Home District ವರ್ಷ ಕಳೆದರೂ ಹಚ್ಚಿದ ದೀಪ ಆರಲ್ಲ, ಹೂ ಬಾಡಲ್ಲ, ನೈವೇದ್ಯ ಕೆಡಲ್ಲ..! ದೇವಿಯ ‘ನೇರ’ ದರ್ಶನದಿಂದ...

ವರ್ಷ ಕಳೆದರೂ ಹಚ್ಚಿದ ದೀಪ ಆರಲ್ಲ, ಹೂ ಬಾಡಲ್ಲ, ನೈವೇದ್ಯ ಕೆಡಲ್ಲ..! ದೇವಿಯ ‘ನೇರ’ ದರ್ಶನದಿಂದ ಆಗುತ್ತಂತೆ ಗಂಡಾಂತರ !! “ಹಾಸನಾಂಬೆ ಮಹಾತ್ಮೆ”…

557
0
SHARE

ದೇವಾಲಯಗಳೆಂದರೆ, ಸದಾ ಭಕ್ತರಿಗಾಗಿ ತೆರೆದುಕೊಂಡಿರುವ ಆಲಯಗಳು. ಇವುಗಳಲ್ಲಿ ಹಲವು ವಿಸೇಷ  ಎನ್ನಿಸದ್ರೆ, ಮತ್ತೆ  ಕೆಲವು ದೇವಾಲಯಗಳಲ್ಲಿ  ಆಚರಣೆಯಲ್ಲಿರುವ  ಸಂಪ್ರದಾಯಗಳು ವಿಚಿತ್ರ, ವಿಸ್ಮಯ  ಎನ್ನಿಸುತ್ತವೆ. ಅಂತಹ  ಹಲವು ದೇಗುಲಗಳಲ್ಲಿ ಒಂದು ಹಾಸನದ ಅಂಬೆ ಹಾಸನಾಂಬೆಯ ದೇವಳ. ಹೌದು!   ಹಾಸನದ ಅಧಿದೇವತೆ ಹಾಸನಾಂಬೆಯ ಆಚರಣೆ, ವಿಧಿ ವಿಧಾನವೇ ವಿಭಿನ್ನ.  ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ಹಿನ್ನೆಲೆಯೇ ಒಂದು ರೋಚಕ ಕಥೆ.

ವರ್ಷವಿಡೀ ಈ ತಾಯಿಯನ್ನು  ಹಾಸನಾಂಬ ದೇವಾಲಯವನ್ನು  ಮುಚ್ಚಿರುತ್ತಾರೆ. ಬಹುಶಃ ಇಂಥದ್ದೊಂದು ನಡಾವಳಿ ಬೇರೆಲ್ಲೂ ಕಾಣ ಸಿಗದು.ವರ್ಷಕ್ಕೊಮ್ಮೆಯಷ್ಟೇ ಏಕೆ ಬಾಗಿಲು ತೆರೆಯಲಾಗುತ್ತದೆ ಅನ್ನೋ ಕುತೂಹಲಕ್ಕೆ  ಮತ್ತೊಂದು ದುಷ್ಟಾಂತ ಎಂದರೆ, ಒಮ್ಮೆ ಸಪ್ತಮಾತೃಕೆಯರು ಮತ್ತು ಅವರ ಹಿರಿಯ ಸಹೋದರ ಸಿದ್ದೇಶ್ವರ   ವಾಯು ವಿಹಾರಕ್ಕೆ ತೆರಳಿದ್ದರು. ಈ ಮಧ್ಯೆ ಪ್ರಪಂಚ ಪರ್ಯಟನೆ ಮಾಡೋ ವೇಳೆ ಸಿದ್ದೇಶ್ವರನಿಗೆ ಬಾಯಾರಿಕೆಯಾಯಿತು.  ಆಗ ಯಾರದೋ ಮನೆಯಲ್ಲಿ ನೀರು ಪಡೆದು ಕುಡಿದುಬಿಟ್ಟ. ಇದರಿಂದ ಕೆರಳಿದ ಸೋದರಿಯರು,  ನೀನು ಅನ್ಯರ ಮನೆಯಲ್ಲಿ ನೀರು ಕುಡಿಯುವ ಮೂಲಕ ಪ್ರಮಾದ ಮಾಡಿದ್ದೀಯಾ ಹೀಗಾಗಿ ನೀನು ನಮ್ಮ ಎದುರೇ ನೆಲಗೊಂಡರೂ, ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡಬೇಕು ಎಂದು ಕಟ್ಟಪ್ಪಣೆ ಮಾಡಿದರಂತೆ.  ಅಂದಿನಿಂದ ಸಿದ್ದೇಶ್ವರ ಹಾಸನಾಂಬ ದೇವಾಲಯದ ಮುಂದೆ ನೆಲಗೊಂಡನಂತೆ ಅನ್ನೋ ಪೌರಾಣಿಕ ಮಾತಿದೆ.

ಪೌರ್ಣಮಿ ನಂತರ ಬರುವ ಆಶ್ವೀಜ ಮಾಸದ ಮೊದಲ ಗುರುವಾರ ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆಯುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚುವ ಸಂಪ್ರದಾಯ ನಡೆದುಕೊಂಡು ಬಂದಿದೆ.ಹಾಸಾನಾಂಬೆ ದೇವಾಲಯದ ಸುತ್ತಮುತ್ತಲಿನ ಮನೆಗಳಲ್ಲಿ ಅಡುಗೆಗೆ  ಒಗ್ಗರಣೆ ಹಾಕುವಂತಿಲ್ಲ. ಇದಕ್ಕೂ ಒಂದು ಕಾರಣವಿದೆ.  ಈ ಹಿಂದೆ ಇಲ್ಲಿ  ಮನೆಗಳಲ್ಲಿ ಒಗ್ಗರಣೆ ಹಾಕೋದು,   ಖಾರ ಕುಟ್ಟೋದು ಸಾಮಾನ್ಯವಾಗಿತ್ತು. ಆದ್ರೆ ಕೆಲ ಮನೆಗಳಲ್ಲಿ ಒಗ್ಗರಣೆ ಹಾಕೋ ವೇಳೆ ವಿಪರೀತ ಘಾಟು ಹರಡಲು ಶುರುವಾಯ್ತು. ಆ ಘಾಟು ಮತ್ತು ಖಾರದ ಪ್ರಮಾಣ ಯಥೇಚ್ಛವಾಗಿದ್ದರಿಂದ ದೇವಿ ಕಣ್ಣು ತೆರೆದು ಭಕ್ತರಿಗೆ ದರ್ಶನ ನೀಡೋದು ತುಂಬಾ ಕಷ್ಟವಾಗುತ್ತಿತ್ತಂತೆ.ಇನ್ನೊಂದೆಡೆ ದೇವಿಯ ಬಾಗಿಲು ತೆರೆದ ನಂತರವೂ ದೈನಂದಿನ ಆಹಾರ ಸೇವನೆ ಮಾಡುವುದರಿಂದ ಕಣ್ಣೀರು ಬರಲಿದೆ.

ಈ ಕಾರಣಕ್ಕೆ ಒಂದು ದಿನ ರಾತ್ರಿ ದೇವಿ ಕನಸಿನಲ್ಲಿ ಬಂದು ಭಕ್ತರಿಗೆ ಅಥವಾ ಅರ್ಚಕರಿಗೆ ಸೂಚನೆ ಕೊಟ್ಟಿರಬೇಕು. ದೇವಿಯ ಅಪೇಕ್ಷೆ ಏನೋ ಸರಿ, ಆದರೆ ವರ್ಷವಿಡೀ  ಊಟದಲ್ಲಿ ನಿಯಂತ್ರಣ ಹಾಕಿಕೊಳ್ಳೋದು ಸಾಧ್ಯವೇ ಎಂಬ ಪ್ರಶ್ನೆಮೂಡಿದಾಗ, ತಾಯಿ ಮತ್ತು ಭಕ್ತರು ಇಲ್ಲವೇ ದೇವಿ ಮತ್ತು ಅರ್ಚಕರ ನಡುವೆ ಒಂದು ಒಡಂಬಡಿಕೆ ಆಗಿರಬೇಕು.ವರ್ಷವಿಡೀ ಯಾವುದೇ ರೀತಿಯ ಊಟ ಬೇಕಾದರೂ ಮಾಡಲಿ, ಆದರೆ ನನ್ನ ದರ್ಶನ ವೇಳೆ ಘಾಟು ಹಾಕಬಾರದು, ಖಾರ ಅರೆಯಬಾರದು ಎಂಬ ಒಪ್ಪಂದ ಆಗಿರಬೇಕು. ಆ ಪ್ರಕಾರ ದೇವಿಯ ವರ್ಷಕ್ಕೆ ಒಂದು ಬಾರಿ ದರ್ಶನ ಕೊಡೋ ಪರಿಪಾಟಲು ನಡೆದುಕೊಂಡು ಬಂದಿದೆ ಎನ್ನಲಾಗಿದೆ.ಇನ್ನು ಇಲ್ಲಿ ನಿರಂತರವಾಗಿ ದೀಪ ಬೆಳಗುತ್ತಿರುವುದು ಕೂಡ ಒಂದು ವಿಸ್ಮಯವೇ ಸರಿ.

ದೇವಿಯ ಗರ್ಭಗುಡಿ ಒಳಗೆ ಇರುವ ಮಹಾದೀಪಕ್ಕೆ ಸುಮಾರು ಐದೂವರೆ ಲೀಟರ್ ಎಣ್ಣೆ ತುಂಬ ಬಹುದು. ಅದಕ್ಕೆ ಅಪ್ಪಟ ರೇಷ್ಮೆಯ ಬತ್ತಿ ಹಾಕಲಾಗುತ್ತದೆ. ಆದರೆ ವರ್ಷದ ಬಳಿಕ ಬಾಗಿಲು ತೆರೆದ ನಂತರ ಮಹಾದೀಪದಲ್ಲಿ ಕೇವಲ ಅರ್ಧದಿಂದ 1 ಲೀಟರ್ ಮಾತ್ರ ಎಣ್ಣೆ ಖಾಲಿಯಾಗುತ್ತದೆ ಅಷ್ಟೆ.  ಗರ್ಭಗುಡಿ ಒಂದು ರೀತಿ ತಾಯಿಯ ಗರ್ಭದಂತೆ ಇರಲಿದೆ. ಇಂಥ ಕೋಣೆಯಲ್ಲಿ ನಿರಂತರ ದೀಪ ಉರಿಯೋದೇ ಒಂದು ದೊಡ್ಡ ಅಚ್ಚರಿ. ಇದರ ಸತ್ಯಾಸತ್ಯತೆ ತಿಳಿಯಲು ಹೋದವರಿಗೆ ಗೋಚರಿಸಿರುವುದು ಆ ತಾಯಿಯ ದರ್ಶನ ಮಾತ್ರ. ಜೊತೆಗೆ ನಿರಂತರವಾಗಿ ಜ್ಯೋತಿ ಬೆಳಗಲು ಕಾರಣ, ಆ ತಾಯಿಯ ದಿವ್ಯಶಕ್ತಿಯೇ ಎನ್ನುವುದರ ಅರಿವು ಆಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ದರ್ಶನಾಕಾಂಕ್ಷಿಗಳಾಗಿ ಬರುವುದರಿಂದ ಹಲಗು-ರಾತ್ರಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.

ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿ ಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪ ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತಾದಿಗಳು  ಪುನೀತ.ಹಾಸನಾಂಬೆ ದೇವಾಲಯದ ಮುಖ್ಯದ್ವಾರ ಪ್ರವೇಶ ಮಾಡಿದ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯ  ಸಿಗಲಿದೆ. ಇದೊಂದು ಅಪರೂಪದ ದೇವಾಲಯ.  ಗರ್ಭಗುಡಿಯಲ್ಲಿ ಅರ್ಜುನನಿಗೆ ಪಾಶುಪತಾಸ್ತ್ರ ಕೊಡೋ ರೀತಿಯಲ್ಲಿ  ಸಿದ್ದೇಶ್ವರ ಸ್ವಾಮಿ ನೆಲೆಗೊಂಡಿದ್ದಾನೆ. ಸಿದ್ದೇಶ್ವರ ಗರ್ಭಗುಡಿಯ ಮುಂದೆ ಬಸವಣ್ಣ ಮತ್ತು ಗಣಪತಿ ವಿಗ್ರಹವಿದೆ.ಹಾಸನಾಂಬೆ ಎಷ್ಟು ಮಡಿವಂತಿಕೆಯ ದೇವಿ ಎಂದ್ರ ಅಮ್ಮನ  ಭಾವಚಿತ್ರವನ್ನು ಯಾರೂ ಮನೆಯಲ್ಲಿ ಇಡುವುದಿಲ್ಲ.

ಕಾರಣ ಮನೆಯಲ್ಲಿ ಮಡಿ ಮೈಲಿಗೆ ಇಲ್ಲದಿದ್ದಲ್ಲಿ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಊರಿನ ಯಾವುದೇ ಮನೆಯಲ್ಲಿ ದೇವಿಯ ಭಾವಚಿತ್ರ ಇರುವುದಿಲ್ಲ. ಇಲ್ಲ. ಹಾಸನಾಂಬೆ ದೇವಾಲಯ ಇರೋ ಅನತಿ ದೂರದಲ್ಲಿ ದೇವಿಗೆರೆ ಇದೆ. ಇದರ  ವೈಶಿಷ್ಟ್ಯ ದೇವಿಗೆರೆಯಲ್ಲಿ ಮೂವರು ದೇವಿಯರು ವಾಸವಾಗಿದ್ದಾರೆ ಅನ್ನೋ ನಂಬಿಕೆ ಇದೆ. ಈ ದೇವಿಯರನ್ನು ಪ್ರತಿದಿನ ಭೇಟಿಯಾಗಲು  ದೇವಸ್ಥಾನದಲ್ಲಿ ನೆಲೆಗೊಂಡಿರುವ ಅಕ್ಕಂದಿರು ದೇವಿಗೆರೆಗೆ ಬರುತ್ತಾರೆ. ಮತ್ತು ಪ್ರತಿನಿತ್ಯ ಸ್ನಾನ ಮಾಡುತ್ತಾರೆ ಹಾಗೂ ದೇವಾಸ್ಥನದಲ್ಲಿ ಮಾಡಿದ ಪೂಜೆಯ ನೀರಿನ ಅಭಿಷೇಕ ಈ ದೇವಿಗೆರೆಯಲ್ಲಿ ಬಂದು ಬೀಳುತ್ತದೆ ಎಂದೂ ನಂಬಲಾಗಿದೆ.

ಹಾಸನಾಂಬೆಯ ಮಹಿಮೆ  ಹೇಳುತ್ತಾ ಹೋದರೆ ಒಂದೊಂದೇ ದೃಷ್ಟಾಂತಗಳು ತೆರೆದುಕೊಳ್ಳುತ್ತವೆ. ಒಂದು ವೇಳೆ ದೇವಿಯ ಮುಂದೆ ಹಚ್ಚಿಟ್ಟ ನಂದಾದೀಪ ಆಕಸ್ಮಿಕವಾಗಿ ಏನಾದ್ರೂ ನಂದಿದರೆ, ಆ ವರ್ಷ ದೇಶಕ್ಕೆ ಆಪತ್ತು, ಗಂಡಾಂತರ ಸಂಭವಿಸೋ ಸೂಚನೆಯಿದೆ ಅಂತಾರೆ ಬಲ್ಲವರು. ಇದಕ್ಕೆ ನಿದರ್ಶನ ಎಂಬಂತೆ ದೇಶದ ಉಕ್ಕಿನ ಮಹಿಳೆ ಎಂದು ಕರೆಸಿಕೊಂಡಿದ್ದ ಇಂದಿರಾಗಾಂಧಿ ಮತ್ತು ಅವರ ಪುತ್ರ ರಾಜೀವ್ ಗಾಂಧಿ ಹತ್ಯೆಗೀಡಾದ ಸಂದರ್ಭದಲ್ಲಿ ಮಹಾದೀಪ ಆರಿ  ಘೋರ ತಪ್ಪು  ಸಂಭವಿಸಿತ್ತು.ಒಟ್ಟಾರೆ ಇಷ್ಟೆಲ್ಲಾ  ವಿಶೇಷತೆ ಹೊಂದಿರುವ ಪರಿವಾರ ದೇವಿಯರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಬಲವಂತವಿಲ್ಲ.

ಕಟ್ಟಿಕೊಂಡ ಹರಕೆ ಈಡೇರಲಿದೆ. ದೇವಿಯ ಪವಾಡ, ದೈವಿ ಅಂಶದಿಂದಾಗಿಯೇ ದೇಶ-ವಿದೇಶಗಳಿಂದಲೂ ಭಕ್ತರು ಬರುತ್ತಿದ್ದಾರೆ. ಹಾಸನಾಂಬೆಯ ಕೃಪಾಶಿರ್ವಾದಕ್ಕೆ ಒಳಗಾಗುತ್ತಿದ್ದಾರೆ. ಹಾಸನಾಂಬೆಯನ್ನು ದರ್ಶಿಸಿ ಪುನೀತರಾಗುತ್ತಿದ್ದಾರೆ.ಇದೇ ತಿಂಗಳ 12ರಂದು ತಾಯಿ ಹಾಸನಾಂಬೆ 24ರವರೆಗೂ ಸಕಲ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಭಕ್ತವೃಂದ ಮಾತೆಯ ದರ್ಶನದಿಂದ ಪೂನೀತರಾಗಲು ಹಾಸನದ ಕಡೆ ಪ್ರಯಾಣ ಬೆಳೆಸಿರುತ್ತಾರೆ. ವರ್ಷಕ್ಕೊಮ್ಮೆ ಹಾಸನಾಂಬೆಯ ದೇವಾಲಯ ತೆರೆದರೂ ತಾಯಿಯ ಮಹಿಮೆಗೇನು ಕಡಿಮೆ ಇಲ್ಲ.  ಆ ಸಪ್ತ ಮಾತೃಕೆಯರ ಶಕ್ತಿ ಸಂಚಯವೂ ಅದ್ವಿತೀಯ.

LEAVE A REPLY

Please enter your comment!
Please enter your name here