Home District ಲೋಕಸಭಾ ಚುನಾವಣೆಯಿಂದ ದೂರ ಉಳಿದ ರಮೇಶ್ ಜಾರಕಿಹೊಳಿ.! ರಮೇಶ್ ಮೌನದಿಂದ ಕಾಂಗ್ರೆಸ್ ನಾಯಕರಲ್ಲಿ ಟೆನ್ಶನ್.!

ಲೋಕಸಭಾ ಚುನಾವಣೆಯಿಂದ ದೂರ ಉಳಿದ ರಮೇಶ್ ಜಾರಕಿಹೊಳಿ.! ರಮೇಶ್ ಮೌನದಿಂದ ಕಾಂಗ್ರೆಸ್ ನಾಯಕರಲ್ಲಿ ಟೆನ್ಶನ್.!

1489
0
SHARE

ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಆದ್ರೆ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂಬಂತೆ ದೂರವೇ ಉಳಿದಿರುವ ರೆಬೆಲ್ ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಬೆಳಗಾವಿ ರಾಜಕಾರಣದಲ್ಲಿ ಗೋಕಾಕನ ಜಾರಕಿಹೊಳಿ ಸಹೋದರರದ್ದೇ ಪ್ರಾಬಲ್ಯ.

ಜಾರಕಿಹೊಳಿ ಕುಟುಂಬ ಬೆಂಬಲಿಸುವ ಅಭ್ಯರ್ಥಿಗಳೇ ಇಲ್ಲಿ ನಿರ್ಣಾಯಕ. ಗೋಕಾಕ, ಯಮಕನಮರಡಿ, ಅರಭಾವಿ ಮೂರು ಕ್ಷೇತ್ರಗಳಿಗೂ ಜಾರಕಿಹೊಳಿ ಬ್ರದರ್ಸ್ ಶಾಸಕರಾಗಿರೋದು ಹಾಗೂ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಜಾರಕಿಹೊಳಿ ಬ್ರದರ್ಸ್ ಗೆ ಸಾಕಷ್ಟು ಹಿಡಿತವಿರೋದೆ ಇದಕ್ಕೆ ಕಾರಣ.

ಇನ್ನು ಬೆಳಗಾವಿ ಟಿಕೆಟ್ ಹಂಚಿಕೆ ಸಂಬಂಧ ಮೊನ್ನೆ ಸಿದ್ದರಾಮಯ್ಯ ನೇತೃತ್ವದ ಸಭೆಗೆ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಗೈರಾಗಿರುವುದು ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ರಮೇಶ ಜಾರಕಿಹೊಳಿ ಸೈಲೆಂಟ್ ಆಗಿ ಉಳಿದ್ರೆ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಕಷ್ಟದ ಮಾತು.

ಹೀಗಾಗಿಯೇ ರಮೇಶ ಜಾರಕಿಹೊಳಿ ಮನವೊಲಿಕೆಗೆ ಕೈ ನಾಯಕರು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದ್ರೆ ರಮೇಶ ಜಾರಕಿಹೊಳಿ ಮಾತ್ರ ಸಹೋದರ ಸತೀಶ್ ಜಾರಕಿಹೊಳಿ ಸೇರಿದಂತೆ ಯಾವೊಬ್ಬ ಕೈ ಶಾಸಕರ ಸಂಪರ್ಕಕ್ಕೆ ಸಿಗದಂತೆ ಮುಂಬೈನಲ್ಲಿ ಠಿಕಾಣಿ ಹೂಡಿದ್ದು ಕೂತುಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here