರು ಅಬ್ದುಲ್ ರಹಿಮಾನ್. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಹಿಮಾನ್, ಯುವತಿ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ಎರಡು ದಿನಗಳ ಹಿಂದೆ ವೈರಲ್ ಆಗಿತ್ತು. ಆನಂತ್ರ ರಹಿಮಾನೇ ಇಂಥ ವಿಡಿಯೋ ಹರಿಯಬಿಟ್ಟಿದ್ದಾನೆಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆವಾಗ ಬೆಳಕಿಗೆ ಬಂದಿದ್ದೇ ಹರೆಯದ ಯುವತಿಯ ಬ್ಲಾಕ್ ಮೇಲ್ ಸ್ಟೋರಿ.

ಯುವತಿ ಕೊಡಗು ಜಿಲ್ಲೆಯ ಮೂಲದವಳು ಎನ್ನಲಾಗುತ್ತಿದ್ದು, ಎಂಟು ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ರಹಿಮಾನ್ ಗೆ ಪರಿಚಯ ಆಗಿತ್ತು. ಆನಂತ್ರ ಸಂಬಂಧ ಬೆಳೆದು ಮಂಗಳೂರಿನ ಲಾಡ್ಜ್ ಒಂದರಲ್ಲಿ ರೂಂ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಯುವತಿಯೇ ಸ್ವತಃ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಇಬ್ಬರೂ ಸಲ್ಲಾಪದಲ್ಲಿರುವುದು ಸೆರೆಯಾಗಿತ್ತು. ಆನಂತ್ರ ಎರಡು ವಾರದ ಬಳಿಕ ನಾಲ್ವರು ಅಪರಿಚಿತರು, ರಹಿಮಾನನ್ನು ಬ್ಲಾಕ್ ಮೇಲ್ ಮಾಡಿದ್ದು ಹಣಕ್ಕಾಗಿ ಪೀಡಿಸಿದ್ದಾರೆ. ಹಣ ಕೊಡದಿದ್ದಾಗ ಆತನನ್ನು ಅಪಹರಿಸಿ, ಒಟ್ಟು ಒಂದು ಲಕ್ಷದ ಎಂಟು ಸಾವಿರ ರೂಪಾಯಿ ಪೀಕಿಸಿದ್ದರು.

ಅಲ್ಲದೆ, ಎಟಿಎಂ ಕಾರ್ಡ್ ಪಡೆದು 9 ಸಾವಿರ ರೂಪಾಯಿ ಡ್ರಾ ಮಾಡಿದ್ದರು. ಹೀಗೆಲ್ಲ ನಡೆದಿದ್ದರೂ, ಮರ್ಯಾದೆಗೆ ಅಂಜಿದ ಮೀನಿನ ವ್ಯಾಪಾರಿ, ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ. ಆದರೆ, ಹನಿಟ್ರ್ಯಾಪ್ ತಂಡ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಮುಂದಿಟ್ಟು ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ಯುವತಿ ಮತ್ತು ಆಕೆಯ ನಾಲ್ವರು ಸಹಚರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಚಪಲ ತೀರದೆ ಕಾಮದಾಹಕ್ಕೆ ಬಿದ್ದ ಮಧ್ಯವಯಸ್ಕನ ಮಾನ ಮೂರಾಬಟ್ಟೆಯಾಗಿದೆ.

LEAVE A REPLY

Please enter your comment!
Please enter your name here