Home Elections 2018 ಲೋಕಸಭೆಯಲ್ಲಿ ರಫೇಲ್ ವಾರ್..! ರಾಹುಲ್ ಸಿಡಿಸಿದ್ರು ಪ್ರಶ್ನೆಗಳ ಬಾಂಬ್..!

ಲೋಕಸಭೆಯಲ್ಲಿ ರಫೇಲ್ ವಾರ್..! ರಾಹುಲ್ ಸಿಡಿಸಿದ್ರು ಪ್ರಶ್ನೆಗಳ ಬಾಂಬ್..!

312
0
SHARE

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಯ್ತು. ಮೊದಲೇ ಸಿದ್ಧರಾದ್ದಂತೆ ಕಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ಸಂಸತ್‌ನಲ್ಲಿ ರಫೇಲ್ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಗೆ ಧೈರ್ಯ ಇಲ್ಲ ಎಂದರು. ಅಷ್ಟೇ ಅಲ್ಲ ಸರ್ಕಾರಕ್ಕೆ ಪ್ರಶ್ನೆಗಳ ಸರಮಾಲೆಯ ಬಾಂಬ್ ಸಿಡಿಸಿದರು.
ವಾಯುಪಡೆಗೆ ಬೇಕಾಗಿದ್ದ 126 ಯುದ್ಧವಿಮಾನಗಳನ್ನು 36ಕ್ಕೆ ಇಳಿಸಿದವರು ಯಾರು.

ನಮಗೆ 126 ಯುದ್ಧ ವಿಮಾನಗಳು ಅಗತ್ಯವಿಲ್ಲ ಎಂದು ವಾಯುಪಡೆ ಸರ್ಕಾರಕ್ಕೆ ತಿಳಿಸಿತ್ತೇ, ಖರೀದಿ ವೆಚ್ಚವನ್ನು 526 ಕೋಟಿಯಿಂದ 1600 ಕೋಟಿಗೆ ಹೆಚ್ಚಿಸಿದ್ದೇಕೆ?.ದರವನ್ನು ಹೆಚ್ಚಳ ಮಾಡಿದರೂ ರಕ್ಷಣಾ ಇಲಾಖೆ ಅಧಿಕಾರಿಗಳು ಆಕ್ಷೇಪಣೆ ಮಾಡಿಲ್ಲವೇಕೆ ?. ತುರ್ತಾಗಿ ಅಗತ್ಯವಿರೋ ರಫೇಲ್‌ನ ಒಂದೇ ಒಂದು ವಿಮಾನ ಭಾರತಕ್ಕೆ ಬಂದಿಲ್ಲವೇಕೆ?. ಸಹ ಗುತ್ತಿಗೆಯನ್ನು ಹೆಚ್ಎಎಲ್‌ ನಿಂದ ಕಸಿದುಕೊಂಡು ಅನಿಲ್ ಅಂಬಾನಿಗೆ ವಹಿಸಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ.

ಯುದ್ಧವಿಮಾನ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸಿದವರು ಯಾರು ?126 ಯುದ್ಧ ವಿಮಾನಗಳು ಅಗತ್ಯವಿಲ್ಲ ಎಂದು ವಾಯುಪಡೆ ತಿಳಿಸಿತ್ತೇ?ಖರೀದಿ ವೆಚ್ಚವನ್ನು 526 ಕೋಟಿಯಿಂದ 1600 ಕೋಟಿಗೆ ಹೆಚ್ಚಿಸಿದ್ದೇಕೆ?ದರ ಹೆಚ್ಚಳಕ್ಕೆ ರಕ್ಷಣಾ ಇಲಾಖೆ ಅಧಿಕಾರಿಗಳು ಆಕ್ಷೇಪಣೆ ಮಾಡಲಿಲ್ಲವೇಕೆ ?ಈವರೆಗೂ ರಫೇಲ್‌ನ ಒಂದೇ ಒಂದು ವಿಮಾನ ಭಾರತಕ್ಕೆ ಬಂದಿಲ್ಲವೇಕೆ?
ಸಹ ಗುತ್ತಿಗೆಯನ್ನುಹೆಚ್ಎಎಲ್‌ ಬದಲಿಗೆ ಅನಿಲ್ ಅಂಬಾನಿಗೆ ವಹಿಸಿದ್ದು ಏಕೆ ?

ಇದೇ ವೇಳೆ,ರಫೇಲ್ ಒಪ್ಪಂದ ಕುರಿತ ಕಡತಗಳು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಳಿ ಇದೆ. ಈ ವಿಚಾರವಾಗಿ ಗೋವಾ ಸಚಿವ ಮಾತನಾಡಿರುವ ಧ್ವನಿ ಮುದ್ರಣ ಬಿಡುಗಡೆಗೆ ಅವಕಾಶ ಕಲ್ಪಿಸಬೇಕೆಂದು ರಾಹುಲ್ ಗಾಂಧಿ ಸ್ಪೀಕರ್‌ಗೆ ಮನವಿ ಮಾಡಿದರು.ಆದ್ರೆ, ರಾಹುಲ್ ಮನವಿಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ತಿರಸ್ಕರಿಸಿದರು.ಸದನದಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಪದೇ ಪದೇ ರಾಹುಲ್ ಗಾಂಧಿ ಕಾಲೆಳೆದರು.

ಬೋಫೋರ್ಸ್ ಹಗರಣ ಪ್ರಸ್ತಾಪಿಸಿದ ಸಚಿವರು, ರಾಹುಲ್ ಗಾಂಧಿ ಚಿಕ್ಕವರಿದ್ದಾಗ ‘ಕ್ಯೂ’ ಅವರ ತೊಡೆ ಮೇಲೆ ಆಟ ಆಡುತ್ತಿರಲಿಲ್ಲವೇ ಎಂದು ಕ್ವಟ್ರೋಕಿ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು. ಕೆಲವರು ಹಣದ ಬಗ್ಗೆ ಮಾತ್ರ ಅರ್ಥ ಮಾಡಿಕೊಂಡಿದ್ದಾರೆ ಹೊರತು ರಾಷ್ಟ್ರೀಯ ಭದ್ರತೆ ಅವರಿಗೆ ಮುಖ್ಯವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರನ್ನು ಛೇಡಿಸಿದರು. ನಿರಾಸೆಗೊಂಡಿರೋ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ತೀರ್ಪನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ ಜೇಟ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವನ್ನು ಸಂಸಸದೀಯ ಜಂಟಿ ಸದನ ಸಮಿತಿಗೆ ಒಪ್ಪಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಬೋಫೋರ್ಸ್ ಹಗರಣದ ಬಗ್ಗೆ ವಿತ್ತ ಸಚಿವರು ಮಾತನಾಡುತ್ತಿದ್ದಾಗ ಕಾಂಗ್ರೆಸ್ ಸದಸ್ಯರು ಅಡ್ಡಿ ಪಡಿಸಿದರು. ರಫೇಲ್ ಬದಲು ಬೋಫೋರ್ಸ್, ಅಗಸ್ಟಾ ವೆಸ್ಟ್ ಲ್ಯಾಂಡ್, ನ್ಯಾಷನಲ್ ಹೆರಾಲ್ಡ್ ವಿಷಯಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಕಾಗದದ ವಿಮಾನ ಎಸೆದ ಪ್ರಸಂಗವೂ ಜರುಗಿತು.

LEAVE A REPLY

Please enter your comment!
Please enter your name here