Home Cinema ವರ್ಷಾರಂಭದಲ್ಲೇ ಕಿಚ್ಚನಿಗೆ ಸಿಕ್ಕಿದ್ದ್ಯಾವ ಶುಭಶಕುನ..! ಇದು ಅಭಿನಯ ಚಕ್ರವರ್ತಿಯ ಹೊಸ ಪ್ರಹಸನ..!

ವರ್ಷಾರಂಭದಲ್ಲೇ ಕಿಚ್ಚನಿಗೆ ಸಿಕ್ಕಿದ್ದ್ಯಾವ ಶುಭಶಕುನ..! ಇದು ಅಭಿನಯ ಚಕ್ರವರ್ತಿಯ ಹೊಸ ಪ್ರಹಸನ..!

2347
0
SHARE

ಈ ಹೊಸ ವರ್ಷ ಕಿಚ್ಚ ಸುದೀಪ್ ಬಾಳಿನಲ್ಲಿ ಹೊಸ ಹರುಷ ತಂದಿದೆ. ’ಮುಟ್ಟಿದೆಲ್ಲಾ ಚಿನ್ನ’ ಅನ್ನೋ ಹಾಗೇ ಸುದೀಪ್ ಕೈಯಿಟ್ಟ ಸಿನಿಮಾಗಳು ಹೊಸ ರೆಕಾರ್ಡ್‌ಗಳನ್ನ ಬರಿತೀವೆ. ದಿನದಿಂದದಿನಕ್ಕೆ ಕಿಚ್ಚನ ಅಬ್ಬರ ಭಾಷೆಯ ಗಡಿಗಳನ್ನ ಮೀರಿ ಹೋಗ್ತಿರೋ ಬೆನ್ನಲ್ಲೇ ಸುದೀಪ್ ’ವಿಲನ್’ ಆದ್ರೂ ತಮ್ಮ ಫ್ಯಾನ್ ಫಾಲೊವಿಂಗ್ ಏನೂ ಅಂತ ಪ್ರೂವ್ ಮಾಡಿಬಿಟ್ಟಿದಾರೆ.’ದಿ ವಿಲನ್’ ಸಿನಿಮಾ ಬಂದಿದ್ದೇ ಬಂದಿದ್ದು. ಥಿಯೆಟರ್‌ಗಳ ಮುಂದೆ ಬ್ಲಾಕ್ ಟಿಕೆಟ್‌ಗಳ ಬಿಜ್‌ನೆಸ್ ಭಾರೀ ಜೋರಾಗಿಬಿಟ್ಟಿತ್ತು.

ಶಿವಣ್ಣ ಹಾಗೂ ಸುದೀಪ್ ಆನ್‌ಸ್ಕ್ರೀನ್ ಜುಗಲಬಂದಿ ನೋಡೋಕೆ ಇಡೀ ಗಾಂಧಿನಗರವೇ ತುದಿಗಾಲಿನಲ್ಲಿ ನಿಂತು ವೈಟ್ ಮಾಡಿಬಿಡ್ತು. ಹಲವಾರು ಥಿಯೆಟರ್ ಮುಂದೆ ಹೋದ್ರೆ ಟಿಕೆಟ್ ಸಿಗೋದು ಡೌಟ್ ಅನ್ನೋ ಕಾರಣಕ್ಕೆ ಆನ್‌ಲೈನ್ ಟಿಕೆಟ್ಸ್‌ಗೆ ಮೊರೆ ಹೋಗಿಬಿಟ್ರು. ಆದರೆ ಇದರಿಂದ ’ದಿ ವಿಲನ್’ ಹೆಸರಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತೆ ಅಂತ ಯಾರಿಗೂ ಗೊತ್ತಿರಲಿಲ್ಲ.ಪ್ರತಿ ವರ್ಷದಂತೆ ಈ ವರ್ಷವೂ ಟಿಕೆಟ್ ಬುಕ್ ಮಾಡುವ ಫೇಮಸ್ ಆಪ್ ’ಬುಕ್ ಮೈ ಶೋ’ ಒಂದು ವಿಶೇಷ ಪಟ್ಟಿಯನ್ನ ರಿಲೀಸ್ ಮಾಡಿದೆ. ಈ ವರ್ಷ ಅತೀ ಹೆಚ್ಚು ಟಿಕೆಟ್ ಬುಕ್ ಆದ ಬೇರೆಬೇರೆ ಭಾಷೆಗಳ ಲಿಸ್ಟ್ ಪ್ರೆಸೆಂಟ್ ಆಗಿದೆ. ಆದರೆ ಈ ಲಿಸ್ಟ್‌ನಲ್ಲಿ ಎಲ್ಲರ ಕಣ್ಣು ಕುಕ್ಕುವ ಹಾಗೇ ಎದ್ದು ಕಾಣೋದು ಮಾತ್ರ ’ದಿ ವಿಲನ್’ ಹೆಸರು. . !

ಯಸ್. ಈ ವರ್ಷ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಅತೀ ಹೆಚ್ಚು ಅನ್‌ಲೈನ್ ಟಿಕೆಟ್‌ಗಳು ಬುಕ್ ಆದ ಸಿನಿಮಾ ಎಂಬ ಹೆಗ್ಗಳಿಕೆಗೆ ’ದಿ ವಿಲನ್’ ಸಿನಿಮಾ ಪಾತ್ರವಾಗಿದೆ. ಈ ಹ್ಯಾಪಿ ನ್ಯೂಸನ್ನ ಖುದ್ದಾಗಿ ಕಿಚ್ಚ ಸುದೀಪ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿ ದೇವರುಗಳಿಗೆ ಥಾಂಕ್ಸ್ ಹೇಳಿದ್ದಾರೆ. ಸೋ, ಹೊಸ ವರ್ಷದ ಆರಂಭದಲ್ಲೇ ಈ ಸ್ವೀಟ್ ನ್ಯೂಸ್ ಬಂದಿರೋದು ಕಿಚ್ಚನ ಪಾಲಿಗೆ ’ಸೋನೆ ಪೆ ಸೂಹಗಾ’ ಅನ್ನೋ ಹಾಗಿದೆ. ಈ ವಿಷಯ ಕೇಳಿದ ಗಾಂಧಿನಗರದ ಮಂದಿ ಕಿಚ್ಚನ ಲಕ್ಕಿ ಟೈಮ್ ’ಟಿಕ್ ಟಿಕ್ ಟಿಕ್’ ಅಂತ ಶುರುವಾಯ್ತಪ್ಪಾ ಎನ್ನುವ ಅನೌನ್ಸ್‌ಮೆಂಟ್ ಮಾಡಿಬಿಟ್ಟಿದಾರೆ. ಅಷ್ಟಕ್ಕೂ ೨೦೧೯ ರ ಸುದೀಪ್ ಸಿನಿಫ್ಯೂಚರ್ ನೋಡಿದ್ರೆ ಬೇರೆ ಹೀರೊಗಳು ದಂಗಾಗುವಂತಿದೆ ಕಣ್ರೀ.

ಸುದೀಪ್ ಸಿನಿಮಾಗಳು ರಿಲೀಸ್‌ಗೂ ಮುಂಚೆನೇ ಎಷ್ಟು ಹವಾ ಎಬ್ಬಿಸುತ್ತೆ ಅನ್ನೋ ಸತ್ಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ವರ್ಷ ಕಿಚ್ಚನ ಕಿಚ್ಚು ಬೇರೆ ರೀತಿಯಲ್ಲಿ ಹಬ್ಬಿಕೊಂಡುಬಿಟ್ಟಿದೆ. ಒಂದು ಕಡೇ ’ಪೈಲ್ವಾನ್’ನ ಕಸರತ್ತು ಜೋರಾಗಿದ್ರೆ, ಇನ್ನೊಂದು ಕಡೆ ’ಕೋಟಿಗೊಬ್ಬ’ನ ಖದರ್ ನಿಜಕ್ಕೂ ಮ್ಯಾಜಿಕ್ ಮಾಡೋ ಹಾಗಿದೆ. ಇಂಗ್ಲೀಷ್ ಸಿನಿಮಾಗೂ ತನ್ನ ಬಲಗಾಲಿಟ್ಟು ತನ್ನ ಪ್ರತಿಭೆ ತೋರಿಸೋಕೆ ರೆಡಿಯಾಗಿರುವ ಕಿಚ್ಚ ಸುದೀಪ್ ಸದ್ಯದಲ್ಲೇ ’ರೈಸನ್’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿಕೊಳ್ಳಲಿದ್ದಾರೆ. ಅಂದಹಾಗೇ, ಈ ವರ್ಷದ ಚಿರಂಜೀವಿ ಅಭಿನಯದ ಬಹುನಿರಿಕ್ಷಿತ ’ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲೂ ಸುದೀಪ್ ಸೌಂಡ್ ಮಾಡಲಿದ್ದಾರೆ.ಸಿನಿಮಾ ಮಾಡೋದು ಸ್ವಲ್ಪ ಲೇಟಾದ್ರೂ ಪರವಾಗಿಲ್ಲ.

ಆದರೆ ಬಂದ್ರೆ ಪೈಸಾವಸೂಲ್ ಚಿತ್ರಗಳಲ್ಲೇ ಬರಬೇಕು ಎನ್ನುವ ಕಿಚ್ಚನ ಥಿಯರಿ ಯಾಕೋ ನಿಧಾನವಾಗಿ ವಕೌರ್ಟ್ ಆಗ್ತಿದೆ. ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಕೊಟ್ಟ ಡೆಡಿಕೆಶನ್ ’ಟಾಕ್ ಆಫ್ ದಿ ಟೌನ್’ ಆಗಿಹೋಯ್ತು. ಯಾಕೋ ಬರ‍್ತಾಬರ‍್ತಾ ಸುದೀಪ್ ಸ್ಕ್ರೀಪ್ಟ್ ಆಯ್ಕೆಯಲ್ಲಿ ಚ್ಯೂಸಿಯಾಗಿರೋದು ಯಾಕೆ ಅಂತ ಗೊತ್ತಾಗ್ತಿದೆ. ಸಿನಿಮಾ ಸಕ್ಸಸ್‌ನಲ್ಲಿ ತನ್ನ ರೋಲ್ ಹೇಗಿರಬೇಕು ಎನ್ನುವ ಬ್ಲೂ ಪ್ರಿಂಟ್ ಕಿಚ್ಚನ ಮಾಸ್ಟರ್‌ಮೈಂಡ್‌ನಲ್ಲಿ ಹರಿದಾಡ್ತಿದೆ ಅನ್ಸುತ್ತೆ.ಈ ಯಶಸ್ಸುಗಳಿಗೆ ತಿಲಕವಿಟ್ಟಂತೆ ರಂಗಿತರಂಗ ಖ್ಯಾತಿಯ ಅನುಪ್ ಭಂಡಾರಿಯ ಹೊಸ ಸಿನಿಮಾ ’ಬಿಲ್ಲ ರಂಗ ಭಾಷಾ’ ಸದ್ಯದಲ್ಲೇ ಶುರುವಾಗಲಿದೆ.

ಹಿಂದೆಂದೂ ಕಂಡಿರದ ಸುದೀಪ್ ಹೊಸ ಅವತಾರವನ್ನ ನಾನು ತೋರಿಸ್ತೀನಿ ಅಂತ ಅನುಪ್ ಪ್ರಾಮಿಸ್ ಮಾಡಿದಾರೆ. ಇದೊಂದು ಹಿಸ್ಟರಿಕಲ್ ಆಡ್ವೆಂಚರ್ ಸಿನಿಮಾವಾಗಿದ್ದು, ಸುದೀಪ್ ಕೂಡ ಕಥೆ ಕೇಳಿ ಥ್ರಿಲ್ ಆಗಿದ್ರಂತೆ. ’ಬಿಲ್ಲ ರಂಗ ಭಾಷಾ’ನ ಎಂಟ್ರಿ ಪೊಗರುದಸ್ತಾಗಿರುತ್ತೆ ಅಂತ ಅಲ್‌ರೆಡಿ ಟಾಕ್ ಹುಟ್ಟುಕೊಂಡಿದೆ.ಏನೇ ಆಗ್ಲಿ, ಈ ಹೊಸ ವರ್ಷದ ಆರಂಭ ಸುದೀಪ್ ಸಿನಿಜರ್ನಿಗೆ ಶುಭಶಕುನವನ್ನೇ ಹೇಳಿದೆ. ಭವಿಷ್ಯವನ್ನ ಹೆಚ್ಚು ಪ್ಲಾನ್ ಮಾಡಿಕೊಂಡು ತಲೆಕೆಡಿಸಿಕೊಳ್ಳದ ಈ ಅಭಿನಯ ಚಕ್ರವರ್ತಿಗೆ ವಿಧಿಯೇ ಹೊಸ ಕಿಕ್‌ಸ್ಟ್ರಾಟ್ ಕೊಟ್ಟಂತಿದೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನ ಈ ಆರಡೀ ಕಟೌಟ್ ಸಕ್ಸಸ್ ರೇಟ್ ಆಕಾಶ ಮುಟ್ಟಿ ಸಂಭ್ರಮಿಸಲಿ ಅನ್ನೋದೆ ಕಿಚ್ಚನ ಅಭಿಮಾನಿಗಳ ಒಂದು ಮಹಾದಾಸೆ.

LEAVE A REPLY

Please enter your comment!
Please enter your name here