Home District ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರಗೆ ಟಾಂಗ್ ಕೊಟ್ಟ ವಿಜಯೇಂದ್ರ ..!

ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರಗೆ ಟಾಂಗ್ ಕೊಟ್ಟ ವಿಜಯೇಂದ್ರ ..!

155
0
SHARE

ಜಿದ್ದಾಜಿದ್ದಿಗೆ ಒಳಗಾಗುತ್ತಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿಎಂ ಪುತ್ರ ಡಾ.ಯತೀಂದ್ರಗೆ ಟಾಂಗ್ ಕೊಡಲು ಬಿಎಸ್‌ವೈ ಪುತ್ರ ವಿಜೇಂದ್ರ ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಸಿಎಂ ವಿರುದ್ದ ಮುನಿಸಿಕೊಂಡಿರುವ ಮಾಜಿ ಪೊಲೀಸ್ ಅಧಿಕಾರಿ ರೇವಣ್ಣಸಿದ್ದಯ್ಯರನ್ನು ಭೇಟಿಯಾಗಿ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು ಕ್ಷೇತ್ರದ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಸಮರಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಪಕ್ಷ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮುನ್ನವೇ ಕಾರ್ಯತಂತ್ರ ರೂಪಿಸುತ್ತಿರುವ ವಿಜೇಂದ್ರ ಇಂದು ಮಾಜಿ ಪೊಲೀಸ್ ಅಧಿಕಾರಿ ರೇವಣ್ಣಸಿದ್ದಯ್ಯರನ್ನು ಭೇಟಿ ಮಾಡಿ ಬಿಜೆಪಿ ಸೇರುವಂತೆ ಮನವಿ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಬೆಂಬಲಿಸಿದ್ದ ರೇವಣ್ಣಸಿದ್ದಯ್ಯ ,ಆ ನಂತರ ಕಡೆಗಣನೆಗೆ ಒಳಗಾಗಿದ್ರು. ಇದರಿಂದಾಗಿ ತಟಸ್ಥವಾಗಿರುವ ರೇವಣ್ಣಸಿದ್ದಯ್ಯರನ್ನು ವಿಜೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದ್ರು.ರೇವಣ್ಣ ಸಿದ್ದಯ್ಯರ ಭೇಟಿ ನಂತರ ವರುಣಾ ಕ್ಷೇತ್ರದಲ್ಲಿರುವ ವಾಟಾಳ್ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ವಿಜೇಂದ್ರ , ಮೈಸೂರಿನಲ್ಲಿ ವರುಣಾ ಕ್ಷೇತ್ರದ ಬಿಜೆಪಿ ಮುಖಂಡರ ಸಭೆ ನಡೆಸಿ ಸಮಾಲೋಚನೆ ನಡೆಸಿದ್ರು.

ಈ ವೇಳೆ ಮುಖಂಡರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ವಿಜೇಂದ್ರ ಮುಂದಾಗಿದ್ದು, ಸಿಎಂ ಪುತ್ರನ ವಿರುದ್ದ ತೊಡೆತಟ್ಟಲು ವೇದಿಕೆ ಸಜ್ಜುಗೊಳಿಸಿದ್ರು. ವಿಜೇಂದ್ರರ ಈ ಕಾರ್ಯತಂತ್ರದಿಂದಾಗಿ ವರುಣಾ ಬಿಜೆಪಿಯಲ್ಲಿ ರಣೋತ್ಸಾಹ ಮೂಡಿದ್ದು, ಸಿಎಂ ಪುತ್ರನ ವಿರುದ್ದ ಸೆಣಸಾಡಲು ವೇದಿಕೆ ಸಿದ್ದಪಡಿಸಲಾಗುತ್ತಿದೆ. ಪರಿಣಾಮ, ಕ್ಷೇತ್ರದ ರಾಜಕೀಯ ಈಗ ಜಿದ್ದಾಜಿದ್ದಿಗೆ ಒಳಗಾಗುತ್ತಿದ್ದು, ಕದನ ಕಣ ಕುತೂಹಲ ಮೂಡಿಸುತ್ತಿದೆ.

 

LEAVE A REPLY

Please enter your comment!
Please enter your name here